07:53 AM (IST) Feb 15

Karnataka LiveBengaluru - ಡಿವೈಡರ್ ಹಾರಿ ಎದುರು ಬರ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಕಾರ್; ಐವರು ವಿದ್ಯಾರ್ಥಿಗಳ ಸಾವು

ಬೆಂಗಳೂರಿನ ಹೊರವಲಯದ ತುಮಕೂರು ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಐವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತಿಯಾದ ವೇಗದಿಂದ ಬಂದ ಕಾರು ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದ್ದು, ಮೃತರಲ್ಲಿ ಇಬ್ಬರನ್ನು ಲಲಿತ್ ಮತ್ತು ಹರ್ಷಿತ್ ಎಂದು ಗುರುತಿಸಲಾಗಿದೆ.
Read Full Story
07:03 AM (IST) Feb 15

Karnataka Liveಬ್ರBrahmaputra Bridge - ಪುತ್ರಾ ಮೇಲೆ ಅತ್ಯಾಧುನಿಕ ಸೇತುವೆ; ಗಂಟೆಗಳ ಪ್ರಯಾಣ ಇನ್ನು ಕೇವಲ 10 ನಿಮಿಷ!

ಪ್ರಧಾನಿ ನರೇಂದ್ರ ಮೋದಿಯವರು ಅಸ್ಸಾಂನಲ್ಲಿ ಬ್ರಹ್ಮಪುತ್ರಾ ನದಿಯ ಮೇಲೆ ನಿರ್ಮಿಸಲಾದ 'ಕುಮಾರ ಭಾಸ್ಕರ ವರ್ಮ ಸೇತು'ವನ್ನು ಉದ್ಘಾಟಿಸಿದ್ದಾರೆ. ಈ 6 ಪಥದ ಅತ್ಯಾಧುನಿಕ ಪಿಎಸ್‌ಸಿ ಸೇತುವೆಯು ಗುವಾಹಟಿ ಮತ್ತು ಉತ್ತರ ಗುವಾಹಟಿ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. 

Read Full Story
06:42 AM (IST) Feb 15

Karnataka LiveMahashivaratri 2026 - ಕಾಡುಮಲ್ಲೇಶ್ವರ ದೇವಾಲಯದಲ್ಲಿ ಬ್ರಹ್ಮರಥೋತ್ಸವಕ್ಕೆ ಸಿದ್ಧತೆ

ಮಲ್ಲೇಶ್ವರದ ಶ್ರೀ ಕಾಡುಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಫೆ.15ರ ಮಹಾಶಿವರಾತ್ರಿ ಹಾಗೂ ಫೆ.16ರಂದು ಬ್ರಹ್ಮ ರಥೋತ್ಸವವನ್ನು ಆಯೋಜಿಸಲಾಗಿದೆ. ಶಿವರಾತ್ರಿಯಂದು ನಿರಂತರ ಜಲಾಭಿಷೇಕ ಮತ್ತು ವಿಶೇಷ ದರ್ಶನವಿದ್ದು, ಮರುದಿನ ನಡೆಯುವ ರಥೋತ್ಸವದಲ್ಲಿ ರಾಜ್ಯ ಹಾಗೂ ತಮಿಳುನಾಡಿನ ಕಲಾತಂಡಗಳು ಭಾಗವಹಿಸಲಿವೆ.
Read Full Story
06:37 AM (IST) Feb 15

Karnataka Liveಭಾರತ-ಪಾಕ್‌ ಹೈವೋಲ್ಟೇಜ್ ಮ್ಯಾಚ್ - ಇಂದು ಟಿ20 ವಿಶ್ವಕಪ್ ಯುದ್ಧ ಗೆಲ್ಲೋರ್‍ಯಾರು?

ಭಾನುವಾರ ಕೊಲಂಬೊದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಪಾಕಿಸ್ತಾನದ ಬಲಿಷ್ಠ ಸ್ಪಿನ್ ದಾಳಿಯು ಭಾರತದ ಬ್ಯಾಟಿಂಗ್‌ಗೆ ದೊಡ್ಡ ಸವಾಲಾಗಿದ್ದು, ಈ ಪಂದ್ಯದಲ್ಲಿ ಗೆದ್ದ ತಂಡ ಸೂಪರ್‌-8 ಹಂತಕ್ಕೆ ಬಹುತೇಕ ಪ್ರವೇಶ ಖಚಿತಪಡಿಸಿಕೊಳ್ಳಲಿದೆ.
Read Full Story
06:23 AM (IST) Feb 15

Karnataka LiveMaha Shivaratri 2026 - ಶಿವರಾತ್ರಿಗೆ ನಗರದ ದೇಗುಲಗಳು ಸಜ್ಜು, ಇಂದಿನ ಹೂ, ಹಣ್ಣುಗಳ ಬೆಲೆ ಎಷ್ಟಿದೆ?

ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾಡುಮಲ್ಲೇಶ್ವರ, ಗವಿ ಗಂಗಾಧರೇಶ್ವರ ಸೇರಿದಂತೆ ಪ್ರಮುಖ ಶಿವ ದೇವಾಲಯಗಳು ವಿಶೇಷ ಪೂಜೆ ಹಾಗೂ ಜಾಗರಣೆಗೆ ಸಜ್ಜಾಗಿವೆ. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಹೂವು ಮತ್ತು ಹಣ್ಣುಗಳ ಬೆಲೆ ಏರಿಕೆಯಾಗಿದ್ದು, ಬಿಲ್ವಪತ್ರೆಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ.
Read Full Story
05:41 AM (IST) Feb 15

Karnataka LiveHeatwave Alert - ಬೇಸಿಗೆಯಲ್ಲಿ ಈ ಬಾರಿ ಬಿರು ಬಿಸಿಲಿನ ಆರ್ಭಟ - ಕಾರವಾರದಲ್ಲಿ 37.6 ಡಿಗ್ರಿ ಉಷ್ಣಾಂಶ, ದೇಶದಲ್ಲೇ ನಂಬರ್ 1

Heatwave Alert ಶಿವರಾತ್ರಿಗೆ ಮುನ್ನವೇ ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಕಾರವಾರದಲ್ಲಿ ದೇಶದಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಏಪ್ರಿಲ್‌-ಮೇ ತಿಂಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಬಗ್ಗೆ, ತಜ್ಞರು ಎಚ್ಚರಿಸಿದ್ದಾರೆ.

Read Full Story
05:21 AM (IST) Feb 15

Karnataka LiveLand Guarantee - ಹಾವೇರಿ ಸಮಾವೇಶ 11.1 ಲಕ್ಷ ಮಂದಿಗೆ ಭೂಗ್ಯಾರಂಟಿ, 1000 ದಿನದ ಸಂಭ್ರಮದಲ್ಲಿ 6ನೇ ಗ್ಯಾರಂಟಿ!

ಹಾವೇರಿಯಲ್ಲಿ ನಡೆದ ಸರ್ಕಾರದ ಸಾವಿರ ದಿನಗಳ ಸಮಾವೇಶದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೆರಿಗೆ ಪಾಲು, ಜಿಎಸ್‌ಟಿ ಮತ್ತು ಬರ ಪರಿಹಾರದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು. 

Read Full Story
05:00 AM (IST) Feb 15

Karnataka LiveIrrigation as 7th Guarantee - ಕೇಂದ್ರ ಅನುಮತಿ ನೀಡಿದ್ರೆ ನೀರಾವರಿ 7ನೇ ಗ್ಯಾರಂಟಿ - ಡಿಕೆ ಶಿವಕುಮಾರ್

ಹಾವೇರಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸರ್ಕಾರವು ಪ್ರಮುಖ ನೀರಾವರಿ ಯೋಜನೆಗಳಿಗೆ ಅನುಮತಿ ನೀಡಿದರೆ, ರಾಜ್ಯ ಸರ್ಕಾರದ 7ನೇ ಗ್ಯಾರಂಟಿಯಾಗಿ 'ನೀರಿನ ಗ್ಯಾರಂಟಿ' ನೀಡುವುದಾಗಿ ಘೋಷಿಸಿದ್ದಾರೆ. 

Read Full Story