ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ವಾಟರ್‌ಮನ್ ಆಗಿದ್ದ ಚಿಕ್ಕೊಸನಾಯಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 27 ತಿಂಗಳ ಸಂಬಳ ನೀಡದೆ ಕಿರುಕುಳ ನೀಡಿದ್ದೇ ಸಾವಿಗೆ ಕಾರಣವೆಂದು ಡೆತ್‌ನೋಟ್‌ನಲ್ಲಿ ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಕರ್ತವ್ಯಲೋಪದ ಮೇಲೆ ಪಿಡಿಒ ರಾಮೇಗೌಡರನ್ನು ಅಮಾನತು ಮಾಡಲಾಗಿದೆ.
ಚಾಮರಾಜನಗರ (ಅ.17): ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ವಾಟರ್‌ಮೆನ್ ಆತ್ಮ೧ಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪ ಹಿನ್ನೆಲೆ ಪಿಡಿಒ ರಾಮೇಗೌಡರನ್ನ ಅಮಾನತು ಮಾಡಿ ಸಿಇಒ ಮೋನಾ ರೋತ್ ಆದೇಶ ಹೊರಡಿಸಿದ್ದಾರೆ.
ಚಾಮರಾಜನಗರ ವಾಟರ್‌ಮನ್ ಸೂಸೈಡ್ ಪ್ರಕರಣ:
ವಾಟರ್‌ಮನ್ ಕೆಲಸ ಮಾಡುತ್ತಿದ್ದ ಚಿಕ್ಕೊಸನಾಯಕ ಆತ್ಮ೧ಹತ್ಯೆ ಮಾಡಿಕೊಂಡಿದ್ದರು. ಆತ್ಮ೧ಹತ್ಯೆಗೆ ಮುನ್ನ ಡೆತ್‌ನೋಟ್ ಬರೆದಿದ್ದು, ಕಳೆದ 27 ತಿಂಗಳಿಂದ ಸಂಬಳ ಕೊಡದೇ ಕಿರುಕುಳ ನೀಡಿರುವ ಬಗ್ಗೆ ಉಲ್ಲೇಖಿಸಿದ್ದರು. ಈ ಆರೋಪಗಳ ಹಿನ್ನೆಲೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಆಡಳಿತವು ತ್ವರಿತಗತಿಯಲ್ಲಿ ಕ್ರಮ ಕೈಗೊಂಡಿದ್ದು, ಸಿಇಒ ಮೋನಾ ರೋತ್ ಅವರು ಆತ್ಮ೧ಹತ್ಯೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಪಿಡಿಒ ರಾಮೇಗೌಡರನ್ನು ಸಸ್ಪೆಂಡ್ ಮಾಡಿ, ಅಮಾನತುಪಡಿಸುವ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ರಾಯಚೂರು: ಗಣವೇಷ ಹಾಕಿದ ಪಿಡಿಓಗೆ ಗೇಟ್ ಪಾಸ್! ಪಿಡಿಓ ಪ್ರವೀಣ್ ಕುಮಾರ್ ಅಮಾನತು!
ಪೊಲೀಸ್ ಈಗ ಡೆತ್ ನೋಟ್ ಮತ್ತು ಸಾಕ್ಷ್ಯಗಳನ್ನು ತನಿಖೆಗೆ ಮುಂದಾಗಿದ್ದು, ಕಿರುಕುಳದ ಆರೋಪಗಳು ನಿಜವಾಗಿದ್ದರೆ ಹೆಚ್ಚಿನ ಕ್ರಮಗಳು ಎದುರಾಗಬಹುದು. ಈ ಘಟನೆಯು ಗ್ರಾಮೀಣ ಆಡಳಿತದಲ್ಲಿನ ಅಧಿಕಾರಿಗಳ ಕರ್ತವ್ಯಲೋಪ, ಕೆಳಹಂತದ ಸಿಬ್ಬಂದಿ ಮೇಲಿನ ಕಿರುಕುಳವನ್ನ ಮತ್ತೊಮ್ಮೆ ಬಹಿರಂಗಪಡಿಸಿದೆ.


