ಬೆಂಗಳೂರಿನ ಬೆಳ್ಳಂದೂರಿನಲ್ಲಿ ಬೀದಿ ನಾಯಿಯೊಂದರ ಮೇಲೆ ಸಾಮೂಹಿಕ ಅತ್ಯಾ೧ಚಾರ ನಡೆದಿದೆ ಎಂಬ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ನಿವಾಸಿಯೊಬ್ಬರ ದೂರಿನ ಅನ್ವಯ ಪೊಲೀಸರು ಎಫ್‌ಐಆರ್‌ ದಾಖಲಿಸಿ, ನಾಯಿಯ ವೈದ್ಯಕೀಯ ಪರೀಕ್ಷೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು (ನ.3): ಬೀದಿ ನಾಯಿಯೊಂದರ ಮೇಲೆ ವಿಕೃತ ಕಾಮಿಗಳು ಸಾಮೂಹಿಕ ಅತ್ಯಾ೧ಚಾರ ಎಸೆಗಿದ ಆರೋಪದಡಿ ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕನಾಯಕನಹಳ್ಳಿಯ ಅಪಾರ್ಟ್‌ಮೆಂಟ್‌ವೆಂದರ ನಿವಾಸಿ ದಿತಿಪ್ರಿಯಾ ಎಂಬುವವರು ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಪ್ರಾಣಿಗಳ ಮೇಲಿನ ಹಿಂಸೆ ನಿಯಂತ್ರಣ ಕಾಯ್ದೆ ಮತ್ತು ಬಿಎನ್‌ಎಸ್‌ ಸೆಕ್ಷನ್‌ 325 ಅಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ದೂರು?:

ಬೀದಿ ನಾಯಿಯೊಂದರ ಮೇಲೆ ಅಪರಿಚಿತರು ಸಾಮೂಹಿಕ ಅತ್ಯಾ೧ಚಾರ ನಡೆಸುತ್ತಿದ್ದರು ಎಂದು ದೂರುದಾರೆ ದಿತಿಪ್ರಿಯಾಗೆ ಆಕೆಯ ಸ್ನೇಹಿತಯೊಬ್ಬರು ಅ.13ರಂದು ತಿಳಿಸಿದ್ದರಂತೆ. ಮಿಲಿ ಎನ್ನುವ ನಾಯಿಗೆ ದಿತಿಪ್ರಿಯಾ ನಿತ್ಯ ಊಟ ಹಾಕುತ್ತಿದ್ದರು. ಅ.16ರಂದು ದಿತಿಪ್ರಿಯಾ ಅವರು ಮಿಲಿಯನ್ನು ನೋಡಿದಾಗ, ಅದರ ಖಾಸಗಿ ಅಂಗ ಊದಿಕೊಂಡಿರುವುದು ಕಂಡು ಬಂದಿದೆ. ಹೀಗಾಗಿ ಅಂದು ಸಾಮೂಹಿಕ ಅತ್ಯಾ೧ಚಾರಕ್ಕೆ ಒಳಗಾದ ಬೀದಿ ನಾಯಿ ಇದೇ ಇರಬಹುದು ಎಂದು ದೂರುದಾರೆ ಶಂಕಿಸಿದ್ದಾರೆ. ಈ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬೆಳ್ಳಂದೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಎಫ್‌ಎಸ್ಎಲ್‌ಗೆ ಮಾದರಿ ರವಾನೆ:

ಪ್ರಕರಣದ ತನಿಖೆಗಿಳಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಸುಮಾರು 25 ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ, ಮಿಲಿ ಎಂಬ ಬೀದಿ ನಾಯಿಯನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ನಾಯಿಯನ್ನು ಪಶು ಆಸ್ಪತ್ರೆಗೆ ಕೊಂಡೊಯ್ದು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ಈ ನಾಯಿ ಮೇಲೆ ಅತ್ಯಾ೧ಚಾರ ನಡೆದಿರುವ ಬಗ್ಗೆ ಖಚಿತತೆ ಇಲ್ಲ. ಆದರೂ ನಾಯಿಯ ವೆಜೈನಲ್ ಸ್ವಾಬ್‌ ಅನ್ನು ಸಂಗ್ರಹಿಸಿ, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‌ಎಸ್‌ಎಲ್‌) ಕಳುಹಿಸಿದ್ದಾರೆ. ಈ ವರದಿ ಬಂದ ಬಳಿಕವೇ ಅತ್ಯಾ೧ಚಾರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.