ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾಗೆ ಸಿಡಿಲು ಬಡಿದಿರುವ ವೀಡಿಯೋ ವೈರಲ್ ಆಗಿದೆ. ದುಬೈ ರಾಜಕುಮಾರ ಶೇಕ್ ಹಮ್ದನ್ ಪೋಸ್ಟ್ ಮಾಡಿದ ಈ ದೃಶ್ಯವು, ಯುಎಇಯಲ್ಲಿನ ಅಸ್ಥಿರ ಹವಾಮಾನದ ನಡುವೆ ಸೆರೆಯಾಗಿದ್ದು, ಸಿಡಿಲಿನ ಬೆಳಕು ಕಟ್ಟಡದ ಮೇಲೆ ಸೊಗಸಾದ ಚಿತ್ತಾರ ಮೂಡಿಸಿದೆ.

ಕೆಲ ದಿನಗಳ ಹಿಂದೆ ಅರಬ್‌ ದೇಶಗಳಲ್ಲಿ ಹಿಮಾಲಯದಂತೆ ಮಂಜು ಬಿದ್ದು ಅಚ್ಚರಿ ಸೃಷ್ಟಿಸಿತ್ತು. ಅದಕ್ಕೂ ಮೊದಲು ಮಳೆಯೇ ಇಲ್ಲದ ಆ ಮರಳುಗಾಡಿನಲ್ಲಿ ಧಾರಾಕಾರ ಮಳೆ ಸುರಿದು ಪ್ರವಾಹ ಸೃಷ್ಟಿಯಾದಂತಹ ಘಟನೆ ನಡೆದಿದ್ದವು. ಈಗ ಮತ್ತೊಂದು ಅಚ್ಚರಿ ಎಂಬಂತೆ ಅಲ್ಲಿನ ವಿಶ್ವ ವಿಖ್ಯಾತ ಬುರ್ಜ್‌ ಖಲೀಫಾಗೆ ಸಿಡಿಲು ಬಡಿದಿದ್ದು, ಈ ಸಿಡಿಲಿನ ಬೆಳಕು ಸೊಗಸಾದ ಚಿತ್ತಾರ ಸೃಷ್ಟಿಸಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಒಮನ್ ದೊರೆ ಶೇಕ್ ಹಮ್ದನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತಂ ಅವರೇ ಸ್ವತಃ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ಈ ಸಿಡಿಲಿನ ಬೆಳಕು ವಿಶ್ವದ ಅತೀ ಎತ್ತರದ ಕಟ್ಟಡ ಎನಿಸಿರುವ ಬುರ್ಜ್ ಖಲೀಫಾದ ಮೇಲೆ ಸೊಗಸಾದ ಚಿತ್ತಾರ ನಿರ್ಮಿಸಿದೆ.

ದುಬೈ ಎಂಬ ಕ್ಯಾಪ್ಷನ್ ನೀಡಿ ದುಬೈ ರಾಜಕುಮಾರ್ ಶೇಕ್ ಹಂಮ್ದನ್ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಅವರು ಮಳೆ ಹಾಗೂ ಸಿಡಿಲಿನ ಇಮೋಜಿಯನ್ನು ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಮಿಲಿಯನ್‌ಗೂ ಹೆಚ್ಚು ಜನರು ಈ ವೀಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

ಯುಎಇಯಲ್ಲಿ ಬಿರುಗಾಳಿಯ ವಾತಾವರಣ

ಯುನೈಟೆಡ್ ಅರಬ್ ಎಮಿರೇಟ್ಸ್‌ನಾದ್ಯಂತ ಅಸ್ಥಿರವಾದ ಹವಾಮಾನ ಪರಿಸ್ಥಿತಿಯ ನಡುವೆ ಈ ಘಟನೆ ಸಂಭವಿಸಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ರಾಷ್ಟ್ರೀಯ ಹವಾಮಾನ ಕೇಂದ್ರವು ದೇಶದ ಹಲವಾರು ಪ್ರದೇಶಗಳಲ್ಲಿ ಮಳೆ, ಗುಡುಗು, ಮಿಂಚು ಮತ್ತು ಆಲಿಕಲ್ಲು ಮಳೆಯ ಎಚ್ಚರಿಕೆಯನ್ನು ನೀಡಿದೆ. ಡಿಸೆಂಬರ್ 18 ರಂದು ಯುಎಇ 'ಅಲ್ ಬಶಾಯರ್' ಅಂದರೆ ಕಡಿಮೆ ಒತ್ತಡದ ವ್ಯವಸ್ಥೆಯ ಗರಿಷ್ಠ ಹಂತವನ್ನು ಪ್ರವೇಶಿಸಿದೆ ಎಂದು ಹವಾಮಾನ ಇಲಾಖೆ ದೃಢಪಡಿಸಿದೆ. ಈ ಹವಾಮಾನ ಬದಲಾವನೆ ವ್ಯವಸ್ಥೆಯು ಅಲ್ಲಿ ಭಾರೀ ಮಳೆ ಮತ್ತು ಚಂಡಮಾರುತದ ಎಚ್ಚರಿಕೆ ನೀಡಿದೆ. ಜೊತೆಗೆ ವೈರಲ್ ವೀಡಿಯೋದಲ್ಲಿ ಇರುವ ಮಿಂಚಿನ ಹೊಡೆತಕ್ಕೂ ಇದು ಕಾರಣವಾಗಿದೆ.

ಇದನ್ನೂ ಓದಿ: ತಾಯಿಯ ಹಿಂದೆ ನಡೆದು ಹೋಗುತ್ತಿದ್ದ 5 ವರ್ಷದ ಬಾಲಕನ ಬೇಟೆಯಾಡಿ ಕೊಂದ ಚಿರತೆ

ಈ ವೀಡಿಯೋ ಹಲವು ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ವೈರಲ್ ಆಗಿದ್ದು, ಅನೇಕ ಬಳಕೆದಾರರು ಇದು ಜೀವನದಲ್ಲಿ ಒಮ್ಮೆ ಮಾತ್ರ ಬರುವ ಕ್ಷಣ ಎಂದು ಕರೆದಿದ್ದಾರೆ. ಹಲವಾರು ವೀಕ್ಷಕರು ಮಿಂಚಿನ ಸಂಚಾರವೂ ಐಕಾನಿಕ್ ಗಗನಚುಂಬಿ ಕಟ್ಟಡಕ್ಕೆ ಲೈಟಿಂಗ್ಸ್ ಮಾಡಿದಂತೆ ಕಂಡು ಬಂತು ಎಂದು ಹೇಳಿದ್ದಾರೆ. 829.8 ಮೀಟರ್ ಎತ್ತರವನ್ನು ಹೊಂದಿರುವ ಬುರ್ಜ್ ಖಲೀಫಾ ಅತ್ತಿ ಎತ್ತರದ ಕಟ್ಟಡವಾಗಿದ್ದು, ಇದರ ಅತೀ ಎತ್ತರವೂ ವಿಭಿನ್ನ ಹವಾಮಾನ ವೈಪರೀತ್ಯದ ಸಮಯದಲ್ಲಿ ಅದನ್ನು ಆಕರ್ಷಣೆಯ ಕೇಂದ್ರಬಿಂದುವಾಗಿಸುತ್ತದೆ.

ಇದನ್ನೂ ಓದಿ: RTE ಕಾಯ್ದೆಯಡಿ ಪ್ರವೇಶ ಪಡೆದ ಬಾಲಕಿಗೆ ಖಾಸಗಿ ಶಾಲೆ ಕಿರುಕುಳ: ರಸ್ತೆಯಲ್ಲೇ ಕುಳಿತು ಬಾಲಕಿ ಪ್ರತಿಭಟನೆ

View post on Instagram