ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಇದೊಂದು ಐತಿಹಾಸಿಕ ದಿನ. 9 ಉಗ್ರ ತಾಣಗಳ ಮೇಲೆ ದಾಳಿ ಮಾಡಿದೆ ಎಂದು ಸಂಸದ ಡಾ.ಸಿ.ಎನ್ ಮಂಜುನಾಥ್ ಹೇಳಿದರು. 

ರಾಮನಗರ (ಮೇ.07): ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಇದೊಂದು ಐತಿಹಾಸಿಕ ದಿನ. 9 ಉಗ್ರ ತಾಣಗಳ ಮೇಲೆ ದಾಳಿ ಮಾಡಿದೆ ಎಂದು ಸಂಸದ ಡಾ.ಸಿ.ಎನ್ ಮಂಜುನಾಥ್ ಹೇಳಿದರು. ಪಾಕಿಸ್ತಾನ ಉಗ್ರ ನೆಲೆಗಳ ಮೇಲೆ ಭಾರತ ದಾಳಿ ವಿಚಾರವಾಗಿ ಮಾತನಾಡಿದ ಅವರು, ಭಾರತ ಸಿವಿಲಿಯನ್ಸ್ ಜಾಗದ ಮೇಲೆ ದಾಳಿ ಮಾಡಿಲ್ಲ. ಪಾಕಿಸ್ತಾನ ಏರ್ ಸ್ಪೇಸ್ ಗೆ ಭಾರತ ಹೋಗಿಲ್ಲ. ಭಯೋತ್ಪಾದನೆಗೆ ತಕ್ಕ ಪಾಠ ಕಲಿಸಬೇಕಿದೆ. ಭಾರತ ದೃಷ್ಟಿಯಿಂದ ಮಾತ್ರವಲ್ಲ ವಿಶ್ವದಲ್ಲೆ ಭಯೋತ್ಪಾದನೆಯನ್ನ ಮಟ್ಟ ಹಾಕಬೇಕು. ಯುದ್ದಗಳಲ್ಲಿ ಬೇರೆ ಬೇರೆ ರೀತಿ ಇದೆ. 15 ದೇಶಗಳು ಇರುವ ಸಂಸ್ಥೆಯಲ್ಲಿ 13 ದೇಶಗಳ ಭಾರದ ಪರ ಇದೆ ಎಂದರು.

ಎರಡು ದೇಶ ಮಾತ್ರ ಪಾಕಿಸ್ತಾನ ಪರ ಅಂತ ಹೇಳಿದೆ. ರಾಜತಾಂತ್ರಿಕವಾಗಿ ಕೂಡ ಪಾಕಿಸ್ತಾನವನ್ಮ ಐಸೋಲೇಟ್ ಮಾಡುವಂತ ಕೆಲಸವನ್ನ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಅಚ್ಚುಕಟ್ಟಾಗಿ ಮಾಡಿದೆ. ನೀರು ನಿಲ್ಲಿಸುವ ಯುದ್ಧ ಕೂಡ ಮಾಡಿದೆ. ಭಯೋತ್ಪಾದನೆ ನಿರಂತರವಾಗಿ ಕಾಡುತ್ತಿದೆ. ಪುಲ್ವಾಮ, ಪಾರ್ಲಿಮೆಂಟ್, ಮುಂಬೈ ಅಟ್ಯಾಕ್ ಆಗಿವೆ. ಭಾರತದ ರಕ್ಷಣಾ ದೃಷ್ಟಿಯಿಂದ ಭಾರತದ ಎಲ್ಲ 140 ಕೋಟಿ ಜನರು ಪ್ರಧಾನ ಮಂತ್ರಿ ಹಾಗು ರಕ್ಷಣಾ ಪಡೆಗಳು ಯಾವ ತೀರ್ಮಾನ ಮಾಡಿತ್ತವೆಯೋ ಅದಕ್ಕೆ ಒಗ್ಗಟ್ಟಾಗಿ ಸಹಕಾರ ನೀಡಬೇಕು ಎಂದು ತಿಳಿಸಿದರು.

ಮನುಕುಲದ ಅತ್ಯಂತ ಶಕ್ತಿಯುತ ಅಸ್ತ್ರ ಎಂದರು ಶಾಂತಿ ಎಂಬ ಕಾಂಗ್ರೆಸ್ ಟ್ವೀಟ್ ವಿಚಾರವಾಗಿ, ಭಾರತ ಎಂದೂ ಕೂಡ ಏಕಾ ಏಕಿ ಯುದ್ಧ ಮಾಡಿಲ್ಲ. ಈಗ ಮಾಡಿರೋದು ಯುದ್ಧ ಅಲ್ಲ‌. ಭಯೋತ್ಪಾದಕ ತಂಗುದಾಣದ ಮೇಲೆ ಅಟ್ಯಾಕ್ ಮಾಡಿರೋದಷ್ಟೆ. ಇದು ಸಾಂಪ್ರದಾಯಿಕ ಯುದ್ಧ ಅಲ್ಲ. ಯುನೈಟೆಡ್ ಸೆಕ್ಯುರಿಟಿ ಕೌನ್ಸಿಲ್ ಕೂಡ ಎರಡು ದೇಶಗಳ ವಾದ ಪ್ರತಿ ವಾದ ಆಲಿಸಿದೆ. ಪಾಕಿಸ್ತಾನದ ಕುಮ್ಮಕ್ಕಿನಿಂದ ಉಗ್ರದ ದಾಳಿ ಆಗಿದೆ. 26 ಜನ ಭಾರತೀಯರನ್ನು ಕೊಂದಿದ್ದಾರೆ. ಹಾಗಾಗಿ ನಾವು ಈ ರೀತಿ (ದಾಳಿ) ಪ್ರತಿಕ್ರಿಯೆ ನೀಡೋದು ನಮ್ಮ ಕರ್ತವ್ಯ ಎಂದು ಸಂಸದ ಮಂಜುನಾಥ್ ತಿಳಿಸಿದರು.

ಪಾಕಿಸ್ತಾನದ ಅಡಗು ತಾಣಗಳ ಮೇಲೆ ದಾಳಿ ಸ್ವಾಗತಾರ್ಹ: ಸಚಿವ ಎಂ.ಬಿ.ಪಾಟೀಲ್

ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವ ಶಕ್ತಿಕೇಂದ್ರಗಳು: ತಾಲೂಕಿನ ಕೆಂಗಲ್ ಬಳಿ ಇರುವ ಪಿ.ಎಂ.ಶ್ರೀ ಕೇಂದ್ರೀಯ ವಿದ್ಯಾಲಯಕ್ಕೆ ಸಂಸದ ಡಾ. ಸಿ.ಎನ್. ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ಮತ್ತು ಮಹತ್ವಪೂರ್ಣವಾದದ್ದು, ಎಲ್ಲಾ ಶಿಕ್ಷಕರು ವೃತ್ತಿ ಬದ್ಧತೆಯನ್ನು ಮೈಗೂಡಿಸಿಕೊಂಡು ಪರಸ್ಪರ ಸಹಕಾರ ಮತ್ತು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದರು. ಸಂಸ್ಕೃತಿ, ಸಂಸ್ಕಾರ ಬೆಳೆಸುವುದರ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು, ವಿದ್ಯಾರ್ಥಿಗಳು ಕೂಡ ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತವಾಗದೆ ಶಿಸ್ತು, ಸಂಸ್ಕಾರ ರೂಢಿಸಿಕೊಂಡು ಮಾನವೀಯತೆಯ ಬದುಕನ್ನು ರೂಪಿಸಿಕೊಳ್ಳಬೇಕು. ಚನ್ನಪಟ್ಟಣ ಕೇಂದ್ರೀಯ ವಿದ್ಯಾಲಯದಲ್ಲಿ ಕಾಯಂ ಶಿಕ್ಷಕರ ಕೊರತೆಯನ್ನು ಗಮನಿಸಿದ್ದು, ಸದ್ಯದಲ್ಲೇ ಕೇಂದ್ರ ಶಿಕ್ಷಣ ಮಂತ್ರಿಗಳನ್ನು ಭೇಟಿ ಮಾಡಿ ಕಾಯಂ ಶಿಕ್ಷಕರನ್ನು ತುರ್ತಾಗಿ ವರ್ಗಾಯಿಸುವಂತೆ ಮನವಿ ಮಾಡುತ್ತೇನೆ ಎಂದರು.