ಕೊಲೆಯಾಗಿದ್ದಾಳೆ ಎನ್ನಲಾದ ಹೆಂಡ್ತಿ ಮಾಡಿದ ಆಧಾರ್ ಕಾರ್ಡ್ ಅಪ್‌ಡೇಟ್‌ನಿಂದಾಗಿ ಈಗ ಆಕೆಯ ಪೋಷಕರು ಕೊಲೆ ಆರೋಪದಿಂದ ಮುಕ್ತರಾಗಿದ್ದರೆ, ಇತ್ತ ಸಂದೀಪ್‌ಗೆ ತನ್ನ ಪತ್ನಿ ಮಗ ಬದುಕಿರುವ ವಿಚಾರ ತಿಳಿದು ಖುಷಿ ದುಃಖ ಎರಡು ಜೊತೆ ಜೊತೆಗೆ ಆಗಿದೆ. ಅದೇಕೆ ಅಂತೀರಾ ಮುಂದೆ ಓದಿ

ಲಕ್ನೋ: ಉತ್ತರ ಪ್ರದೇಶದಲ್ಲಿ ನಡೆದ ಈ ಘಟನೆ ಸಿನಿಮಾವನ್ನೇ ಮೀರಿಸುವಂತಿದೆ. ಹೌದು ತನ್ನ ಹೆಂಡ್ತಿ ಸತ್ತೇ ಹೋಗಿದ್ದಾಳೆ ಎಂದು ದುಃಖಿಸುತ್ತಿದ್ದ ಗಂಡನಿಗೆ ಎರಡು ವರ್ಷಗಳ ನಂತರ ಪತ್ನಿ ಬದುಕಿರುವುದು ತಿಳಿದು ಬಂದಿದೆ. ಹೆಂಡ್ತಿ ಮಾಡಿದ ಆಧಾರ್ ಕಾರ್ಡ್ ಅಪ್‌ಡೇಟ್‌ನಿಂದಾಗಿ ಈಗ ಆಕೆಯ ಪೋಷಕರು ಕೊಲೆ ಆರೋಪದಿಂದ ಮುಕ್ತರಾಗಿದ್ದರೆ, ಇತ್ತ ಸಂದೀಪ್‌ಗೆ ತನ್ನ ಪತ್ನಿ ಮಗ ಬದುಕಿರುವ ವಿಚಾರ ತಿಳಿದು ಖುಷಿ ದುಃಖ ಎರಡು ಜೊತೆ ಜೊತೆಗೆ ಆಗಿದೆ. ಅದೇಕೆ ಅಂತೀರಾ ಮುಂದೆ ಓದಿ..

ಮಹಿಳೆಯ ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್:

2024 ರಲ್ಲಿ ಸಂದೀಪ್ ಕುಮಾರ್ ಎಂಬುವವರ ಪತ್ನಿ ಪ್ರಿಯಾಂಕಾ ಉತ್ತರ ಪ್ರದೇಶದ ತಮ್ಮ ತಾಯಿ ಮನೆಯಿಂದ ತಮ್ಮ ಆಭರಣ ಮತ್ತು ಮಗನನ್ನು ಕರೆದುಕೊಂಡು ಹೊರಟಾಗ, ಅವರನ್ನು ತನ್ನ ಅತ್ತೆ-ಮಾವಂದಿರು(ಪ್ರಿಯಾಂಕಾ ಪೋಷಕರು) ಕೊಂದಿದ್ದಾರೆಂದು ಸಂದೀಪ್ ಭಾವಿಸಿದ್ದರು. ಈ ಬಗ್ಗೆ ಅವರು ಪ್ರಕರಣವನ್ನು ದಾಖಲಿಸಿದ್ದರು. ಆದರೆ ಈ ಪ್ರಕರಣಕ್ಕೀಗ ರೋಚಕ ಟ್ವಿಸ್ಟ್ ಸಿಕ್ಕಿದೆ.

ಹೌದು ಸಂದೀಪ್ ಹಾಗೂ ಪ್ರಿಯಾಂಕಾ 2017ರ ಮೇ 14ರಂದು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿರಿಸಿದ್ದರು. ಇವರಿಗೊಬ್ಬ ಮಗನೂ ಜನಿಸಿದ್ದ. ಆದರೆ ಅದೇನಾಯ್ತೋ ಏನೋ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡು ಪ್ರಿಯಾಂಕಾ ತನ್ನ ಲಕ್ಷಾಂತರ ಮೌಲ್ಯದ ಆಭರಣಗಳನ್ನು ತೆಗೆದುಕೊಂಡು ಮನೆ ಬಿಟ್ಟು ತಾಯಿ ಮನೆಗೆ ಬಂದಿದ್ದಾಳೆ. ಹೀಗೆ ಬಂದವಳು 2024 ರ ಜುಲೈ 1 ರಂದು ಸಾಯುವುದಕ್ಕೆ ಯತ್ನಿಸಿದ್ದಾಳೆ. ಆದರೆ ಈ ಯತ್ನ ವಿಫಲವಾದಾಗ ಆಕೆ ತಾಯಿ ಮನೆಯನ್ನು ಕೂಡ ಬಿಟ್ಟು ಬಂದಿದ್ದಾಳೆ. ಹೀಗೆ ಬಂದವಳು ಮತ್ತೆ ಸಾಯುವ ಯತ್ನದಲ್ಲಿದ್ದಾಗ ಅದೇನು ಅನಿಸಿತೋ ಏನೋ ಆಕೆ ಶ್ರೀರಾಮನ ದರ್ಶನ ಪಡೆಯುವುದಕ್ಕಾಗಿ ಆಯೋಧ್ಯೆಗೆ ಹೋಗಿದ್ದಾಳೆ.

ಆಯೋಧ್ಯೆಯಲ್ಲಿ ಬದುಕಿಗೆ ಸಿಕ್ತು ಹೊಸ ತಿರುವು

ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನಕ್ಕೆಮದು ಹೋದವಳಿಗೆ ಅಲ್ಲಿ ರಾಜಸ್ಥಾನದ ಮೂಲದ ಮಂಗಲ್ ಚಂದ್ರ ಎಂಬಾತನ ಪರಿಚಯವಾಗಿದೆ ಪರಿಚಯ ಕೆಲ ಗಂಟೆಗಳಲ್ಲಿ ಪ್ರೀತಿಯಾಗಿ ಬದಲಾಗಿದ್ದು, ಇಬ್ಬರೂ ಜೊತೆಯಲ್ಲಿ ವಾಸಿಸುವುದಕ್ಕೆ ನಿರ್ಧರಿಸಿದ್ದಾರೆ. ಹೀಗೆ ಅಯೋಧ್ಯೆಯಿಂದ ರಾಜಸ್ಥಾನಕ್ಕೆ ತೆರಳಿದ ಈ ಜೋಡಿ ಅಲ್ಲಿ ಪತಿ ಪತ್ನಿಯಾಗಿ ವಾಸಿಸಲು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: ಅಮೆರಿಕಾದಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ ಭಾರತೀಯ ವಿದ್ಯಾರ್ಥಿಯ ಕುಟುಂಬಕ್ಕೆ 260 ಕೋಟಿ ಪರಿಹಾರ

ಇತ್ತ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ದೂರದ ಗ್ರಾಮವೊಂದರಲ್ಲಿ ಪ್ರಿಯಾಂಕಾಳ ಮೊದಲ ಪತಿ ಸಂದೀಪ್‌ಗೆ ಇದ್ಯಾವುದರ ಅರಿವಿರಲಿಲ್ಲ, ಆಕೆ ತನ್ನ ಪತ್ನಿ ಹಾಗೂ ಮಗು ಸಾವನ್ನಪ್ಪಿದ್ದಾರೋ ಏನಾಗಿದ್ದಾರೋ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದೇ ತೀವ್ರ ದುಃಖಿತನಾಗಿದ್ದ. ತನ್ನ ಹೆಂಡತಿ ಮತ್ತು ಮಗುವಿನ ಬಗ್ಗೆ ವಿಚಾರಿಸಲು ತನ್ನ ಅತ್ತೆ ಮನೆಯವರನ್ನು ಸಂಪರ್ಕಿಸಿದಾಗ, ಅಲ್ಲಿನ ಕೆಲವರು ಅವನಿಗೆ ಆಭರಣಗಳಿಗಾಗಿ ಆಕೆಯ ತಂದೆಯೇ ಇಬ್ಬರನ್ನೂ ಕೊಲೆ ಮಾಡಿ ಅವರ ಶವಗಳನ್ನು ಸರಯು ನದಿಗೆ ಎಸೆದಿದ್ದಾರೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಒಂದೇ ತಿಂಗಳಲ್ಲಿ ಹಸಿರು ನೆಲ ಬರಡು ಭೂಮಿ ಆಯ್ತು: ಬೆಂಗಳೂರು ಜೆಪಿ ನಗರದ ಮೊದಲ ನಂತರದ ಫೋಟೋ ವೈರಲ್

ತನ್ನ ಹೆಂಡ್ತಿ ಮನೆಯ ನೆರೆಹೊರೆಯವರ ಮಾತು ಕೇಳಿ ಸಂದೀಪ್ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಅದರಂತೆ 2024ರ ನವೆಂಬರ್ 4,ರಂದು ಪತ್ನಿ ಪ್ರಿಯಾಂಕಾ ಅವರ ತಂದೆ ದಯಾರಾಮ್, ತಾಯಿ ಶುಭವತಿ ದೇವಿ, ಅವರ ಚಿಕ್ಕಪ್ಪನ ಮಗಳು ಸಂಜನಾ ಮತ್ತು ಮತ್ತೊಬ್ಬ ಗ್ರಾಮಸ್ಥನಾದ ಅಶೋಕ್ ಕುಮಾರ್ ಮೌರ್ಯ ವಿರುದ್ಧ ಕೊಲೆ ಮತ್ತು ಸಾಕ್ಷ್ಯ ನಾಶದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾನೆ.

ಪ್ರಕರಣಕ್ಕೆ ತಿರುವು ನೀಡಿತು ಆಧಾರ್‌ಕಾರ್ಡ್ ಅಪ್‌ಡೇಟ್ ಒಟಿಪಿ

ಪತಿ ಸಂದೀಪ್ ದೂರು ದಾಖಲಿಸಿದ ಹಿನ್ನೆಲೆ ಸುಮಾರು ಎರಡು ವರ್ಷಗಳಿಂದ ಪೊಲೀಸರು ಪ್ರಿಯಾಂಕಾ ಪ್ರಜಾಪತಿ ನಾಪತ್ತೆ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸುತ್ತ ಬಂದಿದ್ದರು. ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದ್ದಾಗಲೇ ಒಂದು ದಿನ ಸಂದೀಪ್ ಅವರ ಫೋನ್‌ಗೆ ಪ್ರಿಯಾಂಕಾ ಅವರ ಆಧಾರ್ ಕಾರ್ಡ್‌ ನವೀಕರಿಸುವ ಒಟಿಪಿ ಬಂದಿದೆ. ಕೂಡಲೇ ಅವರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ನಂತರ ತನಿಖೆಗಿಳಿದ ಪೊಲೀಸರು ರಾಜಸ್ಥಾನಕ್ಕೆ ತೆರಳಿ ಪ್ರಿಯಾಂಕಾ ಬೇರೆ ಮದುವೆಯಾಗಿ ಸುಖ ಜೀವನ ನಡೆಸುತ್ತಿರುವುದನ್ನು ಪತ್ತೆ ಮಾಡಿದ್ದಾರೆ. ಇತ್ತ ಮೊದಲ ಪತಿ ಸಂದೀಪ್ ಈಗ ತನ್ನ ಮಗುವಿನ ಪಾಲನೆಯನ್ನಾದರೂ ತನಗೆ ನೀಡುವಂತೆ ಕೋರಿದ್ದಾನೆ. ಆದರೆ ಪ್ರಿಯಾಂಕಾಳಾ ತಾಯಿ ಮನೆಯವರು ಆಕೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಒಟ್ಟಿನಲ್ಲಿ ಕೊಲೆಯಾಗಿದ್ದಾಳೆ ಎನ್ನಲಾದ ಹೆಂಡ್ತಿ ಜೀವಂತವಿದ್ದರೂ ಈಗ ಖುಷಿ ಪಡುವ ಸ್ಥಿತಿಯಲ್ಲಿಲ್ಲ ಸಂದೀಪ್.

ಇದನ್ನೂ ಓದಿ: 2 ಲಕ್ಷ ಹಣದ ಬದಲು ವರ್ತೂರ್ ಸಂತೋಷ್ ಬಳಿ ಹಸು ನೀಡುವಂತೆ ಕೇಳಿದ್ರಾ ರಕ್ಷಿತಾ ಶೆಟ್ಟಿ