ಬೆಳಗಾವಿ ಜಿಲ್ಲೆಯ ಸಂಕೇಶ್ವರದ, ಹಿರಣ್ಯಕೇಶಿ ನದಿಯಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋದ ತಾಯಿ ಕೂಡ ನೀರುಪಾಲಾಗಿದ್ದಾರೆ. ಈ ದುರಂತದಲ್ಲಿ ತಾಯಿ ಲಕ್ಷ್ಮಿ ಹಾಗೂ ಮಗ ಸುಪ್ರೀತ್ ಮೃತಪಟ್ಟಿದ್ದು, ತಾಯಿಯ ಮೃತದೇಹ ಪತ್ತೆಯಾಗಿದೆ ಮಗನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ನದಿಯಲ್ಲಿ ಮುಳುಗಿ ತಾಯಿ ಮಗು ಸಾವು

ಚಿಕ್ಕೋಡಿ: ನದಿಯಲ್ಲಿ ಮುಳುಗಿ ತಾಯಿ ಮಗ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ನಡೆದಿದೆ. ನಿನ್ನೆ ಈ ದುರಂತ ನಡೆದಿದೆ. ನಿನ್ನೆ ತಾಯಿ ಮೃತದೇಹ ಪತ್ತೆಯಾಗಿದ್ದು, ಮಗನಿಗಾಗಿ ಹುಡುಕಾಟ ನಡೆದಿದೆ. ಸಾವನ್ನಪ್ಪಿದ ತಾಯಿ ಮಗನನ್ನು ತಾಯಿ 27 ವರ್ಷದ ಲಕ್ಷ್ಮಿ ಕುಠೋಳಿ ಹಾಗೂ 10 ವರ್ಷದ ಸುಪ್ರೀತ್ ಕುಠೋಳಿ ಎಂದು ಗುರುತಿಸಲಾಗಿದೆ.

ಮುಳುಗುತ್ತಿದ್ದ ಮಗನ ರಕ್ಷಿಸಲು ಹೋಗಿ ತಾಯಿಯೂ ಬಲಿ:

ಸಂಕೇಶ್ವರ ಪಟ್ಟಣದ ಹಿರಣ್ಯಕೇಶಿ ನದಿಯಲ್ಲಿ ಈ ದುರಂತ ನಡೆದಿದೆ. ನಿನ್ನೆ ತಾಯಿ ಮೃತದೇಹ ಪತ್ತೆಯಾಗಿದ್ದು, ಮಗನಿಗಾಗಿ ಹುಡುಕಾಟ ಮುಂದುವರೆದಿದೆ. ಸಂಕೇಶ್ವರದ ಶಂಕಲಿಂಗ ದೇವಸ್ಥಾನದ ಹಿಂಭಾಗದ ಹಿರಣ್ಯಕೇಶಿ ನದಿಯಲ್ಲಿ ಈ ದುರಂತ ನಡೆದಿತ್ತು. ಮಗ ಸುಪ್ರೀತ್ ನದಿಯಲ್ಲಿ ಇಳಿದಾಗ ಮುಳುಗಲಾರಂಭಿಸಿದ್ದು, ಮಗನನ್ನ ರಕ್ಷಣೆ ಮಾಡಲು ಹೋಗಿ ತಾಯಿಯೂ ನೀರುಪಾಲಾಗಿದ್ದಾರೆ.

ನಿನ್ನೆ ರಾತ್ರಿಯೇ ತಾಯಿಯ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರಗಡೆ ತೆಗೆದಿದ್ದು, ಮಗ ಸುಪ್ರಿತ್‌ಗಾಗಿ ಬೋಟ್‌ನಲ್ಲಿ ನದಿಯಲ್ಲಿ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಕಾಡಾನೆಗಳ ಬಳಿಕ ಕಾಡುಕೋಣಗಳ ವೈಲ್ಡ್ ರೈಡ್: ಟೀ ಎಸ್ಟೇಟ್‌ನಲ್ಲಿ ದಾಂಧಲೆ: 1 ಕಾಟಿ ಸಾವು