ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಸಯ್ಯದ್ ಮಹಮ್ಮದ್ ಇದ್ರಿಸ್ ಎಂಬ ಯುವಕನಿಗೆ ಲಷ್ಕರೆ-ಎ-ತಯ್ಯಬಾ ಉಗ್ರ ಸಂಘಟನೆಗೆ ಯುವಕರನ್ನು ನೇಮಿಸುತ್ತಿದ್ದ ಆರೋಪದ ಮೇಲೆ ವಿಶೇಷ ಎನ್‌ಐಎ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಪಶ್ಚಿಮ ಬಂಗಾಳದಲ್ಲಿ ದಾಖಲಾಗಿದ್ದ ಈ ಪ್ರಕರಣದ ತನಿಖೆ ನಡೆಸಿದ ಎನ್‌ಐಎ.
- Home
- News
- State
- Karnataka News Live: ಲಷ್ಕರೆ-ಎ-ತಯ್ಯಬಾ ಸೇರಲು ಸಂಚು; ಶಿರಸಿ ಮೂಲದ ಉಗ್ರನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ; ಎನ್‌ಐಎ ಮಹತ್ವದ ತೀರ್ಪು
Karnataka News Live: ಲಷ್ಕರೆ-ಎ-ತಯ್ಯಬಾ ಸೇರಲು ಸಂಚು; ಶಿರಸಿ ಮೂಲದ ಉಗ್ರನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ; ಎನ್‌ಐಎ ಮಹತ್ವದ ತೀರ್ಪು

ಉರುಸು ಮೆರವಣಿಗೆ ವೇಳೆ ಹಿಂದೂ ಯುವತಿ ಬುರುಕಾ ಧರಿಸಿದ ವಿಚಾರಕ್ಕೆ ಹಿಂದೂ ಯುವಕರ ಮೇಲೆ ಮುಸ್ಲಿಂ ಹುಡುಗರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅಬು ಸುಲ್ತಾನ್, ನೂರ್ ಅಹ್ಮದ್, ಮೊಹಮದ್ ನೈದ್, ಅಭಿದ್ ಅಹಮದ್ ಸೇರಿದಂತೆ 10 ಮುಸ್ಲಿಂ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪಟ್ಟಣದ ದರ್ಗಾದ ಮೈದಾನದಲ್ಲಿ ನಡೆಯುತ್ತಿರುವ ಉರುಸ್ನಲ್ಲಿ ಸುತ್ತಾಡಿಕೊಂಡು ಬರಲೆಂದು ಪಟ್ಟಣದ ದಿರೀಡ್ ನಗರದ ಹಿಂದೂ ಸಮುದಾಯದ ಮೂವರು ಹುಡುಗರು, ಒಬ್ಬ ಹುಡುಗಿ ಮತ್ತು ಮುಸ್ಲಿಂ ಸಮುದಾಯದ ಇಬ್ಬರು ಹುಡುಗ, ಹುಡುಗಿ ಒಟ್ಟಾಗಿ ಬಂದಿದ್ದರು. ಈ ವೇಳೆ 20 ಮುಸ್ಲಿಂ ಹುಡುಗರು ಏಕಾಏಕಿ ಬಂದು ಹಿಂದೂ ಹುಡುಗಿ ಹಾಕಿಕೊಂಡಿದ್ದ ಬುರುಕಾ ತೆಗೆಸಿ ನೀನು ಯಾವ ಜಾತಿ? ನಿನ್ನ ಆಧಾರ್ ಕಾರ್ಡ್ ತೋರಿಸು? ಎಂದು ಗಲಾಟೆ ಮಾಡಿದ್ದಾರೆ. ಆಗ ಜತೆಗಿದ್ದ ಹಿಂದೂ ಹುಡುಗರ ಮೇಲೆಯೂ ಈ ಪುಂಡರು ಹಲ್ಲೆ ಮಾಡಿದ್ದರಿಂದ ಸಾವಿರಾರು ಸಂಖ್ಯೆಯ ಜನರು ಜಮಾಯಿಸಿದರು.
ಹಿಂದೂ ಜಾರಗಣೆ ವೇದಿಕೆಯ ಮುಖಂಡರು, ಭಜರಂಗದಳ ಕಾರ್ಯಕರ್ತರು ಸ್ಥಳಕ್ಕೆ ಜಮಾಯಿಸಿದ್ದರಿಂದ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿತ್ತು. ಸುದ್ದಿ ತಿಳಿಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಕೆಜಿಎಫ್ ಎಸ್ಪಿ ಪರಿಸ್ಥಿತಿ ತಿಳಿಗೊಳಿಸಿದರು.
Karnataka News Live 22 January 2026ಲಷ್ಕರೆ-ಎ-ತಯ್ಯಬಾ ಸೇರಲು ಸಂಚು; ಶಿರಸಿ ಮೂಲದ ಉಗ್ರನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ; ಎನ್‌ಐಎ ಮಹತ್ವದ ತೀರ್ಪು
Karnataka News Live 22 January 2026KRS ಪಕ್ಷದ ಕಾರ್ಯಕರ್ತರಿಗೆ ಡಿಜಿ-ಐಜಿಪಿ ಶಾಕ್; ರಾಜ್ಯಾದ್ಯಂತ ಕೇಸ್ ದಾಖಲಿಸಲು ಆದೇಶ!
ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪದ ಮೇಲೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಚನ್ನಪಟ್ಟಣದ ಘಟನೆಯ ನಂತರ, ರಾಜ್ಯಾದ್ಯಂತ ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ
Karnataka News Live 22 January 2026ಕೊಪ್ಪಳದ ಜಮೀನಿನಲ್ಲಿ ಅಚ್ಚರಿ ಘಟನೆ - ಹುತ್ತದೊಳಗೆ ಅಲಾಯಿ ದೇವರು ಪತ್ತೆ!
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಾದಿಮನಾಳ ಗ್ರಾಮದ ಜಮೀನೊಂದರಲ್ಲಿ ಹುತ್ತವನ್ನು ಅಗೆದಾಗ, ಮೊಹರಂ ಹಬ್ಬದ ಸಂದರ್ಭದಲ್ಲಿ ಬಳಸುವ ಪವಿತ್ರ ಅಲಾಯಿ ದೇವರುಗಳು ಪತ್ತೆಯಾಗಿವೆ. ಆರಂಭದಲ್ಲಿ ಇದನ್ನು ಮೂಢನಂಬಿಕೆ ಎಂದು ನಿರ್ಲಕ್ಷಿಸಿದ್ದ ಗ್ರಾಮಸ್ಥರು, ಈ ಪವಾಡವನ್ನು ಕಣ್ಣಾರೆ ಕಂಡು ಇದೀಗ ಅಚ್ಚರಿಗೊಂಡಿದ್ದಾರೆ
Karnataka News Live 22 January 2026ಐಷಾರಾಮಿ ಕಾರಿನ ಎರಡು ಡೋರ್ ಓಪನ್ ಮಾಡಿ ಸ್ಟಂಟ್; ಇನ್‌ಸ್ಟಾ ವಿಡಿಯೋ ನೋಡಿ ಕೇಸ್ ಜಡಿದ ಕಬ್ಬನ್ ಪಾರ್ಕ್ ಪೊಲೀಸರು!
Karnataka News Live 22 January 2026ಇದು ಸಂವಿಧಾನಕ್ಕೆ ಮಾಡಿದ ಅಪಚಾರ - ರಾಜ್ಯಪಾಲರ ನಡೆಗೆ ಗೃಹ ಸಚಿವ ಪರಮೇಶ್ವರ್ ತೀವ್ರ ಅಸಮಾಧಾನ!
ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣವನ್ನು ಮೊಟಕುಗೊಳಿಸಿದ ಘಟನೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದು ಸಾಂವಿಧಾನಿಕ ಕರ್ತವ್ಯ ಲೋಪ ಮತ್ತು ರಾಷ್ಟ್ರಗೀತೆಗೆ ಮಾಡಿದ ಅವಮಾನ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಕಿಡಿಕಾರಿದ್ದಾರೆ.
Karnataka News Live 22 January 2026ಮುಡಾ ಹಗರಣದಲ್ಲಿ ಮರಿಗೌಡಗೆ ಬಿಗ್ ಶಾಕ್; ಕೋಟ್ಯಂತರ ಮೌಲ್ಯದ ಆಸ್ತಿ ಇಡಿ ಮುಟ್ಟುಗೋಲು!
ಮುಡಾ ಅಕ್ರಮ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಮುಡಾ ಮಾಜಿ ಅಧ್ಯಕ್ಷ ಕೆ. ಮರಿಗೌಡ ಅವರಿಗೆ ಸೇರಿದ ₹20.85 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ.
Karnataka News Live 22 January 202688ರ ಇಳಿವಯಸ್ಸಲ್ಲಿ ಒಬ್ಬನೇ ಮಗ ಮುರಳಿ ಕೃಷ್ಣನನ್ನು ಕಳೆದುಕೊಂಡ ಗಾನಕೋಗಿಲೆ ಎಸ್.ಜಾನಕಿ!
Karnataka News Live 22 January 2026ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆ ಎಫೆಕ್ಟ್ - ಭೂಮಿಗೂ ಬಂತು ಬಂಗಾರದ ಬೆಲೆ, ರಿಯಲ್ ಎಸ್ಟೇಟ್‌ನಲ್ಲೂ ಹೊಸ ಇತಿಹಾಸ!
ಗದಗ ಜಿಲ್ಲೆ ಲಕ್ಕುಂಡಿಯಲ್ಲಿ ಬಂಗಾರದ ನಿಧಿ ಸಿಕ್ಕ ನಂತರ ನಡೆಯುತ್ತಿರುವ ಪುರಾತತ್ವ ಉತ್ಖನನದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದ ಅಪರೂಪದ ವಸ್ತುಗಳು ಪತ್ತೆಯಾಗಿವೆ. ಇದರಿಂದ ಭೂಮಿಯ ಬೆಲೆ ದುಪ್ಪಟ್ಟಾಗಿದೆ. ಸ್ಥಳೀಯ ನಿವಾಸಿಗಳು, ರೈತರು ಪುನರ್ವಸತಿ ಹಾಗೂ ಕೃಷಿ ಭೂಮಿ ನಷ್ಟದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
Karnataka News Live 22 January 2026ಹುಡುಗಿಯ ಮುಖದ ಬದ್ಲು ಚಪ್ಪಲಿ ನೋಡಿ ಮದ್ವೆಗೆ ಒಪ್ಕೊಂಡೆ - ಲೇಖಕ ಗಣೇಶ್ ಕಾಸರಗೋಡು ಕುತೂಹಲದ ಸ್ಟೋರಿ
ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ತಮ್ಮ ಮದುವೆಯ ರೋಚಕ ಕಥೆಯನ್ನು ಹಂಚಿಕೊಂಡಿದ್ದಾರೆ. ಹುಡುಗಿ ನೋಡುವ ಶಾಸ್ತ್ರದ ವೇಳೆ, ಆಕೆಯ ಮುಖದ ಬದಲು ಪಾದಕ್ಕಿಂತ ಉದ್ದವಿದ್ದ ಹವಾಯಿ ಚಪ್ಪಲಿಯನ್ನು ನೋಡಿ ಮದುವೆಗೆ ಒಪ್ಪಿಕೊಂಡಿದ್ದರಂತೆ. ಇದರ ರೋಚಕ ಸ್ಟೋರಿ ಹೇಳಿದ್ದಾರೆ.
Karnataka News Live 22 January 2026ಹುಲಿ ಸತ್ತರೆ ಓಡಿ ಬರ್ತೀರಿ, ರೈತ ಸತ್ತರೆ ಬೆಲೆ ಇಲ್ವಾ? ಕೋಟಿ ಪರಿಹಾರ ಕೊಡ್ತೀವಿ.. ನಿಮ್ಮವ್ರು ಸಾಯ್ತಾರಾ ಕೇಳಿ, ಸಚಿವರಿಗೆ ಬೆವರಿಳಿಸಿದ ರೈತರು!
ಚಾಮರಾಜನಗರದಲ್ಲಿ ನಡೆದ ಸಭೆಯಲ್ಲಿ, ಅರಣ್ಯ ಇಲಾಖೆಯ ದ್ವಂದ್ವ ನೀತಿಯನ್ನು ಪ್ರಶ್ನಿಸಿದ ರೈತರು ಜಿಲ್ಲಾ ಉಸ್ತುವಾರಿ ಸಚಿವರನ್ನು ತರಾಟೆಗೆ ತೆಗೆದುಕೊಂಡರು. ವನ್ಯಜೀವಿ ದಾಳಿಯಿಂದ ರೈತರು ಸತ್ತರೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ.
Karnataka News Live 22 January 2026ಪ್ರಯಾಣಿಕರ ಬೇಡಿಕೆಯ ಮೇರೆಗೆ 3 ಪ್ರಮುಖ ರೈಲುಗಳಿಗೆ ನಿಲುಗಡೆ ಘೋಷಣೆ; ಮಂಗಳೂರು, ಹುಬ್ಬಳ್ಳಿ, ಬೆಂಗಳೂರಿಗರಿಗೆ ಅನುಕೂಲ!
ರೈಲ್ವೆ ಇಲಾಖೆಯು ಕರ್ನಾಟಕದ ಮೂರು ಪ್ರಮುಖ ರೈಲುಗಳಿಗೆ ಹೊಸ ನಿಲುಗಡೆಗಳನ್ನು ಘೋಷಿಸಿದೆ. ಹುಬ್ಬಳ್ಳಿ-ದಾದರ್ ಎಕ್ಸ್‌ಪ್ರೆಸ್‌ಗೆ ಗೋಕಾಕ್ ರೋಡ್, ಮಂಗಳೂರು-ಸುಬ್ರಮಣ್ಯ ಪ್ಯಾಸೆಂಜರ್‌ಗೆ ನೇರಳಕಟ್ಟೆ, ಮತ್ತು ಲೋಕಮಾನ್ಯ ತಿಲಕ್-ಕೊಯಮತ್ತೂರು ಎಕ್ಸ್‌ಪ್ರೆಸ್‌ಗೆ ಯಲಹಂಕದಲ್ಲಿ ಹೊಸ ನಿಲುಗಡೆ ಕಲ್ಪಿಸಲಾಗಿದೆ.
Karnataka News Live 22 January 2026ಭದ್ರಾವತಿಯಲ್ಲಿ ಅಪ್ಪು, ಅಣ್ಣಾವ್ರಿಗೆ ದೇಗುಲ ನಿರ್ಮಿಸಿದ ಅಭಿಮಾನಿಗಳು; ಅಶ್ವಿನಿ ಪುನೀತ್ ರಾಜ್ ಕುಮಾರ್ ಲೋಕಾರ್ಪಣೆ!
ಭದ್ರಾವತಿಯಲ್ಲಿ ಅಭಿಮಾನಿಗಳು ನಿರ್ಮಿಸಿದ ಡಾ. ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರ ಕಂಚಿನ ಪ್ರತಿಮೆಗಳಿರುವ ದೇಗುಲವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಲೋಕಾರ್ಪಣೆ ಮಾಡಿದರು. ಈ ದೇಗುಲದಲ್ಲಿ, ಇಬ್ಬರು ನಟರಿಗೆ ವರ್ಷಪೂರ್ತಿ ಪೂಜೆ ಸಲ್ಲಿಸಲು ಅಭಿಮಾನಿಗಳು ಸಂಕಲ್ಪ ಮಾಡಿದ್ದಾರೆ.
Karnataka News Live 22 January 2026ಭಾರತೀಯ ರೈಲ್ವೆ ಇಲಾಖೆಯ ಭರ್ಜರಿ ಉದ್ಯೋಗ, ಬರೋಬ್ಬರಿ 22,000 ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ
ಭಾರತೀಯ ರೈಲ್ವೆ ಇಲಾಖೆಯು ದೇಶಾದ್ಯಂತ 22,000 ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಯಾವುದೇ ಪದವಿ ಅಥವಾ BE/B.Tech ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯು ಅಖಿಲ ಭಾರತ ಮಟ್ಟದಲ್ಲಿ ನಡೆಯಲಿದೆ.
Karnataka News Live 22 January 2026ದಾಂಡೇಲಿ - ಬೈಕ್‌ನಲ್ಲಿ ಕಾಡುಪ್ರಾಣಿಯ ಮಾಂಸ ಸಾಗಾಟ; ಆರೋಪಿಯ ಬಂಧನ
ದಾಂಡೇಲಿಯಲ್ಲಿ ಕಾಡುಪ್ರಾಣಿಯನ್ನು ಬೇಟೆಯಾಡಿ, ಅದರ ಮಾಂಸವನ್ನು ಬೈಕ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬರ್ಚಿ ರಸ್ತೆಯಲ್ಲಿ ತಪಾಸಣೆ ವೇಳೆ ಆರೋಪಿ ರಾಜು ಮಂಜು ಪೋತದಾರ ಸಿಕ್ಕಿಬಿದ್ದಿದ್ದು, ಮಾಂಸ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
Karnataka News Live 22 January 2026Karna Serialನಲ್ಲಿ ಇಬ್ರನ್ನು ನಿಭಾಯಿಸ್ತಿರೋ ನಟನ ರಿಯಲ್ ಲೈಫ್ ಚೆಲುವೆ ಯಾರು? ಮದ್ವೆ ಯಾವಾಗ?
Karnataka News Live 22 January 2026ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಗುಡ್ ನ್ಯೂಸ್ - ಸರ್ಕಾರಿ ನೌಕರಿಗೆ ಸೇರಲು 5 ವರ್ಷ ವಯೋಮಿತಿ ಸಡಿಲಿಕೆ!
ಕರ್ನಾಟಕ ಸಚಿವ ಸಂಪುಟವು ಸರ್ಕಾರಿ ಉದ್ಯೋಗ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳ ಕಾಲ ಸಡಿಲಿಸಲು ಅನುಮೋದಿಸಿದೆ. ಈ ಸಡಿಲಿಕೆಯು 31/12/2027 ರವರೆಗಿನ ಅಧಿಸೂಚನೆಗಳಿಗೆ ಅನ್ವಯವಾಗಲಿದೆ. ಹೊಸ ವಯೋಮಿತಿ ತಿಳಿಯಲು ಕ್ಲಿಕ್ ಮಾಡಿ.
Karnataka News Live 22 January 2026ಸರ್ಕಾರವೇ ಆರಂಭಿಸಿದ ಗೋವಿನ ಜೋಳ ಖರೀದಿ ಕೇಂದ್ರದಿಂದಲೇ ರೈತರಿಗೆ ಮೋಸ!
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಮೆಗಾ ಮಾರ್ಕೆಟ್‌ನಲ್ಲಿರುವ ಗೋವಿನಜೋಳ ಖರೀದಿ ಕೇಂದ್ರದಲ್ಲಿ ರೈತರಿಗೆ ವಂಚನೆ ಆರೋಪ. ಉತ್ತಮ ಗುಣಮಟ್ಟದ ಫಸಲನ್ನು ಸಿಬ್ಬಂದಿ ತಿರಸ್ಕರಿಸುತ್ತಿದ್ದು, ಪ್ರಭಾವಿಗಳಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ರೈತರು ಗೇಟ್ ಬಂದ್ ಮಾಡಿ ಬೃಹತ್ ಪ್ರತಿಭಟನೆ
Karnataka News Live 22 January 2026ಕ್ಯಾನ್ಸರ್ ಆರೈಕೆಯಲ್ಲಿ ದೇಶದ ನಂ.3 ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆದ ಬೆಂಗಳೂರಿನ ಕಿದ್ವಾಯಿ ಸರ್ಕಾರಿ ಹಾಸ್ಪಿಟಲ್
ಸಂಶೋಧನಾ ಸಮೀಕ್ಷೆ 2025ರ ಪ್ರಕಾರ, ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಕ್ಯಾನ್ಸರ್ ಆರೈಕೆಯಲ್ಲಿ ದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ 3ನೇ ಸ್ಥಾನ ಮತ್ತು ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಶ್ವದರ್ಜೆಯ ಚಿಕಿತ್ಸೆಯಿಂದಾಗಿ ಈ ಗೌರವ ಲಭಿಸಿದೆ.
Karnataka News Live 22 January 2026ಬೆಂಗಳೂರಲ್ಲಿ ಯುವತಿಗೆ ಅಪ್ರಾಪ್ತರಿಂದ ಕಿರುಕುಳ ಆರೋಪ, ಕೇರಳ ರೀತಿ ಲೈಕ್ಸ್‌ಗಾಗಿ ಮಾಡಿದ್ರಾ ವಿಡಿಯೋ?
ಬೆಂಗಳೂರಲ್ಲಿ ಯುವತಿಗೆ ಅಪ್ರಾಪ್ತರಿಂದ ಕಿರುಕುಳ ಆರೋಪ, ಅವಲಹಳ್ಳಿ ಫಾರೆಸ್ಟ್‌ನಲ್ಲಿ ವಾಕಿಂಗ್ ಹೋದ ಯುವತಿಗೆ ಕಿರುಕುಳ ನೀಡಿರುವುದಾಗಿ ವಿಡಿಯೋ ಮೂಲಕ ಆರೋಪ ಮಾಡಿದ್ದಾಳೆ. ಆದರೆ ಇದು ಕೇರಳ ರೀತಿ ಮಾಡಿದ ಲೈಕ್ಸ್ ವಿಡಿಯೋನಾ ಅನ್ನೋ ಅನುಮಾನ ಕಾಡಿದೆ.
Karnataka News Live 22 January 2026ಮದರ್ ತೆರೆಸಾ ಹೆಸರಿನಲ್ಲಿ 2 ಶಾಲೆ ನಡೆಸುತ್ತಿರುವ Aase Serial ನಟಿ ಸ್ನೇಹಾ ಈಶ್ವರ್; ಭೇಷ್ ಎಂದ ಸರ್ಕಾರ
Aase Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ವಿಜಯಾಂಬಿಕಾ, 'ಆಸೆ' ಯಲ್ಲಿ ಸಕ್ರೆಬೈಲು ಶಾಂತಿ ಪಾತ್ರದಲ್ಲಿ ನಟಿಸುತ್ತಿರುವ ಸ್ನೇಹಾ ಈಶ್ವರ್ ಅವರು ರಿಯಲ್ ಲೈಫ್‌ನಲ್ಲಿ 2 ಶಾಲೆಯನ್ನು ನಡೆಸುತ್ತಿದ್ದಾರಂತೆ. ಸಹನಟಿ ಪ್ರಿಯಾಂಕಾ ಡಿಎಸ್ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಮಾಹಿತಿ ನೀಡಿದ್ದಾರೆ.