ಭಾರತ ಮತ್ತು ಒಮಾನ್ ದೇಶಗಳು ಮಹತ್ವದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಗುರುವಾರ ಇಲ್ಲಿ ಸಹಿಹಾಕಿವೆ. ಇದರನ್ವಯ ಇನ್ನುಮುಂದೆ ಭಾರತದಿಂದ ಆಮದಾಗುವ ಶೇ.98 ವಿಧದ ವಸ್ತುಗಳ ಮೇಲಿನ ತೆರಿಗೆಯನ್ನು ಒಮಾನ್ ಶೂನ್ಯಕ್ಕೆ ಇಳಿಸಿದೆ.
ಮಸ್ಕತ್: ಭಾರತ ಮತ್ತು ಒಮಾನ್ ದೇಶಗಳು ಮಹತ್ವದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಗುರುವಾರ ಇಲ್ಲಿ ಸಹಿಹಾಕಿವೆ. ಇದರನ್ವಯ ಇನ್ನುಮುಂದೆ ಭಾರತದಿಂದ ಆಮದಾಗುವ ಶೇ.98 ವಿಧದ ವಸ್ತುಗಳ ಮೇಲಿನ ತೆರಿಗೆಯನ್ನು ಒಮಾನ್ ಶೂನ್ಯಕ್ಕೆ ಇಳಿಸಿದೆ. ಅರ್ಥಾತ್ ಒಮಾನ್‌ಗೆ ಭಾರತದ ರಫ್ತಿನ ಒಟ್ಟು ಶೇ.99.38ರಷ್ಟು ಉತ್ಪನ್ನಗಳು ತೆರಿಗೆಯಿಂದ ಮುಕ್ತವಾಗಿವೆ. ಪ್ರಧಾನಿ ನರೇಂದ್ರ ಮೋದಿ ಒಮಾನ್ ಪ್ರವಾಸ ಅವಧಿಯಲ್ಲಿ ಉಭಯ ದೇಶಗಳ ನಡುವೆ ಈ ಒಪ್ಪಂದ ಏರ್ಪಟ್ಟಿದೆ.
2026ರ ಏಪ್ರಿಲ್‌ನಿಂದ ಜಾರಿಗೆ ಬರಲಿರುವ ಈ ಒಪ್ಪಂದ
2026ರ ಏಪ್ರಿಲ್‌ನಿಂದ ಜಾರಿಗೆ ಬರಲಿರುವ ಈ ಒಪ್ಪಂದದ ಅಡಿಯಲ್ಲಿ ಭಾರತದಿಂದ ರಫ್ತಾಗುವ ಜವಳಿ, ಕೃಷಿ, ಚರ್ಮದ ಉತ್ಪನ್ನಗಳಿಗೆ ತೆರಿಗೆ ವಿಧಿಸಲಾಗುವುದಿಲ್ಲ. ಇದಕ್ಕೆ ಬದಲಾಗಿ ಭಾರತ ಕೂಡ ಆಮದು ಮಾಡಿಕೊಳ್ಳುವ ಶೇ.77.79 ವಿಧದ (ಒಮಾನ್‌ನಿಂದ ಆಮದಾಗುವ ಖರ್ಜೂರ, ಅಮೃತಶಿಲೆ, ಪೆಟ್ರೋಕೆಮಿಕಲ್‌ನಂತಹ ಶೇ.94.81ರಷ್ಟು) ವಸ್ತುಗಳ ಮೇಲಿನ ತೆರಿಗೆಯನ್ನು ತೆರವುಗೊಳಿಸಿದೆ.
ಇದೇ ವೇಳೆ, ಹಲವು ಕ್ಷೇತ್ರಗಳಲ್ಲಿ ಶೇ.100ರಷ್ಟು ಹೂಡಿಕೆ ಮಾಡಲು ಒಮಾನ್ ಭಾರತಕ್ಕೆ ಅನುವು ಮಾಡಿಕೊಟ್ಟಿದೆ.
ಪ್ರಸ್ತುತ ಒಮಾನ್, ಹೆಚ್ಚು ಕಾರ್ಮಿಕರ ಅಗತ್ಯವಿರುವ ವಸ್ತುಗಳ ಮೇಲೆ ಶೇ.5ರಷ್ಟು ತೆರಿಗೆ ವಿಧಿಸುತ್ತಿದೆ. 2024-25ರಲ್ಲಿ ಉಭಯ ದೇಶಗಳ ನಡುವೆ 90 ಸಾವಿರ ಕೋಟಿ ರು. ಮೌಲ್ಯದ ವಹಿವಾಟು ನಡೆದಿದೆ.
ಪ್ರಧಾನಿ ಮೋದಿಗೆ ಒಮಾನ್ ಅತ್ಯುಚ್ಚ ನಾಗರಿಕ ಗೌರವ
ಮಸ್ಕತ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರಬ್ ದೇಶ ಒಮಾನ್, ತನ್ನ ಅತ್ಯುಚ್ಚ ನಾಗರಿಕ ಗೌರವವಾದ ‘ಆರ್ಡರ್ ಆಫ್ ಒಮಾನ್’ ನೀಡಿ ಗೌರವಿಸಿದೆ. ಉಭಯ ದೇಶಗಳ ಸಂಬಂಧ ಸುಧಾರಣೆಗೆ ನೀಡಿದ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಒಮಾನ್‌ನ ಸುಲ್ತಾನ್ ಹೈತಮ್ ಬಿನ್ ತಾರಿಕ್, ಗುರುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರಿಗೆ ಗೌರವ ಪ್ರದಾನ ಮಾಡಿದ್ದಾರೆ. ಇದು, ಮೋದಿಯವರಿಗೆ ಸಿಕ್ಕ 29ನೇ ವಿದೇಶಿ ಪ್ರಶಸ್ತಿಯಾಗಿದೆ.


