tejasvi surya sivasri skandaprasad marriage: ಸಿವಶ್ರೀ ಸ್ಕಂದ ಹಾಗೂ ನಟ ತೇಜಸ್ವಿ ಸೂರ್ಯ ಅವರೀಗ ಸತಿ-ಪತಿಗಳಾಗಿದ್ದಾರೆ. ಸಿವಶ್ರೀಯ ಹೆಣ್ಣೊಪ್ಪಿಸುವ ಶಾಸ್ತ್ರದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗ್ತಿದೆ. 

ಇತ್ತೀಚೆಗೆ ಸಂಸದ ತೇಜಸ್ವಿ ಸೂರ್ಯ ಹಾಗೂ ಗಾಯಕಿ ಸಿವಶ್ರೀ ಸ್ಕಂದ ಅವರು ಅದ್ದೂರಿಯಾಗಿ ಮದುವೆಯಾಗಿದ್ದಾರೆ, ಆರತಕ್ಷತೆ ಆಚರಿಸಿಕೊಂಡಿದ್ದರು. ಈಗ ಸಿವಶ್ರೀಯ ಹೆಣ್ಣೊಪ್ಪಿಸುವ ಶಾಸ್ತ್ರದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. 

ವಿಡಿಯೋ ವೈರಲ್!‌ 
ಸಿವಶ್ರೀಯನ್ನು ಪಾಲಕರು ತೇಜಸ್ವಿ ಸೂರ್ಯ ಮಡಿಲ ಮೇಲೆ ಕೂರಿಸುತ್ತಾರೆ. ಆಗ ಸಿವಶ್ರೀ ಭಾವುಕರಾಗಿದ್ದು, ತೇಜಸ್ವಿ ಅವರು ಕಣ್ಣೀರನ್ನು ಒರೆಸಿ, ಮುತ್ತು ಕೊಟ್ಟು ಸಮಾಧಾನ ಮಾಡುತ್ತಾರೆ. ತೇಜಸ್ವಿ ಸೂರ್ಯ ಅವರು ಪತಿಯಾಗಿ ಪತ್ನಿಯನ್ನು ಸಂತೈಸುವ ಕೆಲಸ ಮಾಡಿರುವ ವಿಡಿಯೋ ಈಗ ಸೋಶಿಯಲ್‌ ಮೀಡಿಯಾ ತುಂಬ ವೈರಲ್‌ ಆಗ್ತಿದೆ.

ಸ್ವತಃ ತಂದೆಯ ಅಂತ್ಯಸಂಸ್ಕಾರ ಮಾಡಿದ್ದ ಸುಕೃತಾ ನಾಗ್‌ ಅಕ್ಕ; ಮುಡಿಕೊಟ್ಟಿದ್ದ ʼಅಗ್ನಿಸಾಕ್ಷಿʼ ನಟಿ!

ಮುತ್ತಿಟ್ಟ ತೇಜಸ್ವಿ ಸೂರ್ಯ! 
ಸಂಸದ, ರಾಜಕಾರಣಿ ತೇಜಸ್ವಿ ಸೂರ್ಯ ಸಾಮಾನ್ಯ ಪತಿಯಂತೆ ಸಿವಶ್ರೀಯನ್ನು ಸಮಾಧಾನ ಮಾಡುತ್ತಿರುವ ವಿಡಿಯೋ ಅನೇಕರ ಮನಸ್ಸನ್ನು ಗೆದ್ದಿದೆ. ಮದುವೆಯಲ್ಲಿ ಒಂದು ಹೆಣ್ಣು ತಾಳಿ ಕಟ್ಟುವಾಗ ಭಾವುಕಳಾಗುತ್ತಾಳೆ. ಇನ್ನು ತಂದೆ ಮನೆಯವರು ಹೆಣ್ಣನ್ನು ಧಾರೆ ಎರೆದು, ಗಂಡನ ಮನೆಯವರಿಗೆ ಒಪ್ಪಿಸುವಾಗ ಗೊತ್ತೋ ಗೊತ್ತಿಲ್ಲದೆಯೋ ಕಣ್ಣೀರು ಬರುವುದು. 

'ಹೂಗುಚ್ಛಗಳು ನ್ಯಾಷನಲ್‌ ವೇಸ್ಟ್‌' ಎಂದ ತೇಜಸ್ವಿ ಸೂರ್ಯಗೆ ಹೂ ಬೆಳೆಗಾರರ ಸಂಘ ತರಾಟೆ!

ಅದ್ದೂರಿ ಮದುವೆಯಲ್ಲಿ ಜನವೋ ಜನ! 
ಬೆಂಗಳೂರಿನ ಹೊರವಲಯದಲ್ಲಿರೋ ರೆಸಾರ್ಟ್‌ನಲ್ಲಿ ಈ ಜೋಡಿ ಮದುವೆ ಆಗಿತ್ತು. ಪ್ರತಾಪ್‌ ಸಿಂಹ ಸೇರಿದಂತೆ ಕೆಲ ರಾಜಕೀಯ ವ್ಯಕ್ತಿಗಳು, ಆತ್ಮೀಯರು ಈ ಮದುವೆಗೆ ಆಗಮಿಸಿದ್ದರು. ಇನ್ನು ಸಂಗೀತ, ಮೆಹೆಂದಿ ಕೂಡ ಅದ್ದೂರಿಯಾಗಿ ನಡೆದಿತ್ತು. ಅದಾದ ಬಳಿಕ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ತೇಜಸ್ವಿ ಸೂರ್ಯ ಹಾಗೂ ಸಿವಶ್ರೀ ಅವರು ಮೊದಲು ಸೂರ್ಯನಾರಾಯಣ ಪೂಜೆ ಮಾಡಿದ್ದಾರೆ. ಆನಂತರದಲ್ಲಿ ಈ ಜೋಡಿಯ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಹೂಗುಚ್ಛಗಳನ್ನು ತರಬೇಡಿ ಎಂದು ತೇಜಸ್ವಿ ಅವರು ಮೊದಲೇ ಹೇಳಿದ್ದರು. ಇನ್ನು ಸಾಮಾನ್ಯ ಜನರಿಂದ ವಿಐಪಿಗಳಿಗೂ ಕೂಡ ಈ ಆರತಕ್ಷತೆಗೆ ಆಮಂತ್ರಣ ಇತ್ತು. ನಟ ಯಶ್, ಡಿಕೆ ಶಿವಕುಮಾರ್‌, ಸಿದ್ದರಾಮಯ್ಯ, ಜಮೀರ್‌ ಅಹಮದ್‌, ರಾಜನಾಥ್‌ ಸಿಂಗ್‌ ಮುಂತಾದವರು ಕೂಡ ಈ ಆರತಕ್ಷತೆಯಲ್ಲಿ ಭಾಗಿಯಾಗಿದ್ದರು.

ಸಿವಶ್ರೀ ಯಾರು?
ತಮಿಳುನಾಡು ಮೂಲದ ಸಿವಶ್ರೀ ಅವರು ಖ್ಯಾತ ಹಿಂದುಸ್ತಾನಿ ಗಾಯಕಿ. ನರೇಂದ್ರ ಮೋದಿ ಅವರೇ ಇವರ ಗಾಯನಕ್ಕೆ ತಲೆಬಾಗಿದ್ದರು. ಮದುವೆ ವಿಷಯವನ್ನು ಗುಟ್ಟಾಗಿ ಇಟ್ಟಿದ್ದ ಸಿವಶ್ರೀ ಹಾಗೂ ತೇಜಸ್ವಿ ಸೂರ್ಯ ಅವರು ಆರ್ಟ್ ಆಫ್ ಲಿವಿಂಗ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇನ್ನು ಬೆಂಗಳೂರಿನ ಏರ್‌ಶೋನಲ್ಲಿ ಕೂಡ ಭಾಗವಹಿಸಿದ್ದರು. ಆಗ ಇವರಿಬ್ಬರ ಮದುವೆ ಗಾಸಿಪ್‌ ಅಧಿಕೃತ ಆಗಿತ್ತು. ಸಿವಶ್ರೀ ಅವರು ಭರತನಾಟ್ಯ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಈ ಮದುವೆಯ ಎಲ್ಲ ಕಾರ್ಯಕ್ರಮಗಳಲ್ಲಿ ಸಿವಶ್ರೀ ಅವರು ಬಹಳ ಸರಳವಾಗಿ ರೆಡಿಯಾಗಿರೋದು ಅನೇಕರ ಮನಸ್ಸನ್ನು ಗೆದ್ದಿದೆ. 

View post on Instagram