ವಯನಾಡು ದುರಂತದಲ್ಲಿ ಮೃತಪಟ್ಟವರಿಗೆ 25 ಲಕ್ಷ ರೂಪಾಯಿ ಕೊಡುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಇದೀಗ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರಿಗೆ ಕೇವಲ 10 ಲಕ್ಷ ರೂ ಪರಿಹಾರ ಘೋಷಿಸಿ ತಾರಮತ್ಯ ಮಾಡುತ್ತಿರುವುದೇಕೆ ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.
ಬೆಂಗಳೂರು(ಏ.24) ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರ ಕನ್ನಡಿಗ ಭರತ್ ಭೂಷಣ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಕರ್ನಾಟಕ ಬಿಜೆಪಿ ನಾಯಕ ಸಿಟಿ ರವಿ ತೀವ್ರ ನೋವು ವ್ಯಕ್ತಪಡಿಸಿದ್ದಾರೆ. ಚಿಕ್ಕ ಮಗು ಇದೆ ಬಿಡಿ ಎಂದರೂ ಕೇಳದೆ ಉಗ್ರರು ಮೂರು ಸುತ್ತು ಗುಂಡು ಹಾರಿಸಿ ಭರತ್ ಭೂಷಣ್ ಹತ್ಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಈ ಘಟನೆ ವಿವರಿಸಿದ ಸಿಟಿ ರವಿ, ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪರಿಹಾರ ಮೊತ್ತ ಕುರಿತು ಕೆಲ ಪ್ರಶ್ನೆಗಳನ್ನು ಎತ್ತಿತ್ತಾದರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಪರಿಹಾರ ಕೊಡುವಾಗ ತಾರತಮ್ಯ ಮಾಡುತ್ತಿರುವುದೇಕೆ ಎಂದು ಸಿಟಿ ರವಿ ಕೇಳಿದ್ದರೆ. ವಯನಾಡಿನಲ್ಲಿ ಮೃತಪಟ್ಟವರಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ಘೋಷಿಸುತ್ತದೆ. ಆದರೆ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರಿಗೆ ಕೇವಲ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ ಎಂದು ಸಿಟಿ ರವಿ ಹೇಳಿದ್ದಾರೆ.
ಕೇರಳದರ ಮೇಲೆ ಪ್ರೀತಿ, ಕನ್ನಡಿಗರ ನಿರ್ಲಕ್ಷ್ಯ
ಕೇರಳದವರು ಸತ್ತರೇ 25 ಲಕ್ಷ ರೂಪಾಯಿ ಘೋಷಣೆ ಮಾಡುತ್ತೀರಿ. ಆದರೆ ಕರ್ನಾಟಕದವರು ಮೃತಪಟ್ಟರೇ 10 ಲಕ್ಷ ರೂಪಾಯಿ ಘೋಷಿಸುತ್ತೀರಿ. ಇದರಿಂದ ನಿಮಗೂ ಕೆಟ್ಟ ಕೆಸರು ಬರುತ್ತೆ. ಈ ರೀತಿ ತಾರತಮ್ಯ ಮಾಡುತ್ತಿರುವುದೇಕೆ ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ. ಪ್ರಮುಖವಾಗಿ ಕೇರಳದ ವಯನಾಡಿನ ವ್ಯಕ್ತಿ ಆನೆ ತುಳಿತಕ್ಕೆ ಮೃತಪಟ್ಟ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು. ರಾಹುಲ್ ಗಾಂಧಿ ಲೋಕಸಭಾ ಕ್ಷೇತ್ರದ ವ್ಯಕ್ತಿಯೊಬ್ಬ ಮೃತಪಟ್ಟ ಕಾರಣಕ್ಕೆ ಈ ರೀತಿ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಸರ್ಕಾರ ಮಾತ್ರ ಕರ್ನಾಟಕದ ಆನೆ ತುಳಿದು ವಯನಾಡು ವ್ಯಕ್ತಿ ಮೃತಪಟ್ಟಿತ್ತು ಎಂದು ಸಮರ್ಥನೆ ನೀಡಿತ್ತು.
ಓರ್ವ ಮುಸ್ಲಿಂ ಆಗಿ ನಾಚಿಕೆಯಾಗುತ್ತಿದೆ, ಪಹಲ್ಗಾಮ್ ದಾಳಿ ಖಂಡಿಸಿ ಭಾವುಕರಾದ ಗಾಯಕ ಸಲೀಮ್
ಈ ತಾರತಮ್ಯ ಯಾಕೆ?
ಇನ್ನು ವಯನಾಡಿನಲ್ಲಿ ನಡೆದ ಭೂಕುಸಿತ, ಪ್ರವಾಹಕ್ಕೆ ಮೃತಪಟ್ಟವರಿಗೂ ಲಕ್ಷ ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ರಾಜ್ಯ ಸರ್ಕಾರ 100 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಘೋಷಿಸಿದೆ. ಕೇರಳದವರು ಮೃತಪಟ್ಟಾಗ ತೀವ್ರ ಮರುಗುವ ಸರ್ಕಾರ, ಕನ್ನಡಿಗರ ಬಗ್ಗೆ ನಿರ್ಲಕ್ಷ್ಯವೇಕೆ ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.
ಜಗತನ್ನು ಎರಡಾಗಿ ನೋಡುವ ತತ್ವ
ಭರತ್ ಭೂಷಣ್ ಪಾರ್ಥೀವ ಶರೀರ ದರ್ಶನದ ಬಳಿಕ ಮಾತನಾಡಿದ ಸಿಟಿ ರವಿ, ಜಗತ್ತನ್ನು ಎರಡಾಗಿ ನೋಡು ಮೂಲ ತತ್ವ ಅವರದ್ದು. ಇಸ್ಲಾಂ ಮತ್ತು ಇಸ್ಲಾಮೇತರ ನೋಡುವ ದೃಷ್ಟಿಕೋನ ಎಲ್ಲೀವರೆಗೆ ಬದಲಾಗುವುದಿಲ್ಲವೋ, ಅಲ್ಲೀವರೆಗೆ ಈ ದಾಳಿಗಳು ನಡೆಯುತ್ತಲೇ ಇರುತ್ತದೆ. ಅವರಿಗೆ ಯೂಹೂದಿ, ಕ್ರೈಸ್ತ, ಬುದ್ಧರನ್ನು ನೋಡಿದರೆ ಆಗಲ್ಲ. ಮ್ಯೂಸಿಯಂನಲ್ಲಿರುವ ಬುದ್ಧ, ಶಿವನ ಮೂರ್ತಿಯನ್ನು ಧ್ವಂಸ ಮಾಡಿದ್ದಾರೆ. ಇದೀಗ ಅತ್ಯಂತ ಭೀಕರ ದಾಳಿ ನಡೆಸಿದ್ದಾರೆ ಎಂದು ಸಿಟಿ ರವಿ ಹೇಳಿದ್ದಾರೆ. ಇನ್ನೆಷ್ಟು ಜನ ಬಲಿಯಾಗಬೇಕು, ಇನ್ನೆಷ್ಟು ಬಾರಿ ಇದೇ ಕತೆಯನ್ನು ನಾವು ಹೇಳಬೇಕು? ಭರತ್ ಭೂಷಣ್ ಕುಟುಂಬಸ್ಥರ ಎದುರೇ ಮೃತಪಟ್ಟಿದ್ದಾರೆ. ಉಗ್ರರು ಸತತ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಭರತ್ ಭೂಷಣ್ ಪತ್ನಿ ಇದನ್ನು ಹೇಗೆ ಸಹಿಸಿಕೊಳ್ಳುತ್ತಾರೆ ಎಂದು ಸಿಟಿ ರವಿ ಭಾವುಕರಾಗಿದ್ದಾರೆ.
ಉಗ್ರರ ಮಾಹಿತಿ ಕೊಟ್ಟವರಿಗೆ ₹20 ಲಕ್ಷ ಬಹುಮಾನ; ನರಮೇಧದ ಮಾಸ್ಟರ್ಮೈಂಡ್ ಕಸೂರಿ?
