- Home
- News
- State
- Karnataka News Live: ಸಿಎಂ ಸಾಹೆಬ್ರೇ, ಸಿಎಂ ಸಾಹೆಬ್ರೇ ಎಂದು ಕೂಗಿ ಕೂಗಿ ಏನ್ ಹೇಳಿದ್ರು ನೋಡಿ ಈ ಯುವತಿ
Karnataka News Live: ಸಿಎಂ ಸಾಹೆಬ್ರೇ, ಸಿಎಂ ಸಾಹೆಬ್ರೇ ಎಂದು ಕೂಗಿ ಕೂಗಿ ಏನ್ ಹೇಳಿದ್ರು ನೋಡಿ ಈ ಯುವತಿ

ದಾವಣಗೆರೆ: ವಚನಾನಂದ ಸ್ವಾಮೀಜಿಗೆ ನೈತಿಕತೆ ಇದ್ದರೆ ತಕ್ಷಣವೇ ಹರಿಹರ ಪಂಚಮಸಾಲಿ ಮಠವನ್ನು ತೊರೆಯಲಿ. ಇಲ್ಲದಿದ್ದರೆ ಮಠದಿಂದ ಹೇಗೆ ಖಾಲಿ ಮಾಡಿಸಬೇಕೆಂಬುದೂ ನಮಗೆ ಗೊತ್ತಿದೆ. ಕಾದು ನೋಡಿ ಎಂದು ಪೀಠದ ಟ್ರಸ್ಟಿ ಚಂದ್ರಶೇಖರ ಪೂಜಾರ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಪೀಠಾಧ್ಯಕ್ಷರಾಗಿದ್ದ ವಚನಾನಂದ ಶ್ರೀಗಳ ಆಚಾರ, ವಿಚಾರ, ನಡೆ, ನುಡಿಗಳನ್ನು ತಿದ್ದಿಕೊಳ್ಳಲು ಹಲವಾರು ಸಲ ಹೇಳಿದ್ದರೂ ಕಿವಿಗೊಡದ ಹಿನ್ನೆಲೆಯಲ್ಲಿ ಪೀಠದಿಂದ ಉಚ್ಚಾಟಿಸಿದ್ದು, ತಕ್ಷಣವೇ ಮಠದಿಂದ ಜಾಗ ಖಾಲಿ ಮಾಡಬೇಕು ಎಂದರು.
Karnataka News Live 15 April 2026ಸಿಎಂ ಸಾಹೆಬ್ರೇ, ಸಿಎಂ ಸಾಹೆಬ್ರೇ ಎಂದು ಕೂಗಿ ಕೂಗಿ ಏನ್ ಹೇಳಿದ್ರು ನೋಡಿ ಈ ಯುವತಿ
Karnataka News Live 15 April 2026ಚಿನ್ನಸ್ವಾಮಿಯಲ್ಲಿ RCB 'ರಾಜ' ದರ್ಬಾರ್ - ಲಕ್ನೋ ವಿರುದ್ಧ ಬೆಂಗಳೂರಿಗೆ ಭರ್ಜರಿ ಜಯ; ಅಂಕಪಟ್ಟಿಯಲ್ಲಿ ಅಗ್ರಸ್ಥಾನ!
ತವರಿನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಬ್ಯಾಟರ್‌ಗಳ ಸ್ಫೋಟಕ ಆಟದಿಂದ ಸುಲಭವಾಗಿ ಗುರಿ ತಲುಪಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
Karnataka News Live 15 April 2026ಕುರ್ಚಿ ಕದನದ ಕಾಂಗ್ರೆಸ್ ಸರ್ಕಾರ ಶೀಘ್ರವೇ ಪತನ - ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ
ಸಿಎಂ ಸಿದ್ದರಾಮಯ್ಯ ಹಾಗೂ ದೆಹಲಿ ಹೈಕಮಾಂಡ್ ಬಳಿ ತೀವ್ರ ಲಾಬಿ ಮಾಡುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇನ್ನೆಷ್ಟು ದಿನ ಇರುತ್ತದೋ ಗೊತ್ತಿಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
Karnataka News Live 15 April 2026ಗದಗ - ಮುಂಡರಗಿಯ ಉದ್ಯಾನದಲ್ಲಿ ಹಸಿರೇ ಇಲ್ಲ! ಹೀಗೆ ಮಾಡಿದ್ರೆ ಕಳೆದುಹೋದ ಆ ವೈಭವ ಮರಳೋದು ಹೇಗೆ?
Karnataka News Live 15 April 2026ಉಡುಪಿ - ಮೊಬೈಲ್ ಚಾಟಿಂಗ್ ಪ್ರಶ್ನಿಸಿದ ಪತ್ನಿಗೆ ದೈಹಿಕ ಹಲ್ಲೆ, ಜೀವ ಬೆದರಿಕೆ ಹಾಕಿದ ಪತಿ, ಠಾಣೆ ಮೆಟ್ಟಲೇರಿದ ಹೆಂಡತಿ
Karnataka News Live 15 April 2026ಕೈ-ಕಮಲ-ದಳಕ್ಕೆ ಒಲಿದ 'ಪರಪ್ಪನ ಅಗ್ರಹಾರ' - ರಕ್ಷಕರಿಗೇ ಸುತ್ತಿಕೊಂಡ ಕಾನೂನು ಕುಣಿಕೆ!
ಕರ್ನಾಟಕದ ಮೂರು ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್, ಮತ್ತು ಬಿಜೆಪಿಯ ಪ್ರಭಾವಿ ನಾಯಕರು ಗಂಭೀರ ಅಪರಾಧ ಪ್ರಕರಣಗಳಲ್ಲಿ ಸಿಲುಕಿದ್ದಾರೆ. ಅ*ತ್ಯಾಚಾ*ರ, ಕೊಲೆ ಸಂಚಿನಂತಹ ಆರೋಪಗಳಿಂದಾಗಿ ಪ್ರಜ್ವಲ್ ರೇವಣ್ಣ, ವಿನಯ್ ಕುಲಕರ್ಣಿ, ಮತ್ತು ಬೈರತಿ ಬಸವರಾಜ್‌ರಂತಹ ನಾಯಕರು ವಿಧಾನಸೌಧದ ಬದಲು ಜೈಲು ಸೇರುವಂತಾಗಿದೆ.
Karnataka News Live 15 April 2026ಹಿರಿಯರ ಜೊತೆ 5 ಹೊಸಬರಿಗೂ ಮಂತ್ರಿ ಮಾಡ್ಲಿ - ಶಾಸಕ ಬಸವರಾಜ ವಿ. ಶಿವಗಂಗಾ
ಸಚಿವ ಸ್ಥಾನ ಕೊಡುವಂತೆ ಕೇಳಿದರೆ ತಾನೇ ಪಕ್ಷವು ಕೊಡುವುದು. ಹಾಗಾಗಿಯೇ ನಮ್ಮ ಹಿರಿಯ ಶಾಸಕರು ದೆಹಲಿಗೆ ತೆರಳಿದ್ದಾರೆ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ವಿ. ಶಿವಗಂಗಾ ಶಾಸಕರ ದಿಲ್ಲಿ ಪ್ರವಾಸವನ್ನು ಸಮರ್ಥಿಸಿಕೊಂಡಿದ್ದಾರೆ.
Karnataka News Live 15 April 2026ಯೋಗೇಶ್ ಗೌಡ ಹತ್ಯೆಯಲ್ಲಿ ವಿನಯ್ ಕುಲಕರ್ಣಿ ಕೊಲೆಗಾರ, ಸುಳ್ಳು ಸಾಕ್ಷಿ ನೀಡಿದವರ ವಿರುದ್ಧ ಕ್ರಮಕ್ಕೆ ಕೋರ್ಟ್ ಸೂಚನೆ
Karnataka News Live 15 April 2026ಕೇಸ್ ದಾಖಲಾದ ಬಳಿಕ ಜರ್ರನೆ ಜ್ವರದಂತೆ ಮೇಲಕ್ಕೇರಿದ 'ಬಿಗ್ ಬಾಸ್' ವಿಷ್ಣುಪ್ರಿಯಾ ಅಕೌಂಟ್ ಬ್ಯಾಲೆನ್ಸ್!
ಕೇವಲ ಕೆಲವೇ ದಿನಗಳಲ್ಲಿ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ 5,600 ದಾಟಿದೆ! ಈಗ ಅವರ ಮಾಸಿಕ ಆದಾಯ ಬರೋಬ್ಬರಿ 21 ಲಕ್ಷ ರೂಪಾಯಿಗಳಿಗೂ ಅಧಿಕವಾಗಿದೆ. ಅಂದರೆ ಒಂದೇ ಒಂದು ವಿವಾದದಿಂದ ಅವರ ತಿಂಗಳ ಆದಾಯದಲ್ಲಿ 14 ಲಕ್ಷ ರೂಪಾಯಿ ಲಾಭವಾಗಿದೆ! ಇದನ್ನು ನೋಡಿ ನೆಟ್ಟಿಗರು ಏನಂತಿದಾರೆ ನೋಡಿ..
Karnataka News Live 15 April 2026ಪರಪ್ಪನ ಅಗ್ರಹಾರ ಜೈಲಿಗೆ ವಿನಯ್ ಕುಲಕರ್ಣಿ, ಆರ್ಡರ್ ಶೀಟ್‌ಗೆ ಕಾಯುತ್ತಿರುವ ಪೊಲೀಸ್
ಪರಪ್ಪನ ಅಗ್ರಹಾರ ಜೈಲಿಗೆ ವಿನಯ್ ಕುಲಕರ್ಣಿ, ಆರ್ಡರ್ ಶೀಟ್‌ಗೆ ಕಾಯುತ್ತಿರುವ ಪೊಲೀಸ್, ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ದೋಷಿ ಎಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ.
Karnataka News Live 15 April 2026ತೀರ್ಪು ಪ್ರಕಟವಾಗುತ್ತಿದ್ದಂತೆ ಮೂವರು ಮಕ್ಕಳ ಜೊತೆ ಕೋರ್ಟ್ ಹಾಲ್‌ನಲ್ಲೇ ಕಣ್ಣೀರಿಟ್ಟ ಶಾಸಕ ವಿನಯ್ ಕುಲಕರ್ಣಿ
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಧಾರವಾಡ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದ್ದು, 2 ವರ್ಷಕ್ಕಿಂತ ಅಧಿಕ ಶಿಕ್ಷೆಯಾದರೆ ಅವರ ಶಾಸಕ ಸ್ಥಾನ ಅನರ್ಹಗೊಳ್ಳಲಿದೆ.
Karnataka News Live 15 April 2026ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ - ಬಸವರಾಜ ರಾಯರೆಡ್ಡಿ
ನಾಯಿ, ಬೆಕ್ಕುಗಳನ್ನು ತಮ್ಮ ಮಲಗುವ ಬೆಡ್ ಮೇಲೆ ಮಲಗಿಸಿಕೊಳ್ಳುತ್ತಾರೆ. ಆದರೆ ಶೋಷಿತ ವರ್ಗದ ಜನರಿಗೆ ದೇವಸ್ಥಾನ, ಮನೆ ಪ್ರವೇಶ ಇಲ್ಲವೆಂಬುದು ನ್ಯಾಯವೇ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರಶ್ನಿಸಿದರು.
Karnataka News Live 15 April 2026ವಿನಯ್ ಕುಲಕರ್ಣಿ ಕೊಲೆಗಾರ - 40 ಎಕರೆ ಜಮೀನು ತಕರಾರು, ರಾಜಕೀಯ ದ್ವೇಷಕ್ಕೆ ಕುಟುಂಬದ ಆಧಾರವನ್ನೇ ಮುಗಿಸಿದ ಕಥೆ!
ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿಯನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ರಾಜಕೀಯ ಮತ್ತು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದ ಈ ಕೊಲೆಯ ತನಿಖೆಯನ್ನು ಸಿಬಿಐ ನಡೆಸಿತ್ತು, ಇದೀಗ ದಶಕದ ಬಳಿಕ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.
Karnataka News Live 15 April 2026ಒಳ ಮೀಸಲಾತಿ ವಿಚಾರದಲ್ಲಿ ಸಮಾಜ ಒಡೆಯುವ ಯತ್ನ - ಸಚಿವ ಸತೀಶ್ ಜಾರಕಿಹೊಳಿ
ಒಳ ಮೀಸಲಾತಿ ವಿಚಾರದಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳು ಹಿಂದಿನಿಂದಲೂ ನಡೆಯುತ್ತಿವೆ. ಯಾವುದೋ ಕಾರಣವೊಂದನ್ನು ಮುಂದಿಟ್ಟು ಸಮಾಜದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸುವುದು ನಡೆಯುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
Karnataka News Live 15 April 2026ಸಾಮಾಜಿಕ ನ್ಯಾಯದ ರಥವನ್ನು ಹಿಂದಕ್ಕೆ ಎಳೆಯಬಾರದು - ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಸಮಾಜದಲ್ಲಿನ ಜಡತ್ವ ಬಲಪಡಿಸುವ ಕೆಲಸದಲ್ಲಿ ತೊಡಗಿವೆ. ಹೀಗಾಗಿ ನಾವು ಸಂವಿಧಾನದಿಂದ ಸಾಮಾಜಿಕ ನ್ಯಾಯದ ರಥವನ್ನು ಮುಂದಕ್ಕೆ ಕೊಂಡೊಯ್ಯಬೇಕೆ ಹೊರತು ಹಿಂದಕ್ಕೆ ಎಳೆಯಬಾರದು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Karnataka News Live 15 April 2026ಯೋಗೇಶ್ ಗೌಡ ಹತ್ಯೆ ಪ್ರಕರಣ - ಶಾಸಕ ವಿನಯ್ ಕುಲಕರ್ಣಿ ದೋಷಿ, ಕೋರ್ಟ್ ಬಿಗ್ ತೀರ್ಪು
Karnataka News Live 15 April 2026ಪ್ರೀತಿಗಾಗಿ ಪ್ರಾಣ ಬಿಟ್ಟ ಸತ್ಯವ್ವ - 12ನೇ ವಯಸ್ಸಿನಲ್ಲೇ ಮದುವೆ ಫಿಕ್ಸ್ ಮಾಡಿ ಮಗಳ ಬದುಕನ್ನೇ ಕಸಿದುಕೊಂಡ ಪೋಷಕರು
ಆಕೆಗೆ ಏನು ಅರಿಯದ ವಯಸ್ಸಲ್ಲಿ ಕುಟುಂಬದವರೇ ಮದ್ವೆ ನಿಶ್ಚಯ ಮಾಡಿದ್ದರು. ಆದರೆ ಹರೆಯಕ್ಕೆ ಕಾಲಿರಿಸಿದ ಆಕೆಗೆ ಬೇರೊಬ್ಬನ ಜತೆ ಪ್ರೀತಿಯಾಗಿತ್ತು. ಪ್ರೀತಿ ತಿಳಿಯುತ್ತಿದ್ದಂತೆ ಮದುವೆ ಮಾಡಿದ್ರು ಪೋಷಕರು ಆದರೆ ಪ್ರೀತಿಸಿದವನೊಂದಿಗೆ ಅಲ್ಲ. ಹೀಗಾಗಿ ತನ್ನ ಗಂಡನ ಬಿಟ್ಟು ಓಡಿ ಹೋದ ಆಕೆಯ ಕತೆ ಮುಂದೇನಾಯ್ತು…
Karnataka News Live 15 April 2026ತಿರುಮಲದಲ್ಲಿ ಖ್ಯಾತ ಖಳನಟ - ಪತ್ನಿ, ಮಗನ ಜೊತೆ ತಿಮ್ಮಪ್ಪನ ದರ್ಶನ ಪಡೆದ ಸೋನು ಸೂದ್
ನಟ ಸೋನು ಸೂದ್ ತಮ್ಮ ಪತ್ನಿ ಸೋನಾಲಿ ಮತ್ತು ಮಗ ಇಶಾಂತ್ ಜೊತೆ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಮುಂಜಾನೆಯ ತೋಮಾಲ ಸೇವೆಯಲ್ಲಿ ಕುಟುಂಬ ಸಮೇತ ಭಾಗವಹಿಸಿದ್ದರು.
Karnataka News Live 15 April 2026ಕೆಪಿಸಿಸಿ ಶಿಸ್ತು ಉಲ್ಲಂಘನೆ - ಸಚಿವ ಜಮೀರ್ ಆಪ್ತೆಗೆ ಗೇಟ್‌ಪಾಸ್, ಉಪಾಧ್ಯಕ್ಷೆ ಸ್ಥಾನದಿಂದ ಉಚ್ಚಾಟನೆ!
Karnataka News Live 15 April 2026ಮಹಿಳಾ ಮೀಸಲಾತಿಯಿಂದ ರಾಜಕೀಯ ಚಿತ್ರಣವೇ ಬದಲು - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಮಹಿಳಾ ಮೀಸಲಾತಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಲ್ಲಿ ರಾಜಕೀಯ ಚಿತ್ರಣವೇ ಬದಲಾಗಲಿದೆ. ಕ್ಷೇತ್ರಗಳ ಮರು ವಿಂಗಡಣೆಯಾಗಲಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.