SIT Raids 5 Locations in Kalaburagi Over Aland Vote Theft Case: ಕಲ್ಬುರ್ಗಿ ಜಿಲ್ಲೆ ಆಳಂದ ಕ್ಷೇತ್ರದ ಮತಗಳ್ಳತನ ಪ್ರಕರಣಕ್ಕೆ ಸಂಬಂಧ ಎಸ್‌ಐಟಿ ತನಿಖೆ ಚುರುಕುಗೊಳಿಸಿದೆ. ರಾಜ್ಯ ಸರ್ಕಾರದ ಆದೇಶದ ಮೇರೆಗೆ, ಕಲ್ಬುರ್ಗಿ ನಗರದ 5 ಕಡೆ ದಾಳಿ ನಡೆಸಿ, ಹಲವರನ್ನು ವಶಕ್ಕೆ ಪಡೆದಿದೆ.
ಕಲ್ಬುರ್ಗಿ (ಅ.1): ಕಲ್ಬುರ್ಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿದ್ದು, ರಾಜ್ಯ ಸರ್ಕಾರದ ಆದೇಶದ ಮೇರೆಗೆ ಎಸ್‌ಐಟಿ ಕಲಬುರಗಿ ನಗರದ 5 ಕಡೆ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿದೆ.
ಏನಿದು ಮತಗಳ್ಳತನ?
ರೋಜಾ ಬಡಾವಣೆಯ ದರ್ಗಾ ಏರಿಯಾ ಸೇರಿದಂತೆ ನಗರದ ಕೆಲ ಭಾಗಗಳಲ್ಲಿ ಎಸ್‌ಐಟಿ ಟೀಂ ದಾಳಿ ನಡೆಸಿದೆ. ಕಳೆದ ಚುನಾವಣೆಯಲ್ಲಿ ವ್ಯಾಪಕ ಮತಗಳ್ಳತನ ನಡೆದಿದೆ ಎಂದು ಆಳಂದ ಶಾಸಕ ಬಿಆರ್ ಪಾಟೀಲ್ ಆರೋಪಿಸಿದ್ದರು. ಈ ಆರೋಪಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಗಮನಕ್ಕೆ ಬಂದು, ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ SIT ತನಿಖೆಗೆ ಆದೇಶ ನೀಡಿತ್ತು. ಕಳೆದ ಕೆಲ ದಿನಗಳಿಂದ ಕಲ್ಬುರ್ಗಿಯಲ್ಲಿ ಬೀಡು ಬಿಟ್ಟಿದ್ದ SIT ತಂಡ ಇಂದು ಚುರುಕುಗೊಂಡಿದ್ದು ಸರ್ಚ್ ವಾರಂಟ್‌ಗಳೊಂದಿಗೆ ಮನೆಗಳ ಶೋಧ ನಡೆಸುತ್ತಿದೆ.
ಇದನ್ನೂ ಓದಿ: 'ಬಿಜೆಪಿಯವ್ರು ಯಾವಾಗ್ಲೂ ಧಮ್ಮಿದ್ರೆ ಬ್ಯಾನ್ ಮಾಡಿ ಅಂತಾರೆ..' ಆರೆಸ್ಸೆಸ್ ಚಟುವಟಿಕೆ ನಿಷೇಧಕ್ಕೆ ಸಿಎಂ ಪರೋಕ್ಷ ಸುಳಿವು!
ಎಲ್ಲೆಲ್ಲಿ ದಾಳಿ?
ರೋಜಾ ಬಡಾವಣೆಯ ದರ್ಗಾ ಏರಿಯಾದಲ್ಲಿನ ಮನೆಗಳ ಮೇಲೆ ದಾಳಿ. ದರ್ಗಾ ಏರಿಯಾದಲ್ಲಿನ ಅಫಕ್ ಎಂಬವರ ಮನೆಯ ಮೇಲೆ ವಿಶೇಷ ದಾಳಿ ನಡೆದಿದ್ದು, ಅವರು ಸದ್ಯ ದುಬೈಯಲ್ಲಿರುವ ಮಾಹಿತಿ ಲಭ್ಯವಾಗಿದೆ. SIT ಅಧಿಕಾರಿಗಳು ವಶಪಡಿಸಿಕೊಂಡವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಸತ್ಯಾಂಶಗಳು ಬಹಿರಂಗವಾಗಬಹುದು ಎಂದು ನಿರೀಕ್ಷೆಯಿದೆ. ಮುಂದಿನ ವಿವರಗಳಿಗಾಗಿ ಫಾಲೋ ಮಾಡಿ.


