ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಅಭಿನಯದ ಪ್ಯಾನ್ ಇಂಡಿಯಾ 45 ಸಿನಿಮಾ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ‘ಈ ಸಿನಿಮಾ ಡಿ.25ರಂದು ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.
ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಅಭಿನಯದ ಪ್ಯಾನ್ ಇಂಡಿಯಾ 45 ಸಿನಿಮಾ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ‘ಈ ಸಿನಿಮಾ ಡಿ.25ರಂದು ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿ ಬಿಡುಗಡೆಯಾಗಲಿದ್ದು, ಒಂದು ವಾರ ಬಿಟ್ಟು ಹಿಂದಿಯಲ್ಲಿ ಬಿಡುಗಡೆಯಾಗಲಿದೆ’ ಎಂದು ಅರ್ಜುನ್ ಜನ್ಯಾ ತಿಳಿಸಿದ್ದಾರೆ. ಚಿತ್ರದ ಟ್ರೇಲರ್ ಡಿ.15ರಂದು ಅದ್ದೂರಿಯಾಗಿ ರಿಲೀಸ್ ಆಗಲಿದೆ.
ಈ ಸಿನಿಮಾ ಕುರಿತು ಮಾತನಾಡಿರುವ ಅವರು, ‘ಈ ಸಿನಿಮಾ ಲವ್ ಸ್ಟೋರಿ, ಸೈನ್ಸ್, ಥ್ರಿಲ್ಲರ್ ಈ ಯಾವ ಜಾನರ್ ಸಿನಿಮಾ ಕೂಡ ಅಲ್ಲ, ಇದೊಂದು ಫ್ಯಾಂಟಸಿ ಸಿನಿಮಾ. ಹಾಗಂತ ಸಂಪೂರ್ಣ ಫ್ಯಾಂಟಸಿಯೂ ಅಲ್ಲ. ಫ್ಯಾಂಟಸಿ ಜೊತೆಗೆ ಲಾಜಿಕ್ ಇದೆ. ಹಾಗಾಗಿ ಇದೊಂದು ಹೊಸತನದ ಸಿನಿಮಾ’ ಎನ್ನುತ್ತಾರೆ.
‘ನಾನು ನನ್ನ ಸಿನಿಮಾ ನಾಯಕರ ಅಭಿಮಾನಿ. ಇದು ಒಬ್ಬ ಅಭಿಮಾನಿಯ ಸಿನಿಮಾ. ಹಾಗಂತ ಬಿಲ್ಡಪ್ ಇಲ್ಲ ಇಲ್ಲಿ. ಹೊಸತನವಿದೆ. ಮೂವರೂ ಅದ್ಭುತವಾಗಿ ನಟಿಸಿದ್ದಾರೆ. ಮೂವರಿಗೂ ಸಮಾನ ಸ್ಪೇಸ್ ಇದೆ. ಶಿವಣ್ಣ ಪಾತ್ರ ಸ್ವಲ್ಪ ದೊಡ್ಡದಿದೆ. ಆದರೆ ಇನ್ನುಳಿದವರ ಪಾತ್ರ ಕೂಡ ಅಷ್ಟೇ ಘನವಾಗಿದೆ. ಹೊಸ ರೀತಿಯ ಲುಕ್ ಇದೆ. ಹೊಸ ಜಗತ್ತು ಸೃಷ್ಟಿ ಮಾಡಿದ್ದೇವೆ. ಈ ಸಿನಿಮಾ ನೋಡಿದವರು ಕತೆಯನ್ನು ಹೀಗೂ ಹೇಳಬಹುದಾ ಅಂತ ಅಚ್ಚರಿಪಡುತ್ತಾರೆ. ಈ ಸಿನಿಮಾದ ಸಿಜಿಯನ್ನು ಕನ್ನಡದಲ್ಲಂತೂ ಬೇರೆ ಯಾರೂ ಮಾಡಿಲ್ಲ. ಕ್ಲೈಮ್ಯಾಕ್ಸ್‌ನಲ್ಲಿ ಬಳಸಿದ ಸಿಜಿ ಅತ್ಯದ್ಭುತವಾಗಿದೆ’ ಎನ್ನುತ್ತಾರೆ.
ನಂಬರ್‌ಗಿಂತ ದೊಡ್ಡ ಬಜೆಟ್
ಅರ್ಜುನ್ ಜನ್ಯಾ ಇಲ್ಲಿಯವರೆಗೂ ಸಂಗೀತ ನಿರ್ದೇಶಕರಾಗಿದ್ದರು. ಈ ಚಿತ್ರಕ್ಕಾಗಿ ನಿರ್ದೇಶನ, ಎಡಿಟಿಂಗ್, ಡಬ್ಬಿಂಗ್, ಸಂಗೀತ, ಟೀಸರ್, ಟ್ರೇಲರ್ ಎಡಿಟಿಂಗ್ ಎಲ್ಲವೂ ಮಾಡಿ ಆಲ್‌ರೌಂಡರ್ ಆಗಿದ್ದಾರೆ. ಬಜೆಟ್ ಕುರಿತು ಮಾತನಾಡುವ ಅವರು, ‘ಚಿತ್ರದ ಶೀರ್ಷಿಕೆಯಲ್ಲಿರುವ ನಂಬರ್‌ಗಿಂತ ದೊಡ್ಡ ಬಜೆಟ್ ಆಗಿದೆ. ಸಿನಿಮಾ ನೋಡಿದ ಮೇಲೆ ಜನರೇ ಎಷ್ಟು ಬಜೆಟ್ ಅಂತ ಡಿಸೈಡ್ ಮಾಡಲಿ’ ಎನ್ನುತ್ತಾರೆ.


