ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವುದಕ್ಕೆ ಪಾಲಿಕೆಯಿಂದ ನಿರ್ಬಂಧ ವಿಧಿಸಲಾಗಿದೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಸ್ವತಃ ಬಿಬಿಎಂಪಿ ಸ್ಪಷ್ಟೀಕರಣ ಆದೇಶ ಹೊರಡಿಸಿದೆ. 

ಬೆಂಗಳೂರು (ಮೇ 09): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕುವಂತಿಲ್ಲ. ಸಾರ್ವಜನಿಕರು ಬೀದಿ ನಾಯಿಗಳಿಗೆ ಆಹಾರ ಹಾಕಿದರೆ ದಂಡ ವಿಧಿಸಲಾಗುತ್ತದೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸ್ಪಷ್ಟೀಕರಣ ನೀಡಿದೆ.

ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಸಾರ್ವಜನಿಕರು ಆಹಾರ ಹಾಕುವಂತಿಲ್ಲ ಎಂದು ಕೆಲವು ಸಾಮಾಜಿಕ ಜಾಲತಾಣಗಳು ಹಾಗೂ ಮಾದ್ಯಮಗಳಲ್ಲಿ ತಪ್ಪು ಸಂದೇಶಗಳನ್ನು ಬಿತ್ತರಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಪಶುಪಾಲನಾ ವಿಭಾಗದಿಂದ ಬೀದಿನಾಯಿಗಳಿಗೆ ಆಹಾರ ನೀಡುವ ಕುರಿತು ನಿರ್ಬಂಧ ವಿಧಿಸಲಾಗಿದೆ ಎಂಬ ಆದೇಶಗಳನ್ನು ತೋರಿಸಲಾಗುತ್ತಿತ್ತು. ಆದರೆ, ಅಂತ ಪ್ರಕಟಣೆಗಳು ಸತ್ಯಕ್ಕೆ ದೂರವಾಗಿರುತ್ತವೆ ಎಂದು ಪಾಲಿಕೆ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರಾದ ಡಾ. ರವಿಕುಮಾರ್ ಸ್ಪಷ್ಟಿಕರಣ ನೀಡಿದ್ದಾರೆ.

ಬೆಂಗಳೂರು ಮಳೆ ಅವಾಂತರ ತಡೆಯಲು ಸಿದ್ಧಗೊಂಡ ಬಿಬಿಂಎಪಿ

ಮುಂದುವೆರೆದು...

  • * ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿನಾಯಿಗಳಿಗೆ ಆಹಾರ ನೀಡುವ ಬಗ್ಗೆ ಪ್ರಾಣಿ ಪ್ರಿಯರು, ಸಾರ್ವಜನಿಕರು, ಸಮುಚ್ಛಯ ನಿವಾಸಿಗಳ ನಡುವೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಸಮನ್ವಯ ಸಾಧಿಸಲಾಗುತ್ತಿದೆ.
  • * ಬೀದಿ ನಾಯಿಗಳಿಗೆ ಆಹಾರ ಸಿಗದಂತಹ ಕೆಲವು ಸ್ಥಳಗಳಲ್ಲಿ ಪ್ರಾಣಿ ಪ್ರಿಯರು, ಅಪಾರ್ಟ್ಮೆಂಟ್‌ ನಿವಾಸಿಗಳು ತಮ್ಮ ಆಹಾರಗಳನ್ನು ನಿಗದಿತ ಸ್ಥಳದಲ್ಲಿ ಹಾಕಿದರೆ ನಾಯಿಗಳಿಗೆ ಸುಲಭವಾಗಿ ಆಹಾರ ಸಿಗುತ್ತದೆ ಎಂದು ಕೆಲಸವು ಆಹಾರ ನೀಡುವ ಜಾಗಗಳನ್ನು ಗುರುತಿಸಲಾಗಿದೆ.
  • * ಪಾಲಿಕೆಯಿಂದ ಗುರುತಿಸಲಾದ ನಿರ್ಧಿಷ್ಟ ಜಾಗಗಳಲ್ಲಿ ಬೀದಿನಾಯಿಗಳಿಗೆ ಆಹಾರ ನೀಡುವ ಕುರಿತು ಹಾಲಿ ಲಭ್ಯವಿರುವ ಮಾರ್ಗಸೂಚಿಗಳನ್ನು ಪಲಕಗಳಲ್ಲಿ ನಮೂದಿಸಿ ಪ್ರದರ್ಶಿಸಲಾಗುವುದು.
  • * ಈ ಮೇಲಿನ ಅಂಶಗಳನ್ನು ಹೊರತುಪಡಿಸಿ ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿನಾಯಿಗಳಿಗೆ ಆಹಾರ ನೀಡುವ ಕುರಿತು ಯಾವುದೇ ನಿರ್ಭಂದವನ್ನು ವಿಧಿಸಿರುವುದಿಲ್ಲ.

ವಿಪತ್ತು ನಿರ್ವಹಣೆಗೆ ಬಿಬಿಎಂಪಿ‌ ವಲಯವಾರು ಕಂಟ್ರೋಲ್ ರೂಂ ಸ್ಥಾಪನೆ:
ಬೆಂಗಳೂರು :
ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ವಿಪತ್ತು ನಿರ್ವಹಣೆಗೆ ಸಿದ್ಧತೆಗಳನ್ನು ಮಾಡಿಕೊಂಡಿದ್ದು, 24/7 ಕಾರ್ಯನಿರ್ವಹಿಸುವ ಉಚಿತ ಸಹಾಯವಾಣಿ ಸಂಖ್ಯೆ 1533 ಜೊತೆಗೆ ಮಹಾನಗರದ ವಿವಿಧ ಎಂಟು ವಲಯಗಳಲ್ಲಿ ಪ್ರತ್ಯೇಕವಾಗಿ ಕಂಟ್ರೋಲ್ ರೂಮ್‌ಗಳನ್ನು ಸ್ಥಾಪಿಸಿದೆ. ನಾಗರಿಕರು ತುರ್ತು ಸಂದರ್ಭಗಳಲ್ಲಿ ತಮ್ಮ ವ್ಯಾಪ್ತಿಯ ಕಂಟ್ರೋಲ್ ರೂಂ ಸಂಪರ್ಕಿಸಬಹುದಾಗಿದೆ‌.

ಬಿಬಿಎಂಪಿ ಪಾಲಿಕೆ ಶಾಲೆ-ಕಾಲೇಜುಗಳು ಕಾಲೇಜು ಶಿಕ್ಷಣ ಇಲಾಖೆಗೆ, ಅಂತಿಮ ಹಂತದ ಸಿದ್ಧತೆ

ವಲಯವಾರು ಕಂಟ್ರೋಲ್ ರೂಮ್‌ಗಳ ಸಂಪರ್ಕ ಸಂಖ್ಯೆ ವಿವರ:

  1. ಬೊಮ್ಮನಹಳ್ಳಿ ವಲಯ: 080-25732447,25735642,9480685707 
  2. ದಾಸರಹಳ್ಳಿ ವಲಯ: 080-28394909,9480685709
  3. ಪೂರ್ವ ವಲಯ: 080-22975803,9480685702
  4. ಮಹದೇವಪುರ ವಲಯ: 080-28512300,9480685706
  5. ರಾಜರಾಜೇಶ್ವರಿ ನಗರ ವಲಯ: 080-28601851,9480685708
  6. ದಕ್ಷಿಣ ವಲಯ: 9480685704,8026566362,8022975703
  7. ಪಶ್ಚಿಮ ವಲಯ: 080-23463366,23561692,9480685703
  8. ಯಲಹಂಕ ವಲಯ: 080-23636671,22975936,9480685705