ಮುಂಬೈನಲ್ಲಿ ನಡೆದ ಆರ್‌ಎಸ್‌ಎಸ್‌ನ 100ನೇ ವರ್ಷದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್, ರಣಬೀರ್ ಕಪೂರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ. ಈ ವೇಳೆ ಮಾತನಾಡಿದ RSS ಮುಖ್ಯಸ್ಥ ಸಂಘಟನೆ ಯಾರ ವಿರುದ್ಧವೂ ಅಲ್ಲ ಮತ್ತು ಅಧಿಕಾರ ಬಯಸುವುದಿಲ್ಲ ಎಂದು ಹೇಳಿದರು.
- Home
- News
- India News
- India Latest News Live: ಮುಂಬೈನಲ್ಲಿ RSS ಶತಮಾನೋತ್ಸವ ಕಾರ್ಯಕ್ರಮ - ನಟ ಸಲ್ಮಾನ್ ಖಾನ್, ರಣ್ಬೀರ್ ಕಪೂರ್ ಭಾಗಿ
India Latest News Live: ಮುಂಬೈನಲ್ಲಿ RSS ಶತಮಾನೋತ್ಸವ ಕಾರ್ಯಕ್ರಮ - ನಟ ಸಲ್ಮಾನ್ ಖಾನ್, ರಣ್ಬೀರ್ ಕಪೂರ್ ಭಾಗಿ

ಢಾಕಾ: ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಮನೆ ಎದುರು ಶುಕ್ರವಾರ ನೂರಾರು ಸಂಖ್ಯೆಯಲ್ಲಿ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಜಮಾಯಿಸಿ ಯೂನಸ್ ವಿರುದ್ಧ ಪ್ರತಿಭಟನೆ ನಡೆಸಿದರು. ಪರಿಣಾಮ ಭದ್ರತಾ ಸಿಬ್ಬಂದಿ ಜೊತೆ ಸಂಘರ್ಷದಲ್ಲಿ 15 ಮಂದಿ ತೀವ್ರವಾಗಿ ಗಾಯಗೊಂಡರು.
ಬಾಂಗ್ಲಾ ಸರ್ಕಾರಿ ನೌಕರರಿಗೆ 7ನೇ ರಾಷ್ಟ್ರೀಯ ವೇತನ ಶ್ರೇಣಿಯನ್ನು ಜಾರಿಗೊಳಿಸಬೇಕೆಂದು ಢಾಕಾದ ಜಮುನಾದಲ್ಲಿರುವ ಯೂನಸ್ ಅಧಿಕೃತ ನಿವಾಸಕ್ಕೆ ನೌಕರರು ಮುತ್ತಿಗೆ ಹಾಕಿದರು. ಈ ವೇಳೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಜನರನ್ನು ಹತ್ತಿಕ್ಕಲು ಯತ್ನಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ಪೊಲೀಸರು ಲಾಠಿ ಪ್ರಹಾರ ಮತ್ತು ಅಶ್ರುವಾಯು ಸಿಡಿಸಿದ್ದಾರೆ. ಇದರಿಂದ 15 ಜನರು ಗಾಯಗೊಂಡಿದ್ದಾರೆ.
India Latest News Live 7 February 2026ಮುಂಬೈನಲ್ಲಿ RSS ಶತಮಾನೋತ್ಸವ ಕಾರ್ಯಕ್ರಮ - ನಟ ಸಲ್ಮಾನ್ ಖಾನ್, ರಣ್ಬೀರ್ ಕಪೂರ್ ಭಾಗಿ
India Latest News Live 7 February 2026ಟಿ20 ವಿಶ್ವಕಪ್ - ಸೂರ್ಯನ ಆರ್ಭಟಕ್ಕೆ ಮುಳುಗಿದ ಅಮೆರಿಕ! ಹಾಲಿ ಚಾಂಪಿಯನ್ ಭಾರತ ಶುಭಾರಂಭ
ನಾಯಕ ಸೂರ್ಯಕುಮಾರ್ ಯಾದವ್ ಅವರ ಸ್ಪೋಟಕ ಅಜೇಯ 84 ರನ್ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ಬಲದಿಂದ, ಟಿ20 ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಭಾರತವು ಯುಎಸ್‌ಎ ವಿರುದ್ಧ 29 ರನ್‌ಗಳ ಭರ್ಜರಿ ಜಯ ಸಾಧಿಸಿತು. 162 ರನ್‌ಗಳ ಗುರಿ ಬೆನ್ನತ್ತಿದ ಯುಎಸ್‌ಎ 132 ರನ್‌ಗಳಿಗೆ ತನ್ನ ಹೋರಾಟ ಮುಗಿಸಿತು.
India Latest News Live 7 February 2026ಮಹಿಳೆ ರೀಲ್ಸ್‌ಗಾಗಿ ಹಾಕಿದ ನೇಣು ನಿಜವಾಗಿಯೂ ಕತ್ತು ಬಿಗಿಯಿತು - ತಬ್ಬಲಿಯಾಯ್ತು 4 ವರ್ಷದ ಮಗು
ಉತ್ತರ ಪ್ರದೇಶದಲ್ಲಿ, ರೀಲ್ಸ್ ಮಾಡುವಾಗ ಯುವತಿಯೊಬ್ಬಳು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾಳೆ. ನೇಣು ಹಾಕಿಕೊಳ್ಳುವಂತೆ ವಿಡಿಯೋ ಚಿತ್ರೀಕರಿಸುತ್ತಿದ್ದಾಗ, ಆಕೆ ನಿಂತಿದ್ದ ಸ್ಟೂಲ್ ಜಾರಿ ನೇಣು ಬಿಗಿಗೊಂಡು ದುರಂತ ಸಂಭವಿಸಿದ್ದು, ಆಕೆಯ ಸಾವಿನಿಂದ ನಾಲ್ಕು ವರ್ಷದ ಮಗು ತಬ್ಬಲಿಯಾಗಿದೆ.
India Latest News Live 7 February 2026ಉದ್ಯಮಿಗೆ 2 ಕೋಟಿ ರೂ. ಪಂಗನಾಮ; ಕರ್ತವ್ಯ ಲೋಪ ಸಾಬೀತು, ಡಿವೈಎಸ್‌ಪಿ ಕಲ್ಪನಾ ವರ್ಮಾ ಅಮಾನತು!
ದೇಶದ ಪ್ರತಿಷ್ಠಿತ ಉದ್ಯಮಿಯೊಬ್ಬರಿಗೆ 2 ಕೋಟಿ ರೂ. ಆರ್ಥಿಕ ನಷ್ಟ ಉಂಟುಮಾಡಿದ ಆರೋಪದ ಮೇಲೆ ಡಿವೈಎಸ್‌ಪಿ ಕಲ್ಪನಾ ವರ್ಮಾ ಅವರನ್ನು ಅಮಾನತುಗೊಳಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ಹಣ ಗಳಿಕೆ, ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿರುವುದು ಸಾಬೀತಾಗಿದೆ.
India Latest News Live 7 February 2026Propose Day - ಹುಡುಗಿಗೆ ಪ್ರಪೋಸ್ ಮಾಡುವಾಗ ಈ 5 ತಪ್ಪುಗಳನ್ನು ಮಾಡಲೇಬೇಡಿ!
ವ್ಯಾಲೆಂಟೈನ್ಸ್ ವೀಕ್ 2026 ವಿಶೇಷ: ಪ್ರಪೋಸ್ ಡೇ ವ್ಯಾಲೆಂಟೈನ್ಸ್ ವೀಕ್‌ನ ಅತ್ಯಂತ ವಿಶೇಷ ದಿನ. ನಿಮ್ಮ ಪ್ರಪೋಸಲ್ ಸ್ಮರಣೀಯವಾಗಬೇಕಾದರೆ, ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡಬಾರದು. ಆ 5 ತಪ್ಪುಗಳು ಯಾವುವು ತಿಳಿಯೋಣ ಬನ್ನಿ
India Latest News Live 7 February 2026Funky Movie - ತೆಲುಗು ಸ್ಟಾರ್ ನಾಯಕರ ಚಿತ್ರಗಳಿಗೆ ಪೈಪೋಟಿ; ಹೆಸರೇ ಸೂಚಿಸುವಂತೆ ನಗುವಿನ ಸುರಿಮಳೆ ಗ್ಯಾರಂಟಿ!
India Latest News Live 7 February 2026ತಲೆಗೆ ಒಟ್ಟು 1.61 ಕೋಟಿ ಬಹುಮಾನ ಘೋಷಿಸಲ್ಪಟ್ಟಿದ್ದ 51 ಮಾವೋವಾದಿ ನಕ್ಸಲರ ಶರಣಾಗತಿ
2026ರ ಒಳಗೆ ನಕ್ಸಲ್ ಚಟುವಟಿಕೆಯಿಂದ ದೇಶವನ್ನು ಮುಕ್ತ ಮಾಡುವ ಪಣ ತೊಟ್ಟಿದ್ದು, ನಕ್ಸಲರ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿದೆ. ಇದರ ಭಾಗವಾಗಿ ಛತ್ತೀಸ್‌ಗಢದಲ್ಲಿ 1.61 ಕೋಟಿ ಬಹುಮಾನ ಘೋಷಿಸಲ್ಪಟ್ಟಿದ್ದ 51 ಮಾವೋವಾದಿ ನಕ್ಸಲರು ಶರಣಾಗಿದ್ದಾರೆ. ಶರಣಾದವರಲ್ಲಿ 34 ಮಹಿಳೆಯರೂ ಸೇರಿದ್ದಾರೆ.
India Latest News Live 7 February 2026ಟಿ20 ವಿಶ್ವಕಪ್ - ಭಾರತ ಎದುರು ಟಾಸ್ ಗೆದ್ದ ಯುಎಸ್‌ಎ ಬೌಲಿಂಗ್ ಆಯ್ಕೆ; ಸಂಜುಗೆ ಶಾಕ್, ಡಿಎಸ್‌ಪಿ ಸಿರಾಜ್ ಡೈರೆಕ್ಟ್ ಎಂಟ್ರಿ
India Latest News Live 7 February 2026ಭಾರತ ಅಮೆರಿಕಾ ವ್ಯಾಪಾರ ಒಪ್ಪಂದ - ಅಮೆರಿಕಾದ ಈ ಉತ್ಪನ್ನಗಳಿಗೆ ಝಿರೋ ಟ್ಯಾಕ್ಸ್
India-US trade agreement details: ಭಾರತ ಮತ್ತು ಅಮೆರಿಕಾ ನಡುವಿನ ಹೊಸ ವ್ಯಾಪಾರ ಒಪ್ಪಂದದ ಅಡಿಯಲ್ಲಿ, ಅಮೆರಿಕಾದಿಂದ ಆಮದಾಗುವ ಹಾಗೂ ಭಾರತದಿಂದ ಅಮೆರಿಕಾಗೆ ಹಲವು ಉತ್ಪನ್ನಗಳಿಗೂ ಪರಸ್ಪರ ಸುಂಕ ವಿನಾಯಿತಿ ಸಿಗಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
India Latest News Live 7 February 2026ಪೊಲೀಸ್ ರೂಪದ ರಕ್ಕಸರು! ಎಂಜಲು ಕಾಸಿಗೆ ಬಾಲಕನ ಜೀವದ ಜೊತೆ ಚೆಲ್ಲಾಟವಾಡಿದ ಕ್ರೂರ ಅಧಿಕಾರಿಗಳು
ಎಂಜಲು ಕಾಸಿಗೆ ಯಾರ ಜೀವದ ಜೊತೆ ಬೇಕಾದರೂ ಚೆಲ್ಲಾಟವಾಡುವ ಪೊಲೀಸ್ ಇಲಾಖೆಯ ಅತ್ಯಂತ ಕ್ರೂರ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಡ್ರಗ್ಸ್ ಪೆಡ್ಲರ್‌ಗಳಿಂದ ಲಂಚ ಪಡೆದ ಪೊಲೀಸ್ ಅಧಿಕಾರಿಗಳು ಮಾಡಿರುವ ಘನಂದಾರಿ ಕೆಲಸ ನೋಡಿ!
India Latest News Live 7 February 20262026ರ ಟಿ20 ವಿಶ್ವಕಪ್ ಮತ್ತೆ ಭಾರತವೇ ಗೆಲ್ಲುತ್ತೆ ಅನ್ನೋದಕ್ಕೆ ಈ 5 ಕಾರಣಗಳು ಸಾಕು!
ICC ಪುರುಷರ T20 ವಿಶ್ವಕಪ್ 2026: ಈ ಬಾರಿಯೂ ಟಿ20 ವಿಶ್ವಕಪ್ ಟೀಂ ಇಂಡಿಯಾ ಪಾಲಾಗುವ ಸಾಧ್ಯತೆ ಹೆಚ್ಚಿದೆ ಎಂದು ಕ್ರೀಡಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಬರೀ ಮಾತಲ್ಲ, ಅದಕ್ಕೆ 5 ಬಲವಾದ ಕಾರಣಗಳನ್ನೂ ಅವರು ನೀಡುತ್ತಿದ್ದಾರೆ.
India Latest News Live 7 February 2026ಕಸದ ಜೊತೆ 12 ಲಕ್ಷ ರೂ ಮೌಲ್ಯದ ಚಿನ್ನ ಎಸೆದ ಮಹಿಳೆ, ಪೌರ ಕಾರ್ಮಿಕರಿಗೆ ಸಿಕ್ಕ ಬಂಗಾರ ಕತೆ ಏನಾಯಿತು?
ಕಸದ ಜೊತೆ 12 ಲಕ್ಷ ರೂ ಮೌಲ್ಯದ ಚಿನ್ನ ಎಸೆದ ಮಹಿಳೆ, ದುಬೈನಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ ಭಾರತೀಯ ಮಹಿಳೆ ತನ್ನಲ್ಲಿದ್ದ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಕಸದ ಜೊತೆ ಎಸೆದಿದ್ದಾರೆ. ಮುಂದೇನಾಯಿತು?
India Latest News Live 7 February 2026'ನನ್ನನ್ನು ನಂಬಿದವರಲ್ಲಿ ಕ್ಷಮೆ ಕೇಳ್ತೀನಿ'; ಕಳಪೆ ಆಟಕ್ಕೆ ಸಂಜು ಸ್ಯಾಮ್ಸನ್ ಕ್ಷಮೆ ಕೇಳಿದ್ರಾ? ಸತ್ಯಾಂಶ ಏನು?
ಟಿ20 ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್ ಭಾರತದ ಪರ ಓಪನಿಂಗ್ ಮಾಡುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಕಳಪೆ ಫಾರ್ಮ್‌ನಿಂದಾಗಿ ಸಂಜು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದರ ನಡುವೆ ಸಂಜು ಕ್ಷಮೆ ಕೇಳಿದ್ದಾರೆ ಎನ್ನುವ ಪೋಸ್ಟ್ ಕೂಡ ವೈರಲ್ ಆಗ್ತಿದೆ. ಇದರ ಹಿಂದಿನ ಸತ್ಯಾಸತ್ಯತೆ ಇಲ್ಲಿದೆ.
India Latest News Live 7 February 2026ಸದಾ ಸಿಡುಕುವ ಜಯಾ ಬಚ್ಚನ್‌ಗೆ ಬಾಲಿವುಡ್ ಡ್ರಾಮಾ ಕ್ವೀನ್ ನೀಡಿದ ಬಿಟ್ಟಿ ಸಲಹೆಗೆ ನೆಟ್ಟಿಗರ ಶಹಭಾಷ್
ಸದಾ ಸಿಡುಕಿನಿಂದ ಸುದ್ದಿಯಾಗುವ ಹಿರಿಯ ನಟಿ ಜಯಾ ಬಚ್ಚನ್‌ಗೆ ಬಾಲಿವುಡ್‌ನ ಕಿರಿಕ್ ನಟಿ ರಾಖಿ ಸಾವಂತ್ ವಿಚಿತ್ರ ಸಲಹೆಯೊಂದನ್ನು ನೀಡಿದ್ದು, ರಾಖಿ ಸಲಹೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ರಾಖಿ ನೀಡಿದ ಸಲಹೆ ಏನು..?
India Latest News Live 7 February 2026BCCI Contracts - ಇಶಾನ್ ಕಿಶನ್‌ಗೆ ಮತ್ತೆ ಶಾಕ್, ರೋಹಿತ್-ಕೊಹ್ಲಿ ಗ್ರೇಡ್ ಡೌನ್?
ಬಿಸಿಸಿಐನ ಹೊಸ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ 'ಎ+' ಗ್ರೇಡ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ. ಕೊಹ್ಲಿ ಮತ್ತು ರೋಹಿತ್ ಅವರನ್ನು 'ಬಿ' ಗ್ರೇಡ್‌ಗೆ ಇಳಿಸಲಾಗಿದ್ದು, ಶ್ರೇಯಸ್ ಅಯ್ಯರ್ ಮತ್ತೆ ಗುತ್ತಿಗೆ ಪಟ್ಟಿಗೆ ಮರಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
India Latest News Live 7 February 202614 ವರ್ಷದ ವೈಭವ್ ಸೂರ್ಯವಂಶಿ ಮತ್ತೆ U-19 ವಿಶ್ವಕಪ್ ಆಡೋಕಾಗಲ್ಲ! ಭಾರತ ಸೀನಿಯರ್ ಟೀಮ್‌ಗೂ ಸದ್ಯಕ್ಕಿಲ್ಲ ಎಂಟ್ರಿ! ಅಚ್ಚರಿಯಾದ್ರೂ ಸತ್ಯ
India Latest News Live 7 February 2026Epstein Filesನಲ್ಲಿ ರಾಹುಲ್ ಗಾಂಧಿ ಹೆಸರು, ವಿಡಿಯೋ - ಹಲ್ಚಲ್ ಸೃಷ್ಟಿಸ್ತಿರೋ ಇದರ ಅಸಲಿಯತ್ತೇನು?
ಎಪ್ಸ್ಟೀನ್ ಫೈಲ್ಸ್ ಜಗತ್ತಿನ ಶ್ರೀಮಂತರ ಕರಾಳ ಮುಖವನ್ನು ಬಯಲು ಮಾಡಿದೆ. ಇದೇ ಹೊತ್ತಲ್ಲಿ, ರಾಹುಲ್ ಗಾಂಧಿಯವರದ್ದು ಎನ್ನಲಾದ ವಿಡಿಯೋಮತ್ತು ಈ ಫೈಲ್ನಲ್ಲಿ ಅವರ ಹೆಸರು ವೈರಲ್ ಆಗ್ತಿದೆ. ಏನಿದರ ಅಸಲಿಯತ್ತು?
India Latest News Live 7 February 2026ಕಡಿಮೆ ರಿಸ್ಕ್‌ನಲ್ಲಿ ಹೆಚ್ಚು ಲಾಭ; ಲಕ್ಷ ಲಕ್ಷ ಸಂಪಾದಿಸುವ ಆಸೆಯಿದ್ರೆ ಆರಂಭಿಸಿ ಅತ್ಯುತ್ತಮ ಬ್ಯುಸಿನೆಸ್
India Latest News Live 7 February 2026ಮತ್ತೆ ವೈರಲ್ ಆಯ್ತು ಕೇಂದ್ರ ಸಚಿವ ಹಾಗೂ ಸಂಸದೆಯ ವೀಡಿಯೋ - ಮದ್ವೆಯಾಗುವಂತೆ ಸಲಹೆ ನೀಡಿದ ನೆಟ್ಟಿಗರು
ನಟಿ ಕಂಗನಾ ರಣಾವತ್ ಮತ್ತು ರಾಜಕಾರಣಿ ಚಿರಾಗ್ ಪಸ್ವಾನ್ ಸಂಸತ್ ಕಲಾಪಕ್ಕೆ ಒಟ್ಟಿಗೆ ಆಗಮಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಈ ಹಿಂದೆ ಕೂಡ ಇವರಿಬ್ಬರ ಫೋಟೋಗಳು ವೈರಲ್ ಆಗಿದ್ದು, ಇದೀಗ ಮತ್ತೆ ಇವರ ಜೋಡಿಯನ್ನು ನೋಡಿದ ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ.
India Latest News Live 7 February 2026ಊರನ್ನೇ ಬೆಚ್ಚಿ ಬೀಳಿಸಿದ 37ರ ಮಹಿಳೆ, 17ರ ಹುಡುಗನ ಲವ್ ಸ್ಟೋರಿ; ಆಂಟಿ ಎಸ್ಕೇಪ್, ಪೋರ ಲಾಕ್
Aunty Love Case: ಸಮಾಜ ಎತ್ತ ಸಾಗುತ್ತಿದೆ ಎಂದು ಕೆಲವು ಘಟನೆಗಳು ನಮ್ಮನ್ನು ಪ್ರಶ್ನಿಸುವಂತೆ ಮಾಡುತ್ತವೆ. ಅದರಲ್ಲೂ ಅನೈತಿಕ ಸಂಬಂಧಗಳು ಮತ್ತು ಅವು ಸೃಷ್ಟಿಸುವ ಭಯಾನಕ ಸನ್ನಿವೇಶಗಳ ಬಗ್ಗೆ ಹೇಳಬೇಕಾಗಿಲ್ಲ. ಇತ್ತೀಚೆಗೆ ಇಂತಹ ಒಂದು ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.