06:43 AM (IST) Apr 26

Karnataka News Live 26 April 2026Bengaluru - ಸ್ನೇಹಿತೆ ವಿಚಾರವಾಗಿ ಗೆಳೆಯರ ನಡುವೆ ಕಿತ್ತಾಟ - ಕಲ್ಲುಎತ್ತಿ ಹಾಕಿ ಒಬ್ಬ ಹತ್ಯೆ

ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ನೇಹಿತೆ ವಿಚಾರವಾಗಿ ಇಬ್ಬರು ಗೆಳೆಯರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ಗೆಳತಿಯ ಮನೆಗೆ ಬಂದು ಹೋಗುತ್ತಿದ್ದ ಸ್ನೇಹಿತ ರಾಮಚಂದ್ರನ ಮೇಲೆ ಸಿಟ್ಟಿಗೆದ್ದ ಹರೀಶ್, ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ.
Read Full Story
06:10 AM (IST) Apr 26

Karnataka News Live 26 April 2026Bengaluru - ದೇಶದ ಮೊದಲ ಬುಲೆಟ್ ರೈಲಿಗೆ ಬೆಂಗಳೂರಿನ ಬಿಇಎಂಎಲ್‌ನಲ್ಲಿ ಬೋಗಿ ಉತ್ಪಾದನೆ

ಬೆಂಗಳೂರಿನ ಬಿಇಎಂಎಲ್‌ ಘಟಕದಲ್ಲಿ ದೇಶದ ಮೊದಲ ಬಿ28 ಬುಲೆಟ್ ರೈಲು ಬೋಗಿಗಳ ವಿನ್ಯಾಸ ಕಾರ್ಯ ಆರಂಭವಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಘಟಕವನ್ನು ಉದ್ಘಾಟಿಸಿದ್ದು, 2027ರ ಅಂತ್ಯಕ್ಕೆ ರೈಲು ಸಂಪೂರ್ಣ ಸಿದ್ಧಗೊಳ್ಳಲಿದೆ ಎಂದು ತಿಳಿಸಿದ್ದಾರೆ.

Read Full Story
06:02 AM (IST) Apr 26

Karnataka News Live 26 April 2026ಎರಡು ಜಿಲ್ಲೆಯ ರೈತರಿಗೆ ಸುಮಾರು 20 ಸಾವಿರ ಹಸು ವಿತರಣೆ ಯೋಜನೆ ಘೋಷಿಸಿದ ರಾಜ್ಯ ಸರ್ಕಾರ

ಬೆಳಗಾವಿಯಲ್ಲಿ ವಿಶ್ವ ಪಶುವೈದ್ಯಕೀಯ ದಿನಾಚರಣೆಯಂದು ಕಾಲು-ಬಾಯಿ ರೋಗ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ, ಪಶು ಸಂಗೋಪನೆ ಸಚಿವರು 2 ಜಿಲ್ಲೆಗಳ ರೈತರಿಗೆ ಶೇ.25ರ ಸಬ್ಸಿಡಿಯೊಂದಿಗೆ 20 ಸಾವಿರ ಹಸುಗಳನ್ನು ವಿತರಿಸುವ ಯೋಜನೆಯನ್ನು ಘೋಷಿಸಿದರು.

Read Full Story
05:54 AM (IST) Apr 26

Karnataka News Live 26 April 2026ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ; ಶಾರೀಕ್‌ಗೆ ನಾಳೆ ಶಿಕ್ಷೆಯ ಪ್ರಮಾಣ ಪ್ರಕಟ

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್‌ ಶಾರೀಕ್‌, ತಾನು ಕೃತ್ಯ ಎಸಗಿದ್ದಾಗಿ ಸಲ್ಲಿಸಿದ್ದ ತಪ್ಪೊಪ್ಪಿಗೆ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ಮಾನ್ಯ ಮಾಡಿದೆ. ಏಪ್ರಿಲ್ 27 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟವಾಗಲಿದೆ.

Read Full Story
05:45 AM (IST) Apr 26

Karnataka News Live 26 April 2026ಪ್ರಜ್ಞಾಹೀನ ಸ್ಥಿತಿಯಲ್ಲಿ ಸಚಿವ ಹಿರಿಯೂರು ಸುಧಾಕರ್‌; ಆಸ್ಪತ್ರೆಗೆ ಭೇಟಿ ನೀಡಿ ವಿವರ ಪಡೆದ ಸಿಎಂ

ಯೋಜನೆ ಹಾಗೂ ಸಾಂಖ್ಯಿಕ ಸಚಿವ ಡಿ.ಸುಧಾಕರ್‌ ಅವರು ಮೊಣಕಾಲು ಶಸ್ತ್ರಚಿಕಿತ್ಸೆ ನಂತರ ಶ್ವಾಸಕೋಶದ ಸೋಂಕಿನಿಂದ ಪ್ರಜ್ಞಾಹೀನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಶ್ವಾಸಕೋಶ ಕಸಿಗೆ ಸೂಚಿಸಿದ್ದಾರೆ. 

Read Full Story
05:36 AM (IST) Apr 26

Karnataka News Live 26 April 2026ಚಿಕ್ಕಬಳ್ಳಾಪುರದ ವಿದ್ಯಾರ್ಥಿ ಜನಿವಾರಕ್ಕೆ ಕತ್ತರಿ; ವಾರದ ಹಿಂದೆ ಉಪನಯನ ಆದವಗೆ ಅಪಮಾನ

ಚಿಕ್ಕಬಳ್ಳಾಪುರದ ನಾಗಾರ್ಜುನ ಕಾಲೇಜಿನಲ್ಲಿ ನಡೆದ ಸಿಇಟಿ ಪರೀಕ್ಷೆಯ ವೇಳೆ, ವಿದ್ಯಾರ್ಥಿ ಸುಪ್ರೀತ್‌ನ ಜನಿವಾರವನ್ನು ಪರೀಕ್ಷಾ ಸಿಬ್ಬಂದಿ ಕತ್ತರಿಸಿ ಕಸದ ಬುಟ್ಟಿಗೆ ಎಸೆದಿದ್ದಾರೆ. ಈ ಘಟನೆಯಿಂದ ಮಾನಸಿಕವಾಗಿ ನೊಂದ ವಿದ್ಯಾರ್ಥಿ ಸರಿಯಾಗಿ ಪರೀಕ್ಷೆ ಬರೆಯಲು ವಿಫಲನಾಗಿದ್ದು, ನ್ಯಾಯಕ್ಕಾಗಿ ಆಗ್ರಹಿಸಲಾಗಿದೆ.
Read Full Story
05:28 AM (IST) Apr 26

Karnataka News Live 26 April 2026Haveri - ಬರಿದಾಗಿರುವ ವರದಾ ನದಿಯಲ್ಲಿ ಚಿನ್ನದ ಹುಡುಕಾಟ; ಇರ್ಲರ್ ಸಮುದಾಯದಿಂದ ಶೋಧ

ಹಾವೇರಿ ಜಿಲ್ಲೆಯಲ್ಲಿ ಬೇಸಿಗೆಯಿಂದ ಬತ್ತುತ್ತಿರುವ ವರದಾ ನದಿಯಲ್ಲಿ, ಶಿವಮೊಗ್ಗ ಮೂಲದ ಇರ್ಲರ್ ಸಮುದಾಯದ ಕುಟುಂಬಗಳು ಚಿನ್ನದ ಕಣಗಳಿಗಾಗಿ ಹುಡುಕಾಟ ನಡೆಸುತ್ತಿವೆ. ಸಾಂಪ್ರದಾಯಿಕ ವಿಧಾನಗಳನ್ನು ಬಳಸಿ ನದಿಯ ಮರಳನ್ನು ಜಾಲಾಡಿ, ದಿನವಿಡೀ ಶ್ರಮವಹಿಸಿ ಬಂಗಾರವನ್ನು ಶೋಧಿಸುವುದು ಇವರ ಕಾಯಕವಾಗಿದೆ

Read Full Story
05:19 AM (IST) Apr 26

Karnataka News Live 26 April 2026ಹೀಟ್‌ವೇವ್ ಎಫೆಕ್ಟ್; ಮುಂದಿನ ಎರಡು ತಿಂಗಳು ರಾಜ್ಯಕ್ಕೆ ಜಲ ಗಂಡಾಂತರ - ಪ್ರಿಯಾಂಕ್ ಖರ್ಗೆ

ರಾಜ್ಯದಲ್ಲಿ ಬಿಸಿಗಾಳಿಯ ಪರಿಣಾಮವಾಗಿ ಜಲಮೂಲಗಳು ಬತ್ತುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಸಿದ್ದಾರೆ. ಈ ಸಮಸ್ಯೆ ನಿಭಾಯಿಸಲು ಸರ್ಕಾರ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್‌ಗಳನ್ನು ರಚಿಸಿದೆ.

Read Full Story