11:23 PM (IST) Jun 14

Karnataka News Live 14 June 2025 ರಾಯಚೂರು ಯೂತ್ ಕಾಂಗ್ರೆಸ್ ಕ್ರಿಕೆಟ್ ಟೂರ್ನಿಯಲ್ಲಿ ಅಜರುದ್ದೀನ್; ಗ್ಯಾರಂಟಿಗೆ ಶ್ಲಾಘನೆ, ಐಪಿಎಲ್-ಏರ್ ಇಂಡಿಯಾ ದುರಂತಕ್ಕೆ ವಿಷಾದ

ರಾಯಚೂರಿನಲ್ಲಿ ಯೂತ್ ಕಾಂಗ್ರೆಸ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ ಮಾಜಿ ಕ್ರಿಕೆಟಿಗ ಅಜರುದ್ದೀನ್, ಕಾಂಗ್ರೆಸ್ ಗ್ಯಾರಂಟಿಗಳನ್ನು ಶ್ಲಾಘಿಸಿದರು, ಐಪಿಎಲ್ ದುರಂತ ಮತ್ತು ಏರ್ ಇಂಡಿಯಾ ದುರಂತದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
Read Full Story
10:50 PM (IST) Jun 14

Karnataka News Live 14 June 2025 ಇನ್ಮುಂದೆ ಜನ್ಮದಲ್ಲಿ 'ಅದನ್ನ' ತೋರಿಸಲ್ಲ, ಬಿಡ್ರಪ್ಪೋ... ಹೆಂಗಸರ ಧರ್ಮದೇಟಿಗೆ ಮುದುಕನ ಸ್ಥಿತಿ ನೋಡಿ!

ರೈಲಿನಲ್ಲಿ ವೃದ್ಧನೊಬ್ಬ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ವೇಳೆ ಅಲ್ಲಿನ ಮಹಿಳೆಯರು ಮಾಡಿದ್ದೇನು ನೋಡಿ! ಮಹಿಳೆಯರ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರ...

Read Full Story
10:31 PM (IST) Jun 14

Karnataka News Live 14 June 2025 ಬಾರ್ಬಿ ಬಳಿಕ ಜಗತ್ತನ್ನು ಆವರಿಸಿದ Labubu - ವೈರಲ್‌ ಟಾಯ್‌ನಿಂದ ಚೀನಾದ 10ನೇ ಶ್ರೀಮಂತ ವ್ಯಕ್ತಿಯಾದ ಲಬುಬು ಮಾಲೀಕ!

ಚೇಷ್ಟೆಯ ನೋಟದ ಲಬುಬು ಗೊಂಬೆಗಳು ರೋಹಿತ್ ಶರ್ಮಾ ಅವರಂತಹ ಕ್ರಿಕೆಟಿಗರಿಂದ ಹಿಡಿದು ಜಾಗತಿಕ ತಾರೆಯರವರೆಗೆ ಎಲ್ಲರನ್ನೂ ಆಕರ್ಷಿಸಿವೆ. ಈ ಗೊಂಬೆಗಳ ಜನಪ್ರಿಯತೆಯು ಅವುಗಳ ತಯಾರಕ ಪಾಪ್ ಮಾರ್ಟ್‌ಗೆ ಅಪಾರ ಲಾಭ ತಂದುಕೊಟ್ಟಿದೆ, ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಹವಾ ಸೃಷ್ಟಿಸಿದೆ.
Read Full Story
09:56 PM (IST) Jun 14

Karnataka News Live 14 June 2025 ಮನೆ ಹೊರಗೆ ಹೊಂಚುಹಾಕಿ ದಾಳಿ ಮಾಡಿದ ಚಿರತೆ; ಪ್ರಾಣಾಪಾಯದಿಂದ ಯುವಕ ಜಸ್ಟ್ ಮಿಸ್!

ಉತ್ತರ ಕನ್ನಡ ಜಿಲ್ಲೆಯ ಉಲಗದ್ದೆ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಯುವಕನಿಗೆ ಗಾಯಗೊಳಿಸಿದೆ. ಮನೆಯೊಳಗೆ ಅವಿತಿದ್ದ ಚಿರತೆ ಯುವಕನ ಮೇಲೆ ದಾಳಿ ಮಾಡಿದ್ದು, ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Read Full Story
09:50 PM (IST) Jun 14

Karnataka News Live 14 June 2025 ಮದುವೆ ಸಿದ್ಧವಾಗಿದ್ದವಳು, ಮಸಣ ಸೇರಿದಳು - ವಿಮಾನ ದುರಂತದಲ್ಲಿ ಮೃತಪಟ್ಟ ಗಗನಸಖಿಯ ಮನೆಯಲ್ಲಿ ಶೋಕ!

ಲಂಡನ್‌ಗೆ ಹೊರಟಿದ್ದ ವಿಮಾನ ದುರಂತದಲ್ಲಿ ಗಗನಸಖಿ ರೋಶ್ನಿ ಸಾವನ್ನಪ್ಪಿದ್ದಾರೆ. ಮದುವೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಈ ದುರಂತ ಸಂಭವಿಸಿದೆ. ಕುಟುಂಬದವರ ಆಕೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
Read Full Story
09:34 PM (IST) Jun 14

Karnataka News Live 14 June 2025 ಅಮೆರಿಕದ ಪೌರತ್ವದಿಂದ ಸಂಜಯ್ ಕಪೂರ್ ಪಾರ್ಥೀವ ಶರೀರ ಭಾರತಕ್ಕೆ ತರಲು ಕಾನೂನು ತೊಡಕು!

ಉದ್ಯಮಿ ಸಂಜಯ್ ಕಪೂರ್ ಪೋಲೋ ಪಂದ್ಯದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜೇನುನೊಣ ನುಂಗಿದ್ದೇ ಸಾವಿಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ಅಮೆರಿಕದ ಪೌರತ್ವ ಹೊಂದಿರುವ ಕಾರಣ ಅಂತ್ಯಕ್ರಿಯೆ ವಿಳಂಬವಾಗುವ ಸಾಧ್ಯತೆಯಿದೆ.
Read Full Story
08:44 PM (IST) Jun 14

Karnataka News Live 14 June 2025 ಮಧ್ಯಪ್ರಾಚ್ಯ ಸಂಘರ್ಷ, ಇಸ್ರೇಲಲ್ಲಿ ಸಿಲುಕಿದ ಕಾಂಗ್ರೆಸ್ ವಕ್ತಾರ ನಟರಾಜ್ ಗೌಡ ಸೇರಿ 19 ಕನ್ನಡಿಗರು

ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ವಿಮಾನ ಹಾರಾಟಗಳು ಸ್ಥಗಿತಗೊಂಡ ಪರಿಣಾಮ, ಅಧ್ಯಯನ ಪ್ರವಾಸಕ್ಕೆ ತೆರಳಿದ್ದ 19 ಮಂದಿ ಕನ್ನಡಿಗರು ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಭಾರತೀಯ ವಿದೇಶಾಂಗ ಇಲಾಖೆ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ಥಳೀಯ ಭಾರತೀಯರೊಂದಿಗೆ ನಿರಂತರ ಸಂಪರ್ಕದಲ್ಲಿದೆ.
Read Full Story
08:22 PM (IST) Jun 14

Karnataka News Live 14 June 2025 ಕೆಡೆಂಜೊಡಿತ್ತಾಯಿ ದೈವ ನುಡಿದಂತೆ 27 ದಿನಕ್ಕೆ ಜೈಲಿನಿಂದ ಬಿಡುಗಡೆಯಾದ ಜನಾರ್ಧನ ರೆಡ್ಡಿ!

ಕಡಬ ತಾಲೂಕಿನ ಸವಣೂರು ಗ್ರಾಮದ ಅರೇಲ್ತಾಡಿ ಶ್ರೀ ಉಲ್ಲಾಕ್ಳು, ಕೆಡೆಂಜೊಡಿತ್ತಾಯಿ ದೇವಳದಲ್ಲಿ ನಡೆದ ನೇಮೋತ್ಸವದಲ್ಲಿ ದೈವ ನುಡಿದಂತೆ ಜನಾರ್ಧನ ರೆಡ್ಡಿ 27 ದಿನದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ದೈವವು 'ಒಂದು ತಿಂಗಳೊಳಗೆ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ' ಎಂದು ನುಡಿದಿತ್ತು.

Read Full Story
08:19 PM (IST) Jun 14

Karnataka News Live 14 June 2025 Bengaluru ಬಾಡಿಗೆ ಮನೆ ಗೋಳು - 1.5 ಲಕ್ಷ ಡೆಪಾಸಿಟ್‌ನಲ್ಲಿ 82 ಸಾವಿರ ಕಟ್‌ ಮಾಡಿದ ಮಾಲೀಕ!

ಶ್ರವಣ್ ಟಿಕೂ ಅವರು ಸರ್ಜಾಪುರ ರಸ್ತೆಯಲ್ಲಿರುವ 2BHK ಅಪಾರ್ಟ್‌ಮೆಂಟ್‌ನಲ್ಲಿ ಎರಡು ವರ್ಷ ವಾಸ ಮಾಡಿ ಬಳಿಕ ದೊಡ್ಡ ನಿವಾಸಕ್ಕೆ ತೆರಳಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಅವರ ಬಾಡಿಗೆ ಅವಧಿಯಲ್ಲಿ, ಅವರು ಎಂದಿಗೂ ಮನೆ ಮಾಲೀಕರೊಂದಿಗೆ ನೇರವಾಗಿ ಸಂವಹನ ನಡೆಸಲಿಲ್ಲ ಎಂದಿದ್ದಾರೆ.

Read Full Story
07:45 PM (IST) Jun 14

Karnataka News Live 14 June 2025 ಪದವಿ ಪರೀಕ್ಷೆ ನಡುವೆಯೇ PG ಪ್ರವೇಶ ಪರೀಕ್ಷೆ - ವಿದ್ಯಾರ್ಥಿಗಳ ಆಕ್ರೋಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪದವಿ ಪರೀಕ್ಷೆ ನಡೆಯುತ್ತಿರುವಾಗಲೇ ಎಂಬಿಎ ಮತ್ತು ಎಂಸಿಎ ಪ್ರವೇಶ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ಇದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಪರೀಕ್ಷೆ ಮುಂದೂಡುವಂತೆ ಒತ್ತಾಯಿಸುತ್ತಿದ್ದಾರೆ. 

Read Full Story
07:35 PM (IST) Jun 14

Karnataka News Live 14 June 2025 ಕುಖ್ಯಾತಿ ಗಳಿಸಿದ್ದ ಸೀಟ್​ ನಂಬರ್​ 11Aಗೆ ಭಾರಿ ಬೇಡಿಕೆ! 27 ವರ್ಷಗಳ ಹಿಂದೆಯೂ ನಡೆದಿತ್ತು ಪವಾಡ....

ವಿಮಾನದಲ್ಲಿ ಪ್ರಯಾಣಿಸುವಾಗ 11A ಸೀಟನ್ನು ಮಾತ್ರ ಬುಕ್​ ಮಾಡಬೇಡಿ ಎಂದೇ ಹೇಳಲಾಗುತ್ತಿತ್ತು. ಇದಕ್ಕೆ ಕಾರಣ ಏನು? ಈಗ ಅದೇ ಸೀಟಿಗೆ ಭಾರಿ ಡಿಮಾಂಡ್​ ಶುರುವಾಗಿದ್ದು 27 ವರ್ಷಗಳ ಹಿಂದೆ ನಡೆದ ಪವಾಡವೇನು?

Read Full Story
07:34 PM (IST) Jun 14

Karnataka News Live 14 June 2025 Breaking News - ಹಾಡುಹಗಲೇ ವೇಶ್ಯಾವಾಟಿಕೆ ದಂಧೆ; ಮುದ್ದೇಬಿಹಾಳ ಸಾಂಗವಿ ಲಾಡ್ಜ್ ಮೇಲೆ ಪೊಲೀಸರ ಯಶಸ್ವಿ ದಾಳಿ!

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಸಾಂಗವಿ ಬಾರ್ ಅಂಡ್ ಲಾಡ್ಜ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಬೇಧಿಸಿದ್ದಾರೆ. ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದ್ದು, ಕೆಲವು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ.
Read Full Story
07:34 PM (IST) Jun 14

Karnataka News Live 14 June 2025 ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಏರ್‌ ಇಂಡಿಯಾದಿಂದ 25 ಲಕ್ಷ ಪರಿಹಾರ

ಇದು ಟಾಟಾ ಸನ್ಸ್ ಈ ಹಿಂದೆ ಘೋಷಿಸಿದ ಪ್ರತಿ ವ್ಯಕ್ತಿಯ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರದ ಹೊರತಾಗಿ ಘೋಷಣೆ ಮಾಡಿರುವ ಮೊತ್ತವಾಗಿದೆ.

Read Full Story
07:31 PM (IST) Jun 14

Karnataka News Live 14 June 2025 ಪತ್ನಿ ಜೊತೆ ಗಲಾಟೆ ಮಾಡಿ ಶಾಂತವಾಗಲು 450 ಕಿ.ಮೀ. ನಡೆದ ವ್ಯಕ್ತಿ!

ಹೆಂಡತಿಯ ಜಗಳದಿಂದ ಮನನೊಂದ ಇಟಲಿ ವ್ಯಕ್ತಿಯೊಬ್ಬ 450 ಕಿ.ಮೀ. ನಡೆದು ಸುದ್ದಿಯಾದರು. ಲಾಕ್‌ಡೌನ್‌ ಉಲ್ಲಂಘನೆಗೆ ದಂಡ ವಿಧಿಸಲಾಯಿತಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Read Full Story
07:14 PM (IST) Jun 14

Karnataka News Live 14 June 2025 ಕರ್ನಾಟಕದಲ್ಲಿ ಕನ್ನಡ ಮಾತನಾಡಿದ್ದಕ್ಕೆ ಕೆಲಸ ಕಳೆದುಕೊಂಡ ಏಕೈಕ ಉಪನ್ಯಾಸಕ ಇವರೇ ನೋಡಿ!

ಬೆಂಗಳೂರಿನ ಆರ್.ವಿ ಲರ್ನಿಂಗ್ ಹಬ್ ಕಾಲೇಜಿನಲ್ಲಿ ವಿದ್ಯಾರ್ಥಿಗೆ ಕನ್ನಡದಲ್ಲಿ ಉತ್ತರಿಸಿದ್ದಕ್ಕೆ ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸ ಕಳೆದುಕೊಂಡ ಉಪನ್ಯಾಸಕ ಆರುಣ್ ವಿಡಿಯೋ ಹಂಚಿಕೊಂಡಿದ್ದಾರೆ.

Read Full Story
07:11 PM (IST) Jun 14

Karnataka News Live 14 June 2025 ಫಾಲ್ಕನ್‌ ರಾಕೆಟ್‌ನಲ್ಲಿ ಲೀಕ್‌ - ಬಾಹ್ಯಾಕಾಶದಲ್ಲಿ ಆಗಲಿದ್ದ ಮಹಾದುರಂತ ತಪ್ಪಿಸಿದ ಇಸ್ರೋ!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರ ಸೂಚನೆಯ ನಂತರ ಈ ದೋಷವನ್ನು ಗಮನಿಸಲಾಗಿದೆ.

Read Full Story
07:06 PM (IST) Jun 14

Karnataka News Live 14 June 2025 world blood donor day 2025 - ಬರೋಬ್ಬರಿ 108 ಬಾರಿ ರಕ್ತದಾನ ಮಾಡಿದ ಮಹಾದಾನಿ ಎಸ್‌ಬಿಐ ದೇವಣ್ಣ!

ಬಳ್ಳಾರಿಯ ಬಿ. ದೇವಣ್ಣ ಅವರು 108 ಬಾರಿ ರಕ್ತದಾನ ಮಾಡಿ, 1000ಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದಾರೆ. ತಮ್ಮ ಜೀವನವನ್ನು ಸಮಾಜಸೇವೆಗೆ ಅರ್ಪಿಸಿಕೊಂಡಿರುವ ಅವರು, ನಿರಂತರವಾಗಿ ರಕ್ತದಾನದ ಮಹತ್ವ ಸಾರುತ್ತಿದ್ದಾರೆ.
Read Full Story
06:28 PM (IST) Jun 14

Karnataka News Live 14 June 2025 ಹಾರಂಗಿ ಜಲಾಶಯ ಭರ್ತಿಗೆ ಕೇವಲ 7 ಅಡಿ ಬಾಕಿ, ಮುಂಜಾಗ್ರತೆಗೆ 4,000 ಕ್ಯೂಸೆಕ್ ನೀರು ನದಿಗೆ ಬಿಡುಗಡೆ

ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಹಾರಂಗಿ ಜಲಾಶಯವು ಬಹುತೇಕ ಭರ್ತಿಯಾಗಿದೆ. 2859 ಅಡಿ ಗರಿಷ್ಠ ಮಟ್ಟದ ಜಲಾಶಯಕ್ಕೆ 2852 ಅಡಿ ನೀರು ತುಂಬಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಾಲ್ಕು ಕ್ರೆಸ್ಟ್ ಗೇಟ್‌ಗಳನ್ನು ತೆರೆದು ನೀರನ್ನು ಹರಿಬಿಡಲಾಗುತ್ತಿದೆ.
Read Full Story
06:00 PM (IST) Jun 14

Karnataka News Live 14 June 2025 ಏರ್‌ ಇಂಡಿಯಾ ವಿಮಾನ ಅಪಘಾತ, ದುರಂತದ 'ವೈರಲ್‌' ವಿಡಿಯೋ ಮಾಡಿದ್ದ 17 ವರ್ಷ ಆರ್ಯನ್‌ ಅಸಾರಿ ಹೇಳಿದ್ದೇನು?

ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದ ಭೀಕರ ದೃಶ್ಯವನ್ನು 17 ವರ್ಷದ ಆರ್ಯನ್ ಅಸಾರಿ ಸೆರೆಹಿಡಿದಿದ್ದಾರೆ. ವಿಮಾನವು ತನ್ನ ಮನೆಯ ಮೇಲೆ ಕಡಿಮೆ ಎತ್ತರದಲ್ಲಿ ಹಾರುತ್ತಿರುವುದನ್ನು ಗಮನಿಸಿದ ಅವರು, ಅದರ ವಿಡಿಯೋವನ್ನು ಚಿತ್ರೀಕರಿಸಿದರು.

Read Full Story
05:57 PM (IST) Jun 14

Karnataka News Live 14 June 2025 ಹೊಸ ಡಬಲ್ ಡೆಕ್ಕರ್ ಫ್ಲೈಓವರ್ ನಟ್-ಬೋಲ್ಟ್ ಬಿಚ್ಚಿದ ಮಕ್ಕಳು! ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು!

ಹೊಸ ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿ ಮಕ್ಕಳು ನಟ್ ಮತ್ತು ಬೋಲ್ಟ್‌ಗಳನ್ನು ತೆಗೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಕೃತ್ಯವು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.

Read Full Story