ಸೃಷ್ಟಿ ಫರ್ಟಿಲಿಟಿ ಸೆಂಟರ್ ಹಗರಣ ಬಟಾ ಬಯಲಾಗಿದೆ. ತನಿಖೆ ತೀವ್ರಗೊಳ್ಳುತ್ತಿದ್ದಂತೆ ಐವಿಎಫ್, ಸರೋಗಸಿ, ಟೆಸ್ಟ್ ಟ್ಯೂಬ್ ಸೇರಿದಂತೆ ಒಂದೊಂದೆ ಹಗರಣಗಳು ಹೊರಬರುತ್ತಿದೆ. ಇದೀಗ ಈ ಬೇಬಿ ಸೆಂಟರ್ ಭಿಕ್ಷುಕರನ್ನು ಬಿಟ್ಟಿಲ್ಲ. ಬಿರಿಯಾನಿ ಆಸೆ ತೋರಿಸಿ ಭಿಕ್ಷುರ ವೀರ್ಯ ಪಡೆದಿರುವುದು ಬಹಿರಂಗವಾಗಿದೆ.
ವಿಶಾಖಪಟ್ಟಣಂ (ಜು.30) ಸೃಷ್ಠಿ ಫರ್ಟಿಲಿಟಿ ಸೆಂಟರ್ ಹಗರಣಗಳು ಒಂದೊಂದಾಗಿ ಬಯಲಾಗುತ್ತಿದೆ. 35 ಲಕ್ಷ ರೂಪಾಯಿ ನೀಡಿ ಸರೋಗಸಿ ಮೂಲಕ ಮಗು ಪಡೆಯಲು ಮುಂದಾದ ದಂಪತಿಗೆ ಡಿಎನ್ಎ ಪರೀಕ್ಷೆ ವೇಳೆ ಮೋಸ ಬಟಾ ಬಯಾಲಾಗಿತ್ತು. ಮಗು ತಮ್ಮದಲ್ಲ ಅನ್ನೋದು ಖಚಿತವಾಗುತ್ತಿದ್ದಂತೆ ದೂರು ದಾಖಲಾಗಿತ್ತು. ಇದರ ಬೆನ್ನಲ್ಲೇ ಪೊಲೀಸರ ತನಿಖೆಯಲ್ಲಿ ಇದೀಗ ಸ್ಫೋಟಕ ಮಾಹಿತಿ ಬಯಲಾಗಿದೆ. ಮಕ್ಕಳಿಲ್ಲದ ದಂಪತಿಗಳನ್ನು ಈ ಸೃಷ್ಛಿ ಫರ್ಟಿಲಿಟಿ ಸೆಂಟರ್‌ನ ವೈದ್ಯೆ ಡಾ. ನಮ್ರತಾ ಲಕ್ಷ ಲಕ್ಷ ರೂಪಾಯಿ ಪಡದು ಮೋಸ ಮಾಡುತ್ತಿರುವುದು ಬಯಲಾಗಿದೆ. ಭಿಕ್ಷುಕರಿಗೆ ಬಿರಿಯಾನಿ, ಮದ್ಯದ ಆಸೆ ತೋರಿಸಿ ಅವರ ವೀರ್ಯ ಸಂಗ್ರಹಿಸಿ, ಸರೋಗಸಿ ಮೂಲಕ ಮಗು ಪಡೆದು ದಂಪತಿಗಳಿಗೆ ಮೋಸ ಮಾಡುತ್ತಿರುವ ಅತೀ ದೊಡ್ಡ ಜಾಲ ಬಯಲಾಗಿದೆ.
ವಿಶಾಖಪಟ್ಟಣದ ಈ ಸೃಷ್ಟಿ ಫರ್ಟಿಲಿಟಿ ಸೆಂಟರ್ ಸಂಪರ್ಕಿಸಿದ ಬಹುತೇಕ ಎಲ್ಲಾ ದಂಪತಿಗಳಿಗೆ ಮೋಸ ಮಾಡಲಾಗಿದೆ. ದಂಪತಿಗಳಿಂದ 35 ಲಕ್ಷ ರೂಪಾಯಿ, 25 ಲಕ್ಷ ರೂಪಾಯಿ ಸೇರಿದಂತೆ ಲಕ್ಷ ಲಕ್ಷ ರೂಪಾಯಿ ನೀಡಿ ಮೋಸ ಹೋಗಿದ್ದಾರೆ. ಈ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಹೈದರಾಬಾದ್ ದಂಪತಿಗಳು 35 ಲಕ್ಷ ರೂಪಾಯಿ ನೀಡಿ ಸೃಷ್ಟಿ ಫರ್ಟಿಲಿಟಿ ಸೆಂಟರ್ ಸಂಪರ್ಕಿಸಿದ್ದರು. ದಂಪತಿಗಳು ತಮ್ಮ ವೀರ್ಯ, ಅಂಡಾಣುಗಳನ್ನು ಸೆಂಟರ್‌ಗೆ ನೀಡಿದ್ದರು ಇದರಂತೆ 9 ತಿಂಗಳ ಬಳಿಕ ಫರ್ಟಿಲಿಟಿ ಸೆಂಟರ್ ಮಗುವನ್ನು ನೀಡಿದ್ದರು. ಆದರೆ ಈ ಮಗು ಜೈವಿಕವಾಗಿ ಅವರದ್ದಾಗಿರಲಿಲ್ಲ. ಡಿಎನ್ಎ ಪರೀಕ್ಷೆಯಲ್ಲಿ ಮಗು ತಮ್ಮದಲ್ಲ ಅನ್ನೋದು ಸಾಬೀತಾಗಿತ್ತು. ಮಗು ಯಾವುದೇ ಸರೋಗಸಿ ವಿಧಾನದ ಮೂಲಕ ಜನಿಸಿರಲಿಲ್ಲ. ಈ ಮಗುವನ್ನು ಅಸ್ಸಾಂನ ಬಡ ಕುಟುಂಬದಿಂದ ಖರೀದಿಸಿ ದಂಪತಿಗಳ ಸ್ವಂತ ಮಗುವಿನಂತೆ ನೀಡಲಾಗಿತ್ತು.
ಕನಸು ದುಃಸ್ವಪ್ನವಾಗಿ ಬದಲಾಯಿತು
2024 ರ ಆಗಸ್ಟ್‌ನಲ್ಲಿ, ದಂಪತಿಗಳು ಫಲವತ್ತತೆ ಜಗತ್ತಿನಲ್ಲಿ ಪ್ರಸಿದ್ಧ ಹೆಸರನ್ನು ಸಂಪರ್ಕಿಸಿದ್ದರು - ಯುನಿವರ್ಸಲ್ ಸೃಷ್ಟಿ ಫರ್ಟಿಲಿಟಿ ಸೆಂಟರ್‌ನ ಸಂಸ್ಥಾಪಕಿ ಡಾ.ನಮ್ರತಾ. ಸರೋಗಸಿ ಅವರ ಪೋಷಕತ್ವದ ಅತ್ಯುತ್ತಮ ಅವಕಾಶ ಎಂದು ಮತ್ತು ಮಗು ತಳೀಯವಾಗಿ ಅವರದ್ದಾಗಿರುತ್ತದೆ ಎಂದು ಅವರು ಅವರಿಗೆ ಭರವಸೆ ನೀಡಿದರು. ಅವರ ಕಣ್ಣುಗಳಲ್ಲಿ ಭರವಸೆ ಮತ್ತು ವ್ಯವಸ್ಥೆಯ ಮೇಲಿನ ನಂಬಿಕೆಯೊಂದಿಗೆ, 35 ಲಕ್ಷ ರೂಪಾಯಿ ಪಾವತಿಸಿದ್ದರು. .
ಎಲ್ಲವನ್ನೂ ಬದಲಿಸಿದ ಡಿಎನ್ಎ ಪರೀಕ್ಷೆ
ಕ್ಲಿನಿಕ್ ಡಿಎನ್ಎ ಪುರಾವೆಗಳನ್ನು ನೀಡುವುದನ್ನು ತಪ್ಪಿಸಿದಾಗ ದಂಪತಿಗಳ ಅನುಮಾನಗಳು ಬೆಳೆಯಲು ಪ್ರಾರಂಭಿಸಿದವು. ಆದ್ದರಿಂದ, ಅವರು ಸದ್ದಿಲ್ಲದೆ ಪರೀಕ್ಷೆಯನ್ನು ಮಾಡಿದರು. ಫಲಿತಾಂಶಗಳು ಭಯಾನಕವಾಗಿದ್ದವು: ಮಗುವಿನೊಂದಿಗೆ ಯಾವುದೇ ಪೋಷಕರು ಒಂದೇ ಜೀನ್ ಅನ್ನು ಹಂಚಿಕೊಂಡಿಲ್ಲ. ಈ ಕುರಿತು ಫರ್ಟಿಲಿಟಿ ಸೆಂಟರ್ ನುಣುಚಿಕೊಳ್ಳವು ಪ್ರಯತ್ನ ಮಾಡಿತ್ತು. ಹೀಗಾಗಿ ಗೋಪಾಲಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಹಗರಣದ ಹಿಂದಿನ ಮಾಸ್ಟರ್‌ಮೈಂಡ್
ಇದೆಲ್ಲದರ ಮಧ್ಯದಲ್ಲಿ 64 ವರ್ಷದ ಡಾ. ನಮ್ರತಾ, ಒಮ್ಮೆ ಫಲವತ್ತತೆ ತಜ್ಞರಾಗಿ ತಮ್ಮದೇ ಆದ ಹೆಸರನ್ನು ನಿರ್ಮಿಸಿಕೊಂಡಿದ್ದರು. ಆದರೆ ಮಾಡಿದ್ದೆಲ್ಲವೂ ಅಕ್ರಮ. ಭಿಕ್ಷುಕರಿಗೆ ಬಿರಿಯಾನಿ ನೀಡಿ ಅವರ ವೀರ್ಯ ಪಡೆದು ಆ ವೀರ್ಯವನ್ನು ಬುಡಕಟ್ಟು ಮಹಿಳೆಯರು, ಬಡವರಿ ಮೂಲಕ ಮಗು ಮಾಡಿಕೊಳ್ಳುತ್ತಿದ್ದರು. ಈ ಮಗುವನ್ನು ದಂಪತಿಗಳ ಮಗು ಎಂದು ನೀಡುತ್ತಿದ್ದರು.
₹90,000ಕ್ಕೆ ಮಗುವನ್ನು ಮಾರಾಟ ಮಾಡಲಾಗಿದೆ
ಮಗು IVF ಅಥವಾ ಸರೋಗಸಿ ಮೂಲಕ ಜನಿಸಿಲ್ಲ. ಅಸ್ಸಾಂನ ದಂಪತಿಗಳಾದ ಮೊಹಮ್ಮದ್ ಅಲಿ ಆದಿಕ್ ಮತ್ತು ನಸ್ರೀನ್ ಬೇಗಂ ಅವರಿಂದ ಮಗುವನ್ನು ಹಸ್ತಾಂತರಿಸಲಾಯಿತು, ಅವರು ₹90,000ಕ್ಕೆ ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.
