ಸಂವಾದ ವೇದಿಕೆಯಲ್ಲೇ ಪತ್ರಕರ್ತನನ್ನೇ ಎತ್ತಿ ಕೆಳಕ್ಕುರುಳಿಸಿದ ಬಾಬಾ ರಾಮ್‌ದೇವ್,ರಸ್ಲಿಂಗ್ ವಿಡಿಯೋ ವೈರಲ್ ಆಗಿದೆ. 59 ವರ್ಷದ ಯೋಗ ಗುರು ಎಲ್ಲರಿಗೆ ಅಚ್ಚರಿ ನೀಡಿದ್ದಾರೆ. ಸಂವಾದ ಕಾರ್ಯಕ್ರಮದಲ್ಲಿ ನಡೆದ ಫ್ಲೆಂಡ್ಲಿ ರಸ್ಲಿಂಗ್ ವಿಡಿಯೋ ಇಲ್ಲಿದೆ
ಇಂದೋರ್ (ಡಿ.22) ಯೋಗ ಗುರು ಬಾಬಾ ರಾಮ್‌ದೇವ್ ವಯಸ್ಸು 59 ಆದರೂ ಚಿರ ಯುವಕನಂತೆ ಸದಾ ಚಟುವಟಿಕೆಯಿಂದ ಇರುತ್ತಾರೆ. ಪ್ರತಿ ದಿನ ಯೋಗಾಭ್ಯಾಸ ಮಾಡುವ ಕಾರಣ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಯೋಗ ಗುರು ಹಲವು ಕಾರ್ಯಕ್ರಮಗಳಲ್ಲಿ ಸೆಲೆಬ್ರೆಟಿಗಳನ್ನೇ ಹಿಂದಿಕ್ಕಿದ್ದಾರೆ. ಪುಶ್ ಅಪ್, ರನ್ನಪ್ ಸೇರಿದಂತೆ ಯಾವುದೇ ರೀತಿ ಫಿಸಿಕಲ್ ಚಟುವಟಿಕೆಯಲ್ಲಿ ಯುವಕರಿಗೆ ಬಾಬಾ ರಾಮ್‌ದೇವ್ ಹಿಂದಿಕ್ಕುವುದು ಸುಲಭದ ಮಾತಲ್ಲ. ಇದೀಗ ಸಂವಾದ ಕಾರ್ಯಕ್ರಮದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಬಾಬಾ ರಾಮ್‌ದೇವ್ ಅಚ್ಚರಿ ನೀಡಿದ್ದಾರೆ. ಪತ್ರಕರ್ತನ ಜೊತೆಗೆ ಏಕಾಏಕಿ ರಸ್ಲಿಂಗ್ ಕುಸ್ತಿ ಮಾಡಿದ್ದಾರೆ. ಪತ್ರಕರ್ತನ ಎತ್ತಿ ನೆಲ್ಲಕ್ಕುರುಳಿಸಿದ್ದಾರೆ. ಆದರೆ ಈ ಬಾರಿ ಬಾಬಾ ರಾಮ್‌ದೇವ್ ಹೆಚ್ಚು ಪ್ರಯಾಸ ಪಟ್ಟಿದ್ದಾರೆ. ಅಷ್ಟು ಸುಲಭಾಗಿ ಪತ್ರಕರ್ತನ ಜೊತೆ ರಸ್ಲಿಂಗ್ ಆಡಲು ಸಾಧ್ಯವಾಗಿಲ್ಲ. ಇದಕ್ಕೆ ಒಂದು ಕಾರಣವೂ ಇದೆ. ಆದರೆ ಈ ವಿಡಿಯೋ ಮಾತ್ರ ಈಗ ಭಾರಿ ವೈರಲ್ ಆಗಿದೆ.
ಭಾರತ್ ಸಂವಾದ ಕಾರ್ಯಕ್ರಮದಲ್ಲಿ ಸಂವಾದ
ಖಾಸಗಿ ಮಾಧ್ಯಮ ಸಂಸ್ಥೆ ಭಾರತ್ ಸಂವಾದ ಕಾರ್ಯಕ್ರಮ ಆಯೋಜಿಸ್ತು. ಕಾರ್ಯಕ್ರಮದಲ್ಲಿ ಭಾರತ ಪರಂಪರೆ, ಸಂಸ್ಕೃತಿ, ಯೋಗ ಸೇರಿದಂತೆ ಹಲವು ವಿಚಾರಗಳ ಸಂವಾದ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಯೋಗ ಗುರು ಬಾಬಾ ರಾಮ್‌ದೇವ್‌ಗೆ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಬಾಬಾ ರಾಮ್‌ದೇವ್ ನೆರೆದಿದ್ದ ಪ್ರೇಕ್ಷಕರಲ್ಲಿ ರಸ್ಲಿಂಗ್ ಪಂದ್ಯಕ್ಕಾಗಿ ವೇದಿಕೆ ಬರಲು ಆಹ್ವಾನ ನೀಡಿದ್ದಾರೆ. ಮುಂದೆ ಕುಳಿತಿದ್ದ ಪತ್ರಕರ್ತನ ನೋಡಿ ನೀವೆ ಬನ್ನಿ ಎಂದು ಬಾಬಾ ರಾಮ್‌ದೇವ್ ಆಹ್ವಾನಿಸಿದ್ದಾರೆ.
ಪತ್ರಕರ್ತನ ಜೊತೆ ಫ್ಲೆಂಡ್ಲಿ ಮ್ಯಾಚ್
ಇಂದೋರ್ ಮೂಲದ ಪತ್ರಕರ್ತ ಜಯ್‌ದೀಪ್ ಕಾರ್ನಿಕ್ ವೇದಿಕೆ ಮೇಲೆ ಬಂದಿದ್ದಾರೆ. ಆದರೆ ಬಾಬಾ ರಾಮ್‌ದೇವ್‌ಗೆ ಅಷ್ಟು ಸುಲಭವಾಗಿ ಜಯ್‌ದೀಪ್‌ನ ನೆಲಕ್ಕುರುಳಿಸಲು ಸಾಧ್ಯವಾಗಲಿಲ್ಲ. ರಾಮ್‌ದೇವ್ ಒಂದೆರೆಡು ಪಟ್ಟು ಹಾಕಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಶ್ರಮವಹಿಸಿ ಪತ್ರಕರ್ತನ ನೆಲಕ್ಕುರುಳಿಸಿದ್ದಾರೆ. ಆದರೆ ಅಷ್ಟೇ ವೇಗದಲ್ಲಿ ಪತ್ರಕರ್ತ ಬಾಬಾ ರಾಮ್‌ದೇವ್ ಅವರನ್ನು ನೆಲಕ್ಕುರುಳಿಸಿದ್ದಾನೆ. ಬಳಿಕ ಛಂಗನೆ ಎದ್ದು ಮತ್ತೊಂದು ಪಟ್ಟು ಹಾಕಲು ಪತ್ರಕರ್ತ ಮುಂದಾಗಿದ್ದಾನೆ. ಪತ್ರಕರ್ತನ ಜೊತೆ ರಸ್ಲಿಂಗ್ ಸುಲಭವಿಲ್ಲ ಎಂದರಿತ ಬಾಬಾ ರಾಮ್‌ದೇವ್ ತಕ್ಷಣವೇ ರಸ್ಲಿಂಗ್ ಅಂತ್ಯಗೊಳಿಸಿದರು. ಇದು ಫ್ಲೆಂಡ್ಲಿ ಮ್ಯಾಚ್. ಅನ್ಯತಾ ಭಾವಿಸಬೇಡಿ, ತಮಾಷೆ ಹಾಗೂ ಫಿಟ್ನೆಸ್‌ಗಾಗಿ ಮಾಡಲಾಗಿದೆ ಅಷ್ಟೇ ಎಂದಿದ್ದಾರೆ.
ವಿಶೇಷ ಅಂದರೆ ವೇದಿಕೆ ಮೇಲೆ ಬಂದ ಪತ್ರಕರ್ತ ಜಯ್‌ದೀಪ್ ರಸ್ಲಿಂಗ್ ಕುಟುಂಬದಿಂದ ಬಂದ ವ್ಯಕ್ತಿ. ಜಯ್‌ದೀಪ್ ತಂದೆ ರಸ್ಲಿಂಗ್ ಪಟುವಾಗಿದ್ದರು. ಇನ್ನು ಜಯ್‌ದೀಪ್ ತಾತ ಕೂಡ ರಸ್ಲಿಂಗ್ ಪಟುವಾಗಿದ್ದರು. ರಸ್ಲಿಂಗ್ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದ ಜಯ್‌ದೀಪ್ ಅಷ್ಟೇ ವೇಗವಾಗಿ ಬಾಬಾ ರಾಮ್‌ದೇವ್ ಅವರನ್ನು ಕೆಳಕ್ಕೆ ಉರುಳಿಸಿದ್ದರು.


