- Home
- Entertainment
- TV Talk
- Annayya Serial ಶಿವುಗೆ ಹಿಂದಿವಾಲಿಯ ಮೇಲೆ ಲವ್? ಯಾರೀಕೆ? ಹೀಗೆ ಪ್ರಪೋಸ್ ಮಾಡಿ ಗುಟ್ಟ ರಟ್ಟು ಮಾಡಿದ್ರಾ ನಟ?
Annayya Serial ಶಿವುಗೆ ಹಿಂದಿವಾಲಿಯ ಮೇಲೆ ಲವ್? ಯಾರೀಕೆ? ಹೀಗೆ ಪ್ರಪೋಸ್ ಮಾಡಿ ಗುಟ್ಟ ರಟ್ಟು ಮಾಡಿದ್ರಾ ನಟ?
ಜೀ ಕನ್ನಡದ 'ಅಣ್ಣಯ್ಯ' ಧಾರಾವಾಹಿ ಖ್ಯಾತಿಯ ನಟ ವಿಕಾಶ್ ಉತ್ತಯ್ಯ ಅವರು ಪ್ರೇಮಿಗಳ ದಿನದಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪ್ರಪೋಸಲ್ ವಿಡಿಯೋ ಹಂಚಿಕೊಂಡಿದ್ದಾರೆ. ಹಿಂದಿಯಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿರುವ ಅವರು, 'ನೀನು ನನ್ನವಳಾಗುತ್ತೀಯಾ' ಎಂದು ಕೇಳಿದ್ದು, ಕುತೂಹಲ ಮೂಡಿಸಿದ್ದಾರೆ.

ಮಾಕಾಳಮ್ಮನ ಭಕ್ತ
ಅಣ್ಣಯ್ಯ ಎಂದ್ರೆ ಸದ್ಯ ಸೀರಿಯಲ್ ಪ್ರೇಮಿಗಳ ಗಮನ ಹರಿಯುವುದು ಜೀ ಕನ್ನಡದ ಸೀರಿಯಲ್ ಮೇಲೆ. ಮಾಕಾಳಮ್ಮನ ಪರಮ ಭಕ್ತ ಈ ಅಣ್ಣಯ್ಯ. ತನ್ನ ನಾಲ್ವರು ತಂಗಿಯರು ಈತನಿಗೆ ಪಂಚ ಪ್ರಾಣ. ನೋವು ನುಂಗಿ ನಗು ಹಂಚುವ ಕ್ಯಾರೆಕ್ಟರ್ ಇವನದ್ದು.
ವಕೀಲರಾಗಿರೋ ವಿಕಾಶ್
ಶಿವು ಪಾತ್ರದಲ್ಲಿ ನಟ ವಿಕಾಶ್ ಉತ್ತಯ್ಯ. ಅಪಾಯವಿದೆ ಎಚ್ಚರಿಕೆ ಸಿನಿಮಾದಿಂದ ಪರಿಚಿತರಾಗಿರುವ ವಿಕಾಶ್ ಅವರು, ಮೂಲತಃ ಕೊಡಗಿನವರು. ಅವರು ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ವಕೀಲರಾಗಿ ಕೆಲಸ ಮಾಡುತ್ತಿದ್ದರು. ನಟನೆ ಮೇಲಿನ ಆಸಕ್ತಿಯಿಂದ ಕೆಲಸ ಬಿಟ್ಟು ನಟರಾಗಿದ್ದಾರೆ.
ಸಿನಿಮಾಗಳಲ್ಲಿ ನಟನೆ
ವಿಕಾಶ್ ಉತ್ತಯ್ಯ ಅವರು ಸೀರಿಯಲ್ ಗೆ ಬರುವ ಮುನ್ನ ಕೆಲ ಸಿನಿಮಾಗಳಲ್ಲಿ ಅಭಿನಯಿದ್ದಾರೆ. ಈ ಹಿಂದೆ ಮೇರಿ ಎಂಬ ಸಿನಿಮಾದಲ್ಲಿ ನಟಿಸಿದ್ದ ಇವರು, ಇತ್ತೀಚೆಗೆ 2023ರಲ್ಲಿ ದ್ವಂದ್ವ ದ್ವಯಂ, ಆನೆ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಅಲ್ಲದೇ, ಕನಸಿನ ಮಳೆಯಾದವರು ಎಂಬ ಶಾರ್ಟ್ ಫಿಲ್ಮನಲ್ಲೂ ನಟಿಸಿದ್ದಾರೆ.
ಸಿಂಗಲ್ ನಟ
ಇಂತಿಪ್ಪ ವಿಕಾಶ್, ಸದ್ಯ ಸಿಂಗಲ್ ಆಗಿದ್ದಾರೆ. ಆದರೆ ಇದೀಗ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರೇಮಿಗಳ ದಿನಕ್ಕೆ ಹಿಂದಿಯಲ್ಲಿ ಪ್ರಪೋಸ್ ಮಾಡುವ ಮೂಲಕ ಕೆಲವೊಂದು ಪ್ರಶ್ನೆಗಳನ್ನು ಅಭಿಮಾನಿಗಳಲ್ಲಿ ಹುಟ್ಟುಹಾಕಿದ್ದಾರೆ. 90ರ ದಶಕದ ಪ್ರೀತಿಯನ್ನು ಹೀಗೆ ಮಾಡುವುದು ಎಂದು ಕ್ಯಾಪ್ಷನ್ ಕೊಟ್ಟಿರುವ ಅವರು, ಈ ವಿಡಿಯೋ ಮಾಡಿದ್ದೇಕೆ ಎನ್ನುವ ಬಗ್ಗೆ ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದಾರೆ.
ಶಾಯರಿ ಬರಲ್ಲ
ಅಂದಹಾಗೆ ಈ ವಿಡಿಯೋದಲ್ಲಿ ವಿಕಾಶ್ ಅವರು, 'ನನಗೆ ಶಾಯರಿ, ಡೈಲಾಗ್ ಎಲ್ಲಾ ಬರಲ್ಲ. ಆದರೆ ನೀನು ಎದುರಿಗೆ ಇದ್ದಾಗ ಎಲ್ಲವೂ ನನಗೆ ಸಿಂಪಲ್ ಎನ್ನಿಸಿಬಿಡುತ್ತದೆ. ನೋಡು ಈಗ ನಾನು ಹೇಗೆ ಸಲೀಸಾಗಿ ಹಿಂದಿಯಲ್ಲಿ ಮಾತನಾಡುತ್ತಿರುವೆನಲ್ಲಾ ಹಾಗೆ, ಎಲ್ಲವೂ ಸಿಂಪಲ್ ಆಗಿ ಬಿಡುತ್ತದೆ' ಎಂದಿದ್ದಾರೆ.
ಸತ್ಯ ಹೇಳುತ್ತೇನೆ
'ನಮ್ಮ ಪ್ರತಿದಿನವೂ ಸ್ಪೆಷಲ್ ಆಗಿರುತ್ತದೆ ಎಂದು ನಾನು ಹೇಳುವುದಿಲ್ಲ. ಆದರೆ, ಪ್ರತಿದಿನವೂ ನಿನ್ನನ್ನು ತುಂಬಾ ಖುಷಿಯಾಗಿ ಇಡಲು ಪ್ರಯತ್ನ ಅಂತೂ ಪಡುತ್ತೇನೆ' ಎಂದಿದ್ದಾರೆ. 'ಇವತ್ತು ನಾನು ಒಂದು ಸತ್ಯ, ಅದು ನನ್ನ ಜೀವನದ ಅತ್ಯಂತ ಸುಂದರವಾದ ಸತ್ಯವನ್ನು ಹೇಳುತ್ತಿದ್ದೇನೆ. ನೀನು ನನ್ನವಳು ಆಗುತ್ತಿಯಾ' ಎಂದು ಕೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

