ಸ್ನೇಹಿತರ ಜೊತೆ ಟ್ರಿಪ್ ಹೋಗಿ ವಾಪಸ್ ಆಗ್ತಿದ್ದ ವೇಳೆ ಟ್ರೈನ್ ನಿಂದ ಬಿದ್ದು ಯುವಕ ಸಾವನ್ನಪ್ಪಿದ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾ. ಸಾಸಲಮರಿ ಬ್ರಿಡ್ಜ್ ಬಳಿ ನಡೆದಿದೆ. 18 ವರ್ಷದ ಸುಮಂತ್ ಕುಮಾರ್ ಮೃತಪಟ್ಟ ಯುವಕ.
ಟ್ರಿಪ್ ಹೋಗಿ ವಾಪಸ್ ಆಗ್ತಿದ್ದ ವೇಳೆ ಟ್ರೈನ್ ನಿಂದ ಬಿದ್ದು ಯುವಕ ಸಾವು
ರಾಯಚೂರು: ಸ್ನೇಹಿತರ ಜೊತೆ ಟ್ರಿಪ್ ಹೋಗಿ ವಾಪಸ್ ಆಗ್ತಿದ್ದ ವೇಳೆ ಟ್ರೈನ್ ನಿಂದ ಬಿದ್ದು ಯುವಕ ಸಾವನ್ನಪ್ಪಿದ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾ. ಸಾಸಲಮರಿ ಬ್ರಿಡ್ಜ್ ಬಳಿ ನಡೆದಿದೆ. 18 ವರ್ಷದ ಸುಮಂತ್ ಕುಮಾರ್ ಮೃತಪಟ್ಟ ಯುವಕ. ಸುಮಂತ್ ಕುಮಾರ್ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಕಸಬಾ ಲಿಂಗಸುಗೂರು ನಿವಾಸಿಯಾಗಿದ್ದಾನೆ. ಸುಮಂತ್ ಕುಮಾರ್ ಮೊನ್ನೆಯಷ್ಟೇ ಆರು ಸ್ನೇಹಿತರ ಜೊತೆ ದಾಂಡೇಲಿಗೆ ಟ್ರಿಪ್ ಹೋಗಿದ್ದ. ನಿನ್ನೆ ಹುಬ್ಬಳ್ಳಿ ಮೂಲಕ ಸಿಂಧನೂರಿಗೆ ವಾಪಸ್ ಬರ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಸಿಂಧನೂರು ತಲುಪುವುದಕ್ಕೆ ಕೇವಲ 5 ಕಿಲೋ ಮೀಟರ್ ಇರುವಾಗ ದುರಂತ:
ರೈಲು ರಾಯಚೂರಿನ ಸಿಂಧನೂರು ತಲುಪುವುದಕ್ಕೆ ಕೇವಲ 5 ಕಿಲೋ ಮೀಟರ್ ಇರುವಾಗ ಈ ದುರಂತ ನಡೆದಿದೆ. ಬಳಿಕ ಸ್ನೇಹಿತರು ರೈಲಿನಿಂದ ಇಳಿದು ಸುಮಂತ್ಗಾಗಿ ಹುಡುಕಾಟ ನಡೆಸಿದಾಗ ಸಾಸಲಮರಿ ಕ್ಯಾಂಪ್ ಬಳಿ ಸುಮಂತ್ ಶವ ಪತ್ತೆಯಾಗಿದೆ. ಆದರೆ ಬೆಳಗಿನ ಜಾವದಲ್ಲಿ ಸುಮಂತ್ ರೈಲಿನಿಂದ ಕೆಳಗೆ ಬಿದ್ದಿದ್ದು ಹೇಗೆ ಎಂಬುದೇ ಈಗ ನಿಗೂಢವಾಗಿದೆ. ಘಟನಾ ಸ್ಥಳಕ್ಕೆ ರಾಯಚೂರು ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ನೀರು ಕೇಳಿ ಬಂದ ಅಪರಿಚಿತರಿಂದ ವೃದ್ಧೆಯ ಮನೆ ದರೋಡೆ: 18 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿ


