ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಾಲನಹಳ್ಳಿ ಮಠದಲ್ಲಿ ಶಿವಗಂಗೋತ್ರಿ ಪ್ರಶಸ್ತಿ ಸ್ವೀಕರಿಸಿ, ತಾವಿನ್ನೂ ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿರುವುದಾಗಿ ಹೇಳಿದರು. ಈ ಪ್ರಶಸ್ತಿಯು ತಮ್ಮ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿ ತಮಗೆ ನೀಡಿದ ಬೆಳ್ಳಿ ಕಿರೀಟವನ್ನು ಮಠಕ್ಕೆ ಹಿಂತಿರುಗಿಸಿದರು.
ದಾಬಸ್‍ಪೇಟೆ (ಫೆ.18): ರಾಜಕೀಯದಲ್ಲಿ ನಾನಿನ್ನೂ ಅಂಬೆಗಾಲು ಇಡುತ್ತಿದ್ದೇನೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲನಹಳ್ಳಿ ಮಠದಲ್ಲಿ ಮಂಗಳವಾರ ಶ್ರೀಮಠದಿಂದ ನೀಡಲಾದ ಶಿವಗಂಗೋತ್ರಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಇದನ್ನೂ ಓದಿ: 2028ಕ್ಕೆ ಸಿದ್ದರಾಮಯ್ಯ ಅಲ್ಲ, ಡಿಕೆಶಿನೂ ಅಲ್ಲ, ವಿಜಯೇಂದ್ರ ಸಿಎಂ: ಬಿಜೆಪಿ ಮುಖಂಡನ ಭವಿಷ್ಯವಾಣಿ ನಿಜವಾಗುತ್ತಾ?
ಇದೇ ಮೊದಲ ಬಾರಿಗೆ ಮಠಕ್ಕೆ ಭೇಟಿ ನೀಡುತ್ತಿದ್ದೇನೆ. ನಾನು ಇದನ್ನು ಪ್ರಶಸ್ತಿ ಎನ್ನುವುದಿಲ್ಲ, ನನ್ನ ರಾಜಕೀಯ ಜೀವನಕ್ಕೆ ಕಿರೀಟ ಎಂದು ಭಾವಿಸಿಸುತ್ತೇನೆ. ನಾನು ಇನ್ನೂ ರಾಜಕೀಯದಲ್ಲಿ ಅಂಬೆಕಾಲು ಇಡುತ್ತಿದ್ದು, ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಹೆಚ್ಚಿದೆ ಎಂದರು.
ಈ ಸಂದರ್ಭದಲ್ಲಿ ಶಿವಗಂಗೋತ್ರಿ ಪ್ರಶಸ್ತಿಯನ್ನು ಮಾತ್ರ ಸ್ವೀಕರಿಸುತ್ತೇನೆ. ಬೆಳ್ಳಿ ಕಿರೀಟವನ್ನು ಮಠದ ಕಾರ್ಯಗಳಿಗೆ ನೀಡುತ್ತೇನೆ, ಪೂಜ್ಯರು ಸ್ವೀಕರಿಸಬೇಕೆಂದು ಮನವಿ ಮಾಡಿ ಮಠಕ್ಕೆ ಹಿಂತಿರುಗಿಸಿದರು. ಇದೇ ಸಂದರ್ಭದಲ್ಲಿ ವೇದಿಕೆಯ ಮೇಲೆ ಹತ್ತಕ್ಕೂ ಹೆಚ್ಚು ಮಠಾಧೀಶರು ವಿಜಯೇಂದ್ರ ಅವರಿಗೆ ಹೂವು ಸುರಿದು ಮಂತ್ರಪಠಣೆ ಮಾಡಿ ಆಶೀರ್ವದಿಸಿದರು.



