ಪರಪ್ಪನ ಅಗ್ರಗಾರದ ವಿಡಿಯೋ ವೈರಲ್ ಹಿಂದಿನ ಕೈಗಳ ತನಿಖೆಗಿಳಿದ ಸಿಸಿಬಿ ದರ್ಶನ್ ಆಪ್ತ ನಟ ಧನ್ವೀರ್ನನ್ನ ವಿಚಾರಣೆ ಮಾಡಿದೆ. ಈ ವೇಳೆ ಧನ್ವೀರ್ ವಿಜಯಲಕ್ಷ್ಮೀ ಹೆಸರು ಬಾಯಿಬಿಟ್ಟಿದ್ದಾನೆ ಎನ್ನಲಾಗಿದ್ದು, ವಿಜಯಲಕ್ಷ್ಮೀ ಕೂಡ ಈ ಕೇಸ್ನಲ್ಲಿ ವಿಚಾರಣೆ ಎದುರಿಸೋ ಸಾಧ್ಯತೆ ಇದೆ. ಮುಂದೇನು ಕಥೆ?
ದಾಸನ ಪತ್ನಿಗೆ ಬಂತು ‘w/o ಡೆವಿಲ್’ ಬಿರುದು..!
ದರ್ಶನ್ ಪತ್ನಿ ವಿಜಯಲಕ್ಷ್ಮೀ ಪತಿಗಾಗಿ ಮಾಡಿದ ಹೋರಾಟಗಳ ವಿಷ್ಯ ಗೊತ್ತೇ ಇದೆ. ಇದೀಗ ದಾಸನ ದಿ ಡೆವಿಲ್ ಸಿನಿಮಾದ ಪ್ರಚಾರದ ಜವಾಬ್ದಾರಿಯನ್ನೂ ವಿಜಯಲಕ್ಷ್ಮೀ ವಹಿಸಿಕೊಂಡಿದ್ದಾರೆ. ಇದರ ನಡುವೆ ಪರಪ್ಪನ ಅಗ್ರಹಾರದ ಜೈಲು ವಿಡಿಯೋಗಳು ವೈರಲ್ ಆಗಿರೋದ್ರ ಹಿಂದೆ ವಿಜಯಲಕ್ಷ್ಮೀ ಕೈವಾಡದ ಹೆಸರು ಕೇಳಿಬಂದಿದೆ. ಸದ್ಯ ವಿಜಯಲಕ್ಷ್ಮೀ ವರಸೆ ನೋಡಿದವರು ಇವರನ್ನ ವೈಫ್ ಆಫ್ ಡೆವಿಲ್ ಅಂತಿದ್ದಾರೆ.
ದಿ ಡೆವಿಲ್’ ಮೂವಿ ಪ್ರಚಾರಕ್ಕಿಳಿದ ವಿಜಯಲಕ್ಷ್ಮೀ, ‘ಸಿನಿಮಾ ಗೆಲ್ಲಿಸಿ..’ ಫ್ಯಾನ್ಸ್ಗೆ ದಾಸನ ಪರ ಮನವಿ
ಯೆಸ್ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಕೈದಿಯಾಗಿ ದಿನ ಕಳೀತಾ ಇರೋ ವಿಷ್ಯ ಗೊತ್ತೇ ಇದೆ. ಸದ್ಯ ರೇಣುಕಾಸ್ವಾಮಿ ಮರ್ಡರ್ ಕೇಸ್ ನಿರ್ಣಾಯಕ ಹಂತಕ್ಕೆ ಬಂದಿದೆ. ಈ ಹಂತದಲ್ಲಿ ದರ್ಶನ್ಗೆ ಬೇಲ್ ಸಿಕ್ಕೋದು ಅಸಾಧ್ಯ. ಸೋ ಮುಂದಿನ ತಿಂಗಳು ತೆರೆಗೆ ಬರಲಿರೋ ದಿ ಡೆವಿಲ್ ಪ್ರಚಾರಕ್ಕೆ ದಾಸ ಬರೋದು ಅಸಾಧ್ಯ. ಪತಿಯ ಬದಲು ವಿಜಯಲಕ್ಷ್ಮೀ ಡೆವಿಲ್ ಪ್ರಚಾರದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಈಗಾಗ್ಲೇ ದರ್ಶನ್ ರ ಸೋಷಿಯಲ್ ಮಿಡಿಯಾ ಹ್ಯಾಂಡಲ್ ಮಾಡ್ತಾ ಸಿನಿಮಾದ ಅಪ್ಡೇಟ್ಸ್ ಕೊಡ್ತಾ ಇದ್ದಾರೆ ವಿಜಯಲಕ್ಷ್ಮೀ. ಇತ್ತೀಚಿಗೆ ಸಿನಿಮಾದ ಮೂರನೇ ಸಾಂಗ್ ಲಾಂಚ್ಗೆ ಫ್ಯಾನ್ಸ್ ಅಸೋಸಿಯೇಷನ್ ಕಡೆಯಿಂದ ಇವೆಂಟ್ ನಡೆದಿದ್ದು ಅದ್ರಲ್ಲೂ ಭಾಗಿಯಾಗಿದ್ದಾರೆ.
ಕಳೆದ ಭಾನುವಾರ ಬೆಂಗಳೂರಿನ ಪಾರ್ಟಿ ಹಾಲ್ವೊಂದರಲ್ಲಿ ಡೆವಿಲ್ ಮೂವಿಯ ಅಲೊಹೊಮೊರಾ.. ಸಾಂಗ್ ರಿಲೀಸ್ ಇವೆಂಟ್ ನಡೆದಿದೆ. ಅದ್ರಲ್ಲಿ ಚಿತ್ರತಂಡದ ಜೊತೆಗೆ ದರ್ಶನ್ ಸೋದರ ದಿನಕರ್, ದರ್ಶನ್ ಅಕ್ಕನ ಮಗ ಚಂದನ್ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮೀ ಭಾಗಿಯಾಗಿದ್ದಾರೆ. ದಿ ಡೆವಿಲ್ ಮೂವಿ ಗೆಲ್ಲಿಸೋದು ನಿಮ್ಮದೇ ಜವಾಬ್ದಾರಿ ಅಂತ ದರ್ಶನ್ ಪರವಾಗಿ ವಿಜಯಲಕ್ಷ್ಮೀ ಫ್ಯಾನ್ಸ್ಗೆ ಮನವಿ ಮಾಡಿದ್ದಾರೆ.
ಜೈಲ್ ವಿಡಿಯೋ ಕೇಸ್ನಲ್ಲಿ ವಿಜಯಲಕ್ಷ್ಮೀ ಹೆಸರು, ದರ್ಶನ್ಗಾಗಿ ದೊಡ್ಡ ರಿಸ್ಕ್ ತೆಗೆದುಕೊಂಡ್ರಾ ಪತ್ನಿ..?
ಯೆಸ್ ಇತ್ತೀಚಿಗೆ ಇತ್ತೀಚಿಗೆ ಪರಪ್ಪನ ಅಗ್ರಹಾರದಲ್ಲಿನ ಕೈದಿಗಳ ದರ್ಬಾರ್ ವಿಡಿಯೋಸ್ ವೈರಲ್ ಆದ ಮೇಲೆ, ಅವುಗಳ ಕುರಿತ ಗಂಭೀರ ತನಿಖೆ ನಡೀತಾ ಇದೆ. ಜೈಲು ಸಿಬ್ಬಂದಿಯನ್ನ ಅಮಾನತ್ತು ಮಡೋದ್ರ ಜೊತೆಗೆ ಜೈಲಿನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಶೇರ್ ಮಾಡಿದ್ದು ಯಾರು ಅನ್ನೋ ತನಿಖೆ ಕೂಡ ನಡೀತಿದೆ. ಈ ತನಿಖೆಯಲ್ಲೀ ವಿಜಯಲಕ್ಷ್ಮೀ ದರ್ಶನ್ ಹೆಸರು ಕೂಡ ಕೇಳಿ ಬಂದಿದೆ.
ಪರಪ್ಪನ ಅಗ್ರಗಾರದ ವಿಡಿಯೋ ವೈರಲ್ ಹಿಂದಿನ ಕೈಗಳ ತನಿಖೆಗಿಳಿದ ಸಿಸಿಬಿ ದರ್ಶನ್ ಆಪ್ತ ನಟ ಧನ್ವೀರ್ನನ್ನ ವಿಚಾರಣೆ ಮಾಡಿದೆ. ಈ ವೇಳೆ ಧನ್ವೀರ್ ವಿಜಯಲಕ್ಷ್ಮೀ ಹೆಸರು ಬಾಯಿಬಿಟ್ಟಿದ್ದಾನೆ ಎನ್ನಲಾಗಿದ್ದು, ವಿಜಯಲಕ್ಷ್ಮೀ ಕೂಡ ಈ ಕೇಸ್ನಲ್ಲಿ ವಿಚಾರಣೆ ಎದುರಿಸೋ ಸಾಧ್ಯತೆ ಇದೆ.
ವೈಫ್ ಆಫ್ ಡೆವಿಲ್
ಒಂದು ಕಡೆ ದಾಸನ ಪರ ಕಾನೂನು ಹೋರಾಟಕ್ಕಿಳಿದಿರೋ ವಿಜಯಲಕ್ಷ್ಮೀ ಅದರ ನಡುವೆ ದರ್ಶನ್ಗಾಗಿ ಜೈಲ್ ವಿಡಿಯೋ ವೈರಲ್ ಮಾಡಿಸಿದ್ರಾ ಗೊತ್ತಿಲ್ಲ. ಒಂದು ವೇಳೆ ಹಾಗೆ ಮಾಡಿದ್ರೆ ವಿಜಯಲಕ್ಷ್ಮೀಗೂ ಕಾನೂನು ಕಂಟಕ ತಪ್ಪಿದ್ದಲ್ಲ. ಒಟ್ನಲ್ಲಿ ದಾಸನ ಪತ್ನಿಯ ವರಸೆ ನೋಡಿದವರು ಇವರನ್ನ ವೈಫ್ ಆಫ್ ಡೆವಿಲ್ ಅಂತ ಕರೀತಿದ್ದಾರೆ.


