08:52 AM (IST) Apr 24

Karnataka News Liveಇಂಡಿಯನ್ ಬ್ಯಾಂಕ್‌ನಲ್ಲಿದ್ದ ₹4 ಕೋಟಿ ಚಿನ್ನ ಕಳವು! ಅಸಿಸ್ಟೆಂಟ್ ಮ್ಯಾನೇಜರ್‌ನ ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಗ್ರಾಹಕರು ಕಂಗಾಲು!

ಗಿರಿನಗರ ಇಂಡಿಯನ್ ಬ್ಯಾಂಕ್‌ನಲ್ಲಿ ಸುಮಾರು ನಾಲ್ಕು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣದ ತನಿಖೆ ವಿಳಂಬವಾಗಿದ್ದಕ್ಕೆ ಗ್ರಾಹಕರು ಪ್ರತಿಭಟನೆ ನಡೆಸಿದ್ದಾರೆ. ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್, ಗ್ರಾಹಕರ ಚಿನ್ನವನ್ನು ಕದ್ದು ಆನ್‌ಲೈನ್ ಬೆಟ್ಟಿಂಗ್‌ಗೆ ಬಳಸಿದ್ದ ಭೂಪ.

Read Full Story
08:12 AM (IST) Apr 24

Karnataka News Liveತಮಿಳುನಾಡಲ್ಲಿ ತ್ರಿಕೋನ ಸಮರ - ದಾಖಲೆಯ ಶೇ.85ರಷ್ಟು ಮತದಾನ

ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ.85ರಷ್ಟು ದಾಖಲೆಯ ಮತದಾನವಾಗಿದೆ. ಆಡಳಿತಾರೂಢ ಡಿಎಂಕೆ, ಎಐಎಡಿಎಂಕೆ-ಬಿಜೆಪಿ ಮತ್ತು ನಟ ವಿಜಯ್ ಅವರ ಟಿವಿಕೆ ನಡುವಿನ ತ್ರಿಕೋನ ಸ್ಪರ್ಧೆಯ ಫಲಿತಾಂಶವು ಇವಿಎಂನಲ್ಲಿ ಭದ್ರವಾಗಿದೆ.

Read Full Story
07:53 AM (IST) Apr 24

Karnataka News LiveSSLC Results 2026 - ಆ್ಯಂಬುಲೆನ್ಸ್‌ನಲ್ಲಿ ಬಂದು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಫಸ್ಟ್‌ಕ್ಲಾಸ್ ಪಾಸ್

ಅಪಘಾತದಿಂದ ಗಾಯಗೊಂಡಿದ್ದರೂ, ಕೋಲಾರದ ವಿದ್ಯಾರ್ಥಿನಿ ಕುಸುಮಾ ಆ್ಯಂಬುಲೆನ್ಸ್‌ನಲ್ಲಿ ಬಂದು ಸ್ಟ್ರೆಚರ್‌ನಲ್ಲಿ ಮಲಗಿಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಳು. ಇದೀಗ ಆಕೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದು, ಚಿಕಿತ್ಸೆ ಪಡೆಯುತ್ತಲೇ ಅನೇಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾಳೆ.
Read Full Story
07:33 AM (IST) Apr 24

Karnataka News Liveಯುವಕನೊಂದಿಗೆ ಸುತ್ತಾಡಿ ಗರ್ಭಿಣಿ, ಫಾಕ್ಸ್‌ಕಾನ್ ಕಂಪನಿಯ ಟಾಯ್ಲೆಟ್‌ನಲ್ಲೇ ಮಗು ಹಡೆದು ಭಯದಿಂದ ಶಿಶುವಿನ ಕತ್ತು ಕುಯ್ದು ಎಸೆದು ಹೋದ ತಾಯಿ!

ದೇವನಹಳ್ಳಿಯ ಫಾಕ್ಸ್‌ಕಾನ್‌ ಕಂಪನಿಯಲ್ಲಿ ಯುವತಿಯೊಬ್ಬಳು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ, ಭಯದಿಂದ ನವಜಾತ ಶಿಶುವಿನ ಕತ್ತು ಸೀಳಿ ಹತ್ಯೆಗೈದು ಎಸೆದಿದ್ದಾಳೆ. ಈ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದ್ದು, ವಿಶ್ವನಾಥಪುರ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
Read Full Story
07:00 AM (IST) Apr 24

Karnataka News LiveSSLC Results 2026 - ಶೇ.94.1ರಷ್ಟು ಮಕ್ಕಳು ಪಾಸ್, ದಕ್ಷಿಣ ಕನ್ನಡ ಪ್ರಥಮ, ಕಲಬುರಗಿ ಲಾಸ್ಟ್!

2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ ರಾಜ್ಯವು ಶೇ.88.73ರಷ್ಟು ಐತಿಹಾಸಿಕ ಫಲಿತಾಂಶ ದಾಖಲಿಸಿದೆ. ಈ ಬಾರಿ ಯಾವುದೇ ಗ್ರೇಸ್ ಅಂಕಗಳನ್ನು ನೀಡದೆ, ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದು, ಸರ್ಕಾರಿ ಶಾಲೆಗಳ ಪ್ರದರ್ಶನದಲ್ಲಿಯೂ ಭಾರೀ ಸುಧಾರಣೆ ಕಂಡುಬಂದಿದೆ.
Read Full Story