ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರು ಗುಪ್ತಚರ ವರದಿ ಸ್ವೀಕರಿಸಿದ ನಂತರ ಕಾಶ್ಮೀರ ಭೇಟಿ ರದ್ದುಗೊಳಿಸಿದ್ದರಿಂದ ಪ್ರವಾಸಿಗರ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಬಿಜೆಪಿ ಸರ್ಕಾರವು ರಾಜಕೀಯ ಲಾಭಕ್ಕಾಗಿ ಮಿಲಿಟರಿ ಕಾರ್ಯಾಚರಣೆಯನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ರೈಲ್ವೆ ಟಿಕೆಟ್‌ಗಳಲ್ಲಿ 'ಆಪರೇಷನ್ ಸಿಂಧೂರ್' ಸಂದೇಶವನ್ನು ಪ್ರಚಾರ ಮಾಡುತ್ತಿರುವುದನ್ನು ಟೀಕಿಸಿದ್ದಾರೆ.
ಪೂರ್ತಿ ಓದಿ- Home
- News
- State
- Karnataka News Live: 'ಆಪರೇಷನ್ ಸಿಂದೂರ್ ಸಣ್ಣ ಯುದ್ಧ ಅಷ್ಟೇ..' ಮತ್ತೊಮ್ಮೆ ವಿವಾದಿತ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ!
Karnataka News Live: 'ಆಪರೇಷನ್ ಸಿಂದೂರ್ ಸಣ್ಣ ಯುದ್ಧ ಅಷ್ಟೇ..' ಮತ್ತೊಮ್ಮೆ ವಿವಾದಿತ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ!

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮೇ 20ರ ಮಂಗಳವಾರ ಎರಡು ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಮಂಗಳವಾರ ಬೃಹತ್ ‘ಸಮರ್ಪಣೆ ಸಂಕಲ್ಪ ಸಮಾವೇಶ’ ಹಮ್ಮಿಕೊಳ್ಳಲಾಗಿದೆ.
'ಆಪರೇಷನ್ ಸಿಂದೂರ್ ಸಣ್ಣ ಯುದ್ಧ ಅಷ್ಟೇ..' ಮತ್ತೊಮ್ಮೆ ವಿವಾದಿತ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ!
'ಕಲಿಯುಗದ ಮಹದೇಶ್ವರ' ಖ್ಯಾತಿಯ ಸಾಲೂರು ಮಠದ ಗುರುಸ್ವಾಮೀಜಿ ಲಿಂಗೈಕ್ಯ
ಸಾಲೂರು ಬೃಹನ್ಮಠದ ಹಿರಿಯ ಪೀಠಾಧಿಪತಿ ಶ್ರೀ ಶ್ರೀ ಗುರುಸ್ವಾಮೀಜಿ ಇಂದು ಬೆಳಗಿನ ಜಾವ ಲಿಂಗೈಕ್ಯರಾಗಿದ್ದಾರೆ. ಶಿಕ್ಷಣ ಮತ್ತು ಸಮಾಜ ಸೇವೆಗೆ ತಮ್ಮ ಜೀವನವನ್ನು ಮೀಸಲಿಟ್ಟಿದ್ದ ಶ್ರೀಗಳು, ಬಡ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದರು ಮತ್ತು ಸುತ್ತಮುತ್ತಲ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿದರು.
ಪೂರ್ತಿ ಓದಿಅಚಾನಕ್ಕಾಗಿ ನುಗ್ಗಿದ ಕಾರು, ಅಪಾಯದಿಂದ ಪಾರಾದ ಗಾಯಕ ಸೋನು ನಿಗಮ್; ವಿಡಿಯೋ
ಕನ್ನಡಿಗರ ಕೆಣಕಿ ಪ್ರಕರಣ ಸೇರಿದಂತೆ ಭಾರಿ ವಿವಾದ ಸೃಷ್ಟಿಸಿದ್ದ ಗಾಯಕ ಸೋನು ನಿಗಮ್‌ಗೆ ಇದೀಗ ಪ್ರಕರಣದ ಹಿಂದೆ ಓಡಾಡುತ್ತಿದ್ದಾರೆ. ಇದರ ನಡುವೆ ಸೋನು ನಿಗಮ್ ನಡೆದು ಸಾಗುತ್ತಿದ್ದಂತೆ ಅಚಾನಕ್ಕಾಗಿ ಕಾರು ನುಗ್ಗಿದ ಘಟನೆ ಘಟನೆ ನಡೆದಿದೆ. ಕೂದಲೆಳೆ ಅಂತರದಿಂದ ಸೋನು ನಿಗಮ್ ಪಾರಾಗಿದ್ದಾರೆ.
ದೇಶದ್ರೋಹದ ಬೆನ್ನಲ್ಲೇ ರಾತ್ರೋರಾತ್ರಿ ಸೂಪರ್ಸ್ಟಾರ್: ಪಾಕಿ ಗೆಳತಿ ಜ್ಯೋತಿ ಇನ್ಸ್ಟಾ ಬ್ಲಾಕ್...
ಪಾಕಿಸ್ತಾನಿ ಕಾರ್ಯಕರ್ತರೊಂದಿಗೆ ಸೂಕ್ಷ್ಮ ಗುಪ್ತಚರ ಮಾಹಿತಿಯನ್ನು ಹಂಚಿಕೊಂಡು ಸದ್ಯ ಬಂಧನದಲ್ಲಿರುವ ಹರಿಯಾಣದ ಜ್ಯೋತಿ ಮಲ್ಹೋತ್ರಾಗೆ ಫಾಲೋವರ್ಸ್ ದಿಢೀರ್ ಹೆಚ್ಚಾಗಿದ್ದು, ಇನ್ಸ್ಟಾಗ್ರಾಮ್ ರದ್ದುಗೊಳಿಸಲಾಗಿದೆ. ಏನಿದು ವಿಷ್ಯ?
ಐಬಿಸಿ ತಿದ್ದುಪಡಿ ಮಸೂದೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡನೆ?
ಕೇಂದ್ರ ಸರ್ಕಾರವು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ಯಲ್ಲಿ ತಿದ್ದುಪಡಿಯನ್ನು ತರಲು ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಪೂರ್ತಿ ಓದಿಬೆಂಗಳೂರು ಕೆ.ಜಿ.ಹಳ್ಳಿ ಠಾಣೆ ಸಬ್ ಇನ್ಸ್‌ಪೆಕ್ಟರ್ ಹೆಂಡತಿ ಶಾಲಿನಿ ಆತ್ಮಹತ್ಯೆ
ಬೆಂಗಳೂರಿನಲ್ಲಿ ಪಿಎಸ್ಐ ನಾಗರಾಜ್ ಅವರ ಪತ್ನಿ ಶಾಲಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾಂಪತ್ಯ ಕಲಹವೇ ಕಾರಣ ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಾಲಿನಿ ಅವರು ಈ ಹಿಂದೆ ಪತಿ ನಾಗರಾಜ್ ವಿರುದ್ಧ ದೂರು ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಪೂರ್ತಿ ಓದಿಹೊಸ ಸಮುದ್ರಾಹಾರ ಸೀ ವೀಡ್: ಏನಿದರ ಪ್ರಯೋಜನ? ಹೇಗಿದೆ ಟೇಸ್ಟ್
ಸೀವೀಡ್ ಎಂಬ ಕಡಲಕಳೆಯಿಂದ ತಯಾರಿಸಿದ ಹೊಸ ಪಾನೀಯವಾದ ಸೀವೀಡ್ ಮಿಲ್ಕ್‌ನ ರುಚಿ ಹೇಗಿರುತ್ತೆ ಗೊತ್ತಾ? ಬ್ಲಾಗರ್‌ರ ವೀಡಿಯೋ ವೈರಲ್
ಪೂರ್ತಿ ಓದಿ7 ತಿಂಗಳಲ್ಲಿ 25 ಪುರುಷರನ್ನು ಮದುವೆಯಾದ 23 ವರ್ಷದ ಯುವತಿ; ಕೊನೆಗೆ ಪೊಲೀಸ್ ಪೇದೆ ಮದುವೆಯಾಗಿ ಸಿಕ್ಕಿಬಿದ್ದಳು!
23 ವರ್ಷದ ಯುವತಿಯೊಬ್ಬಳು 7 ತಿಂಗಳಲ್ಲಿ 25 ಪುರುಷರನ್ನು ಮದುವೆಯಾಗಿ ವಂಚಿಸಿದ್ದಾಳೆ. ಚಿನ್ನಾಭರಣ ಮತ್ತು ಹಣವನ್ನು ಕದ್ದು ಪರಾರಿಯಾಗುತ್ತಿದ್ದ ಈಕೆ ಕೊನೆಗೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ. 25ನೇ ಮದುವೆಯ ವರ ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದ.
ಪೂರ್ತಿ ಓದಿಜೈಲಿಗೆ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಬೆಕ್ಕಿನ ಬಂಧನ
ಕೊಸ್ಟಾರಿಕಾದಲ್ಲಿ ಜೈಲಿಗೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಬೆಕ್ಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಕ್ಕಿನ ದೇಹಕ್ಕೆ ಮಾದಕವಸ್ತುಗಳನ್ನು ಕಟ್ಟಲಾಗಿತ್ತು. ಕೋಸ್ಟರಿಕಾ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಬೆಕ್ಕುಗಳನ್ನು ಬಳಸುವುದಕ್ಕೆ ಕುಖ್ಯಾತವಾಗಿದೆ.
ಪೂರ್ತಿ ಓದಿತುಮಕೂರಿಗೆ ಮೆಟ್ರೋ ವಿಸ್ತರಣೆ ಯೋಚನೆ ಮೂರ್ಖತನದ್ದು: ತೇಜಸ್ವಿ ಸೂರ್ಯ
ತುಮಕೂರಿಗೆ ಮೆಟ್ರೋ ರೈಲು ವಿಸ್ತರಣೆ ಯೋಜನೆಗೆ ಸಂಸದರಿಂದ ಆಕ್ಷೇಪ ವ್ಯಕ್ತವಾಗಿದ್ದು, ರಿಯಲ್ ಎಸ್ಟೇಟ್ ಲಾಭದ ಆರೋಪ ಕೇಳಿಬಂದಿದೆ. ಈ ಯೋಜನೆಯನ್ನು ಮೂರ್ಖತನ ಎಂದು ಕರೆದ ಸಂಸದ ತೇಜಸ್ವಿ ಸೂರ್ಯ, ಬದಲಾಗಿ ಬೆಂಗಳೂರಿನಲ್ಲಿ ಮೆಟ್ರೋ ಜಾಲ ವಿಸ್ತರಿಸುವಂತೆ ಸಲಹೆ ನೀಡಿದ್ದಾರೆ. ಸಚಿವ ಪರಮೇಶ್ವರ್ ಸಂಸದರ ಹೇಳಿಕೆಯನ್ನು ಖಂಡಿಸಿದ್ದಾರೆ.
ಪೂರ್ತಿ ಓದಿ21 ವರ್ಷಕ್ಕೇ ವೈಧವ್ಯ! ಗರ್ಭಿಣಿಯನ್ನು ಹೊರಹಾಕಿದ ಅತ್ತೆ: ಇವರೀಗ ಸೇನೆಯ ರೋಲ್ ಮಾಡೆಲ್..
20ನೇ ವಯಸ್ಸಿನಲ್ಲಿ ಮದುವೆಯಾಗಿ 21ನೇ ವಯಸ್ಸಿನಲ್ಲಿಯೇ ವಿಧವೆಯಾದ ನಿಧಿ ದುಬೆ, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಗ ಮನೆಯಿಂದ ಹೊರಗೆ ಹಾಕಲ್ಪಟ್ಟರು. ಎಲ್ಲಾ ಕಷ್ಟಗಳ ನಡುವೆಯೂ ಛಲ ಬಿಡದೆ 32ನೇ ವಯಸ್ಸಿನಲ್ಲಿ ಲೆಫ್ಟಿನೆಂಟ್ ಹುದ್ದೆಗೇರಿದರು.
ಪೂರ್ತಿ ಓದಿಕೋರ್ಟ್ನಲ್ಲಿ ನಟ ದರ್ಶನ್ ಕೈ ಹಿಡಿದು ಹೊಸ ಫೋನ್ ನಂಬರ್ ಪಡೆದುಕೊಂಡ ಪವಿತ್ರಾ ಗೌಡ!
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಳೆ ನಟ ದರ್ಶನ್ ಮತ್ತು ಪವಿತ್ರಾ ಗೌಡ ಕೋರ್ಟ್‌ನಲ್ಲಿ ಗುಟ್ಟಿನ ಮಾತುಕತೆ ನಡೆಸಿದ್ದಾರೆ. ವಿಚಾರಣೆ ಮುಗಿದ ನಂತರ ದರ್ಶನ್ ತಮ್ಮ ಹೊಸ ಫೋನ್ ನಂಬರ್ ಅನ್ನು ಪವಿತ್ರಾ ಗೌಡಗೆ ನೀಡಿದ್ದಾರೆ.
ಪೂರ್ತಿ ಓದಿBallary: ಜನರ ಕೈಗೆ ಸಿಗದ ಬಳ್ಳಾರಿ ಜಿಲ್ಲೆ ಕಾಂಗ್ರೆಸ್ ಶಾಸಕರು! ಪಾಲಿಕೆ ಕಳಪೆ ಆಡಳಿತದಿಂದ ರೋಸಿಹೋದ ನಾಗರಿಕರು
ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಮೂಲ ಸೌಕರ್ಯಗಳ ಕೊರತೆ, ಅಭಿವೃದ್ಧಿ ಕಾರ್ಯಗಳ ನಿರ್ಲಕ್ಷ್ಯದಿಂದ ಜನರು ಪರಿತಪಿಸುತ್ತಿದ್ದಾರೆ.
ಪೂರ್ತಿ ಓದಿBengaluru: ಕೆಟ್ಟ ರಸ್ತೆಯಿಂದ ಆರೋಗ್ಯ ಹಾಳು, 50 ಲಕ್ಷ ಪರಿಹಾರ ನೀಡುವಂತೆ ಬಿಬಿಎಂಪಿಗೆ ವ್ಯಕ್ತಿಯ ನೋಟಿಸ್!
ಬೆಂಗಳೂರಿನ 43 ವರ್ಷದ ವ್ಯಕ್ತಿಯೊಬ್ಬರು ನಗರದ ಹದಗೆಟ್ಟ ರಸ್ತೆಗಳಿಂದ ಉಂಟಾದ ದೈಹಿಕ ಮತ್ತು ಮಾನಸಿಕ ಯಾತನೆಗೆ ಬಿಬಿಎಂಪಿಯಿಂದ 50 ಲಕ್ಷ ರೂ. ಪರಿಹಾರ ಕೋರಿ ಕಾನೂನು ನೋಟಿಸ್ ಕಳುಹಿಸಿದ್ದಾರೆ. ರಸ್ತೆಗಳ ಸ್ಥಿತಿಯಿಂದಾಗಿ ತೀವ್ರವಾದ ಕುತ್ತಿಗೆ ಮತ್ತು ಬೆನ್ನು ನೋವು, ಆತಂಕ ಮತ್ತು ಓಡಾಟದ ಸಮಸ್ಯೆಗಳನ್ನು ಅನುಭವಿಸಿದ್ದಾಗಿ ಅವರು ಹೇಳಿದ್ದಾರೆ.
ಪೂರ್ತಿ ಓದಿಎರಡು ವರ್ಷದಲ್ಲಿ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳೇನು?
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಎರಡು ವರ್ಷಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಮತ್ತು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದೆ. ಗ್ಯಾರಂಟಿ ಯೋಜನೆಗಳಿಗೆ 90 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದ್ದು, ಈ ವರ್ಷ 51,034 ಕೋಟಿ ರೂ. ಮೀಸಲಿಡಲಾಗಿದೆ.
ಪೂರ್ತಿ ಓದಿ'ಖಾಲಿ ಭರವಸೆ, ಭಾರಿ ಲೂಟಿ' ಇದೇ ಕಾಂಗ್ರೆಸ್ 2 ವರ್ಷದ ಆಡಳಿತದ ಸಾಧನೆ; ವಿಜಯೇಂದ್ರ ವಾಗ್ದಾಳಿ
ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ಆಡಳಿತವನ್ನು ಲೂಟಿ, ಬೆಲೆ ಏರಿಕೆ ಮತ್ತು ಅಭಿವೃದ್ಧಿ ಶೂನ್ಯ ಆಡಳಿತ ಎಂದು ಟೀಕಿಸಿದ್ದಾರೆ. ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ ಈ ಟೀಕೆಗಳು ಕೇಳಿಬಂದಿವೆ.
ಪೂರ್ತಿ ಓದಿಭರ್ಜರಿ ಮಳೆ ಸುರಿದಿದ್ದಾಯ್ತು, ಈಗ ಕುಡಿಯುವ ನೀರಲ್ಲಿ ಬ್ಯಾಕ್ಟೀಯಾ ಪತ್ತೆ; ಕಲುಷಿತ ನೀರಿನ ಸಮಸ್ಯೆಗೆ ನಲುಗಿದ ಕೊಪ್ಪ!
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ಕುಡಿಯುವ ನೀರು ಕಲುಷಿತಗೊಂಡಿದ್ದು, ಜನರ ಆರೋಗ್ಯದಲ್ಲಿ ಆತಂಕ ಮೂಡಿದೆ. ಆರೋಗ್ಯ ಇಲಾಖೆ ನಡೆಸಿದ ಪರೀಕ್ಷೆಯಲ್ಲಿ ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಚರಂಡಿ ನೀರು ಕೆರೆಗೆ ಸೇರುತ್ತಿರುವುದೇ ಕಾರಣ ಎನ್ನಲಾಗಿದೆ. ಸ್ಥಳೀಯರು ಪಟ್ಟಣ ಪಂಚಾಯಿತಿ ಮತ್ತು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿಸಚಿವ ಕೆ.ಎನ್. ರಾಜಣ್ಣ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ
75 ವರ್ಷ ವಯಸ್ಸಿನ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಹಕಾರ ಸಚಿವ ಎಚ್.ಎಸ್. ರಾಜಣ್ಣ ಘೋಷಿಸಿದ್ದಾರೆ. ಯುವಕರಿಗೆ ಅವಕಾಶ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.
ಪೂರ್ತಿ ಓದಿತಿರುಪತಿಗೆ 50 ಕೆಜಿ ತೂಕದ 2 ಬೃಹತ್ ಬೆಳ್ಳಿಯ ದೀಪ ನೀಡಿದ ಪ್ರಮೋದಾದೇವಿ ಒಡೆಯರ್
ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಎರಡು ಬೃಹತ್ ಬೆಳ್ಳಿ ದೀಪಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಈ ದೀಪಗಳು ತಲಾ 50 ಕೆಜಿ ತೂಕ ಹೊಂದಿದ್ದು, 300 ವರ್ಷಗಳ ಹಿಂದೆ ಮೈಸೂರು ಮಹಾರಾಜರು ದೇವಸ್ಥಾನಕ್ಕೆ ದೀಪಗಳನ್ನು ದಾನ ಮಾಡಿದ್ದರು ಎಂದು ಟಿಟಿಡಿ ತಿಳಿಸಿದೆ.
ಪೂರ್ತಿ ಓದಿಹೈಕೋರ್ಟ್ ಜಡ್ಜ್‌ಗಳಿಗೆ ಏಕರೀತಿಯ ಪಿಂಚಣಿ : ಸುಪ್ರೀಂಕೋರ್ಟ್ ಮಹತ್ವದ ಆದೇಶ
ಹೈಕೋರ್ಟ್‌ಗಳ ಹೆಚ್ಚುವರಿ ನ್ಯಾಯಾಧೀಶರು ಸೇರಿದಂತೆ ಎಲ್ಲಾ ನ್ಯಾಯಾಧೀಶರಿಗೆ ಏಕರೂಪದ ಪೂರ್ಣ ಪಿಂಚಣಿ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಪೂರ್ತಿ ಓದಿ