ನಾನು ದೇಶಕ್ಕೋಸ್ಕರ ಸೂ ಸೈಡ್ ಬಾ0ಬರ್‌ ಆಗಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ಹೋಗುತ್ತೇನೆ. ಪ್ರತಾಪ್ ಸಿಂಹ ಬರ್ತಾರಾ ಕೇಳಿ ಎಂದು ವಸತಿ ಸಚಿವ  ಜಮೀರ್ ಅಹಮದ್ ಖಾನ್‌ ಸವಾಲು ಹಾಕಿದರು.

ಹೊಸಪೇಟೆ (ಮೇ.4): ನಾನು ದೇಶಕ್ಕೋಸ್ಕರ ಸೂ ಸೈಡ್ ಬಾ0ಬರ್‌ ಆಗಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ಹೋಗುತ್ತೇನೆ. ಪ್ರತಾಪ್ ಸಿಂಹ ಬರ್ತಾರಾ ಕೇಳಿ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್‌ ಸವಾಲು ಹಾಕಿದರು.

ನಗರದಲ್ಲಿ ಶನಿವಾರ ಕೆಡಿಪಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೋರ್ವ ಮಂತ್ರಿಯಾಗಿ ದೇಶದ ಬಗ್ಗೆ ಅಭಿಮಾನದಿಂದ ಹೇಳುತ್ತಿದ್ದೇನೆ. ತ್ಯಾಗ ಮಾಡುತ್ತೇನೆ ಅಂತ ಹೇಳಿದ್ದೇನೆ. ಪಾಕಿಸ್ತಾನ ಸತ್ತೋಗಿದೆ ಬಿಡಿ. ಅಲ್ಲಿ ಏನೂ ಇಲ್ಲ. ಯುದ್ಧಕ್ಕೆ ಹೋಗಲು ಸಿದ್ಧನಿದ್ದೇನೆ ಎಂದು ಪುನರುಚ್ಚರಿಸಿದ ಸಚಿವರು, ನಾನು ನಿಜವಾಗಲು ಹೇಳುತ್ತಿದ್ದೇನೆ. ತಮಾಷೆಗೆ ಹೇಳಿದ್ದಲ್ಲ. ದೇಶಕ್ಕೋಸ್ಕರ ಅಷ್ಟು ತ್ಯಾಗ ಮಾಡದಿದ್ದರೆ ಮತ್ತೇನು ಎಂದು ಪ್ರಶ್ನಿಸಿದರು.

ದೇಶದ ಬಗ್ಗೆ ಅಭಿಮಾನ ಇಟ್ಕೊಂಡು ಹೇಳುತ್ತಿದ್ದೇನೆ. ದೇಶಕ್ಕೋಸ್ಕರ ನಾನು ತ್ಯಾಗ ಮಾಡೋಕೆ ಸಿದ್ಧ. ಪ್ರತಾಪ ಸಿಂಹಗೆ ಹೇಳಿ, ಪ್ರಧಾನಿ ನರೇಂದ್ರ ಮೋದಿಗೆ ಹೇಳಿ, ನನಗೆ ಅವಕಾಶ ಮಾಡಿಕೊಡೋಕೆ. ಅವರು ಬರೀ ಮಾತಾಡುತ್ತಾರೆ. ಆದರೆ, ನಾನು ಹೋಗೋಕೆ ಸಿದ್ಧನಿದ್ದೇನೆ ಎಂದರು.

ಇದನ್ನೂ ಓದಿ: ಉಗ್ರ ಪಾಕ್‌ಗೆ ಮತ್ತೆ ಭಾರತ 3 ನಿರ್ಬಂಧ, ಹೊಸ ನಿರ್ಬಂಧಗಳೇನು?

ಬಿಜೆಪಿಗೆ ಬಹುಮತ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆ ವಾಚ್‌ಮನ್‌ ಆಗುತ್ತೇನೆ ಎಂದಿದ್ದೆ. ಆದರೆ ಅವರಿಗೆ ಸಂಪೂರ್ಣ ಬಹುಮತ ಬಂತಾ? ಜನ ಆಶೀರ್ವಾದ ಮಾಡಿದರಾ? ಈ ವರೆಗೆ ಬಿಜೆಪಿಗೆ ಜನ ಬಹುಮತ ಕೊಟ್ಟಿಲ್ಲ. ಆಪರೇಷನ್ ಕಮಲ ಮಾಡಿಯೇ ಸರ್ಕಾರ ರಚಿಸಿದ್ದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.