ಬಿಗ್ ಬಾಸ್ ಮನೆಯಿಂದ ಹೊರ ಬಂದ ಜಾಹ್ನವಿ ಏನು ಮಾಡ್ತಿದ್ದಾರೆ?
Anchor Jahnavi : ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಜಾಹ್ನವಿ ನಾಲ್ಕೈದು ದಿನ ಎಲ್ಲ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದರು. ನಂತ್ರ ಕಾಣೆಯಾಗಿದ್ದ ನಟಿ ಏನು ಮಾಡ್ತಿದ್ದಾರೆ, ಯಾವ ಕೆಲ್ಸ ಕೈನಲ್ಲಿದೆ? ಇಲ್ಲಿದೆ ಮಾಹಿತಿ.

ಏನು ಮಾಡ್ತಿದ್ದಾರೆ ಜಾಹ್ನವಿ ?
ಬಿಗ್ ಬಾಸ್ 12ರ ಮಾಜಿ ಸ್ಪರ್ಧಿ ಹಾಗೂ ಆಂಕರ್, ನಟಿ ಜಾಹ್ನವಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಏನು ಮಾಡ್ತಿದ್ದಾರೆ. ಈ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡೋದು ಸಾಮಾನ್ಯ. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಜಾಹ್ನವಿಗೆ ಸುದೀಪ್ ಮುಂದೇನು ಎಂಬ ಪ್ರಶ್ನೆ ಕೇಳಿದ್ರು. ಎಲ್ಲ ಸ್ಪರ್ಧಿಗಳಂತೆ ರಿಬ್ಬನ್ ಕಟ್ ಮಾಡುವ ಕೆಲ್ಸ ಅಂತ ಜಾಹ್ನವಿ ಹೇಳಿದ್ರು. ಆದ್ರೀಗ ಜಾಹ್ನವಿ ಅರ್ಧಕ್ಕೆ ನಿಂತಿದ್ದ ತಮ್ಮ ಸಿನಿಮಾ ಕೆಲ್ಸ ಮುಗಿಸ್ತಿದ್ದಾರೆ.
ಯುವನ್ ರಾಬಿನ್ ಹುಡ್
ಜಾಹ್ನವಿ ಯುವನ್ ರಾಬಿನ್ ಹುಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೂಲತಃ ತಮಿಳು ಚಿತ್ರ. ಕನ್ನಡದಲ್ಲಿ ಇದಕ್ಕೆ ಯುವನ್ ಸರ್ಕಾರ್ ಅಂತ ಹೆಸರಿಡಲಾಗಿದೆ. ಕನ್ನಡ, ತಮಿಳು ಮತ್ತು ಹಿಂದಿಯಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಕನ್ನಡದ ಯಶಸ್ವಿ ನಿರ್ದೇಶಕ ಸಂತೋಷ್ ಕುಮಾರ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ವೈಸ್ ಡಬ್ಬಿಂಗ್ ನಲ್ಲಿ ಜಾಹ್ನವಿ
ಯುವನ್ ರಾಬಿನ್ ಹುಡ್ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲ್ಸ ನಡೆಯುತ್ತಿದ್ದು, ಜಾಹ್ನವಿ ಡಬ್ಬಿಂಗ್ ಕೆಲ್ಸ ಮುಗಿಸಿದ್ದಾರೆ. ಕನ್ನಡ, ತಮಿಳು ಹಾಗೂ ಹಿಂದಿಯಲ್ಲಿ ಟೀಸರ್ ಡಬ್ಬ ಮಾಡಿದ್ದಾರೆ ಜಾಹ್ನವಿ.
ಸಿನಿಮಾ ಬಗ್ಗೆ ಜಾಹ್ನವಿ ಹೇಳಿದ್ದೇನು?
ಏಪ್ರಿಲ್ ಇಲ್ಲ ಮೇ 2026ಕ್ಕೆ ಸಿನಿಮಾ ತೆರೆಗೆ ಬರಲಿದೆ. ನಿನ್ನಿಂದ ನನ್ನ ಜೀವ ಸಾಂಗ್ ಇಷ್ಟಪಟ್ಟಿರುವ ಜಾಹ್ನವಿ, ಸಿನಿಮಾ ಅಧ್ಬುತವಾಗಿ ಮೂಡಿ ಬಂದಿದೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಂಗ್ ಶೂಟಿಂಗ್ ಅನುಭವವನ್ನೂ ಜಾಹ್ನವಿ ಹಂಚಿಕೊಂಡಿದ್ದಾರೆ. ಚಳಿಯಲ್ಲಿ ಶೂಟಿಂಗ್ ಮಾಡೋದು ಕಷ್ಟವಾದ್ರೂ ಔಟ್ಪುಟ್ ನೋಡಿ ಖುಷಿಯಾಯ್ತು ಎಂದಿದ್ದಾರೆ. ಫೆಬ್ರವರಿಯಲ್ಲಿ ಆಡಿಯೋ ಲಾಂಚ್ ಮಾಡಲು ಚಿತ್ರತಂಡ ಮುಂದಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಜಾಹ್ನವಿ
ಬಿಗ್ ಬಾಸ್ ಮನೆಗೆ ಒಂಟಿಯಾಗಿ ಪ್ರಯಾಣ ಬೆಳೆಸಿದ್ದ ಜಾಹ್ನವಿ, ಫೈನಲಿಸ್ಟ್ ಆಗುವ ನಿರೀಕ್ಷೆ ಹೊಂದಿದ್ರು. ಆದ್ರೆ ಅವರ ಪ್ಲಾನ್ ಉಲ್ಟಾಹೊಡೆದಿದೆ. ಬಿಗ್ ಬಾಸ್ ಮನೆಯಲ್ಲಿ ತಮ್ಮಾಟವನ್ನು ಚೆನ್ನಾಗಿಯೇ ಆಡಿದ್ರೂ, ವೀಕ್ಷಕರು ಅವ್ರ ಕೈ ಹಿಡಿಯಲಿಲ್ಲ. ಅಶ್ವಿನಿ ಗೌಡ ಜೊತೆ ಹೆಚ್ಚು ಆಪ್ತವಾಗಿದ್ದ ಜಾಹ್ನವಿ ಇಲ್ಲೇ ಎಡವಿದ್ದಾರೆ ಅನ್ನೋದು ಪ್ರೇಕ್ಷಕರ ಮಾತು. ಬಿಗ್ ಬಾಸ್ ಮನೆಯಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಮಾಡಿ ಕಿಚ್ಚನಿಂದ ಬುದ್ದಿ ಹೇಳಿಸಿಕೊಂಡಿದ್ದ ಜಾಹ್ನವಿ, ಹೊರಗೆ ಬರ್ತಿದ್ದಂತೆ ಗಿಲ್ಲಿ ಬಗ್ಗೆ ಹೇಳಿಕೆ ನೀಡಿ ಟ್ರೋಲ್ ಆಗಿದ್ರು.
ಸ್ಪಂದನಾ ವಿಷ್ಯಕ್ಕೆ ಟ್ರೋಲ್
ಬಿಗ್ ಬಾಸ್ ಮನೆಯಲ್ಲಿ ಜಾಹ್ನವಿ ಹೆಚ್ಚು ಸುದ್ದಿ ಮಾಡಿದ್ದು ಒಂದು ಗಜ್ಜೆ ವಿಷ್ಯವಾದ್ರೆ ಇನ್ನೊಂದು ಸ್ಪಂದನಾ ವಿಚಾರ. ಮಧ್ಯರಾತ್ರಿ ಗಜ್ಜೆ ಶಬ್ಧ ಮಾಡಿ, ಅದನ್ನು ನಾವು ಮಾಡೇ ಇಲ್ಲ ಎಂದಿದ್ದ ಜಾಹ್ನವಿ ನಂತ್ರ ಕ್ಷಮೆ ಕೇಳಿದ್ದರು. ಇನ್ನು ಸ್ಪಂದನಾ ಕಲರ್ಸ್ ಕನ್ನಡದಿಂದ ಬಂದವರು, ಅವರನ್ನು ವಾಹಿನಿ ಮೇಲೆತ್ತುತ್ತೆ ಎಂಬ ಹೇಳಿಕೆ ಕೂಡ ಸ್ವಲ್ಪ ವಿವಾದಕ್ಕೆ ಕಾರಣವಾಗಿತ್ತು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಜಾಹ್ನವಿ ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದಾರೆ.
ಅಧಿಪತ್ರ ನಂತ್ರ ಯುವನ್ ರಾಬಿನ್ ಹುಡ್
ಆಂಕರ್ ಆಗಿದ್ದ ಜಾಹ್ನವಿ ನಮ್ಮಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ನಂತ್ರ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದ್ದರು. ಬಿಗ್ ಬಾಸ್ ಮಾಜಿ ಸ್ಪರ್ಧಿ ರೂಪೇಶ್ ಶೆಟ್ಟಿ ಜೊತೆ ಅಧಿಪತ್ರ ಸಿನಿಮಾದಲ್ಲಿ ನಟಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

