ಪುಟ್ಟಪರ್ತಿಯಲ್ಲಿ ನಡೆದ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಭಾಗವಹಿಸಿದ್ದರು. ಪ್ರಧಾನಿ ಮೋದಿಯವರ ಕಾಲಿಗೆ ನಮಸ್ಕರಿಸಿದ ನಂತರ, ಅವರು ಮಾನವೀಯತೆ ಮತ್ತು ಪ್ರೀತಿಯೇ ನಿಜವಾದ ಧರ್ಮ ಎಂದು ಸಾರುವ ಭಾಷಣ ಮಾಡಿದರು.
- Home
- News
- State
- Karnataka Latest News Live: ನರೇಂದ್ರ ಮೋದಿ ಕಾಲಿಗೆ ಬಿದ್ದು ನಮಸ್ಕರಿಸಿದ ಐಶ್ವರ್ಯಾ ರೈ, ಪ್ರೀತಿ ಹಾಗೂ ಧರ್ಮದ ಬಗ್ಗೆ ಮಾತು..
Karnataka Latest News Live: ನರೇಂದ್ರ ಮೋದಿ ಕಾಲಿಗೆ ಬಿದ್ದು ನಮಸ್ಕರಿಸಿದ ಐಶ್ವರ್ಯಾ ರೈ, ಪ್ರೀತಿ ಹಾಗೂ ಧರ್ಮದ ಬಗ್ಗೆ ಮಾತು..

ಚಿತ್ರದುರ್ಗ: ಅಪ್ರಾಪ್ತ ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಚಿತ್ರದುರ್ಗ ಮುರುಘಾಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾಶರಣರು ಎದುರಿಸುತ್ತಿರುವ ಫೋಕ್ಸೋ ಪ್ರಕರಣದ ವಾದ ಎರಡೂ ಕಡೆ ಮುಕ್ತಾಯವಾಗಿದ್ದು, ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ನ.26 ರಂದು ತೀರ್ಪು ನೀಡಲು ದಿನಾಂಕ ಕಾಯ್ದಿರಿಸಿದೆ. ಶ್ರೀಗಳ ಪರ ಖ್ಯಾತ ವಕೀಲ ಸಿ.ವಿ.ನಾಗೇಶ್, ಪ್ರಾಸಿಕ್ಯೂಷನ್ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಜಗದೀಶ್ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಸಿ.ಜಿ.ಹಡಪದ ತೀರ್ಪು ಪ್ರಕಟಕ್ಕೆ ನ.26ರ ದಿನಾಂಕವನ್ನು ನಿಗದಿಪಡಿಸಿದ್ದಾರೆ.
Karnataka News Live 19 November 2025ನರೇಂದ್ರ ಮೋದಿ ಕಾಲಿಗೆ ಬಿದ್ದು ನಮಸ್ಕರಿಸಿದ ಐಶ್ವರ್ಯಾ ರೈ, ಪ್ರೀತಿ ಹಾಗೂ ಧರ್ಮದ ಬಗ್ಗೆ ಮಾತು..
Karnataka News Live 19 November 2025Lakshmi Nivasa- ವಿಶ್ವ ಹಾಕಿದ ಹೊಗೆ - ಉಸಿರುಗಟ್ಟುವ ಪ್ರೀತಿಯ ಬಲೆಗೆ ಮತ್ತೆ ಸಿಕ್ತಾಳಾ ಚಿನ್ನುಮರಿ?
ಚಿನ್ನುಮರಿಯನ್ನು ಪಡೆಯಲು ಪಣತೊಟ್ಟ ಜಯಂತ್, ವೇಷ ಮರೆಸಿಕೊಂಡು ಜಾಹ್ನವಿ ಮತ್ತು ವಿಶ್ವ ಇರುವ ಸಿನಿಮಾ ಹಾಲ್‌ಗೆ ಬರುತ್ತಾನೆ. ಜಯಂತ್‌ನಿಂದ ಜಾಹ್ನವಿಯನ್ನು ತಪ್ಪಿಸಲು ವಿಶ್ವ ಹೊಗೆಯ ಪ್ಲ್ಯಾನ್ ಮಾಡಿದರೂ, ಕೊನೆಗೆ ಜಯಂತ್ ಆಕೆಯನ್ನು ಹಿಡಿದಂತೆ ತೋರಿಸಲಾಗಿದೆ. ಇದು ಕನಸೋ ನನಸೋ ಎಂಬುದು ಮುಂದೆ ತಿಳಿಯಲಿದೆ.
Karnataka News Live 19 November 2025ಒಮ್ಮೆ ವಿಷಕಾರಿ ಸಂಬಂಧದಲ್ಲಿ ಸಿಲುಕಿದ್ದೆ.. ಮಾಜಿ ಪ್ರೇಮಿ ಬಗ್ಗೆ ರಶ್ಮಿಕಾ ಮಂದಣ್ಣ ಹೀಗಾ ಹೇಳೋದು!
ತಾನು ಒಮ್ಮೆ ವಿಷಕಾರಿ ಸಂಬಂಧದಲ್ಲಿ ಸಿಲುಕಿದ್ದೆ, ಅಲ್ಲಿ ನನಗೆ ಬೇರೆ ಆಯ್ಕೆ ಇರಲಿಲ್ಲ ಎಂದು ರಶ್ಮಿಕಾ ಮಂದಣ್ಣ ಬಹಿರಂಗಪಡಿಸಿದ್ದಾರೆ. ಆದರೆ ಅದರಿಂದ ಹೊರಬಂದು ಈಗ ಉತ್ತಮ ಪ್ರೀತಿಯ ಸಂಬಂಧದಲ್ಲಿದ್ದಾರೆ. ಅವರ ಈಗಿನ ಸಂಗಾತಿ ತುಂಬಾ ಸಪೋರ್ಟಿವ್ ಆಗಿದ್ದಾರೆ.
Karnataka News Live 19 November 2025ಅಂದು ರೌಡಿ ಅಣ್ಣ-ತಂಗಿ; ಇಂದು Amruthadhaare ಮುದ್ದಾದ ಜೋಡಿ! ಗೌತಮ್-ಭೂಮಿಕಾ ರೋಚಕ ವಿಡಿಯೋ
'ಅಮೃತಧಾರೆ' ಧಾರಾವಾಹಿಯ ಗೌತಮ್ ಮತ್ತು ಭೂಮಿಕಾ ಜೋಡಿ ವೀಕ್ಷಕರ ಮನಗೆದ್ದಿದೆ. ಆದರೆ, ರಾಜೇಶ್ ನಟರಂಗ ಮತ್ತು ಛಾಯಾ ಸಿಂಗ್ ಅವರು 20 ವರ್ಷಗಳ ಹಿಂದೆ 'ರೌಡಿ ಅಳಿಯ' ಚಿತ್ರದಲ್ಲಿ ರೌಡಿ ಅಣ್ಣ-ತಂಗಿಯಾಗಿ ಒಟ್ಟಿಗೆ ನಟಿಸಿದ್ದರು ಎಂಬುದು ಈಗ ವೈರಲ್ ಆಗಿದೆ.
Karnataka News Live 19 November 2025ಸಚಿವ ಸಂಪುಟ ವಿಸ್ತರಣೆ ಕುರಿತು ನನಗೆ ಏನೂ ಗೊತ್ತಿಲ್ಲ - ಸಚಿವ ರಾಮಲಿಂಗಾರೆಡ್ಡಿ
ಸಚಿವ ಸಂಪುಟ ವಿಸ್ತರಣೆ ಕುರಿತು ನನಗೆ ಏನೂ ಗೊತ್ತಿಲ್ಲ. ನಾನು ಸಹ ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ನೋಡಿದ್ದೇನೆ. ನವೆಂಬರ್‌ನಲ್ಲಿ ಕ್ರಾಂತಿಯೂ ಇಲ್ಲ ಏನೂ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
Karnataka News Live 19 November 2025Amruthadhaareಯಲ್ಲಿ ಆಪರೇಷನ್ ಅಪ್ಪ-ಅಮ್ಮ! ರೋಚಕ ಸಂಚಿಕೆಯಲ್ಲಿ ಊಹಿಸದ ಮಹಾ ತಿರುವು
ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ತನ್ನ ಅಪ್ಪ ಎಂದು ತಿಳಿದ ನಂತರ ಮಿಂಚು ಮತ್ತು ಆಕಾಶ್ 'ಆಪರೇಷನ್ ಅಪ್ಪ-ಅಮ್ಮ' ಶುರುಮಾಡಿದ್ದಾರೆ. ಇಬ್ಬರೂ ಸೇರಿ ಮಾಡಿದ ಪ್ಲ್ಯಾನ್‌ನಿಂದಾಗಿ ಗೌತಮ್ ಮತ್ತು ಭೂಮಿಕಾ ಮತ್ತೆ ಒಂದಾಗಿದ್ದು, ಇಡೀ ಕುಟುಂಬ ಸಂತಸದಲ್ಲಿದೆ.
Karnataka News Live 19 November 2025ರಾತ್ರಿ ಹೊತ್ತು ತಡವಾಗಿ ಊಟ ಮಾಡಿದ್ರೆ ಏನಾಗುತ್ತೆ ಗೊತ್ತಾ? ಆರೋಗ್ಯ ತಜ್ಞರು ಹೇಳೋದೇನು?
ಆರೋಗ್ಯವಾಗಿರಲು ಆಹಾರ ಸೇವಿಸುವುದು ಎಷ್ಟು ಮುಖ್ಯವೋ, ಸರಿಯಾದ ಸಮಯಕ್ಕೆ ತಿನ್ನುವುದು ಕೂಡ ಅಷ್ಟೇ ಮುಖ್ಯ. ನಮ್ಮಲ್ಲಿ ಹಲವರು ನಾನಾ ಕಾರಣಗಳಿಂದ ರಾತ್ರಿ ತಡವಾಗಿ ಊಟ ಮಾಡುತ್ತಾರೆ. ಆದರೆ ರಾತ್ರಿ ತಡವಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ಅದರಿಂದ ದೇಹದಲ್ಲಿ ಯಾವೆಲ್ಲಾ ಬದಲಾವಣೆಗಳಾಗುತ್ತವೆ ಗೊತ್ತಾ?
Karnataka News Live 19 November 2025Karna ಸೀರಿಯಲ್‌ನಲ್ಲಿ ಮುಂದೇನಾಗುತ್ತದೆ ಎಂಬ ಗುಟ್ಟು ರಟ್ಟು ಮಾಡಿ ವೀಕ್ಷಕರಿಗೆ ಶಾಕ್ ಕೊಟ್ಟ Annayya ಪಾರು!
Karnataka News Live 19 November 2025ಪ್ರತ್ಯೇಕ ಕೇಡರ್ ಸೃಷ್ಟಿಸಿ ಹದಿನೈದು ವನ್ಯಜೀವಿ ವೈದ್ಯರ ನೇಮಕ - ಸಚಿವ ಈಶ್ವರ್ ಖಂಡ್ರೆ
ಮೃಗಾಲಯ ಮತ್ತು ಆನೆ ಶಿಬಿರಗಳಲ್ಲಿ ವನ್ಯಜೀವಿ ವೈದ್ಯರ ಕೊರತೆ ನೀಗಿಸಲು, ಪ್ರತ್ಯೇಕ ಕೇಡರ್ ಸೃಷ್ಟಿಸಿ 15 ವನ್ಯಜೀವಿ ವೈದ್ಯರ ನೇಮಕ ಮಾಡಿಕೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
Karnataka News Live 19 November 2025ಕೇಂದ್ರದಿಂದ ಬಂಪರ್ ಸೊಸೈಟಿಗಳ ಪಡಿತರ ಕಮಿಷನ್ ಪರಿಷ್ಕರಣೆ - ಗೋಧಿ, ಜೋಳ, ರಾಗಿ ಕಮಿಷನ್ ಸಮಾಂತರ
ಕೇಂದ್ರವು ಪಡಿತರ ಧಾನ್ಯಗಳಾದ ರಾಗಿ, ಜೋಳ, ಮತ್ತು ಮೆಕ್ಕೆಜೋಳದ ಕಮಿಷನ್ ಅನ್ನು ಪ್ರತಿ ಕ್ವಿಂಟಲ್‌ಗೆ ₹27ಕ್ಕೆ ಹೆಚ್ಚಿಸಿ, ಸೊಸೈಟಿಗಳ ಬಲವರ್ಧನೆಗೆ ಕ್ರಮ ಕೈಗೊಂಡಿದೆ. ಪ್ರಧಾನಿ ಮೋದಿಯವರ ಈ ನಿರ್ಧಾರವು ರೈತರಿಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ಶ್ರೀ ಅನ್ನ ಯೋಜನೆಗೆ ಮತ್ತಷ್ಟು ಉತ್ತೇಜನ ನೀಡಲಿದೆ.
Karnataka News Live 19 November 2025ಸುಮಾ ಕನಕಾಲ ನಿವೃತ್ತಿ ಯಾವಾಗ ಗೊತ್ತಾ? ಸ್ಪಷ್ಟನೆ ಜೊತೆ ಕೌಂಟರ್ ಕೊಟ್ಟ ಸ್ಟಾರ್ ಆ್ಯಂಕರ್!
ಸುಮಾರು 30 ವರ್ಷಗಳಿಂದ ತೆಲುಗು ಪ್ರೇಕ್ಷಕರನ್ನು ತನ್ನ ಆ್ಯಂಕರಿಂಗ್‌ನಿಂದ ರಂಜಿಸುತ್ತಿದ್ದಾರೆ ಸುಮಾ ಕನಕಾಲ. ನಿರೂಪಣೆ ಕ್ಷೇತ್ರದಲ್ಲಿ ಇಷ್ಟು ದಿನ ಉಳಿದುಕೊಂಡ ಸ್ಟಾರ್ ಬೇರೊಬ್ಬರಿಲ್ಲ. ಹಾಗಾದರೆ ಸುಮಾ ಕನಕಾಲ ನಿವೃತ್ತಿ ಯಾವಾಗ?
Karnataka News Live 19 November 2025ಬಂಧನ ಭೀತಿಯಲ್ಲಿ ಕಾಮಿಡಿ ಕಿಲಾಡಿಗಳು ನಯನಾ, ಆಗಿದ್ದೇನು?
Comedy Kiladigalu Nayana: ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯತೆ ಪಡೆದಿದ್ದ ನಯನಾ ಬಂಧನ ಭೀತಿ ಎದುರಿಸಿದ್ದಾರೆ. ಅವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದೆ.
Karnataka News Live 19 November 2025ಕಸದ ಯಂತ್ರ ಬಾಡಿಗೆ ನೆಪದಲ್ಲಿ ಗೋಲ್ ಮಾಲ್ - ನಿಖಿಲ್ ಕುಮಾರಸ್ವಾಮಿ ಆರೋಪ
ಸಂಪುಟ ಸಭೆಯಲ್ಲಿ 46 ಕಸ ಗುಡಿಸುವ ಯಂತ್ರಗಳನ್ನು 7 ವರ್ಷದವರೆಗೆ ಬಾಡಿಗೆ ಆಧಾರದ ಮೇಲೆ ಪಡೆಯಲು ಒಪ್ಪಿಗೆ ನೀಡುವ ಮುಖಾಂತರ ಕಮಿಷನ್ ಗೋಲ್ ಮಾಲ್‌ಗೆ ಅವಕಾಶ ನೀಡಿದೆ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
Karnataka News Live 19 November 2025ನರಕಾಸುರ ಮೋದಿಯನ್ನು ಕೊಂದರೆ ಮಾತ್ರವೇ ತಮಿಳುನಾಡು ಉದ್ದಾರ ಆಗಲಿದೆ ಎಂದ ಡಿಎಂಕೆ ನಾಯಕ
Karnataka News Live 19 November 2025ಬೆಳಗಾವಿ ಮೃಗಾಲಯದಲ್ಲಿ ಕೃಷ್ಣಮೃಗಗಳ ಸರಣಿ ಸಾವಿನ ರಹಸ್ಯ ಬಯಲು, ಕೊನೆಗೂ ವರದಿಯಲ್ಲಿ ಸಿಕ್ತು ಉತ್ತರ
ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣ ಮೃಗಗಳ ಸಾವಿಗೆ 'ಹಿಮೋರಿಜಿಕ್ ಸೆಪ್ಟಿಸೀಮಿಯಾ' ಎಂಬ ಬ್ಯಾಕ್ಟೀರಿಯಾ ಸೋಂಕು ಕಾರಣವೆಂದು ಮರಣೋತ್ತರ ಪರೀಕ್ಷಾ ವರದಿ ದೃಢಪಡಿಸಿದೆ. ಗಳಲೆ ರೋಗದಿಂದಾಗಿ ಈ ಸಾವು ಸಂಭವಿಸಿದ್ದು, ಉಳಿದ ಪ್ರಾಣಿಗಳ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ.
Karnataka News Live 19 November 2025ಯಾವುದೇ ಸಂದರ್ಭ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧ - ಬಿ.ವೈ.ವಿಜಯೇಂದ್ರ
ರಾಜ್ಯದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆ ನಡೆದರೂ ಎದುರಿಸಲು ಬಿಜೆಪಿ ಸಿದ್ಧವಾಗಿದೆ. ಪಕ್ಷದೊಳಗಿನ ಕೆಲ ಗೊಂದಲಗಳು ತಿಳಿದಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
Karnataka News Live 19 November 2025ರೆಡಿಯಾಗಿ.. ಡಿಸೆಂಬರ್ 5ರಿಂದ 'ಲಾಕ್‌ಡೌನ್'.. ಅಧಿಕೃತ ಘೋಷಣೆ ಬಂದಿದೆ - ಏನಿದು ಹೊಸ ಸುದ್ದಿ!
ಲಾಕ್‌ಡೌನ್: ಡಿಸೆಂಬರ್ 5 ರಿಂದ ಲಾಕ್‌ಡೌನ್ ಬರಲಿದೆ ಎಂದು ಇಂದು ಬೆಳಗ್ಗೆ ಪ್ರಕಟಣೆ ಹೊರಬಿದ್ದಿದೆ. ಇದಕ್ಕೆ ಸಂಬಂಧಿಸಿದ ಸಂಪೂರ್ಣ ಅಪ್‌ಡೇಟ್ ಅನ್ನು ಈ ಲೇಖನದಲ್ಲಿ ವಿವರವಾಗಿ ನೋಡೋಣ.
Karnataka News Live 19 November 2025ಕಳ್ಳರಿಗೆ ಪೊಲೀಸರ ಭಯವಿಲ್ಲ, ಎಟಿಎಂ ದರೋಡೆ ಕೇಸ್‌ಗಳಲ್ಲಿ ಬಿಹಾರವನ್ನು ಮೀರಿಸಿದ ಕರ್ನಾಟಕ!
ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂಪಾಯಿಗಳ ಬೃಹತ್ ದರೋಡೆಯು ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಆತಂಕ ಮೂಡಿಸಿದೆ. ಈ ಘಟನೆಯಲ್ಲದೆ, ಬೀದರ್, ಮಂಗಳೂರು, ಕಲಬುರಗಿ, ಮತ್ತು ವಿಜಯಪುರ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದ ದರೋಡೆಗಳು ಇಲ್ಲಿವೆ.
Karnataka News Live 19 November 2025ಬೆಂಗಳೂರು ಬೆಚ್ಚಿಬೀಳಿಸಿದ 7 ನಿಮಿಷದಲ್ಲಿ 7 ಕೋಟಿ ರಾಬರಿ, ಮನೆಯೊಂದರ ಸಿಸಿಟಿವಿಯಲ್ಲಿ ಮಾತ್ರವೇ ಸೆರೆಯಾಯ್ತ!
ಬೆಂಗಳೂರಿನಲ್ಲಿ ಹಾಡಹಗಲೇ 7 ಕೋಟಿ 11 ಲಕ್ಷ ರೂಪಾಯಿ ದರೋಡೆ ನಡೆದಿದೆ. ಜಯನಗರದಿಂದ ಹೊರಟ CMS ವಾಹನವನ್ನು ಡೈರಿ ಸರ್ಕಲ್ ಫ್ಲೈಓವರ್ ಮೇಲೆ ಅಡ್ಡಗಟ್ಟಿ, ದುಷ್ಕರ್ಮಿಗಳು ಹಣ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ನಾಲ್ವರು ಸಿಬ್ಬಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು.
Karnataka News Live 19 November 2025ಅಭಿಮಾನಿ ಮೇಲೆ ಬಾಲಯ್ಯ ಗರಂ.. ಅವನು ನನಗೆ ಕಾಣಿಸಬಾರದು ಅಂತ ಬೋಯಪಾಟಿಗೆ ವಾರ್ನಿಂಗ್!
ಬಾಲಕೃಷ್ಣ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ. ವೈಜಾಗ್ ವಿಮಾನ ನಿಲ್ದಾಣದಲ್ಲಿ ಅಭಿಮಾನಿಯೊಬ್ಬರ ಮೇಲೆ ಗರಂ ಆಗಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಗೆ, ನೀನು ಇಂದು ನನಗೆ ಕಾಣಿಸಿಕೊಳ್ಳಬಾರದು ಎಂದು ಗದರಿದ್ದಾರೆ.