ಕೊಲೆ ಆರೋಪದ ಹಿನ್ನೆಲೆಯಲ್ಲಿ ನಟ ದರ್ಶನ್‌ಗೆ ಸ್ವಿಟ್ಜರ್‌ಲ್ಯಾಂಡ್ ವೀಸಾ ನಿರಾಕರಣೆಯಾಗಿದೆ. ಈ ಕಾರಣದಿಂದಾಗಿ 'ಡೆವಿಲ್' ಚಿತ್ರದ ಶೂಟಿಂಗ್ ಥೈಲ್ಯಾಂಡ್‌ನಲ್ಲಿ ನಡೆಯಲಿದೆ.

ಬೆಂಗಳೂರು (ಜುಲೈ.11): ಕೊಲೆ ಆರೋಪದ ಹಿನ್ನೆಲೆಯಲ್ಲಿ ನಟ ದರ್ಶನ್‌ಗೆ ಸ್ವಿಟ್ಜರ್‌ಲ್ಯಾಂಡ್ ವೀಸಾ ನಿರಾಕರಣೆಯಾಗಿದೆ. ತಮ್ಮ ಚಿತ್ರ ‘ಡೆವಿಲ್’ ಶೂಟಿಂಗ್‌ಗಾಗಿ ಸ್ವಿಟ್ಜರ್‌ಲ್ಯಾಂಡ್‌ಗೆ ತೆರಳಲು ಯೋಜನೆ ಹಾಕಿದ್ದ ದರ್ಶನ್, ಕ್ರಿಮಿನಲ್ ಹಿನ್ನೆಲೆಯ ಕಾರಣದಿಂದಾಗಿ ಯುರೋಪ್‌ಗೆ ಪ್ರವೇಶ ನಿಷೇಧಿಸಲಾಗಿದೆ. ಈ ಕಾರಣಕ್ಕೆ ಸ್ವಿಟ್ಜರ್‌ಲ್ಯಾಂಡ್ ವೀಸಾ ರದ್ದಾಗಿದೆ.

ದರ್ಶನ್ ಅವರು ಜುಲೈ 14 ರಂದು ದುಬೈ ಮತ್ತು ಯುರೋಪ್‌ಗೆ ತೆರಳಲು 64ನೇ ಸಿಸಿಎಚ್ ಕೋರ್ಟ್‌ನಿಂದ ಅನುಮತಿ ಪಡೆದಿದ್ದರು. ಆದರೆ, ಸ್ವಿಟ್ಜರ್‌ಲ್ಯಾಂಡ್ ವೀಸಾ ನಿರಾಕರಣೆಯಾದ ಬೆನ್ನಲ್ಲೇ, ದರ್ಶನ್ ಥೈಲ್ಯಾಂಡ್‌ಗೆ ಶೂಟಿಂಗ್‌ಗಾಗಿ ತೆರಳಲು ಕೋರ್ಟ್‌ನಲ್ಲಿ ಮತ್ತೊಮ್ಮೆ ಅನುಮತಿ ಕೋರಿದ್ದಾರೆ. ಕೋರ್ಟ್ ಜುಲೈ 11 ರಿಂದ ಥೈಲ್ಯಾಂಡ್‌ಗೆ ತೆರಳಲು ಅನುಮತಿ ನೀಡಿದ್ದು, ಮುಂದಿನ ವಾರ ದರ್ಶನ್ ಥೈಲ್ಯಾಂಡ್‌ನ ಪುಕೆಟ್‌ಗೆ ತೆರಳಲಿದ್ದಾರೆ.

ಕೊಲೆ ಆರೋಪದಿಂದ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗುರಿಯಾಗಿರುವ ದರ್ಶನ್‌ಗೆ ಈ ಘಟನೆ ಮತ್ತೊಂದು ಆಘಾತವನ್ನುಂಟು ಮಾಡಿದೆ. ‘ಡೆವಿಲ್’ ಚಿತ್ರದ ಶೂಟಿಂಗ್ ಯೋಜನೆಯಲ್ಲಿ ಈ ಬದಲಾವಣೆಯಿಂದ ತಂಡಕ್ಕೆ ಹೊಸ ಸವಾಲುಗಳು ಎದುರಾಗಿವೆ.

ದರ್ಶನ್ ಈಗ ಥೈಲ್ಯಾಂಡ್‌ನಲ್ಲಿ ಚಿತ್ರೀಕರಣಕ್ಕೆ ಸಿದ್ಧತೆ ನಡೆಸಿದ್ದು, ಚಿತ್ರತಂಡವು ಹೊಸ ಯೋಜನೆಯೊಂದಿಗೆ ಮುನ್ನಡೆಯಲಿದೆ.