09:14 AM (IST) Apr 18

India News Live 18th April: IPL 2026 - ನಿನ್ನೆ ನಡೆದ ಗುಜರಾತ್ ಟೈಟಾನ್ಸ್-ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಶುಭ್‌ಮನ್ ಗಿಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಕೆಕೆಆರ್ ಐದನೇ ಸೋಲನ್ನು ಅನುಭವಿಸಿದರೆ, ಗುಜರಾತ್ ತನ್ನ ಮೂರನೇ ಗೆಲುವನ್ನು ದಾಖಲಿಸಿತು.
Read Full Story
07:34 AM (IST) Apr 18

India News Live 18th April: ತಮಿಳುನಾಡು, ಬಿಹಾರ ಬಳಿಕ ಇದೀಗ ರಾಜ್ಯಕ್ಕೆ ಕಾಲಿಟ್ಟ ಹಕ್ಕಿಜ್ವರ, 7444 ಕೋಳಿ ನಾಶ!

ಬೆಂಗಳೂರಿನ ಹೆಸರಘಟ್ಟದ ಸರ್ಕಾರಿ ಪೌಲ್ಟ್ರಿ ಫಾರಂನಲ್ಲಿ H5N1 ವೈರಸ್ (ಹಕ್ಕಿ ಜ್ವರ) ಪತ್ತೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ, 7,444 ಕೋಳಿಗಳನ್ನು ನಾಶಪಡಿಸಲಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಕಣ್ಗಾವಲು ಇರಿಸಲಾಗಿದೆ. ಇದು ಈ ವರ್ಷ ರಾಜ್ಯದಲ್ಲಿ ವರದಿಯಾದ ಮೊದಲ ಹಕ್ಕಿ ಜ್ವರ ಪ್ರಕರಣವಾಗಿದೆ.

Read Full Story
07:33 AM (IST) Apr 18

India News Live 18th April: Women s Reservation Defeat: ವಿಪಕ್ಷಗಳಿಗೆ ಮಹಿಳಾ ವಿರೋಧಿ ಹಣೆಪಟ್ಟಿ, ಕಾಂಗ್ರೆಸ್ಸನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿಗೆ ರಾಜಕೀಯ ಅಸ್ತ್ರ?

ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆಯು ಸೋಲು ಕಂಡಿದೆ. ಈ ಸೋಲನ್ನು ಮುಂಬರುವ ಚುನಾವಣೆಗಳಲ್ಲಿ ರಾಜಕೀಯ ಅಸ್ತ್ರವಾಗಿ ಬಳಸಲು ಬಿಜೆಪಿ ಸಜ್ಜಾಗಿದ್ದರೆ, ವಿಪಕ್ಷಗಳು ಇದನ್ನು ಸಂವಿಧಾನಕ್ಕೆ ಸಂದ ಜಯವೆಂದು ಸಂಭ್ರಮಿಸುತ್ತಿವೆ. ಈ ಬೆಳವಣಿಗೆಯ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

Read Full Story
07:33 AM (IST) Apr 18

India News Live 18th April: 'ನಂಗೂ ಮೋದಿಗೂ ಹೆಂಡತಿ ಸಮಸ್ಯೆ ಇಲ್ಲ': ರಾಹುಲ್ ಗಾಂಧಿ | ಪ್ರಿಯಾಂಕಾ ನೋಡಿ ಕಲಿಯಿರಿ ಎಂದ ಶಾ

ಮಹಿಳಾ ಮೀಸಲು ಮಸೂದೆ ಚರ್ಚೆಯ ವೇಳೆ, ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತಮಗೂ ಮತ್ತು ಪ್ರಧಾನಿ ಮೋದಿಗೂ 'ಪತ್ನಿ ಸಮಸ್ಯೆ' ಇಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದರಿಂದ ಸದನದಲ್ಲಿ ನಗೆಗಡಲು ಉಂಟಾಯಿತು, ಇದಕ್ಕೆ ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದರು.

Read Full Story