ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾ ಅನೌನ್ಸ್ ಆಗಿದೆ. ಬಾಲಿವುಡ್ ಸಿನಿಮಾ ನಿರ್ಮಾಣ ಸಂಸ್ಥೆಯ ಮೊದಲ ಕನ್ನಡ ಸಿನಿಮಾ ಇದಾಗಿದ್ದು, ಬಿಗ್ ಬಜೆಟ್ ಮೂಲಕ ನಿರ್ಮಾಣವಾಗಿ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ. ಈ ಚಿತ್ರಕ್ಕೆ ಹೆಸರು ಪಕ್ಕಾ ಅಗಿಲ್ಲದ ಕಾರಣ ಸದ್ಯಕ್ಕೆ 'DS07' ಎಂದು ನಾಮಕರಣ ಮಾಡಲಾಗಿದೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾ

ಕನ್ನಡದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ನಟನೆಯ 7ನೇ ಚಿತ್ರದ ಮುಹೂರ್ತ ನಡೆದಿದೆ. ಬಾಲಿವುಡ್ ನಿರ್ಮಾಪಕ ಗೋಲ್ಡ್ ಮೈನ್ಸ್ ಮನೀಶ್ ಅವರು ಮೊಟ್ಟಮೊದಲ ಬಾರಿಗೆ ಕನ್ನಡ ಸಿನಿಮಾವೊಂದರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಬಾಲಿವುಡ್ ಸಿನಿಮಾ ನಿರ್ಮಾಣ ಸಂಸ್ಥೆಯ ಮೊದಲ ಕನ್ನಡ ಸಿನಿಮಾ ಇದಾಗಿದ್ದು, ಇದು ಬಿಗ್ ಬಜೆಟ್ ಮೂಲಕ ನಿರ್ಮಾಣವಾಗಿ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ. ಈ ಚಿತ್ರಕ್ಕೆ ಹೆಸರು ಪಕ್ಕಾ ಅಗಿಲ್ಲದ ಕಾರಣ ಸದ್ಯಕ್ಕೆ 'DS07' ಎಂದು ನಾಮಕರಣ ಮಾಡಲಾಗಿದೆ.

ಕೆರೆ ಬೇಟೆ ಸಿನಿಮಾ ಖ್ಯಾತಿಯ ರಾಜಗುರು (Director Rajaguru) ಅವರು ಮುಂಬರುವ ಧ್ರುವ ಸರ್ಜಾರ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಕನ್ನಡ ಮಣ್ಣಿನ , ಕನ್ನಡ ನೆಲದ ಕಥೆಗೆ ನಟಿಸಲು ಮುಂದಾದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಈ ಸಿನಿಮಾ ಮೂಲಕ ಭಾರತದೆಲ್ಲೆಡೆ ರಾರಾಜಿಸಲು ನಟ ಧ್ರುವ ಸರ್ಜಾ ಅವರು ಕನ್ನಡ ಕಥೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಮೊದಲು ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಲು ನಟ ಧ್ರುವ ಸರ್ಜಾ ಅವರು ಟ್ರೈ ಮಾಡಿದ್ದರು. ಆದರೆ, ಅವರು ಆ ಪ್ರಯತ್ನದಲ್ಲಿ ಯಶಸ್ವಿ ಆಗಿರಲಿಲ್ಲ. ಇದೀಗ ಮತ್ತೊಮ್ಮೆ ಅವರ ಪ್ರಯತ್ನ ಸಾಗಿದೆ. ಸಕ್ಸಸ್ ಸಿಗಲಿ ಎಂದು ಆಕ್ಷನ್ ಪ್ರಿನ್ಸ್ ಫ್ಯಾನ್ಸ್ ಕಾಯುತ್ತಿದ್ದಾರೆ.

ಬೆಂಗಳೂರಿನ ಬನಶಂಕರಿ ಠಾಣೆಯಲ್ಲಿ ದೂರು ದಾಖಲು!

ಇತ್ತೀಚೆಗೆ ನಟ ಧ್ರುವ ಸರ್ಜಾ ಅವರು ಬೇರೊಂದು ವಿಷಯಕ್ಕೆ ಸುದ್ದಿಯಾಗಿದ್ದರು. ಅವರ ಮೇಲೆ ಬೆಂಗಳೂರಿನ ಬನಶಂಕರಿ ಠಾಣೆಯಲ್ಲಿ ದೂರು ದಾಖಲಾಗಿದೆ. ಧ್ರುವ ಅಷ್ಟೇ ಅಲ್ಲದೇ ಅವರ ಕಾರ್ ಡ್ರೈವರ್, ಮ್ಯಾನೇಜರ್ ಮತ್ತು ಧ್ರುವ ಅಭಿಮಾನಿಗಳ ಮೇಲೆ ಕೂಡ ದೂರು ನೀಡಲಾಗಿದೆ. ಈ ದೂರನ್ನಾಧರಿಸಿ ಎಫ್.ಐ.ಆರ್ ಮಾಡುವಂತೆ ಒತ್ತಾಯಿಸಲಾಗಿದೆ. ಹೌದು ಧ್ರುವ ಮೇಲೆ ದೂರು ದಾಖಲು ಮಾಡಿದವರು ಬೇರ್ಯಾರೂ ಅಲ್ಲ. ಖುದ್ದು ಸರ್ಜಾ ವಾಸವಿರುವ ಮನೆಯ ಅಕ್ಕಪಕ್ಕದವರು.

ಅಷ್ಟಕ್ಕೂ ಇವರು ಸಲ್ಲಿಸಿರೋ ದೂರಿನಲ್ಲಿ ಧ್ರುವನ 'ಅಮುಕು ಡುಮುಕು' ಅಭಿಮಾನಿಗಳಿಂದ ತಮಗೆ ಭಯಂಕರ ಹಿಂಸೆಯಾಗ್ತಾ ಇದೆ ಅಂತ ದೂರಿದ್ದಾರೆ. 'ಧ್ರುವ ಸರ್ಜಾ ಮನೆಯಲ್ಲಿದ್ರೆ ಸಾಕು ರಾಶಿ ರಾಶಿ ಅಭಿಮಾನಿಗಳು ಅವರ ಮನೆ ಮುಂದೆ ಸೇರ್ತಾರೆ. ಅಕ್ಕಪಕ್ಕದ ಮನೆಯ ಮುಂದೆ ವಾಹನಗಳನ್ನ ಪಾರ್ಕ್ ಮಾಡ್ತಾರೆ. ಕೆಲವರು ಅಲ್ಲೇ ನಿಂತು ಸಿಗರೇಟ್ ಹೊಗೆ ಉಗಳ್ತಾರೆ. ಮತ್ತೆ ಕೆಲವರು ಗುಟ್ಕಾ ತಿಂದು ಪಕ್ಕದ ಮನೆ ಗೋಡೆಗೆ ಉಗುಳ್ತಾರೆ. ಇದರಿಂದ ತಮ್ಮ ಮನೆಯಲ್ಲಿ ಇರಲಾಗ್ತಾ ಇಲ್ಲ' ಅಂತಿದ್ದಾರೆ ಧ್ರುವ ನೇಬರ್ಸ್.

ಅಮುಕು ಡುಮುಕು..

ಹೌದು, ಧ್ರುವ ಮನೆಯೆದರು ಸೇರುವ ಫ್ಯಾನ್ಸ್ ಹಾವಳಿ ಹೇಗಿರುತ್ತೆ ಅನ್ನೋದ್ರ ಸ್ಯಾಂಪಲ್ ನೀವು ಸೋಷಿಯಲ್ ಮಿಡಿಯಾದಲ್ಲಿ ನೋಡಿರಬಹುದು. ಅದ್ಯಾರೋ ಒಬ್ಬ ಅಮುಕು ಡುಮುಕು.. ಡಮಾಲ್ ಡಮಿಲ್ ಅಂತ ನರ್ತಿಸಿದ್ರೆ, ಇನ್ನೊಬ್ಬ ಓಡ್ರೋ ಓಡ್ರೋ ಇದು ಸರ್ಜಾ ಅಡ್ಡಾ ಅಂತ ಏಕಸ್ವರದಲ್ಲಿ ಹಾಡು ಹಾಡ್ತಾನೆ. ತಮ್ಮ ಅಭಿಮಾನಿಗಳನ್ನ ಧ್ರುವ ಏನೋ ಸಹಿಸಿಕೊಳ್ತಾರೆ. ಆದ್ರೆ ಪಾಪ ಅಕ್ಕದ ಪಕ್ಕದ ಮನೆಯವರು ಹೇಗೆ ತಾನೇ ಈ ಅತಿರೇಕವನ್ನ ಸಹಿಸೋಕೆ ಸಾಧ್ಯ. ಪಾಪ ಅವರು ಸರ್ಜಾ ಅಡ್ಡಾದಿಂದ ಓಡಿ ಹೋಗೋದೊಂದೆ ದಾರಿ ಅನ್ನೋ ಸ್ಥಿತಿ ತಲುಪಿದ್ದಾರೆ. ಈ ಹಿಂದೆ ಅಭಿಮಾನಿಗಳನ್ನ ಹೀಗೆ ಮನೆ ಬಳಿ ಸೇರಿಸಬೇಡಿ ಅಂತ ಸರ್ಜಾ ಮ್ಯಾನೇಜರ್ ಬಳಿ , ಅಕ್ಕ ಪಕ್ಕದ ಮನೆಯವರು ಮನವಿ ಮಾಡಿಕೊಂಡಿದ್ದಾರೆ.