ದುಬೈ ಅತ್ಯಂತ ಸುರಕ್ಷಿತ ಪ್ರವಾಸಿ ತಾಣ ಎನ್ನಲಾಗುತ್ತೆ. ಅದನ್ನು ಮಹಿಳೆಯೊಬ್ಬರು ಪರೀಕ್ಷೆ ಮಾಡಿದ್ದಾರೆ. ದುಬಾರಿ ಬೆಲೆಯ ಬ್ಯಾಗ್ ಬಿಟ್ಟು ದೋಣಿ ವಿಹಾರಕ್ಕೆ ಹೋಗಿದ್ದಾರೆ. ವಾಪಸ್ ಬಂದಾಗ ಬ್ಯಾಗ್ ಇತ್ತಾ? 

ಪ್ರವಾಸ (trip )ಕ್ಕೆ ಹೋದಾಗ ದೊಡ್ಡ ಜವಾಬ್ದಾರಿ ಅಂದ್ರೆ ಬ್ಯಾಗ್ ಕಾಯ್ದುಕೊಳ್ಳೋದು. ಬ್ಯಾಗ್ ನಲ್ಲಿ ಬಟ್ಟೆ ಇರ್ಲಿ ಇಲ್ಲ ದುಡ್ಡಿರಲಿ, ಬ್ಯಾಗ್ ಸುರಕ್ಷಿತವಾಗಿದ್ಯಾ ಅಂತ ಹತ್ತು ಬಾರಿ ನೋಡ್ತಿರ್ತೇವೆ. ಅದ್ರಲ್ಲೂ ಪರ್ಸ್ ಇಲ್ಲ ಬ್ಯಾಗ್ ಬೆಲೆಯೇ ದುಬಾರಿ ಆಗಿದ್ರೆ ಕಂಕಳನ್ನು ಬಿಟ್ಟು ಅದನ್ನು ಬೇರೆ ಎಲ್ಲೂ ಇಡೋ ಸಾಹಸ ಮಾಡೋದಿಲ್ಲ. ಭಾರತ ಮಾತ್ರವಲ್ಲ ವಿಶ್ವದ ಅಣೇಕ ದೇಶಗಳಲ್ಲಿ ಕಳfಳತನದ ಪ್ರಮಾಣ ಹೆಚ್ಚಿದೆ. ಒಂದು ಪಾಲಿಥಿನ್ ಕವರ್ ಇದ್ರೂ ಅದನ್ನು ಜನ ಬಿಡೋದಿಲ್ಲ. ಆದ್ರೆ ದುಬೈ ಹಾಗಲ್ಲ ಎನ್ನುವ ಮಾತಿದೆ. ಇಲ್ಲೊಬ್ಬ ಮಹಿಳೆ ಒಂದಲ್ಲ ಎರಡಲ್ಲ ಬರೋಬ್ಬರಿ 25 ಲಕ್ಷ ಬೆಲೆಯ ಬ್ಯಾಗನ್ನು ದುಬೈನ ಸಾರ್ವಜನಿಕ ಸ್ಥಳದಲ್ಲಿ ಬಿಟ್ಟು ಆರಾಮವಾಗಿ ದೋಣಿ ವಿಹಾರ ಮಾಡಿದ್ದಾಳೆ. ದುಬೈನಲ್ಲಿ ಬ್ಯಾಗ್ ಎಷ್ಟು ಸುರಕ್ಷಿತ ಅನ್ನೋದನ್ನು ಚೆಕ್ ಮಾಡೋದೇ ಆಕೆ ಉದ್ದೇಶವಾಗಿತ್ತು.

25 ಲಕ್ಷದ ಬ್ಯಾಗ್ ಬಿಟ್ಟು ದೋಣಿ ವಿಹಾರ 

500 – 1000 ರೂಪಾಯಿ ಬ್ಯಾಗ್ ಬಿಡೋಕೆ ನಮಗೆ ಭಯ. ಈಕೆ ಹರ್ಮ್ಸ್ ಬಿರ್ಕಿನ್ (Hermes Birkin) ಐಷಾರಾಮಿ ಬ್ಯಾಗನ್ನು ಸಾರ್ವಜನಿಕ ಸ್ಥಳದಲ್ಲಿ ಬಿಟ್ಟಿದ್ದಾಳೆ. ನಂತ್ರ ದೋಣಿ ವಿಹಾರಕ್ಕೆ ಹೋಗಿದ್ದಾಳೆ. ಆಕೆ ಧೈರ್ಯಕ್ಕೆ ಬಳಕೆದಾರರು ದಂಗಾಗಿದ್ದಾರೆ. ದುಬೈ ಸುರಕ್ಷಿತ ನಗರ ಎಂದು ಸಾಬೀತುಪಡಿಸುವುದು ಮಹಿಳೆಯ ಉದ್ದೇಶ ಆಗಿತ್ತು. ಹಾಗಾಗಿಯೇ ಇಂಥ ಸಾಹಸಕ್ಕೆ ಮಹಿಳೆ ಮುಂದಾಗಿದ್ದಾಳೆ. ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದು ಸಾಮಾಜಿಕ ಪ್ರಯೋಗ ಅಂತ ಶೀರ್ಷಿಕೆ ಹಾಕಿದ್ದಾರೆ.

ರೈಲಿನಲ್ಲಿ ರಾತ್ರಿ ಪ್ರಯಾಣಿಸುವಾಗ ಪ್ರಯಾಣಿಕರ ಬಳಿಯಲ್ಲಿರಬೇಕಾದ ಅವಶ್ಯಕ ವಸ್ತುಗಳು

ಮಹಿಳೆ ತನ್ನ ಬಿರ್ಕಿನ್ ಬ್ಯಾಗನ್ನು ದುಬೈನ ಪ್ರಸಿದ್ಧ ಗೋಲ್ಡ್ ಸೌಕ್ ಪ್ರದೇಶದ ಬೆಂಚ್ ಮೇಲೆ ಇರಿಸಿದ್ದಳು. ನಂತ್ರ ಬುರ್ ದುಬೈಗೆ ವಾಟರ್ ಟ್ಯಾಕ್ಸಿ ತೆಗೆದುಕೊಂಡಿದ್ದಾಳೆ. ಪ್ರಯಾಣ ಹತ್ತಿರವಿರ್ಲಿಲ್ಲ. ಮಹಿಳೆ ಪ್ರಕಾರ, ಸಮಯ ಕಳೆದಂತೆ ಮಹಿಳೆ ಟೆನ್ಷನ್ ಹೆಚ್ಚಾಗಿತ್ತಂತೆ. ವಾಟರ್ ಟ್ಯಾಕ್ಸಿ ಖಾಲಿಯಾಗಿತ್ತು. ಹಾಗಾಗಿ ಪ್ರಯಾಣಿಕರಿಗಾಗಿ ಕಾಯುವ ಸಂದರ್ಭ ಬಂದಿತ್ತು, ಪ್ರಯಾಣ ತಡವಾಗ್ತಿದ್ದಂತೆ ಭಯ ಹೆಚ್ಚಾಗಿತ್ತು. ಬ್ಯಾಗ್ ಅಲ್ಲಿ ಇರುತ್ತಾ ಇಲ್ವಾ ಎನ್ನುವ ಪ್ರಶ್ನೆ, ಆತಂಕದಲ್ಲಿಯೇ ಇಡೀ ಪ್ರಯಾಣ ಮುಗಿಸಿದೆ ಎಂದು ಮಹಿಳೆ ಹೇಳಿದ್ದಾಳೆ.

ಭಯದಲ್ಲಿಯೇ ಮಹಿಳೆ ಗೋಲ್ಡ್ ಸೂಕ್‌ ಗೆ ಹಿಂತಿರುಗಿದ್ದಾಳೆ. ಅಲ್ಲಿದ್ದ ಬ್ಯಾಗ್ ನೋಡಿ ಆಕೆಗೆ ನಂಬಲಾಗ್ಲಿಲ್ಲ. ಇದನ್ನು ಆಕೆ ಸತ್ಯದ ಕ್ಷಣ ಎಂದು ಕರೆದಿದ್ದಾಳೆ. ಅವಳಿಟ್ಟಿದ್ದ ಜಾಗದಲ್ಲಿಯೇ ಬ್ಯಾಗ್ ಇತ್ತು. ಒಂದು ಚೂರು ಆಕಡೆ ಈಕಡೆ ಆಗಿರಲಿಲ್ಲ. ಇದನ್ನು ನೋಡಿ ಆಶ್ಚರ್ಯಗೊಂಡ ಮಹಿಳೆ ಓ ದೇವರೇ, ದುಬೈನಲ್ಲಿ ಮಾತ್ರ ಇದು ಸಾಧ್ಯ ಎಂದಿದ್ದಾಳೆ.

ರೈಲು ಪ್ರಯಾಣಿಕರೇ ಗಮನಿಸಿ: ಕಾಮಗಾರಿ ಹಿನ್ನೆಲೆ- ಮಾರ್ಗಗಳಲ್ಲಿ ಭಾರಿ ಬದಲಾವಣೆ, ಕೆಲವು ರೈಲು ರದ್ದು!

ವೀಡಿಯೊ ವೈರಲ್ ಆದ ತಕ್ಷಣ, ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ಸುರಿಮಳೆಯಾಗಿದೆ. ಇದು ಯುಎಇಯಲ್ಲಿ ಮಾತ್ರ ಸಾಧ್ಯ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇದನ್ನು ಭಾರತದಲ್ಲಿ ಪ್ರಯತ್ನಿಸಬೇಡಿ ಎಂದು ಎಚ್ಚರಿಸಿದ್ದಾರೆ. ದುಬೈನ ಪಾರ್ಕಿಂಗ್ ಸ್ಥಳದಲ್ಲಿ ತನ್ನ ಬ್ಯಾಗ್ ಅನ್ನು ಮರೆತು ಕೆಲವು ಗಂಟೆಗಳ ನಂತರ ಹಿಂತಿರುಗಿದೆ, ಆದರೆ ಅದು ಸುರಕ್ಷಿತವಾಗಿ ಸಿಕ್ಕಿತು ಎಂದು ಇನ್ನೊಬ್ಬ ಮಹಿಳೆ ತನ್ನ ಅನುಭವ ಹಂಚಿಕೊಂಡಿದ್ದಾಳೆ. ನಾರ್ವೆಯಲ್ಲೂ ಇಂಥ ಪ್ರಾಮಾಣಿಕತೆ ಕಾಣ್ಬಹುದು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಸುರಕ್ಷಿತ ತಾಣ ದುಬೈ

ದುಬೈ ಕೇವಲ ಐಷಾರಾಮಿ ಮತ್ತು ಎತ್ತರದ ಕಟ್ಟಡಗಳ ನಗರವಲ್ಲ. ಪ್ರಪಂಚದಾದ್ಯಂತ ಜನರು ದುಬೈ ಅನ್ನು ಸುರಕ್ಷಿತ ತಾಣವೆಂದು ಪರಿಗಣಿಸುತ್ತಾರೆ. ಪ್ರಾಮಾಣಿಕತೆ, ಕಟ್ಟುನಿಟ್ಟಾದ ಕಾನೂನುಗಳು ಮತ್ತು ಭದ್ರತೆಗೆ ಹೆಸರುವಾಸಿ. ಅದಕ್ಕೆ ಇದು ಮತ್ತೊಂದು ಉದಾಹರಣೆ.

View post on Instagram