ಅನ್ನಭಾಗ್ಯ ಅಕ್ಕಿ ವಿದೇಶಕ್ಕೆ ಅಕ್ರಮ ರಫ್ತು - ಸರ್ಕಾರಿ ಗೋದಾಮಿನ ಸಹಾಯಕ ಚಂದ್ರಶೇಖರ್ ಅಮಾನತು

ಬೆಂಗಳೂರು (ಆ.26) ಗೌರಿ ಗಣೇಶ ಹಬ್ಬದ ಹಿನ್ನಲೆಯಲ್ಲಿ ಮುಂಜಾನೆ 3 ಗಂಟೆಯಿಂದಲೇ ಬೆಂಗಳೂರಿನ ಕೆಆರ್ ಮಾರ್ಕೆಟ್ ಫುಲ್ ರಶ್ ಆಗಿದೆ. ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಯಲ್ಲಿ ಗ್ರಾಹಕರು ಮುಗಿಬಿದ್ದಿದ್ದಾರೆ. ಇದರಿಂದ ಸಂಚಾರ ದಟ್ಟಣೆಯೂ ಎದುರಾಗಿದೆ. ಟ್ರಾಫಿಕ್ ಜಾಮ್ ಸಮಸ್ಯೆಯೂ ತಲೆದೋರಿದೆ. ಕಳೆದ ಹಬ್ಬಕ್ಕೆ ಹೋಲಿಸಿದ್ರೆ ಈ ಬಾರಿ ಹೂ ಹಣ್ಣುಗಳ ದರ ದುಬಾರಿಯಾಗಿದೆ. ಇದು ಗ್ರಾಹಕರು ಹಾಗೂ ವ್ಯಾಪಾರಿಗಳಿಗೂ ತಲೆನೋವಾಗಿ ಪರಿಣಿಮಿಸಿದೆ. ಇತ್ತ ಬೆಂಗಳೂರಿನಲ್ಲಿ ಸರ್ಕಾರ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಿದೆ. ಖುದ್ದು ಡಿಕೆ ಶಿವಕುಮಾರ್ ತಡ ರಾತ್ರಿ ರಸ್ತೆ ಗುಂಡಿ ಮುಚ್ಚುವ ಕಾಮಾಗಾರಿ ಪರಿಶೀಲಿಲಿದ್ದಾರೆ. ರಾಜ್ಯ ರಾಜಕಾರಣ, ಜಿಲ್ಲೆಯ ಬೆಳವಣಿಗೆ ಸೇರಿದಂತೆ ಈ ದಿನದ ಕ್ಷಣ ಕ್ಷಣದ ಸುದ್ದಿ ಅಪ್ಡೇಟ್ ಇಲ್ಲಿದೆ.
Karnataka latest News Liveಅನ್ನಭಾಗ್ಯ ಅಕ್ಕಿ ವಿದೇಶಕ್ಕೆ ಅಕ್ರಮ ರಫ್ತು - ಸರ್ಕಾರಿ ಗೋದಾಮಿನ ಸಹಾಯಕ ಚಂದ್ರಶೇಖರ್ ಅಮಾನತು
Karnataka latest News Liveನನಗೆ ಗಂಡ-ಪ್ರೇಮಿ ಇಬ್ಬರೂ ಬೇಕು; ಗಂಡನ ಜೊತೆ 15 ದಿನ, ಪ್ರಿಯಕರನ ಜೊತೆ 15 ದಿನ ಇರುತ್ತೇನೆಂದ ಮಹಿಳೆ!
ನವವಿವಾಹಿತ ಮಹಿಳೆಯೊಬ್ಬಳು ಗಂಡ ಮತ್ತು ಪ್ರೇಮಿ ಇಬ್ಬರ ಜೊತೆಗೂ 15 ದಿನಗಳಂತೆ ಕಾಲ ಕಳೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರಿಂದ ಪಂಚಾಯಿತಿಯಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಪ್ರಿಯಕರನೊಂದಿಗೆ 10 ಬಾರಿ ಓಡಿ ಹೋಗಿದ್ದ ಈ ಮಹಿಳೆಯ ನಿರ್ಧಾರಕ್ಕೆ ಗಂಡ ಒಪ್ಪಿಗೆ ನೀಡಿದ್ದಾನೆ.
Karnataka latest News Live61ನೇ ಬರ್ತ್ ಡೇಗೆ ತಾಯಿ ಜೊತೆ ಮದ್ಯ ಕುಡಿದ ಮಗ; ಅಮ್ಮನ ರಿಯಾಕ್ಷನ್ ಹೇಗಿತ್ತು ಅಂತ ನೋಡಿ
Karnataka latest News Liveಚಾಮುಂಡಿ ದೇವಾಲಯ ಹಿಂದೆ, ಇಂದು ಹಾಗೂ ಮುಂದೆಯೂ ಹಿಂದೂಗಳದ್ದೇ; ಡಿಕೆಶಿಗೆ, ಯದುವೀರ್ ಒಡೆಯರ್ ತಿರುಗೇಟು!
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ 'ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ' ಎಂಬ ಹೇಳಿಕೆಗೆ ಯದುವೀರ್ ಒಡೆಯರ್ ತಿರುಗೇಟು ನೀಡಿದ್ದಾರೆ. ಚಾಮುಂಡಿ ಬೆಟ್ಟ ಹಿಂದೆಯೂ ಹಿಂದೂಗಳದ್ದೇ, ಈಗಲೂ ಮತ್ತು ಮುಂದೆಯೂ ಹಿಂದೂಗಳದ್ದೇ ಆಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
Karnataka latest News LiveDavanagere - ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ - ಸ್ಥಳೀಯರಲ್ಲಿ ತೀವ್ರ ಕುತೂಹಲ
ನಾಟಿ ಕೋಳಿಯೊಂದು ನೀಲಿ ಮೊಟ್ಟೆಯನ್ನಿಟ್ಟಿದೆ. ನಿತ್ಯ ಬಿಳಿ ಮೊಟ್ಟೆ ಇಡುತ್ತಿದ್ದ ಕೋಳಿ ಇದ್ದಕ್ಕಿದ್ದಂತೆ ನೀಲಿ ಮೊಟ್ಟೆ ಇಟ್ಟಿದ್ದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.
Karnataka latest News LiveRSS ಗೀತೆ ಮೂಲಕ ಭಾರತಾಂಬೆಗೆ ನಮಸ್ಕರಿಸದೇ, ಇಟಲಿ ಮೇಡಂಗೆ ನಮಸ್ಕರಿಸಬೇಕಾ - ಡಿಕೆಶಿ ಕ್ಷಮೆಗೆ, ಆರ್. ಅಶೋಕ್ ಬೇಸರ!
ಆರ್‌ಎಸ್‌ಎಸ್ ಪ್ರಾರ್ಥನಾ ಗೀತೆಗೆ ಹಾಡಿದ್ದಕ್ಕೆ ಡಿಕೆಶಿ ಕ್ಷಮೆ ಕೇಳಬೇಕೆಂಬ ಕಾಂಗ್ರೆಸ್ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ತಾಯ್ನಾಡಿಗೆ ನಮಸ್ಕರಿಸುವುದು ತಪ್ಪೇ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ. ಡಿಕೆಶಿ ಕ್ಷಮೆ ಕೇಳಲೊಪ್ಪದೇ ರಾಜೀನಾಮೆ ನೀಡಬೇಕಿತ್ತು ಎಂದು ಆರ್. ಅಶೋಕ್ ಒತ್ತಾಯಿಸಿದ್ದಾರೆ.
Karnataka latest News Liveಬೆಂಗಳೂರು ಟ್ರಾಫಿಕ್ ಪೊಲೀಸ್ ಮಾಹಿತಿ, 2024ರಿಂದ ಬಿಎಂಟಿಸಿಗೆ ಬಲಿಯಾಗಿದ್ದಾರೆ 80 ಜನ!
Karnataka latest News Liveಆಸ್ತಿ ಗಾಗಿಯೇ ಸೃಷ್ಟಿಯಾದ ಪಾತ್ರ ಅನನ್ಯ ಭಟ್! ಉಡುಪಿ ಪರಿಕ ಅರಮನೆ ಹಕ್ಕು ಕೇಳುತ್ತಿರೋದ್ಯಾಕೆ ಸುಜಾತಾ ಭಟ್?
ಉಡುಪಿಯ ಪರಿಕಾ ಜಮೀನು ವಿವಾದದಲ್ಲಿ ಸುಜಾತಾ ಭಟ್ ಅವರ ಹಕ್ಕು ಪ್ರಶ್ನಾರ್ಹ ಎಂದು ಮಾಜಿ ನಗರಸಭಾ ಸದಸ್ಯ ಮಹೇಶ್ ಠಾಕೂರ್ ಹೇಳಿದ್ದಾರೆ. ಜಮೀನು ಧರ್ಮಸ್ಥಳ ಕ್ಷೇತ್ರಕ್ಕೆ ದಾನವಾಗಿದ್ದು, ಸುಜಾತಾ ಭಟ್ ಅವರ ತಂದೆಗೆ ಪರಿಹಾರ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Karnataka latest News Liveಧರ್ಮಸ್ಥಳದಲ್ಲಿ ಎಷ್ಟೇ ಹುಡುಕಿದರೂ ಸಿಗದ ಮೂಳೆ ಪರಪ್ಪನ ಅಗ್ರಹಾರದ ರಸ್ತೆಯಲ್ಲೇ ಸಿಕ್ತು, ಆದ್ರೆ ಸುದ್ದಿಯಲ್ಲಿದೆ ಟ್ವಿಸ್ಟು!
Karnataka latest News Liveಕೋಟಿ ಕನ್ನಡಿಗರ ಪ್ರೀತಿ ಮುಂದೆ ಒಂದಿಬ್ಬರ ಟೀಕೆ ಲೆಕ್ಕಕ್ಕಿಲ್ಲ, ಯದುವೀರ್ ಅಂಥವರ ಸಂತತಿ ಹೆಚ್ಚಾಗಲಿ; ಬಾನು ಮುಷ್ತಾಕ್!
ದಸರಾ ಉದ್ಘಾಟನೆಗೆ ಆಯ್ಕೆಯಾದ ಬಗ್ಗೆ ಟೀಕಿಸಿದವರಿಗೆ ಸಾಹಿತಿ ಬಾನು ಮುಷ್ತಾಕ್ ತಿರುಗೇಟು ನೀಡಿದ್ದಾರೆ. ಕೋಟಿಗಟ್ಟಲೆ ಕನ್ನಡಿಗರ ಪ್ರೀತಿ-ಅಭಿಮಾನವನ್ನು ಪಡೆದಿರುವ ನಾನು, ಒಂದಿಬ್ಬರ ಟೀಕೆಗಳಿಗೆ ಉತ್ತರ ನೀಡಬೇಕಾದ ಅಗತ್ಯವಿಲ್ಲ ಎಂದಿದ್ದಾರೆ. ಜನರೇ ಇಂಥವರಿಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಹೇಳಿದರು.
Karnataka latest News LiveMBBS ಸೀಟು ನಿರಾಕರಣೆ, ವಿದ್ಯಾರ್ಥಿನಿಗೆ 15 ಲಕ್ಷ ಪರಿಹಾರ ನೀಡುವಂತೆ ಸಿದ್ದಾರ್ಥ ಸಂಸ್ಥೆಗೆ ಹೈಕೋರ್ಟ್ ಸೂಚನೆ!
ಭರವಸೆ ಪತ್ರವನ್ನು ಕಟ್ಟುಕಥೆ ಎಂದು ಕಾಲೇಜಿನವರು ಹೇಳಿದ್ದನ್ನು ನ್ಯಾಯಾಧೀಶರು ತಳ್ಳಿಹಾಕಿದರು, ನಕಲಿ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳನ್ನು ನೀಡಲಾಗಿಲ್ಲ ಎಂದು ಹೇಳಿದರು.
Karnataka latest News Liveರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಟ್ರಾಕ್ ಗೆ ಬಿದ್ದ ಸೆಕ್ಯೂರಿಟಿ ಗಾರ್ಡ್‌ನ ರಕ್ಷಿಸಿದ ಪ್ರಯಾಣಿಕ!
ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಟ್ರ್ಯಾಕ್‌ಗೆ ಬೀಳದಂತೆ ಪಕ್ಕಕ್ಕೆ ಸರಿಸಿ ಎಚ್ಚರಿಕೆ ನೀಡುವ ಭದ್ರತಾ ಸಿಬ್ಬಂದಿಯೇ ಆಯತಪ್ಪಿ ಟ್ರ್ಯಾಕ್‌ಗೆ ಬಿದ್ದಂತಹ ಘಟನೆಯೊಂದು ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
Karnataka latest News Liveಮಂಗಳೂರು ಏರ್‌ಪೋರ್ಟ್ ವಿಸ್ತರಣೆಗೆ ಶೀಘ್ರವೇ 45 ಎಕರೆ ಭೂಮಿ ವಶ - ಸಂಸದ ಕ್ಯಾ. ಬ್ರಿಜೇಶ್ ಚೌಟ
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ. ೪೫ ಎಕರೆ ಭೂಮಿಯನ್ನು ವಶಕ್ಕೆ ಪಡೆದು ವಿಸ್ತರಣೆ ಕಾರ್ಯ ನಡೆಯಲಿದ್ದು, ಹೊಸ ಹೂಡಿಕೆಗಳನ್ನು ಆಕರ್ಷಿಸಲು 'ಬೊಲ್ಪು' ಮತ್ತು 'ಬ್ಯಾಕ್ ಟು ಊರು' ಯೋಜನೆಗಳನ್ನು ರೂಪಿಸಲಾಗಿದೆ.
Karnataka latest News Liveಧರ್ಮಸ್ಥಳ ಎಸ್‌ಐಟಿ ತನಿಖೆ ವಿಚಾರದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಹೆಸರಲ್ಲಿ ವೈರಲ್ ಆಗ್ತಿದೆ ಫೇಕ್ ಪೋಸ್ಟ್!
Karnataka latest News Liveವಸಂತ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು - ಕಾರಣ ಏನು?
ಸಾಮಾಜಿಕ ಹೋರಾಟಗಾರ ವಸಂತ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕರ್ನಾಟಕ SYRO ಮಲಬಾರ್ ಕೆತೋಲಿಕ್ ಅಸೋಸಿಯೇಷನ್ ದೂರು ದಾಖಲಿಸಿದೆ.
Karnataka latest News Liveತಿಮರೋಡಿ ಮನೆಗೆ ಜನ ಬರುತ್ತಿದ್ದ ವೇಳೆ ಕೋಣೆಯಲ್ಲಿಟ್ಟು ನನ್ನನ್ನು ಬೀಗ ಹಾಕುತ್ತಿದ್ರು - ಮಾಸ್ಕ್ ಮ್ಯಾನ್
Karnataka latest News Liveಗುಂಡಿ ಮುಚ್ಚಲು 12 ಕೋಟಿ ಖರ್ಚು ಮಾಡಿದ ಬಿಬಿಎಂಪಿ, ಹಾಗಿದ್ರೂ Potholes ಸಂಖ್ಯೆಯಲ್ಲಿ ಶೇ. 63ರಷ್ಟು ಏರಿಕೆ!
ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಹೆಚ್ಚುತ್ತಿದ್ದು, ದುರಸ್ತಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ. ತೇಪೆ ಹಾಕಿದ ಕೆಲವೇ ದಿನಗಳಲ್ಲಿ ಗುಂಡಿಗಳು ಮತ್ತೆ ಕಾಣಿಸಿಕೊಳ್ಳುತ್ತಿವೆ ಎಂದು ಪ್ರಯಾಣಿಕರು ದೂರಿದ್ದಾರೆ.
Karnataka latest News Liveಸಿಗಂದೂರು ಪ್ರವಾಸೋದ್ಯಮಕ್ಕೆ ಹೊಸ ಸ್ಪರ್ಶ - ಶರವಾತಿ ಹಿನ್ನೀರಿನಲ್ಲಿ ವಿಮಾನಗಳ ಲ್ಯಾಂಡಿಂಗ್
ಶಿವಮೊಗ್ಗ ಜಿಲ್ಲೆಯ ಸಿಗಂದೂರು ಬಳಿ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ವಾಟರ್ ಏರ್‌ಡ್ರೋಮ್ ಆರಂಭಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.