Gooli Kannada Movie: ಕಿಚ್ಚ ಸುದೀಪ್ ನಟನೆಯ ಗೂಳಿ ಸಿನಿಮಾ ಹೀರೋಯಿನ್ ಮಮತಾ ಮೋಹನ್ದಾಸ್ ಅವರು ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದರು, ಆದರೆ ವೈಯಕ್ತಿಕ ಜೀವನ ಮಾತ್ರ ಸರಿ ಹೋಗಲೇ ಇಲ್ಲ. ಈ ಬಗ್ಗೆ ಅವರು ಮಾತನಾಡಿದ್ದಾರೆ.
ಬಣ್ಣದ ಲೋಕದ ಗ್ಲಾಮರ್ ಹಿಂದೆ, ಅನೇಕ ದುಃಖಗಳು ಇರುತ್ತವೆ. ಸೆಲೆಬ್ರಿಟಿಗಳ ವೈಯಕ್ತಿಕ ಜೀವನದಲ್ಲಿನ ಏರಿಳಿತಗಳು ಅನೇಕರಿಗೆ ಗೊತ್ತೇ ಇರೋದಿಲ್ಲ, ನಮ್ಮಂತೆ ಅವರೂ ಕೂಡ ಮನುಷ್ಯರು ಎಂದು ಒಮ್ಮೊಮ್ಮೆ ಮರೆಯೋದುಂಟಯ. ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಮಮತಾ ಮೋಹನ್ ದಾಸ್ ಅವರ ಜೀವನದಲ್ಲಿ ಕೂಡ ಸಾಕಷ್ಟು ಏರಿಳಿತಗಳು ಇವೆ. ಪ್ರೇಮಿಗಳ ದಿನದಂದು ಅವರು ಪ್ರೀತಿ ವಿಚಾರದಲ್ಲಿ ಮೋಸ ಹೋಗಿದ್ದಾರೆಂದು ಹೇಳಿದ್ದಾರೆ.
ಸಿನಿಮಾಗಳಲ್ಲಿ ನಟನೆ
ಮಹಾಮಾರಿ ಕ್ಯಾನ್ಸರ್ ಕಾಯಿಲೆ ವಿರುದ್ಧ ಹೋರಾಡಿ ಗೆದ್ದರೂ ಕೂಡ ಪ್ರೀತಿಯಲ್ಲಿ ಮೋಸ ಹೋದರು. ಈ ಬಗ್ಗೆ ಅವರು ಮಾತನಾಡಿದ್ದಾರೆ. 'ಮಾಯುಖಂ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಮಮತಾ ಮೋಹನದಾಸ್, 'ಯಮದೋಂಗ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇಲ್ಲಿ ಅವರು 'ಕಿಂಗ್', 'ಕೇಡಿ', 'ಹೋಮ', 'ವಿಕ್ಟರಿ', 'ಚಿಂತಕಾಯಲ ರವಿ' ಮುಂತಾದ ಚಿತ್ರಗಳಲ್ಲಿ ನಟಿಸಿದರು. ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ಅಂದರೆ 24 ನೇ ವಯಸ್ಸಿನಲ್ಲಿ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಸಾವು-ಬದುಕಿನ ವಿರುದ್ಧ ಹೋರಾಡಿ ಗೆದ್ದ ಮಮತಾ, ಚೇತರಿಸಿಕೊಂಡ ನಂತರ ತಮ್ಮ ಜೀವನದಲ್ಲಿ ಸಂಗಾತಿ ಬೇಕು ಎಂದು ಬಯಸಿದ್ದರು. ಅವರು ಒಬ್ಬ ನಟನೊಂದಿಗೆ ಡೇಟಿಂಗ್ ಮಾಡಿದರು. ಆದರೆ ಅದು ಅವರಿಗೆ ದೊಡ್ಡ ಆಘಾತವನ್ನು ನೀಡಿತು ಮತ್ತು ಅವರು ಮೋಸ ಹೋದರು ಎಂದು ಮಮತಾ ಮೋಹನದಾಸ್ ಹೇಳಿದರು.
ಆ ಹುಡುಗ ಮೋಸ ಮಾಡಿದೆ
ಮಮತಾ ಇತ್ತೀಚೆಗೆ 'ಜೋಸ್ ಅಲುಕ್ಕಾಸ್ ಪಾಡ್ಕ್ಯಾಸ್ಟ್' ನಲ್ಲಿ ಮಾತನಾಡಿದ ಮಮತಾ ಅವರು 'ಕ್ಯಾನ್ಸರ್ನಿಂದ ಚೇತರಿಸಿಕೊಂಡೆ, ಆಮೇಲೆ ನಾನು ಚಿತ್ರರಂಗದ ಓರ್ವ ವ್ಯಕ್ತಿ ಜೊತೆ ಡೇಟ್ ಮಾಡಿದೆ. ಚಿತ್ರರಂಗದಲ್ಲಿ ನಾನು ಡೇಟಿಂಗ್ ಮಾಡಿದ ಏಕೈಕ ಹುಡುಗ ಅವನೇ ಆಗಿದ್ದ. ಹೊರಗಡೆ ಹೋಗೋಣ ಅಂತ ಅವನು ಹೇಳಿದಾಗ, ತಾಯಿ ಅನುಮತಿ ಪಡೆದು ಹೊರಗಡೆ ಬಂದಿದ್ದೆ. ಆಮೇಲೆ ಅವನಿಗೆ ಎಂಗೇಜ್ಮೆಂಟ್ ಆಗಿದೆ ಎಂದು ಅವರ ಸಹೋದರನೇ ಹೇಳಿದ” ಎಂದಿದ್ದಾರೆ.
ಮತ್ತೊಂದು ಸಂಬಂಧ ಉಳಿಯಲಿಲ್ಲ
ಇದೆಲ್ಲ ಗೊತ್ತಾದಮೇಲೆ ತುಂಬ ಬೇಜಾರಾಯ್ತು. ನೀವು ಮೊದಲೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದೀರಿ, ಮದುವೆ ಆಗೋಕೆ ರೆಡಿಯಾಗಿದ್ದೀರಿ. ನನ್ನನ್ನು ಯಾಕೆ ಡೇಟ್ ಮಾಡಲು ಕರೆದ್ರಿ ಎಂದು ನಾನು ಪ್ರಶ್ನೆ ಮಾಡಿದೆ. ಸಮಾಜದಲ್ಲಿ ದೊಡ್ಡ ಹೆಸರು ಇರೋರು ಹೀಗೆ ಮಾಡ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ, ಆಮೇಲೆ ಇನ್ನೊಬ್ಬ ವ್ಯಕ್ತಿಯ ಪರಿಚಯ ಆದರೂ ಆ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. ಅವನ ನಡೆವಳಿಕೆ ನನಗೆ ಇಷ್ಟ ಆಗಲಿಲ್ಲ ಎಂದು ಅವರು ಹೇಳಿದ್ದಾರೆ.
ಆರು ತಿಂಗಳ ಮದುವೆ
ಕಾಲೇಜಿನ ಅಂತಿಮ ವರ್ಷದಲ್ಲಿದ್ದಾಗ ಒಂದು ಹುಡುಗನ ಜೊತೆ ಡೇಟ್ ಮಾಡಿದ್ದೆ. ಅವನು ತೀರಿಕೊಂಡ, ಅದು ಶಾಕ್ ಕೊಟ್ಟಿತು, ಆಮೇಲೆ ಕ್ಯಾನ್ಸರ್ ವಿರುದ್ಧ ಹೋರಾಡಿದೆ. ನನ್ನ ಸಹೋದರಿ ಮದುವೆಯಲ್ಲಿ ಉದ್ಯಮಿ ಪ್ರಜೀತ್ ಪದ್ಮನಾಭನ್ ಅವರನ್ನು ಭೇಟಿಯಾಗಿದೆ, ಸಿಲ್ಲಿಯಾಗಿ ಮಾತನಾಡುತ್ತ ನಾವು ಸಮಯ ಕಳೆದೆವು. ಒಂದು ದಿನ ಪ್ರಜೀತ್ ಅವರು ಮದುವೆಯಾಗೋಣವೇ ಎಂದು ಪ್ರಶ್ನೆ ಮಾಡಿದಾಗ, ನಾನು ತಂದೆಯನ್ನು ಕೇಳಿ ಎಂದೆ. 2011ರಲ್ಲಿ ಮದುವೆಯಾದೆವು. ಆಮೇಲೆ ಮದುವೆ ಎನ್ನೋದು ಲೈಫ್ಟೈಮ್ ಕಮಿಟ್ಮೆಂಟ್ ಎಂದುಕೊಂಡಿದ್ದೆ. ಆದರೆ ಆರು ತಿಂಗಳಿಗೆ ಮದುವೆಯಿಂದ ಹೊರಗಡೆ ಬರುವ ಹಾಗೆ ಆಯ್ತು” ಎಂದು ಹೇಳಿದ್ದಾರೆ.


