- Home
- Entertainment
- TV Talk
- ಸೀರಿಯಲ್ನಲ್ಲಿ ಪತ್ನಿ, ತಾಯಿ, ಅಜ್ಜಿ; ರಿಯಲ್ ಆಗಿ ಸಂಸಾರವೇ ಬೇಡ ಎಂದು ಸಿಂಗಲ್ ಆಗಿ ಉಳಿದ ಕನ್ನಡ ನಟಿಯರು!
ಸೀರಿಯಲ್ನಲ್ಲಿ ಪತ್ನಿ, ತಾಯಿ, ಅಜ್ಜಿ; ರಿಯಲ್ ಆಗಿ ಸಂಸಾರವೇ ಬೇಡ ಎಂದು ಸಿಂಗಲ್ ಆಗಿ ಉಳಿದ ಕನ್ನಡ ನಟಿಯರು!
Unmarried Kannada actresses: ಕನ್ನಡ ಧಾರಾವಾಹಿ, ಸಿನಿಮಾಗಳಲ್ಲಿ ಅತ್ತೆ, ತಾಯಿ, ಅಜ್ಜಿ ಪಾತ್ರಕ್ಕೆ ಬಣ್ಣ ಹಚ್ಚಿರೋ ನಟಿಯರು, ರಿಯಲ್ ಆಗಿ ಮದುವೆಯಾಗಿಲ್ಲ. ಅವರು ಹಾಗೆಯೇ ಸಿಂಗಲ್ ಆಗಿ ಉಳಿದುಕೊಂಡಿದ್ದಾರೆ. ಹಾಗಾದರೆ ಅವರು ಯಾರು? ಯಾರು?

ಪೂಜಾ ಲೋಕೇಶ್
ಸೀತಾರಾಮ ಧಾರಾವಾಹಿಯಲ್ಲಿ ನಟಿಸಿದ್ದ ಪೂಜಾ ಲೋಕೇಶ್ ಅವರು ಸಿಂಗಲ್ ಆಗಿಯೇ ಉಳಿದಿದ್ದಾರೆ. ಇವರ ತಮ್ಮ ಸೃಜನ್ ಅವರಿಗೆ ಮದುವೆಯಾಗಿ, ಎರಡು ಮಕ್ಕಳಿವೆ. ಟಿವಿ ಕ್ಷೇತ್ರದಲ್ಲಿ ಆಕ್ಟಿವ್ ಆಗಿರುವ ಪೂಜಾ ಮದುವೆಯಿಂದ ದೂರ ಉಳಿದಿದ್ದಾರೆ.
ಭಾವನಾ ರಾಮಣ್ಣ
ಐವಿಎಫ್ ಮೂಲಕ ತಾಯಿಯಾಗಿ, ಸದ್ಯ ತಾಯ್ತನದ ಖುಷಿಯಲ್ಲಿರುವ ಭಾವನಾ ರಾಮಣ್ಣ ಅವರು ಕೂಡ ಮದುವೆಯಾಗಿಲ್ಲ. ಇವರು ಸಿಂಗಲ್ ಆಗಿಯೇ ಉಳಿದಿದ್ದಾರೆ. ಕೆಲ ದಿನಗಳಿಂದ ಅವರು ಅಷ್ಟಾಗಿ ಸಿನಿಮಾಗಳಲ್ಲಿ ನಟಿಸಿರಲಿಲ್ಲ.
ರೇಖಾ ರಾವ್
ನಾನು ರಿಯಲ್ ಆಗಿ ಮದುವೆಯೇ ಆಗಿಲ್ಲ. ಧಾರಾವಾಹಿಯಲ್ಲಿ ಮಾತ್ರ ಮದುವೆ ಆಗಿ, ಮಕ್ಕಳು-ಮೊಮ್ಮಕ್ಕಳು ಇವೆ ಅಷ್ಟೇ. ನಾನು ಸನ್ಯಾಸಿ ಅಲ್ಲ, ಆದರೆ ಆದರೆ ಆಗಲಿ ಎನ್ನೋ ಥರ ಇದ್ದೆ, ಹೀಗೆ ಸಮಯ ಕಳೆದು ಹೋಯ್ತು. ನನಗೆ ಇಂದು ಲವ್ ಆದರೆ, ಮದುವೆ ಆಗ್ತೀನಿ ಎಂದು ಅವರು ಹೇಳಿದ್ದಾರೆ.
ಮೈಸೂರು ಮಾಲತಿ
ಸದ್ಯ ಅಮೃತಧಾರೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಮೈಸೂರು ಮಾಲತಿ ಅವರು ಕೂಡ ಸಿಂಗಲ್ ಆಗಿ ಉಳಿದಿದ್ದಾರೆ. ಇವರು ರಂಗಭೂಮಿ ಕಲಾವಿದೆಯಾಗಿದ್ದು, ಅನೇಕ ನಾಟಕಗಳಲ್ಲಿ ಕೂಡ ನಟಿಸಿದ್ದಾರೆ. ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಆರ್ ಟಿ ರಮಾ
ಕನ್ನಡತಿ ಧಾರಾವಾಹಿ ನಟಿ ಬಿಟಿ ರಮಾ ಅವರು ಸಾಕಷ್ಟು ಕನ್ನಡ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಗೆಜ್ಜೆ ಪೂಜೆ, ಗೌರಿಪೂಜೆ, ಶರಪಂಜರ, ಜೇಡರಬಲೆ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಬಿ ಜಯಾ
200 ಸಿನಿಮಾಗಳಲ್ಲಿ ನಟಿಸಿದ್ದ ಬಿ ಜಯಾ ಅವರು 2021ರಲ್ಲಿ ನಿಧನರಾಗಿದ್ದರು. ಭಕ್ತಪ್ರಹ್ಲಾದ ಸಿನಿಮಾದಲ್ಲಿ ಬಾಲನಟಿಯಾಗಿ ಅವರು ನಟಿಸಿದ್ದರು. ಆಟೋಶಂಕರ್, ಮಿಲನ, ನೀನೆಲ್ಲೋ ನಾನಲ್ಲೇ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಜಯಾ ಅವರು 2021 ರಲ್ಲಿ ನಿಧನರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
