ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಳ ಕಷ್ಟ ಮುಗಿಯುತ್ತಿಲ್ಲ. ತಾಂಡವ್ ಶ್ರೇಷ್ಠಳ ಜೊತೆಗಿದ್ದರೂ, ಸಂತಸವಿಲ್ಲ. ಭಾಗ್ಯ ಸ್ವಾವಲಂಬಿಯಾಗಿದ್ದರೂ, ಸಂಗಾತಿಯ ಕೊರತೆ ಇದೆ. ತಾಂಡವ್ನ ಪಶ್ಚಾತ್ತಾಪ, ಭಾಗ್ಯಳ ಎರಡನೇ ಮದುವೆಯ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮೂವರ ಭವಿಷ್ಯದ ಕುರಿತು ಕುತೂಹಲ ಮೂಡಿದೆ.
‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ತಾನು ಇಷ್ಟಪಟ್ಟ ಹುಡುಗಿ ಶ್ರೇಷ್ಠ ಜೊತೆ ತಾಂಡವ್ ಮದುವೆ ಆಗಿದ್ದಾನೆ. ಈಗ ಅವನು ಅಂದುಕೊಂಡ ಹಾಗೆ ಬದುಕ್ತಿದ್ದರೂ ಕೂಡ, ಒಳ್ಳೆಯ ಊಟ ಇಲ್ಲ, ಅಪ್ಪ-ಅಮ್ಮ, ಮಕ್ಕಳು ಜೊತೆಗಿಲ್ಲ. ಅವನ ಹಣೆಬರಹ, ಹೀಗೆ ಬದುಕ್ತಿದ್ದಾನೆ ಅಂತ ಅಂದುಕೊಂಡು ಬಿಡೋಣ. ಆದರೆ ಭಾಗ್ಯ ಹೀಗೆ ಬದುಕಬೇಕಾ?
ಭಾಗ್ಯ ಕಷ್ಟ ಮುಗಿಯಲ್ಲ!
ಭಾಗ್ಯಳಿಗೆ ದಿನಕ್ಕೆ ಒಂದಲ್ಲ ಒಂದು ಕಷ್ಟ ಬರುತ್ತದೆ. ಹೇಗಾದರೂ ಮಾಡಿ ಮನೆಯ ಸಾಲವನ್ನು ತೀರಿಸಬೇಕು, ಎಲ್ಲವನ್ನು ಎದುರಿಸಬೇಕು ಎಂದು ಅವಳು ನಿತ್ಯವೂ ಕಷ್ಟಪಡುತ್ತಿದ್ದಾಳೆ. ಮಾಜಿ ಪತಿ ತಾಂಡವ್, ಕನ್ನಿಕಾ, ಶ್ರೇಷ್ಠಳಿಂದ ಅವಳಿಗೆ ನಿತ್ಯವೂ ಕಷ್ಟ ಎದುರಾಗುತ್ತಲಿದೆ. ಇವರಿಗೆಲ್ಲ ಸೆಡ್ಡು ಹೊಡೆದು ಭಾಗ್ಯ ಮುಂದೆ ಸಾಗುತ್ತಲಿದ್ದಾಳೆ. ಭಾಗ್ಯ ಕಷ್ಟ ಮುಗಿಯೋದಿಲ್ಲ ಎಂದು ವೀಕ್ಷಕರು ಒಂದು ಕಡೆ ಬೇಸರ ಮಾಡಿಕೊಂಡಿದ್ದಾರೆ.
ವಕ್ಫ್ ತಿದ್ದುಪಡಿ ಜಾರಿ ಮಾಡಿದ್ದಕ್ಕೆ ಪ್ರಧಾನಿಗೆ ಬೊಹ್ರಾ ಮುಸ್ಲಿಂ ಸಮುದಾಯದ ಕೃತಜ್ಞತೆ
ಭಾಗ್ಯ ಗೆಲ್ಲಬಹುದು!
ತಾಂಡವ್ ಇಲ್ಲದೆಯೂ ನಾನು ಬದುಕಬಲ್ಲೆ, ಮನೆಯನ್ನು ನಡೆಸಬಲ್ಲೆ ಎಂದು ಭಾಗ್ಯ ತೋರಿಸಿಕೊಡ್ತೀನಿ ಎಂದು ಚಾಲೆಂಜ್ ಹಾಕಿದ್ದಳು. ಅದರಂತೆ ಅವಳೀಗ ಬದುಕುತ್ತಿದ್ದಾಳೆ. ಮುಂದೆ ಭಾಗ್ಯ ಏನು ಮಾಡ್ತಾಳೆ ಎಂದು ಕಾದು ನೋಡಬೇಕಾಗಿದೆ. ಮಕ್ಕಳನ್ನು ಅವಳು ಓದಿಸಲೂಬಹುದು, ಅತ್ತೆ-ಮಾವನನ್ನು ಚೆನ್ನಾಗಿ ನೋಡಿಕೊಳ್ಳಲೂಬಹುದು, ಯಾರ ಮುಂದೆ ತಲೆಬಾಗದೆ ಅವಳು ಗಟ್ಟಿಗಿತ್ತಿಯಾಗಿ ಬದುಕಲೂಬಹುದು. ಆದರೆ ಸಂಗಾತಿ ಕಥೆ?
ಭಾಗ್ಯ-ತಾಂಡವ್-ಶ್ರೇಷ್ಠ ಜೀವನ ಏನಾಗಲಿದೆ?
ಮುಂದೆ ತಾಂಡವ್ಗೆ ತನ್ನ ತಪ್ಪಿನ ಅರಿವಾಗಲೂಬಹುದು, ಅವನು ಮತ್ತೆ ಭಾಗ್ಯ ಬಳಿ ಬಂದರೂ ಆಶ್ಚರ್ಯ ಇಲ್ಲ. ಆಗ ಭಾಗ್ಯ ಅವನ ತಪ್ಪನ್ನು ಮನ್ನಿಸಿ ಮುನ್ನಡೆಯುತ್ತಾಳಾ? ಈ ರೀತಿ ಇರೋದು ಕಷ್ಟ ಇದೆ. ಇನ್ನೊಂದು ಕಡೆ ತಾಂಡವ್ಗೆ ಶ್ರೇಷ್ಠ ಜೊತೆ ಬದುಕೋದು ಕಷ್ಟ ಆಗಲೂಬಹುದು, ಮುಂದಿನ ದಿನಗಳಲ್ಲಿ ಶ್ರೇಷ್ಠ ಬದಲಾದರೂ ಕೂಡ ಅವನು ಅವಳ ಜೊತೆ ಇರಲು ಇಷ್ಟಪಡ್ತಾನಾ ಎನ್ನುವ ಸಂದೇಹ ಕೂಡ ಇದೆ. ಒಟ್ಟಿನಲ್ಲಿ ಈ ಮೂವರ ಜೀವನ ಹೇಗಿರಲಿದೆ ಎಂಬ ಕುತೂಹಲ ಜಾಸ್ತಿ ಇದೆ.
ಆನಿವರ್ಸರಿ ಸಂಭ್ರಮದಲ್ಲಿ ರೊಮ್ಯಾಂಟಿಕ್ ಪೋಟೊ ಶೇರ್ ಮಾಡಿದ ತಾಂಡವ್.....ಆದ್ರೆ ಭಾಗ್ಯ, ಶ್ರೇಷ್ಠಾ ಜೊತೆ ಅಲ್ಲ!
ನಟಿಯರು ಏನು ಹೇಳಿದ್ರು?
ಇನ್ನೊಂದು ಕಡೆ ಭಾಗ್ಯ ಬದುಕಲ್ಲಿ ಇನ್ನೋರ್ವ ಹುಡುಗನ ಆಗಮನ ಆಗುತ್ತದೆಯಾ ಎಂಬ ಪ್ರಶ್ನೆಯೂ ಕಾಡುತ್ತಿದೆ. ಹೆಣ್ಣಿಗೊಂದು ನ್ಯಾಯ? ಗಂಡಿಗೊಂದು ನ್ಯಾಯ? ಗಂಡ ಇನ್ನೊಂದು ಮದುವೆ ಆದರೆ, ಹೆಣ್ಣು ಕೂಡ ಇನ್ನೊಂದು ಮದುವೆ ಆಗಬಹುದಲ್ವಾ? ಹೆಣ್ಣಿಗೂ ಕೂಡ ಸಂಗಾತಿ ಅತ್ಯಗತ್ಯ ಇದೆ ಎಂದು ಅನೇಕರು ವಾದ ಮಾಡುತ್ತಾರೆ. ಇತ್ತೀಚೆಗೆ ʼಗಟ್ಟಿಮೇಳʼ ಧಾರಾವಾಹಿ ನಟಿ ಕಮಲಶ್ರೀ ಅವರು ʼಪಂಚಮಿ ಟಾಕ್ಸ್ʼ ಯುಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ, “ನನಗೂ ಗಂಡ, ಮಕ್ಕಳು ಇರಬೇಕಿತ್ತು ಅಂತ ತುಂಬ ಸಲ ಅನಿಸಿದೆ” ಎಂದು ಹೇಳಿದ್ದರು. ಕಮಲಶ್ರೀ ಅವರು ಮದುವೆಯಾಗಿ ಎರಡು ತಿಂಗಳಿಗೆ ಗಂಡ ಬಿಟ್ಟಿದ್ದನಂತೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.
ಇನ್ನು ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ಸಂಗಾತಿಗಳನ್ನು ಕಳೆದುಕೊಂಡಿರೋ ಮಾಧವ್, ತುಳಸಿ ಮಕ್ಕಳ ಮದುವೆಯಾಗಿದ್ದರೂ ಕೂಡ, ಅವರಿಬ್ಬರು ಈ ವಯಸ್ಸಿನಲ್ಲಿ ಮತ್ತೆ ಮದುವೆಯಾಗ್ತಾರೆ. ಲೈಂಗಿಕ ಸುಖಕ್ಕೋಸ್ಕರ ಅಲ್ಲದಿದ್ದರೂ ಕೂಡ, ಒಂಟಿತನ, ಸಾಂಗತ್ಯಕ್ಕೆಂದು ಮದುವೆ ಆಗೋದುಂಟು. ಇನ್ನು ಎರಡನೇ ಮದುವೆ ಬಗ್ಗೆ ಸಮಾಜದಲ್ಲಿ ಇನ್ನೂ ವಿರೋಧವಿದೆ ಎಂದು ನಟಿ ಸುಧಾರಾಣಿ ಅವರು ಸಂದರ್ಶನದಲ್ಲಿ ಹೇಳಿದ್ದರು.
ʼಶ್ರೀರಸ್ತು ಶುಭಮಸ್ತುʼ ನಟಿ ಸಪ್ನಾ ದೀಕ್ಷಿತ್ ಅವರು, “ಎರಡನೇ ಮದುವೆಯಾದ ಎಷ್ಟೋ ಜನರು ಚೆನ್ನಾಗಿ ಬದುಕ್ತಿರೋದನ್ನು ನಾನು ನೋಡಿದ್ದೇನೆ” ಎಂದು ಹೇಳಿದ್ದಾರೆ. ಭಾಗ್ಯ ಲೈಫ್ ಏನಾಗಬೇಕು ಎನ್ನೋದು ಧಾರಾವಾಹಿ ರೈಟರ್ ಕೈಯಲ್ಲಿದೆ ಎನ್ನೋದನ್ನು ಒಪ್ಪೋಣ. ಆದರೆ ಭಾಗ್ಯ ಎರಡನೇ ಮದುವೆ ಆಗೋದು ತಪ್ಪೇ? ಸರಿಯೇ? ಕಾಮೆಂಟ್ ಮಾಡಿ ತಿಳಿಸಿ.
