ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾದ ದಿನವೇ ಎರಡು ದುರಂತಗಳು ಸಂಭವಿಸಿವೆ. ಚಿತ್ರದುರ್ಗದಲ್ಲಿ ಪರೀಕ್ಷೆಯಲ್ಲಿ ಫೇಲ್ ಆದ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡರೆ, ಕೋಲಾರದಲ್ಲಿ ಪಾಸಾದ ಖುಷಿಯಲ್ಲಿ ಈಜಲು ಹೋದ ಮತ್ತೊಬ್ಬ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಚಿತ್ರದುರ್ಗ (ಏ.26): ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಫೇಲ್ ಆದ ಹಿನ್ನಲೆಯಲ್ಲಿ ಇಲ್ಲಿನ ಡಾನ್ ಬೋಸ್ಕೋ ಶಾಲೆಯ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾನೆ. ನಗರದ ಹೊರಪೇಟೆಯ ಅಯಾನ್ ಬೇಗ್ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಫಲಿತಾಂಶ ಪ್ರಕಟವಾದ ತಕ್ಷಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕನ್ನಡ ವಿಷಯದಲ್ಲಿ 125 ಅಂಕಗಳಿಗೆ 34 ಅಂಕ ಪಡೆದಿದ್ದ. ಫೇಲ್ ಆದ ಹಿನ್ನಲೆ ಅವಮಾನಿತನಾಗಿ ಮಧ್ಯಾಹ್ನ 12 ಗಂಟೆ ವೇಳೆಗೆ ಫ್ಯಾನ್ಗೆ ವೇಲ್ನಿಂದ ನೇಣು ಬಿಗಿದು ಜೀವ ಕಳೆದುಕೊಂಡಿದ್ದಾನೆ. ನಗರ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
SSLC ಪಾಸಾದ ಖುಷಿಯಲ್ಲಿ ಈಜಲು ಹೋದ ವಿದ್ಯಾರ್ಥಿ ಸಾವು
ಕೋಲಾರ: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡ ತಕ್ಷಣ ಪಾಸಾದ ಖುಷಿಯಲ್ಲಿ ಈಜಲು ಹೋದ ಬಾಲಕನೊಬ್ಬ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಮುಳಬಾಗಲು ತಾಲೂಕಿನಲ್ಲಿ ನಡೆದಿದೆ. ಕಿರಣ್ ತನ್ನ ಸ್ನೇಹಿತರ ಜೊತೆ ಈಜಲು ಹೋಗಿ ಆಳದ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಆತನಿಗೆ ಈಜು ಬರುತ್ತಿರಲಿಲ್ಲ. ಕನ್ನಡ-೪೩, ಇಂಗ್ಲೀಷ್-೪೧, ಹಿಂದಿ-೩೮, ಗಣಿತ-೩೮, ವಿಜ್ಞಾನ-೩೪, ಸಮಾಜ-೪೫ ಸೇರಿದಂತೆ ೨೩೯ ಅಂಕಗಳನ್ನು ಪಡೆದಿದ್ದ ಕಿರಣ್ ೧೨ ಗಂಟೆಯ ವೇಳೆಗೆ ಫಲಿತಾಂಶ ನೋಡಿ ಪಾಸಾದ ಖುಷಿಯಲ್ಲಿ ಮನೆಯ ಬಳಿಯಿದ್ದ ಬೃಹತ್ ಗಾತ್ರದ ಬಾವಿಗೆ ಸ್ನೇಹಿತರೊಂದಿಗೆ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.
ಕಿರಣ್ ಈಜಲು ಬೆಂಡ್ ಕಟ್ಟಿದ್ದರೂ ಸಹ ಕಿತ್ತು ಹಾಕಿ ಬಾವಿಯಲ್ಲಿ ಈಜುಲು ಹೋಗಿ ಮೃತಪಟ್ಟಿದ್ದು


