08:52 AM (IST) Apr 21

Karnataka News Live 21 April 2026ಯುದ್ಧದ ಎಫೆಕ್ಟ್‌ - ಹೂಡಿಕೆ ಮಾಡುವವರು ಸದ್ಯಕ್ಕೆ ಸುಮ್ಮನಿರುವುದೇ ಸೇಫು

ಯುದ್ಧದ ಸನ್ನಿವೇಶವು ತೀವ್ರ ಆರ್ಥಿಕ ಅನಿಶ್ಚಿತತೆಯನ್ನು ಸೃಷ್ಟಿಸಿದ್ದು, ಇಂತಹ ಸಮಯದಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಖರ್ಚುಗಳ ಮೇಲೆ ಹಿಡಿತ, ಸಾಲ ಕಡಿಮೆ ಮಾಡುವುದು ಮತ್ತು ಷೇರುಗಳನ್ನು ಗಾಬರಿಯಿಂದ ಮಾರದಿರುವುದು ಸೇರಿದಂತೆ ಪ್ರಮುಖ ಆರ್ಥಿಕ ಸಲಹೆಗಳು ಇಲ್ಲಿವೆ.

Read Full Story
08:46 AM (IST) Apr 21

Karnataka News Live 21 April 2026ಅಲ್ಪಸಂಖ್ಯಾತ ಮುಖಂಡರ ಹೊರಹಾಕಿದ್ದುಸರಿಯಲ್ಲ ಡಿಕೆಶಿಗೆ ಹೇಳಿರುವೆ - ಸತೀಶ್

ಸಚಿವ ಸತೀಶ್ ಜಾರಕಿಹೊಳಿ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗಿನ ಭೇಟಿಯನ್ನು ಸೌಜನ್ಯದ ಭೇಟಿ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷದಲ್ಲಿ ಅಲ್ಪಸಂಖ್ಯಾತ ಮುಖಂಡರನ್ನು ಕಡೆಗಣಿಸಿರುವ ಬಗ್ಗೆ ಚರ್ಚಿಸಿದ್ದು, ಇದನ್ನು ಸರಿಪಡಿಸುವ ಭರವಸೆ ಡಿಕೆಶಿ ನೀಡಿದ್ದಾರೆ ಎಂದರು. 

Read Full Story
08:33 AM (IST) Apr 21

Karnataka News Live 21 April 2026ಗಣತಿಗೆ ಪಿಯು ಓದಿದವರಿಗೆ ಅವಕಾಶ - ಆಯ್ಕೆಗಾಗಿ ನಾಳೆ ಟೌನ್‌ಹಾಲ್‌ನಲ್ಲಿ ನೇರ ಸಂದರ್ಶನ

ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ಸರ್ಕಾರಿ ನೌಕರರು ಗೈರಾದ ಹಿನ್ನೆಲೆಯಲ್ಲಿ, ಬೆಂಗಳೂರು ಕೇಂದ್ರ ನಗರ ಪಾಲಿಕೆಯು ಖಾಸಗಿ ವ್ಯಕ್ತಿಗಳನ್ನು ಗಣತಿದಾರರಾಗಿ ನೇಮಿಸಿಕೊಳ್ಳಲು ಮುಂದಾಗಿದೆ. ಈ ಕುರಿತು ಏ.22 ರಂದು ನೇರ ಸಂದರ್ಶನ ಆಯೋಜಿಸಲಾಗಿದ್ದು, ಆಯ್ಕೆಯಾದವರಿಗೆ ಗೌರವಧನ ಹಾಗೂ ತರಬೇತಿ ನೀಡಲಾಗುವುದು.
Read Full Story
08:25 AM (IST) Apr 21

Karnataka News Live 21 April 2026ಡೆಲಿವರಿ ಬಾಯ್ ಮೊಬೈಲ್ ಕದ್ದ ಕ್ಯಾಬ್ ಚಾಲಕನಿಗೆ ಪೊಲೀಸರು ಫೋನ್‌ನಲ್ಲೇ ಶಾಕ್! 112ಗೆ ಕರೆ ಬಂದ 5 ನಿಮಿಷದಲ್ಲಿ ನಡೆದಿದ್ದೇನು?

ಬೆಂಗಳೂರಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‌ನನ್ನು ಬೆದರಿಸಿ ಮೊಬೈಲ್‌ ಕಳವು ಮಾಡಿದ್ದ ಕ್ಯಾಬ್‌ ಚಾಲಕನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. 112ಗೆ ದೂರು ಬಂದ ಐದೇ ನಿಮಿಷದಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು, ಆರೋಪಿಗೆ ಕರೆ ಮಾಡಿ ಎಚ್ಚರಿಕೆ ನೀಡಿ ಆತನನ್ನು ವಶಕ್ಕೆ ಪಡೆದಿದ್ದಾರೆ.
Read Full Story
08:20 AM (IST) Apr 21

Karnataka News Live 21 April 2026Major Arterial Road - ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರು ನಡುವಿನ ಸಂಚಾರ 1.30 ಗಂಟೆಯಿಂದ 10 ನಿಮಿಷಕ್ಕೆ ಇಳಿಕೆ

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಮೇಜರ್‌ ಆರ್ಟೀರಿಯಲ್‌ ರಸ್ತೆ (ಎಂಎಆರ್‌) ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದೆ. ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರಿನ ನಡುವಿನ ಪ್ರಯಾಣದ ಸಮಯವನ್ನು 1.30 ಗಂಟೆಯಿಂದ ಕೇವಲ 10 ನಿಮಿಷಕ್ಕೆ ಇಳಿಸಲಿದೆ.

Read Full Story
08:03 AM (IST) Apr 21

Karnataka News Live 21 April 2026ಎರಡು ಮರಗಳ ಮಧ್ಯೆ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾದ ಕಾರ್; ಇಬ್ಬರ ಸಾವು, ಓರ್ವ ಗಂಭೀರ

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರ್ ಎರಡು ಮರಗಳ ಮಧ್ಯೆ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

Read Full Story
07:39 AM (IST) Apr 21

Karnataka News Live 21 April 2026Vijayapura - ಸಿಂದಗಿಯ ಮೌಲಾಲಿ ಕುಟುಂಬದಲ್ಲಿ ಸಂಭ್ರಮದಿಂದ ಬಸವ ಜಯಂತಿ ಆಚರಣೆ

ಪೊಲೀಸ್‌ ಪೇದೆ ಮೌಲಾಲಿ ಆಲಗೂರ ಅವರು ಮುಸ್ಲಿಂರಾಗಿದ್ದರೂ, ಕಳೆದ 4 ವರ್ಷಗಳಿಂದ ತಮ್ಮ ಮನೆಯಲ್ಲಿ ಬಸವ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದಾರೆ. ಬಸವಣ್ಣನವರ ಸಮಸಮಾಜದ ಚಿಂತನೆಗಳನ್ನು ಗೌರವಿಸಿ, ತಮ್ಮ ಮಕ್ಕಳಿಗೂ ಆ ಮೌಲ್ಯಗಳನ್ನು ತಿಳಿಸುತ್ತಾ ಧಾರ್ಮಿಕ ಸೌಹಾರ್ದತೆಗೆ ಮಾದರಿಯಾಗಿದ್ದಾರೆ.

Read Full Story
07:36 AM (IST) Apr 21

Karnataka News Live 21 April 2026ಹೆತ್ತ ತಾಯಿಯ ಶವಕ್ಕೆ ಹೆಗಲು ಕೊಡದ ಮಕ್ಕಳು; ಸಮಾಜ ಸೇವಕರಿಂದ್ಲೇ ಅಂತ್ಯಕ್ರಿಯೆ!

ಬೆಳಗಾವಿಯ ಶಾಹು ನಗರದಲ್ಲಿ ಅಂಜನಾ ಧಾಮೋನೆ ಎಂಬ ವೃದ್ಧೆ ನಿಧನರಾದಾಗ, ಅವರ ಇಬ್ಬರು ಪುತ್ರರು ಅಂತ್ಯಕ್ರಿಯೆ ನಡೆಸಲು ನಿರಾಕರಿಸಿದ್ದಾರೆ. ಮಕ್ಕಳ ಅಮಾನವೀಯ ವರ್ತನೆಯಿಂದಾಗಿ, ಸ್ಥಳೀಯ ಸಮಾಜ ಸೇವಕರೇ ಮುಂದೆ ಬಂದು ವೃದ್ಧೆಯ ಅಂತಿಮ ಸಂಸ್ಕಾರವನ್ನು ನೆರವೇರಿಸಿದ್ದಾರೆ.
Read Full Story
07:22 AM (IST) Apr 21

Karnataka News Live 21 April 2026Hubballi - Fly91 ವಿಮಾನಕ್ಕೆ ಮಾತ್ರ ಹವಾಮಾನ ವೈಪರೀತ್ಯ ಹೇಗೆ ಸಾಧ್ಯ? ಸತ್ಯ ಮುಚ್ಚಿಟ್ಟರಾ?

ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬಂದ ಫ್ಲೈ-91 ವಿಮಾನ, ಲ್ಯಾಂಡಿಂಗ್ ಸಮಸ್ಯೆಯಿಂದಾಗಿ 3 ಗಂಟೆಗಳ ಕಾಲ ಆಗಸದಲ್ಲೇ ಸುತ್ತಾಡಿ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಇಳಿಯಿತು. ತಾಂತ್ರಿಕ ದೋಷವೆಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದರೆ, ಹವಾಮಾನ ವೈಪರೀತ್ಯವೇ ಕಾರಣವೆಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
Read Full Story
06:55 AM (IST) Apr 21

Karnataka News Live 21 April 2026ಮೇ 9ಕ್ಕೆ ಚಿತ್ರದುರ್ಗದಲ್ಲಿ ಯಡಿಯೂರಪ್ಪ ಉತ್ಸವ? ಕೇಂದ್ರ ಸಚಿವ ಅಮಿತ್‌ ಶಾ ಭಾಗಿ ಸಾಧ್ಯತೆ

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನದ ಸವಿನೆನಪಿಗಾಗಿ ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಮೇ 9 ರಂದು ನಡೆಯುವ ನಿರೀಕ್ಷೆಯಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸುವ ಸಾಧ್ಯತೆಯಿದೆ.
Read Full Story