Karnataka News Live: ಬೆಳಗಾವಿ - ಭೀಕರ ರಸ್ತೆ ಅಪಘಾತ, ಇಬ್ಬರು ಯುವಕರು ಸ್ಥಳದಲ್ಲೇ ಸಾವು!

ಮೈಸೂರು: ತಾನೇ ಸೇದಿ ಬಿಸಾಡಿದ ಬೀಡಿಯ ಬೆಂಕಿ ತಗಲಿ ಇಡೀ ಮನೆಯೇ ಸುಟ್ಟು ಗುಜರಿ ವ್ಯಾಪಾರಿ ಸಜೀವ ದಹನಗೊಂಡಿರುವ ದುರ್ಘಟನೆ ಮೈಸೂರಿನ ಮಂಡಿ ಮೊಹಲ್ಲಾದ ಸರ್ ಖಾಜಿ ರಸ್ತೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಸಿದ್ದನಾಯ್ಕ (60) ಮೃತ ವೃದ್ಧ. ಬುಧವಾರ ಸಿದ್ದನಾಯ್ಕ ಅವರ ಪತ್ನಿ ಸಿದ್ದಮ್ಮ ಕೂಲಿ ಕೆಲಸಕ್ಕೆ ತೆರಳಿದ್ದು, ಮೊಮ್ಮಗಳು ಕಾಲೇಜಿಗೆ ಹೋಗಿದ್ದಳು. ಈ ವೇಳೆ ಮನೆಯಲ್ಲಿದ್ದ ಸಿದ್ದನಾಯ್ಕ ಬೀಡಿ ಸೇದಿದ ಬಳಿಕ ಮನೆಯಲ್ಲಿಯೇ ಎಸೆದಿದ್ದು, ಮನೆಯಲ್ಲಿ ಸಂಗ್ರಹಿಸಿದ್ದ ಹಳೆಯ ವಸ್ತುಗಳಿಗೆ ಬೆಂಕಿ ತಗುಲಿ, ದಟ್ಟ ಹೊಗೆ ಆವರಿಸಿಕೊಂಡಿದೆ. ಈ ವೇಳೆ ಸಿದ್ದನಾಯ್ಕ ಅವರು ಮನೆಯಿಂದ ಹೊರ ಬರಲು ಯತ್ನಿಸಿದರೂ ಸಾಧ್ಯವಾಗದೇ ಸಜೀವವಾಗಿ ದಹನವಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Karnataka News Live 4th September 2025ಬೆಳಗಾವಿ - ಭೀಕರ ರಸ್ತೆ ಅಪಘಾತ, ಇಬ್ಬರು ಯುವಕರು ಸ್ಥಳದಲ್ಲೇ ಸಾವು!
Karnataka News Live 4th September 2025ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ? ಎದೆಯೆತ್ತರಕ್ಕೆ ಬೆಳೆದ ಮಗ ಸಾವು, ಇಬ್ಬರ ಮಕ್ಕಳನ್ನು ಕಳ್ಕೊಂಡ ಹೆತ್ತ ತಾಯಿಗೆ ಇದೆಂಥ ಸ್ಥಿತಿ!
Karnataka News Live 4th September 2025GST ಸರಳೀಕರಣ ಬಡವರಿಗೆ, ಮಧ್ಯಮ ವರ್ಗದವರಿಗೆ ಪ್ರಯೋಜನ - ಸಂಸದ ಕಾಗೇರಿ
ಜಿಎಸ್ಟಿ ದರ ಪರಿಷ್ಕರಣೆಯಿಂದ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
Karnataka News Live 4th September 2025ಸೌಜನ್ಯ ಕೇಸ್ನಲ್ಲಿ ನನ್ನನ್ನೇ ರೇ*ಪ್ ಮಾಡೋ ಕಮೆಂಟ್ ಹಾಕಿದ್ರು! ಆಮೇಲೆ ಗೊತ್ತಾಯ್ತು ಅವ್ರು... ಶಾಕಿಂಗ್ ವಿಷ್ಯ ಹೇಳಿದ ಮಹಿಳಾ ಆಯೋಗದ ಅಧ್ಯಕ್ಷೆ
ಸೌಜನ್ಯ ಕೇಸ್ಗೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ತಮ್ಮ ವಿಡಿಯೋ ಮಿಸ್ಯೂಸ್ ಮಾಡಿ ರೇ*ಪ್ ಬೆದರಿಕೆ ಹಾಕಿದ್ದರ ವಿಚಿತ್ರ ಘಟನೆ ಸುವರ್ಣ ಪಾಡ್ಕಾಸ್ಟ್ನಲ್ಲಿ ವಿವರಿಸಿದ್ದಾರೆ.
Karnataka News Live 4th September 2025ಗುರುಗ್ರಾಮದಲ್ಲಿ 1BHK ಮನೆ ಬಾಡಿಗೆ 1 ಲಕ್ಷ, ಭಾರತದಲ್ಲಿ ದುಬಾರಿ ಜೀವನ, ರಷ್ಯನ್ ಮಹಿಳೆ ವಿಡಿಯೋ ವೈರಲ್!
ಭಾರತದಲ್ಲಿ ಜೀವನ ಅಗ್ಗವಾಗಿದೆ ಎಂದು ಕೆಲವರು ಹೇಳುತ್ತಾರೆ, ಆದರೆ ಗುರುಗ್ರಾಮದಲ್ಲಿ ಒಂದು ತಿಂಗಳಲ್ಲಿ ಒಂದು ಲಕ್ಷ ಖರ್ಚು ಮಾಡುವ ಹಣ ಇಷ್ಟೇ ಎಂದು ರಷ್ಯನ್ ಮೂಲದ ಮಹಿಳೆಯ ವಿಡಿಯೋ ವೈರಲ್ ಆಗಿದೆ.
Karnataka News Live 4th September 2025ಮಹಿಳಾ ನಾಯಕತ್ವಕ್ಕೆ ಎಚ್ಎಎಲ್ ಉತ್ತೇಜನ - 'ತೇಜಸ್ವಿ' ರಾಷ್ಟ್ರೀಯ ಮಹಿಳಾ ಸಮಾವೇಶ
ಬೆಂಗಳೂರಿನಲ್ಲಿ 'ತೇಜಸ್ವಿ' ಎಂಬ ಮೊದಲ ರಾಷ್ಟ್ರೀಯ ಮಹಿಳಾ ಸಮಾವೇಶವನ್ನು ಎಚ್ಎಎಲ್ ಮತ್ತು ಫೋರಮ್ ಆಫ್ ವಿಮೆನ್ ಇನ್ ಪಬ್ಲಿಕ್ ಸೆಕ್ಟರ್ ಆಯೋಜಿಸಿದ್ದವು. ಮನೆ ಮತ್ತು ಕೆಲಸದಲ್ಲಿ ಮಹಿಳೆಯರ ಸಾಧನೆಗಳನ್ನು ಗುರುತಿಸಲಾಯಿತು. ಕಾರ್ಯಕ್ರಮದ ಪೂರ್ಣ ವರದಿ ಇಲ್ಲಿದೆ
Karnataka News Live 4th September 2025ಕೋಟ್ಯಂತರ ಜೀವ ವಿಮಾ ಪಾಲಿಸಿದಾರರಿಗೆ ಸಿಹಿ ಸುದ್ದಿ! GST ಕಡಿತದ ನಂತರ LIC ಕಂತು ಅಗ್ಗ? ಪ್ರೀಮಿಯಂ ಮೇಲೆ ಎಷ್ಟು ಉಳಿತಾಯ? ತಿಳಿಯಿರಿ
Karnataka News Live 4th September 2025ಧರ್ಮಸ್ಥಳ ಕೇಸ್ ಯೂಟ್ಯೂಬರ್ ಸಮೀರ್ ಮನೆ ಮಹಜರು; ಇದೆಲ್ಲಾ ಸುಳ್ಳು ಕೇಸ್ ಎಂದ ಮಟ್ಟಣ್ಣನವರ್
Karnataka News Live 4th September 2025ಬಳ್ಳಾರಿಯಲ್ಲಿ ರಾಜ್ಯದ 2ನೇ ಬಯೋ ಇನೋವೇಶನ್ ಕೇಂದ್ರ ನಿರ್ಮಿಸಲು ಸರ್ಕಾರ ಸಿದ್ದತೆ!
Karnataka News Live 4th September 2025ಶಿಕ್ಷಕರ ದಿನಾಚರಣೆಗೆ ನಿಮ್ಮ ಗುರುಗಳಿಗೆ ನೀಡಬಹುದಾದ ಟಾಪ್ 10 ಉಡುಗೊರೆಗಳಿವು
Karnataka News Live 4th September 2025ರಾಷ್ಟ್ರಮಟ್ಟದ ಶಿಕ್ಷಕ ಪ್ರಶಸ್ತಿಗೆ ಮೈಸೂರು ಮಧುಸೂಧನ್ ಭಾಜನ; ಈ ಕಾರ್ಯಕ್ಕೆ ಮೆಚ್ಚಲೇಬೇಕು!
ಮೈಸೂರಿನ ಹಿನಕಲ್ ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷಕ ಕೆ.ಎಸ್.ಮಧುಸೂದನ್ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನವೀನ ಬೋಧನಾ ವಿಧಾನ ಮತ್ತು ತಂತ್ರಜ್ಞಾನದ ಸದ್ಬಳಕೆಗಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಕರ್ನಾಟಕದಿಂದ ಆಯ್ಕೆಯಾದ ಏಕೈಕ ಶಿಕ್ಷಕರೆಂಬ ಹೆಗ್ಗಳಿಕೆ ಅವರದು.
Karnataka News Live 4th September 2025ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಬಂದ ಕನ್ನಡ ಅಂಕಿಯ ಎಚ್‌ಎಂಟಿ ಗಂಡಭೇರುಂಡ ವಾಚ್, ಸೋಲ್ಡ್‌ಔಟ್ ಆಗೋ ಮುನ್ನ ಖರೀದಿಸಿ!
Karnataka News Live 4th September 2025ಬಂಗಾರದ ಬೆಲೆ ಕುಸಿತದ ಬೆನ್ನಲ್ಲಿಯೇ GST ಹೊರೆಯಾಗದೇ ಚಿನ್ನಾಭರಣ ಖರೀದಿ ಮಾಡಿ; ಇಲ್ಲಿವೆ 5 ಸೂಪರ್ ಟಿಪ್ಸ್!
ಚಿನ್ನಾಭರಣ ಖರೀದಿ ಸಲಹೆಗಳು: GST ಕೌನ್ಸಿಲ್ ಹಲವು ವಸ್ತುಗಳ ಮೇಲಿನ GST ಕಡಿಮೆ ಮಾಡಿದೆ, ಆದರೆ ಚಿನ್ನ ಮತ್ತು ಬೆಳ್ಳಿ GSTಯಲ್ಲಿ ಯಾವುದೇ ಬದಲಾವಣೆ ಇಲ್ಲ. ಚಿನ್ನದ ಮೇಲೆ 3% ಮತ್ತು ಆಭರಣ ತಯಾರಿಕಾ ಶುಲ್ಕದ ಮೇಲೆ 5% GST ಈಗಲೂ ಅನ್ವಯವಾಗುತ್ತದೆ. ಹಣ ಉಳಿಸಲು ಈ 5 ಸಲಹೆಗಳನ್ನು ತಿಳಿದುಕೊಳ್ಳಿ.
Karnataka News Live 4th September 2025ಧರ್ಮಸ್ಥಳ ಅಸಹಜ ಸಾವು ಕೇಸ್, ಸೋನಿಯಾ ಗಾಂಧಿಗೆ ಪತ್ರ ಬರೆದ ಮಹಿಳಾ ಸಂಘಟನೆಗಳು!
Karnataka News Live 4th September 2025'ನೀವು ಧಿಕ್ಕಾರ ಕೂಗೋದು ಬಿಟ್ಟು ಬೇರೇನೂ ಮಾಡೋಕ್ಕಾಗಲ್ಲ..' ಭೂಮಿ ನೀಡಲ್ಲ ಎಂದ ರೈತರ ಮೇಲೆ ಡಿಕೆಶಿ ಗರಂ!
Karnataka News Live 4th September 2025ಒಂದೇ ವೇದಿಕೆಗೆ ಬಂದ ಡಿಕೆಶಿ-ಸದ್ಗುರು ಆದ್ರೆ ಪರಸ್ಪರ ಭೇಟಿ ಆಗದೇ ತೆರಳಿದ ಡಿಸಿಎಂ!
Karnataka News Live 4th September 2025ಮಳೆಗಾಲದಲ್ಲಿ ಹಣ್ಣು-ತರಕಾರಿಗಳ ಮೇಲೆ ಸುಳಿದಾಡುವ ಕಪ್ಪು ಕೀಟಗಳನ್ನು ತೊಡೆದುಹಾಕಲು ಹೀಗೆ ಮಾಡಿ
ಮಳೆಗಾಲದಲ್ಲಿ ಹಣ್ಣು ತರಕಾರಿಗಳ ಮೇಲೆ ಕೀಟಗಳು ಮುತ್ತುವುದು ಸಾಮಾನ್ಯ. ಇದರಿಂದ ಮನೆಯಲ್ಲಿಯೂ ಕೊಳಕಾಗುತ್ತದೆ. ಹಣ್ಣು ತರಕಾರಿಗಳನ್ನು ಹೇಗೆ ಕೀಟ ಮುಕ್ತವಾಗಿಡುವುದು ಎಂಬುದನ್ನು ತಿಳಿಯಿರಿ.
Karnataka News Live 4th September 2025ಇಂದು ಅನಂತ್‌ನಾಗ್ ಜನ್ಮದಿನ, ಎಂದಿಗೂ ಬೋರ್ ಆಗದ ಅವರ 10 ಸಿನಿಮಾಗಳು!
ಹಿರಿಯ ನಟ ಅನಂತ್‌ನಾಗ್ ಅವರು ಇಂದು ತಮ್ಮ 77ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದಾರೆ. 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅನಂತ್ ನಾಗ್‌ಗೆ ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಪದ್ಮಭೂಷಣ ನೀಡಿ ಗೌರವ ಸಲ್ಲಿಸಿತ್ತು.
Karnataka News Live 4th September 2025ನಂಗೆ ಕನ್ನಡ ಬರುತ್ತೆ ಎಂದ ಮುಂಬೈಕರ್‌ಗೆ ಬಾರ್‌ನಲ್ಲಿ ರಾಜಾತಿಥ್ಯ ನೀಡಿದ ಕನ್ನಡಿಗರು
ಬೆಂಗಳೂರಿನಲ್ಲಿ ಮುಂಬೈ ಮೂಲದ ವ್ಯಕ್ತಿ ತನಗೆ ಕನ್ನಡ ಬರುತ್ತೆ ನಾನು ಕನ್ನಡ ಕಲಿತಿದ್ದೀನಿ ಎಂದಾಗ ಅಲ್ಲಿ ಸೇರಿದ ಕನ್ನಡಿಗರು ಏನು ಮಾಡಿದರು ಎಂಬುದನ್ನು ಆ ವ್ಯಕ್ತಿಯ ಕನ್ನಡ ಸ್ನೇಹಿತನೋರ್ವ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಭಾರಿ ವೈರಲ್ ಆಗಿದೆ