ಯಾದಗಿರಿ ಜಿಲ್ಲೆಯಲ್ಲಿ ನೋಂದಣಿಯಾದ 30,000ಕ್ಕೂ ಹೆಚ್ಚು ಗರ್ಭಿಣಿಯರಲ್ಲಿ 3,000ಕ್ಕೂ ಅಧಿಕ ಮಂದಿಯ ಹೆರಿಗೆಯ ಮಾಹಿತಿ ಲಭ್ಯವಿಲ್ಲದಿರುವುದು ಸಾವಿರಾರು ಭ್ರೂಣಹತ್ಯೆಗಳ ಅನುಮಾನಕ್ಕೆ ಕಾರಣವಾಗಿದೆ. ಕನ್ನಡಪ್ರಭ ವರದಿಯ ಬೆನ್ನಲ್ಲೇ ಆರೋಗ್ಯ ಇಲಾಖೆ ರಾಜ್ಯಮಟ್ಟದ ಸಮಿತಿ ರಚಿಸಿ ತನಿಖೆ ನಡೆಸುತ್ತಿದೆ.
- Home
- News
- State
- Karnataka News Live: ನೋಂದಾಯಿಸಿದ್ದ ಯಾದಗಿರಿಯ 3000 ಗರ್ಭಿಣಿಯರು ಪತ್ತೆಯೇ ಇಲ್ಲ; ಆರೋಗ್ಯ ಇಲಾಖೆಯೇ ಶಾಕ್
Karnataka News Live: ನೋಂದಾಯಿಸಿದ್ದ ಯಾದಗಿರಿಯ 3000 ಗರ್ಭಿಣಿಯರು ಪತ್ತೆಯೇ ಇಲ್ಲ; ಆರೋಗ್ಯ ಇಲಾಖೆಯೇ ಶಾಕ್

ಬೆಂಗಳೂರು: ಕೊಪ್ಪಳ, ಗದಗ, ರಾಯಚೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜಿ.ಬೆಂಚಮಟ್ಟಿ ಗ್ರಾಮದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ದೇವರಾಯನಗೌಡ ಪಾಟೀಲ (50) ಎಂಬುವರು ಮೃತಪಟ್ಟಿದ್ದಾರೆ. ಈ ಮಧ್ಯೆ, ಶಿವಮೊಗ್ಗ ಜಿಲ್ಲೆಯ ಹಲವೆಡೆ ಭಾರೀ ಗಾಳಿ-ಮಳೆಗೆ ಸಾವಿರಾರು ಅಡಕೆ ಮರಗಳು ಧರೆಗುರುಳಿವೆ. ಹೊಳೆಹೊನ್ನೂರು ಸಮೀಪದ ಅರಹತೊಳಲು ಗ್ರಾಮದಲ್ಲಿ ಆರ್.ಲೋಕೇಶ (52) ಎಂಬುವರು ತಮ್ಮ ಅಡಿಕೆ ಮನೆಗೆ ಹಾಕಿದ್ದ ಹೆಂಚುಗಳು ಹಾರಿ ಹೋಗಿದ್ದನ್ನು ನೋಡಿ, ಗಾಬರಿಗೊಂಡು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ.
ಗದಗ ಜಿಲ್ಲೆ ಮುಂಡರಗಿಯಲ್ಲಿ ಗಾಳಿ-ಮಳೆಗೆ ಖಾಸಗಿ ಕಂಪನಿಯ ಮೊಬೈಲ್ ಟವರ್ ನ ಕಂಬ ಮುರಿದು ಬಿದ್ದಿದೆ. ರಾಯಚೂರು ಜಿಲ್ಲೆ ಹಳೆ ಕೆರೆ ಎಂಬಲ್ಲಿ ಸಿಡಿಲು ಬಡಿದು 8 ಕುರಿ ಮತ್ತು 3 ಕುರಿಮರಿಗಳು ಮೃತಪಟ್ಟಿವೆ.
Karnataka News Live 28 April 2026ನೋಂದಾಯಿಸಿದ್ದ ಯಾದಗಿರಿಯ 3000 ಗರ್ಭಿಣಿಯರು ಪತ್ತೆಯೇ ಇಲ್ಲ; ಆರೋಗ್ಯ ಇಲಾಖೆಯೇ ಶಾಕ್
Karnataka News Live 28 April 2026ಅಡ್ಡಬೋರ್ ಮೂಲಕ ಬತ್ತಿದ ಕೆರೆ, ಬಾವಿಗಳಲ್ಲಿ ನೀರಿನ ಸೆಲೆ; ಮಂಗಳೂರಿನಲ್ಲಿ ಜಲಕ್ರಾಂತಿ
ಬೇಸಿಗೆಯಲ್ಲಿ ಬತ್ತಿಹೋಗುವ ಕರಾವಳಿಯ ಕೆರೆ ಮತ್ತು ಬಾವಿಗಳಿಗೆ ಅಡ್ಡ ಬೋರ್ ಕೊರೆಯುವ ಮೂಲಕ ಮತ್ತೆ ಜೀವ ನೀಡಲಾಗುತ್ತಿದೆ. ಭೂಮಿಯೊಳಗೆ ಅಡ್ಡಲಾಗಿ ಕೊರೆದು ನೀರಿನ ಸೆಲೆಯನ್ನು ಪತ್ತೆಹಚ್ಚುವ ಈ ಯಶಸ್ವಿ ತಂತ್ರವು, ವರ್ಷಪೂರ್ತಿ ನೀರು ಹರಿಯುವಂತೆ ಮಾಡಿ ನೀರಿನ ಅಭಾವವನ್ನು ನೀಗಿಸುತ್ತಿದೆ.
Karnataka News Live 28 April 2026Bengaluru - ಬೆತ್ತಲೆ ಸ್ಥಿತಿಯಲ್ಲಿ ಜಾರ್ಖಂಡ್ ಮೂಲದ ಯುವತಿಯ ಅರೆಕೊಳೆತ ಶವ ಪತ್ತೆ
ಜಾರ್ಖಂಡ್ ಮೂಲದ ಪೂಜಾ ದತ್ತಾ ಎಂಬ ಯುವತಿಯ ಮೃತದೇಹವು ಆಕೆ ವಾಸವಿದ್ದ ಬಾಡಿಗೆ ಮನೆಯಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಿಂದ ದುರ್ವಾಸನೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಇದು ಕೊ*ಲೆಯೋ ಅಥವಾ ಆತ್ಮ*ಹತ್ಯೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Karnataka News Live 28 April 2026ಕಾಂಗ್ರೆಸ್ಸಲ್ಲಿ ಅಹಿಂದ ದಂಗಲ್ - ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಸಲು ಒಂದು ಬಣ ಸಿದ್ಧತೆ
ಹುಬ್ಬಳ್ಳಿಯಲ್ಲಿ ಉದ್ದೇಶಿಸಿರುವ ಅಹಿಂದ ಸಮಾವೇಶವು ರಾಜ್ಯ ಕಾಂಗ್ರೆಸ್‌ನಲ್ಲಿ ಎರಡು ಬಣಗಳನ್ನು ಸೃಷ್ಟಿಸಿದೆ. ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಬಣವು ಪಕ್ಷಕ್ಕೆ ಲಾಭವೆಂದು ಸಮಾವೇಶಕ್ಕೆ ಒತ್ತಾಯಿಸಿದರೆ, ಮತ್ತೊಂದು ಬಣ ಪಕ್ಷಕ್ಕೆ ಹಾನಿಕರ ಎಂದು ವಿರೋಧ. ಈ ಗೊಂದಲ ಇದೀಗ ಹೈಕಮಾಂಡ್ ಅಂಗಳ ತಲುಪಿದೆ.