ಮಗ ಜೈಲುಪಾಲು ಆಗ್ತಿರೊ ವಿಷಯ ತಿಳಿದು ಹೆತ್ತಕರಳು ಕಣ್ಣೀರು ಹಾಕುತ್ತಿದ್ರೆ ಡಿ-ಗ್ಯಾಂಗ್ ಆರೋಪಿ ಅನುಕುಮಾರ್, ಆಗೋದೆಲ್ಲ ಆಗಲಿ ಹಾಯಾಗಿರು, ಏನೇ ಎದುರಾಗಲಿ ಖುಷಿಯಾಗಿರು' ಎಂಬ ಸ್ಟೇಟಸ್ ಹಾಕಿಕೊಂಡಿದ್ದಾನೆ.
ಚಿತ್ರದುರ್ಗ: ರೇಣುಕಾಸ್ವಾಮಿ ಪ್ರಕರಣದ ಡಿ-ಗ್ಯಾಂಗ್‌ನ ಏಳು ಆರೋಪಿಗಳಿಗೆ ನೀಡಲಾಗಿದ್ದ ಜಾಮೀನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಆದೇಶ ಪ್ರಕಟಿಸಿದೆ. ಈ ಹಿನ್ನೆಲೆ ಪೊಲೀಸರು ಎ1 ಪವಿತ್ರಾ ಗೌಡ, ಎ2 ದರ್ಶನ್ ಸೇರಿದಂತೆ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ನಿವಾಸಿ A6 ಆರೋಪಿ ಅನುಕುಮಾರ್ ಬಂಧನಕ್ಕೊಳಗಾಗುವ ಮುನ್ನ ಇನ್‌ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾನೆ. ಜಲಪಾತದ ಮುಂದೆ ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೋಗೆ ‘ಆಗೋದೆಲ್ಲ ಆಗಲಿ ಹಾಯಾಗಿರು, ಏನೇ ಎದುರಾಗಲಿ ಖುಷಿಯಾಗಿರು’ ಎಂಬ ಹಿನ್ನೆಲೆ ಹಾಡು ಹಾಕಿಕೊಂಡಿದ್ದಾನೆ. ಇತ್ತ ಆರೋಪಿ ಅನುಕುಮಾರ್ ಜಾಮೀನು ರದ್ದು ವಿಷಯ ತಿಳಿಯುತ್ತಿದ್ದಂತೆ ಹೆತ್ತಕರಳು ಜಯಮ್ಮ ಕಣ್ಣೀರು ಹಾಕುತ್ತಿದ್ದಾರೆ. ಮನೆಗೆ ಆಸರೆಯಾಗಿರೋದು ಮಗ ಒಬ್ಬನೇ, ಅವನು ಮತ್ತೆ ಜೈಲು ಸೇರುತ್ತಿದ್ದಾನೆ ಎಂದು ಜಯಮ್ಮ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ತಾಯಿ ಜಯಮ್ಮ ಹಾಗೂ ಕುಟುಂಬಸ್ಥರು ಕಣ್ಣೀರು
ಚಿತ್ರದುರ್ಗ ನಗರಕ್ಕೆ ಆಗಮಿಸಿದ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಆಗಮಿಸಿ ದ ಎ6 ಅನುಕುಮಾರ್, ಎ7 ಜಗದೀಶ್ ಇಬ್ಬರನ್ನು ಬಂಧಿಸಿ ಬೆಂಗಳೂರಿನತ್ತ ಕರೆದುಕೊಂಡು ಬರುತ್ತಿದ್ದಾರೆ. ಅನುಕುಮಾರ್ ಬಂಧನದ ವೇಳೆ ತಾಯಿ ಜಯಮ್ಮ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕುತ್ತಿರುವ ದೃಶ್ಯ ಕಂಡು ಬಂತು. ಪೋಷಕರು ಕಣ್ಣೀರು ಹಾಕುತ್ತಿದ್ರೆ ಅನುಕುಮಾರ್ ಮಾತ್ರ ಆಗೋದೆಲ್ಲ ಆಗಲಿ ಹಾಯಾಗಿರು, ಏನೇ ಎದುರಾಗಲಿ ಖುಷಿಯಾಗಿರು ಹಾಡಿನ ಸ್ಟೇಟಸ್ ಹಾಕಿಕೊಂಡಿದ್ದಾನೆ.
ಇತ್ತ ಆರೋಪಿ ಜಗದೀಶ್ ಬಂಧನ ವೇಳೆಯೂ ಅವರ ತಾಯಿ ಸುಲೋಚನಮ್ಮಾ ಕಣ್ಣೀರು ಹಾಕುತ್ತಲೇ ಇದ್ದರು. ಮಗನನ್ನು ಪೊಲೀಸರು ಕರೆದುಕೊಂಡು ಹೋಗುತ್ತಿದ್ದ ವಾಹನ ಮರೆಯಾಗುವರೆಗೂ ನಿಂತು ಅಳುತ್ತಿದ್ದರು.
ಇದನ್ನೂ ಓದಿ: Darshan Thoogudeepa ಬೇಲ್ ರದ್ದು: ಮುಖಕ್ಕೆ ಹೊಡೆದಂತೆ ರಿಯಾಕ್ಷನ್ ಕೊಟ್ಟ ನಟಿ ರಮ್ಯಾ!
A2 ದರ್ಶನ್ ಮತ್ತು A1 ಪವಿತ್ರಾ ಗೌಡ ಅರೆಸ್ಟ್
ಮಡಿಕೇರಿಯ ರೆಸಾರ್ಟ್‌ನಿಂದಲೇ ಆರೋಪಿ ದರ್ಶನ್ ಬೆಂಗಳೂರಿಗೆ ಬರುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ. ಆರ್‌ಆರ್ ನಗರದ ಮನೆಯಲ್ಲಿದ್ದ ಎ1 ಆರೋಪಿ ಪವಿತ್ರಾ ಗೌಡ ಬಂಧಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಗಿದೆ. ಠಾಣೆಗೆ ವೈದ್ಯಾಧಿಕಾರಿಗಳನ್ನ ಕರೆಸಲಾಗಿದ್ದು, ಇಲ್ಲಿಯೇ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸುವ ಸಾಧ್ಯತೆಗಳಿವೆ. ನಂತರ ಎಲ್ಲಾ 7 ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.


