ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ರೈಟ್ ಟು ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ, ನೀವು ಕಚೇರಿಯಿಂದ ಮನಗೆ ತೆರಳಿದ ಬಳಿಕ, ಅಥವಾ ನಿಮ್ಮ ಕೆಲಸದ ಸಮಯ ಮುಗಿದ ಬಳಿಕ ಆಫೀಸ್ ವಿಚಾರವಾಗಿ ಕರೆ, ಇಮೇಲ್ ಮಾಡಿದರೆ ಅಪರಾಧ. ಈ ಬಿಲ್ ಮಂಡಿಸಿದೆ.

ನವದೆಹಲಿ (ಡಿ.06) ಕಚೇರಿ ಸಮಯದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳಿದ ಬಳಿಕ ಅಥವಾ ವರ್ಕ್ ಫ್ರಮ್ ಹೋಮ್‌ನಲ್ಲಿ ಕೆಲಸದ ಸಮಯದ ಹೊರತುಪಡಿಸಿ ನಿಮ್ಮ ಖಾಸಗಿ ಸಮಯದಲ್ಲಿ ಕಂಪನಿ ಏನಾದರು ಕೆಲಸಕ್ಕೆ ಸಂಬಂದಿಸದಂತೆ ಫೋನ್, ಇಮೇಲ್ ಮಾಡುವುದು, ಕೆಲಸ ಹೇಳುವುದು ಮಾಡಿದರೆ ಅಪರಾಧ. ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ರೈಟ್ ಟು ಡಿಸ್‌ಕನೆಕ್ಟ್ ಬಿಲ್ ಮಂಡಿಸಿದೆ. ಈ ಬಿಲ್ ಪ್ರಕಾರ ಉದ್ಯೋಗಿಗಳ ಖಾಸಗಿತನ, ಖಾಸಗಿ ಸಮಯಕ್ಕೆ ಕಚೇರಿ ಗೌರವ ನೀಡಬೇಕು. ಉದ್ಯೋಗಿಗಳ ಖಾಸಗಿ ಸಮಯದಲ್ಲಿ ಕೆಲಸ ಮಾಡಲು, ಕೆಲಸಕ್ಕೆ ಸಂಬಧಿಸಿದಂತೆ ಯಾವುದೇ ಮಾತುಕತೆ, ಪೋನ್ ಸಂಭಾಷಣೆ, ಇಮೇಲ್ ಮಾಡುವಂತಿಲ್ಲ.

ರೈಟ್ ಟು ಡಿಸ್‌ಕನೆಕ್ಟ್ ಬಿಲ್ 2025

ರೈಟ್ ಟು ಡಿಸ್‌ಕನೆಕ್ಟ್ ಬಿಲ್ 2025 ಮಂಡನೆಯಾಗಿದೆ. ಈ ಮಸೂದೆಯನ್ನು ಎನ್‌‌ಸಿಪಿ ಸಂಸದೆ ಸುಪ್ರಿಯಾ ಸುಳೆ ಮಂಡಿಸಿದ್ದಾರೆ. ಈ ಮಸೂದೆ ಮಂಡಿಸಿದ ಸುಪ್ರಿಯಾ ಸುಳೆ, ಈ ಮಸೂದೆ ಖಾಸಗಿ ಹಾಗೂ ಇತರ ಉದ್ಯೋಗಿಗಳ ಯೋಗಕ್ಷೇಮ, ಅವರ ಖಾಸಗಿ ಸಮಯವನ್ನು ಗೌರವಿಸಲು ಅತ್ಯಂತ ಅಗತ್ಯವಾಗಿದೆ. ಹಲವು ಪ್ರಕರಣಗಳು ಇತ್ತೀಚೆಗೆ ವರದಿಯಾಗಿದ್ದು, ಆಫೀಸ್ ಸಮಯ ಹೊರತುಪಡಿಸಿ ಮಾಡಿದ ಕರೆ, ಇಮೇಲ್, ಕೆಲಸಕ್ಕೆ ಸ್ಪಂದಿಸಿಲ್ಲ ಅನ್ನೋ ಕಾರಣಕ್ಕೆ ಕೆಲಸದಿಂದ ತೆಗೆದು ಹಾಕಿರುವುದು, ಇತರ ರೀತಿಯಲ್ಲಿ ಟಾರ್ಗೆಟ್ ಮಾಡಿರುವ ಘಟನೆಗಳು ವರದಿಯಾಗಿದೆ. ಹೀಗಾಗಿ ರೈಟ್ ಟು ಡಿಸ್‌ಕೆನೆಕ್ಟ್ ಬಿಲ್‌ನ್ನು ಸದನ ಗಂಭೀರವಾಗಿ ಪರಿಗಣಿಸಿ ಪಾಸ್ ಮಾಡಬೇಕು, ಈ ಬಿಲ್‌ನ್ನು ಕಾರ್ಮಿಕ ಸಚಿವಾಲಯ ಸಮಗ್ರ ರೂಪದಲ್ಲಿ ನೀಡಿ ಕಾನೂನು ಮಾಡಬೇಕು ಎಂದು ಸುಪ್ರಿಯಾ ಸುಳೆ ಆಗ್ರಹಿಸಿದ್ದಾರೆ.

ಸುಪ್ರಿಯಾ ಸುಳೆ ಕೇಂದ್ರ ಸರ್ಕಾರದ ಭಾಗವಲ್ಲ. ಎನ್‌ಸಿಪಿ ಸಂಸದೆ ಮಾತ್ರ. ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಮಸೂದೆಗಳನ್ನು ಮಂಡಿಸಬಹುದು. ಗಂಭೀರ ವಿಚಾರಗಳು ಅಥವಾ ಇನ್ಯಾವುದೇ ವಿಷಯಕ್ಕೆ ಸಂಬಂಧಿಸಿ ಮಸೂದೆ ಮಂಡಿಸಿ ಸರ್ಕ್ರಾರದ ಗಮನಕ್ಕೆ ತರಲು ಅವಕಾಶವಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಈ ರೀತಿ ಬಿಲ್‌ಗಳಿಗೆ ಮನ್ನಣೆ ಸಿಗುವುದಿಲ್ಲ. ಕಾನೂನಾಗಿ ಈ ಮಸೂದೆಗಳನ್ನು ಪಾಸ್ ಮಾಡಲು ಹಲವು ಅಡೆತಡೆಗಳು ಎದುರಾಗುತ್ತದೆ. ಇಷ್ಟೇ ಅಲ್ಲ ಖಾಸಗಿ ಬಿಲ್‌ಗಳನ್ನು ಆಡಳಿತ ಸರ್ಕಾರ ಗಂಭೀರವಾಗಿ ಪರಿಗಣಿಸುವುದಿಲ್ಲ.

ಕಚೇರಿ ಸಮಯದ ಬಳಿಕ ಸಂಪೂರ್ಣ ಡಿಸ್‌ಕೆನೆಕ್ಟ್

ಕಚೇರಿ ಸಮಯದಲ್ಲಿ ಕೆಲಸ, ಬಳಿಕ ಸಂಪೂರ್ಣವಾಗಿ ಆಫೀಸ್‌ನಿಂದ ಡಿಸ್‌ಕೆನೆಕ್ಟ್ ಆಗಲು ಈ ಬಿಲ್ ಅವಕಾಶ ನೀಡುತ್ತದೆ. ಅಂದರೆ ರಜಾ ದಿನ ಅಥವಾ ಕೆಲಸದ ಸಮಯ ಮುಗಿದ ಬಳಿಕ ಕಚೇರಿಗಳು, ಅಥವಾ ಮ್ಯಾನೇಜರ್‌ಗಳು ಕೆಲಸಕ್ಕೆ ಕುರಿತಂತೆ ಯಾವುದೇ ಕರೆ, ಸೂಚನೆ, ಇಮೇಲ್ ನೀಡುವಂತಿಲ್ಲ. ಉದ್ಯೋಗಿಯ ಖಾಸಗಿ ಸಮಯವನ್ನು ಕೆಡಿಸುವಂತಿಲ್ಲ ಎಂದು ಈ ಬಿಲ್ ಹೇಳುತ್ತದೆ. ಒಂದು ವೇಳೆ ಈ ರೀತಿ ಇಮೇಲ್ ಹಾಗೂ ಕರೆ ಮಾಡಿದರೆ ಉದ್ಯೋಗಿಗಳು ಸ್ವಂದಿಸಬೇಕಿಲ್ಲ. ಇದೇ ಕಾರಣ ನೀಡಿ ಕಚೇರಿ ಕ್ರಮ ಕೈಗೊಳ್ಳಲ ಮುಂದಾದರೆ ಕಚೇರಿ, ಬಾಸ್, ಮ್ಯಾನೇಜರ್ ಅಥವಾ ಸಂಬಂಧಪಟ್ಟವರ ವಿರುದ್ದ ದೂರು ದಾಖಲಿಸಲು ಕ್ರಮ ಕೈಗೊಳ್ಳಲು ಅವಕಾಶ ನೀಡುತ್ತದೆ.

ರಜಾ ದಿನದಲ್ಲಿ ಕೆಲಸ, ಸಮಯ ಮುಗಿದ ಬಳಿಕ ಕೆಲಸ, ಕಚೇರಿಯಿಂದ ಮನೆಗೆ ತೆರಳಿದ ಬಳಿಕವೂ ಹಲವು ಕಂಪನಿಗಳು ಉದ್ಯೋಗಿಳಿಗೆ ಜವಾಬ್ದಾರಿಗಳನ್ನು ನೀಡುತ್ತದೆ. ಉದ್ಯೋಗಿಗಳು ಅನಿವಾರ್ಯವಾಗಿ ಕೆಲಸ ಮಾಡಬೇಕಾಗುತ್ತದೆ. ಉದ್ಯೋಗಿಯ ವಿಶ್ರಾಂತಿ ಅಥವಾ ಖಾಸಗಿ ಸಮಯವನ್ನು ಗೌರವಿಸುವ ಸಲುವಾಗಿ ಸುಪ್ರಿಯಾ ಸುಳೆ ಈ ಮಸೂದೆ ಮಂಡಿಸಿದ್ದಾರೆ.