ಪೋಷಕರು ಮನೆಯಲ್ಲಿ, ಮಕ್ಕಳು ರೈಲ್ವೇ ಟ್ರಾಕ್ ಬಳಿ ಶವವಾಗಿ ಪತ್ತೆ, ಅನುಮಾನ ಮೂಡಿಸಿದ 4 ಸಾವು, ಮೊದಲು ಇಬ್ಬರು ಮಕ್ಕಳ ಶವ ಪತ್ತೆಗೆ ಕಾರಣ ಹುಡುಕುತ್ತಿದ್ದ ಪೊಲೀಸರಿಗೆ ದಿಢೀರ್ ಪೋಷಕರ ಸಾವಿನ ಮಾಹಿತಿ ತಿಳಿದಿದೆ.
ನಾಂದೇಡ್ (ಡಿ.25) ಒಂದೇ ದಿನ, ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಪೋಷಕರು ಮನೆಯಲ್ಲಿ ಬದುಕು ಅಂತ್ಯಗೊಳಿಸಿದ ರೀತಿಯಲ್ಲಿ ಪತ್ತೆಯಾಗಿದ್ದರೆ, ಇತ್ತ ಮಕ್ಕಳಿಬ್ಬರು ರೈಲು ಹಳಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೇ ಹಳಿಯಲ್ಲಿ ಇಬ್ಬರ ಮೃತದೇಹ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಇದು ಅಚನಕ್ಕಾಗಿ ಆಗಿರುವ ಅಪಘಾತವೋ ಅಥವಾ ಸ್ವಯಂ ಬದುಕು ಅಂತ್ಯಗೊಳಿಸಿರುವುದೋ ಅನ್ನೋ ಕುರಿತು ತಿನಿಖೆ ಆರಂಭಿಸಿದ ಬೆನ್ನಲ್ಲೇ ಇಬ್ಬರು ಮಕ್ಕಳ ಪೋಷಕರು ಮನೆಯಲ್ಲಿ ಶವವಾಗಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಪ್ರತ್ಯೇಕ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಇಬ್ಬರು ಮಕ್ಕಳು ಮುದ್‌ಖೇದ್ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿಯ ರೈಲು ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಮಾಹಿತಿ ಕಲೆ ಹಾಕಿದ್ದಾರೆ. ಇಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೋ ಅಥವಾ ಇನ್ಯಾವುದೇ ಕಾರಣಗಳಿಂದ ಮೃತಪಟ್ಟಿದ್ದಾರೋ ಅನ್ನೋ ಕುರಿತು ತನಿಖೆ ಆರಂಭಿಸಿದ್ದಾರೆ. ಮೃತರ ವಿಳಾಸ, ಕುಟುಂಬಸ್ಥರ ಕುರಿತು ಮಾಹಿತಿ ಪಡೆದು ತೆರಳಿದಾಗ ಪೊಲೀಸರಿಗೆ ಅಚ್ಚರಿಯಾಗಿದೆ. ಕಾರಣ ಬರಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮನೆಯಲ್ಲಿ ಮಕ್ಕಳ ಪೋಷಕರು ಬದುಕು ಅಂತ್ಯಗೊಳಿಸಿರುವುದು ಪತ್ತೆಯಾಗಿದೆ.
ಪ್ರಕರಣ ಗಂಭೀರವಾಗಿ ಪರಿಗಣಿಸಿದ ನಾಂದೇಡ್ ಪೊಲೀಸ್
ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆಯನ್ನು ನಾಂದೇಡ್ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಮೇಲ್ನೋಟಕ್ಕೆ ಇಡೀ ಕುಟುಂಬ ಬದುಕು ಅಂತ್ಯಗೊಳಿಸಿರುವಂತೆ ಕಂಡಬಂದರೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸ್ಥಳೀಯ ಮಾಹಿತಿ ಪ್ರಕಾರ ಚಲಿಸುತ್ತಿರುವ ರೈಲಿನಿಂದ ಇಬ್ಬರು ಹಾರಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿದೆ. ಇದು ಉದ್ದೇಶಪೂರ್ಕವಾಗಿ ಹಾರಿದ್ದಾರೋ, ಅಥವಾ ತಳ್ಳಿದ್ದಾರೋ ಅನ್ನೋ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಕುಟಂಬಕ್ಕಿರಲಿಲ್ಲ ಹೆಚ್ಚಿನ ಸಮಸ್ಯೆ
ಸ್ಛಳೀಯರು, ಕುಟುಂಬಸ್ಥರಿಂದ ಪೊಲೀಸರು ನಾಲ್ವರ ಕುರಿತು ಮಾಹಿತಿ ಕಲೆಹಾಕಿದ್ದಾರೆ. ಸ್ಛಳೀಯರ ಪ್ರಕಾರ ಕುಟುಂಬಕ್ಕೆ ಹೆಚ್ಚಿನ ಸಮಸ್ಯೆಗಳೇನು ಇರಲಿಲ್ಲ ಎಂದಿದ್ದಾರೆ. ಸಾಲ ಅಥವಾ ಆರ್ಥಿಕ ಸಮಸ್ಯೆಗಳ ಕುರಿತು ಯಾವುದೇ ಮಾಹಿತಿ ತಿಳಿದಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಇನ್ನು ಕುಟುಂಬಸ್ಥರ ಬಳಿಯೂ ಹಣದ ವಿಚಾರವಾಗಿ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದಿದ್ದಾರೆ. ಇದೀಗ ಸ್ಥಳೀಯಯ ಸಾಲಗಾರರು,ಫಿನಾನ್ಸ್ ದಾಖಲೆ ಪರಿಶೀಲಿಸಲು ಪೊಲೀಸರು ಮುಂದಾಗಿದ್ದಾರೆ.


