Amruthadhaare Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಫಾರಿನ್ ಟ್ರಿಪ್ ಹೋಗ್ತಿರೋದು ಸಾಕಷ್ಟು ಅನುಮಾನ ಮೂಡಿಸಿದೆ.
‘ಅಮೃತಧಾರೆ’ ಧಾರಾವಾಹಿಯಲ್ಲಿ ( Amruthadhaare Serial ) ಗೌತಮ್ ವಿದೇಶಿ ಟ್ರಿಪ್ ಹೋಗಲಿದ್ದಾನೆ. ಹೌದು, ಕೆಲಸದ ನಿಮಿತ್ತ ಅವನು ಮನೆಯಿಂದ ಹೊರಗಡೆ ಹೋಗುತ್ತಿದ್ದಾನೆ. ಮುದ್ದಿನ ಪತ್ನಿಗೆ ಮುತ್ತಿನ ಸುಂಕ ಕೊಟ್ಟು ಅವನು ಹೊರಡುತ್ತಿದ್ದಾನೆ.
ಫಾರಿನ್ ಟ್ರಿಪ್‌ಗೆ ಹೊರಟ ಗೌತಮ್!
ಧಾರಾವಾಹಿಗಳಲ್ಲಿ ಕಲಾವಿದರು ವಿದೇಶಿ ಟ್ರಿಪ್‌ಗೆ ಹೋಗ್ತಾರೆ, ಅಪಘಾತ ಆಗುತ್ತದೆ ಎಂದರೆ ಪಾತ್ರ ಬದಲಾವಣೆ ಎಂದರ್ಥ. ಇಲ್ಲವೇ ಅವರು ಒಂದಿಷ್ಟು ದಿನಗಳ ಕಾಲ ಸೀರಿಯಲ್‌ನಿಂದ ಬ್ರೇಕ್ ಪಡೆಯುತ್ತಾರೆ ಎಂದರ್ಥ. ಈಗ ಈ ಸೀರಿಯಲ್‌ನಲ್ಲಿ ಗೌತಮ್ ಬ್ಯುಸಿನೆಸ್ ಸಲುವಾಗಿ ಫಾರಿನ್ ಟ್ರಿಪ್‌ಗೆ ಹೋಗುತ್ತಿದ್ದಾನೆ.ಬ್ಯುಸಿನೆಸ್ ನೆಪದಲ್ಲಿ ಕಳೆದುಹೋದ ಮಗಳನ್ನು ಹುಡುಕಲು ಗೌತಮ್ ಈ ರೀತಿ ಮಾಡುತ್ತಿದ್ದಾನಾ? ಅಥವಾ ನಿಜಕ್ಕೂ ಬ್ಯುಸಿನೆಸ್ ಟ್ರಿಪ್ ಇದೆಯಾ ಎಂಬ ಪ್ರಶ್ನೆ ಎದುರಾಗಿದೆ.
ಭೂಮಿಕಾ ಅವಳಿ ಮಕ್ಕಳ ಸತ್ಯ ಎಲ್ರಿಗೂ ಗೊತ್ತಿಲ್ಲ
ಭೂಮಿಕಾಗೆ ಹೊಟ್ಟೆಯಲ್ಲಿ ಅವಳಿ ಮಕ್ಕಳಿರೋ ವಿಷಯ ಸ್ಕ್ಯಾನಿಂಗ್ ಅಲ್ಲಿ ಕೂಡ ಬಹಿರಂಗ ಆಗಿರಲಿಲ್ಲ, ಡಾಕ್ಟರ್ ಕೂಡ ಹೇಳಿರಲಿಲ್ಲ. ಡಾಕ್ಟರ್ ಕರ್ಣ ಹೆರಿಗೆ ಮಾಡಿಸಿದ ಬಳಿಕ ಯಾರಿಗೂ ಅವಳಿ ಮಕ್ಕಳಾಗಿರೋದು ಎಲ್ಲರಿಗೂ ಗೊತ್ತಾಗಿಲ್ಲ. ಮೊದಲು ಭೂಮಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದಳು, ಆಮೇಲೆ ಆ ಮಗುವನ್ನು ಗೌತಮ್ ಮಲಸಹೋದರ ಜಯದೇವ್ ಕದ್ದೊಯ್ದು ದಟ್ಟ ಕಾಡಿನಲ್ಲಿ ಬಿಸಾಡಿದ್ದನು. ಆಮೇಲೆ ಭೂಮಿಗೆ ಮತ್ತೆ ಹೊಟ್ಟೆ ನೋವು ಶುರುವಾಗಿತ್ತು. ಅದನ್ನು ಚೆಕ್ ಮಾಡಿದಾಗ ಭೂಮಿ ಹೊಟ್ಟೆಯಲ್ಲಿ ಇನ್ನೊಂದು ಮಗು ಇರೋದು ಗೊತ್ತಾಗಿತ್ತು. ಕೊನೆಗೂ ಭೂಮಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಗೌತಮ್, ಆನಂದ್, ಜಯದೇವ್, ಶಕುಂತಲಾ ಬಿಟ್ಟು ಉಳಿದವರಿಗೂ ಕೂಡ ಭೂಮಿಗೆ ಮಗಳು ಹುಟ್ಟಿರೋದು ಗೊತ್ತಿಲ್ಲ.
ಗೌತಮ್ ಮಗಳು ಎಲ್ಲಿದ್ದಾಳೆ?
ಕಾಡಿನಲ್ಲಿ ಸಿಕ್ಕ ಮಗುವೊಂದು ಅನಾಥಾಶ್ರಮದಲ್ಲಿ ಇರೋದು ಗೌತಮ್‌ಗೆ ಗೊತ್ತಾಗಿತ್ತು. ಆಮೇಲೆ ಡಿಎನ್‌ಎ ಪರೀಕ್ಷೆ ಮಾಡಿದಾಗ ಅದು ಗೌತಮ್ ಮಗು ಅಲ್ಲ ಎನ್ನೋದು ಬಯಲಾಗಿತ್ತು. ಇನ್ನೊಂದು ಕಡೆ ಭೂಮಿಕಾ ಗೆಳತಿ ಕಾವೇರಿ ಮಗುವೊಂದನ್ನು ದತ್ತು ಪಡೆದಿದ್ದಾಳೆ. ಆ ಮಗುವೇ ಭೂಮಿಕಾ ಮಗಳಿರಬಹುದು ಎಂಬ ಪ್ರಶ್ನೆ ಎದ್ದಿದೆ. ಒಟ್ಟಿನಲ್ಲಿ ಮಗಳು ಎಲ್ಲಿದ್ದಾಳೋ? ಹೇಗಿದ್ದಾಳೋ ಅಂತ ಗೌತಮ್ ಒದ್ದಾಡುತ್ತಿದ್ದನು. ಈಗ ಮಗಳನ್ನು ಹುಡುಕಲು ಗೌತಮ್ ಪಣ ತೊಟ್ಟಿದ್ದಾನೆ. ಈಗ ಗೌತಮ್ ಪಾತ್ರಧಾರಿ ರಾಜೇಶ್ ನಟರಂಗ ಅವರು ಬ್ರೇಕ್ ಪಡೆಯುತ್ತಿದ್ದಾರಾ ಅಥವಾ ಕಥೆಗೆ ತಕ್ಕಂತೆ ಫಾರಿನ್ ಟ್ರಿಪ್‌ಗೆ ಹೋಗುತ್ತಿದ್ದಾರಾ ಎಂದು ಕಾದು ನೋಡಬೇಕಿದೆ.
ಕಥೆ ಏನು?
ಗೌತಮ್‌ಗೆ 45 ವರ್ಷ ಹಾಗೂ ಭೂಮಿಕಾಗೆ 35 ವರ್ಷ ಆದ್ಮೇಲೆ ಇವರು ಮದುವೆ ಆಗಿದ್ದಾರೆ. ಗೌತಮ್‌ಗೆ ಮದುವೆಯಾಗಿ, ಮಕ್ಕಳಾಗೋದು ಅವನ ಮಲತಾಯಿ ಶಕುಂತಲಾಗೆ ಇಷ್ಟವೇ ಇರಲಿಲ್ಲ. ಹೀಗಾಗಿ ಅವನು ಮದುವೆ ಆಗೋದು ಲೇಟ್ ಆಯ್ತು. ಮನೆಯವರ ಒತ್ತಾಯಕ್ಕೆ ಮದುವೆಯಾದ ಈ ಜೋಡಿ ಮಧ್ಯೆ ಸ್ನೇಹ ಬೆಳೆದು, ಪ್ರೀತಿಯೂ ಹುಟ್ಟಿತು, ಮಕ್ಕಳು ಹುಟ್ಟಿದರು. ಈಗ ಭೂಮಿಕಾಗೆ ಶಕುಂತಲಾಳ ಅಸಲಿ ಮುಖದ ಪರಿಚಯ ಆಗಿದೆ. ಇವರಿಬ್ಬರ ಮಧ್ಯೆ ನೇರ ಯುದ್ಧ ಶುರುವಾಗಿದೆ. ಈಗ ಮಗಳ ವಿಷಯವನ್ನು ಇಟ್ಟುಕೊಂಡು ಶಕುಂತಲಾ, ಭೂಮಿಗೆ ಎಷ್ಟು ಕಷ್ಟ ಕೊಡುತ್ತಾಳೋ ಏನೋ! ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿದೆ.
ಪಾತ್ರಧಾರಿಗಳು
ಗೌತಮ್- ರಾಜೇಶ್ ನಟರಂಗ
ಭೂಮಿಕಾ ಸದಾಶಿವ- ಛಾಯಾ ಸಿಂಗ್
ಶಕುಂತಲಾ-ವನಿತಾ ವಾಸು
ಜಯದೇವ್- ರಾಣವ್
ಕಾವೇರಿ- ಗೀತಾ ಭಾರತಿ ಭಟ್
ಆನಂದ್- ಸಿಲ್ಲಿ ಲಲ್ಲಿ ಆನಂದ್


