ವಿಜಯನಗರದ ಯುವಕನೊಬ್ಬ ತನ್ನ 90 ವರ್ಷದ ಅಜ್ಜಿಯ ಆಸೆಯನ್ನು ಪೂರೈಸಲು, ಆಕೆಯನ್ನು ಹೊತ್ತುಕೊಂಡು ಗಂಗಾವತಿಯ ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳನ್ನು ಏರಿದ್ದಾನೆ. ಮೊಮ್ಮಗನ ಈ ಕಾರ್ಯದಿಂದ ಅಜ್ಜಿಯ ಹನುಮ ಜನ್ಮಸ್ಥಳ ದರ್ಶನದ ಕನಸು ನನಸಾಗಿದ್ದು, ಈ ಘಟನೆ ಎಲ್ಲರ ಮನಗೆದ್ದಿದೆ.

ಗಂಗಾವತಿ (ಏ.19): 90 ವರ್ಷದ ಅಜ್ಜಿಯನ್ನು ಹೊತ್ತುಕೊಂಡು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯ 575 ಮೆಟ್ಟಿಲುಗಳನ್ನು ಏರುವ ಮೂಲಕ ಹನುಮನ ಜನ್ಮಸ್ಥಳ ದರ್ಶನ ಪಡೆಯಬೇಕೆಂಬ ಅಜ್ಜಿಯ ಕನಸನ್ನು ಮೊಮ್ಮಗ ನನಸು ಮಾಡಿದ್ದಾನೆ.

ವಿಜಯನಗರ ಜಿಲ್ಲೆಯ ಅಜೇಯ ಎಂಬ ಯುವಕ ಶುಕ್ರವಾರ ಸಂಜೆ ಬಿಸಿಲಿನ ಧಗೆಯಲ್ಲಿ ಅಜ್ಜಿಯನ್ನು ಹೊತ್ತುಕೊಂಡು ಮೆಟ್ಟಿಲಿನ ಮಧ್ಯದಲ್ಲಿರುವ ಗಿಡ-ಮರಗಳ ಕೆಳಗೆ ವಿಶ್ರಾಂತಿ ಪಡೆಯುತ್ತಾ ಅಜ್ಜಿಗೆ ಬಾಯಾರಿಕೆ ಆದಾಗ ನೀರು ಕುಡಿಸುತ್ತಾ ಮೆಟ್ಟಿಲು ಏರಿ ಆಂಜನೇಯಸ್ವಾಮಿಯ ದರ್ಶನ ಮಾಡಿಸಿದ್ದಾನೆ. ದೇವರ ದರ್ಶನ ಪಡೆದ ಬಳಿಕ ‘ನಾನು ಪಾವನಳಾದೆ’ ಎಂದು ಅಜ್ಜಿ ಧನ್ಯತೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೈಸೂರು: ಚಿರತೆಯಿಂದ ಅತ್ತೆಯನ್ನ ರಕ್ಷಿಸಿದ ಸೊಸೆಗೆ ಕಿತ್ತೂರು ಚೆನ್ನಮ್ಮ ಸಾಹಸ ಪ್ರಶಸ್ತಿ?

ವಿವಿಧ ರಾಜ್ಯಗಳಿಂದ ಬಹಳಷ್ಟು ವೃದ್ಧರು ಆಗಮಿಸುತ್ತಾರೆ. ಆದರೆ, ಮೆಟ್ಟಿಲು ಹತ್ತಲು ಆಗದೆ ದೂರದಿಂದ ಕೈಮುಗಿದು ಭಕ್ತಿ ಸಮರ್ಪಿಸುತ್ತಾರೆ. ಹಾಗಾಗಿ ಸರ್ಕಾರ ಕೂಡಲೇ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸಲಿ ಎಂದು ಭಕ್ತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಬಿಸಿಲು ಹೆಚ್ಚಾದ ಹಿನ್ನೆಲೆ ಅಂಜನಾದ್ರಿ ಬೆಟ್ಟಕ್ಕೆ ಬೆ.11ರಿಂದ ಸಂಜೆ 4ರ ವರೆಗೂ ಪ್ರವೇಶ ನಿರ್ಬಂಧ