ಪ್ರಖ್ಯಾತ ಭಾಷಣಕಾರ್ತಿ ಚೈತ್ರಾ ಕುಂದಾಪುರ, 12 ವರ್ಷಗಳ ಗೆಳೆಯ ಶ್ರೀಕಾಂತ್ ಕಶ್ಯಪ್ ಅವರನ್ನು ವಿವಾಹವಾಗಿದ್ದಾರೆ. ಬಿಗ್‌ಬಾಸ್ ಮೂಲಕ ಜನಪ್ರಿಯತೆ ಗಳಿಸಿದ್ದರೂ, ಪ್ರೀತಿಯ ವಿಚಾರವನ್ನು ಗುಟ್ಟಾಗಿಟ್ಟಿದ್ದರು. ಸಾಂಪ್ರದಾಯಿಕ ಉಡುಗೆ ತೊಡುಗೆಯ ಮೂಲಕವೂ ಗಮನ ಸೆಳೆದ ಚೈತ್ರಾ, ತಮ್ಮ ಲವ್ ಸ್ಟೋರಿ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸರಳ ವಿವಾಹವಾಗಬೇಕೆಂದಿದ್ದರೂ, ಅನಿರೀಕ್ಷಿತವಾಗಿ ಸುದ್ದಿಯಾಯಿತು ಎಂದಿದ್ದಾರೆ.

ಫೈರ್ ಬ್ರ್ಯಾಂಡ್ ಭಾಷಣಗಾರ್ತಿ ಎಂದೇ ಫೇಮಸ್​ ಆಗಿರೋ ಚೈತ್ರಾ ಕುಂದಾಪುರ ಸದ್ಯ ಮದುವೆಯಾದ ಖುಷಿಯಲ್ಲಿದ್ದಾರೆ. 12 ವರ್ಷಗಳ ಗೆಳೆಯ ಶ್ರೀಕಾಂತ್​ ಕಶ್ಯಪ್​ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಬಿಗ್​ಬಾಸ್​ಗೂ ಮೊದಲೇ ಫೇಮಸ್​ ಆಗಿದ್ದ ಚೈತ್ರಾ ಅಲ್ಲಿಯೂ ತಮ್ಮ ಲವ್​ ವಿಷ್ಯ ಬಿಟ್ಟುಕೊಟ್ಟಿರಲಿಲ್ಲ. ಆ ಬಳಿಕ ಅವರು ಇನ್ನಷ್ಟು ಫೇಮಸ್​ ಆಗಿ ಸೆಲೆಬ್ರಿಟಿ ಆದದ್ದು ಬಿಗ್​ಬಾಸ್​ನಿಂದಾಗಿ. ಅಲ್ಲಿ ಕೂಡ ಅವರು ಪ್ರೀತಿಯ ವಿಷಯವನ್ನು ಹೇಳಿಕೊಂಡಿರಲಿಲ್ಲ. ಅಷ್ಟು ಗುಟ್ಟಾಗಿಟ್ಟಿದ್ದರು ಈ ವಿಷಯವನ್ನು. ತಮ್ಮ ಭಾವಿ ಪತಿ ಹೇಗೆ ಇರಬೇಕು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದ ಇವರು, ಆಗಲೂ ಅದಾಗಲೇ ತಮ್ಮ ಭಾವಿ ಪತಿ ಯಾರು ಎನ್ನುವುದು ಗೊತ್ತಿದೆ ಎಂದೂ ತಿಳಿಸಿರಲಿಲ್ಲ. ಸಿಲ್ಕಿ ಹೇರ್​ ಇರಬೇಕು, ಉದ್ದ ಕೂದಲು ಬೇಕು, ಅಷ್ಟು ಶಿಖೆ ಕಟ್ಟುವಷ್ಟು ಉದ್ದ ಇರಬೇಕು, ಕೂದಲು ಸ್ಟ್ರೇಟ್​ ಆಗಿರಬೇಕು ಎಂದಿದ್ದರು. ಇನ್ನು ಹಣೆ ಅಗಲ ಬೇಕು, ಹಣೆಯಲ್ಲಿ ವಿಭೂತಿ, ಕುಂಕುಮ ಇಟ್ಟಿರಬೇಕು. ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಇರಬೇಕು ಎಂದು ಚೈತ್ರಾ ಹೇಳಿದ್ದರು. ಭಾವಿ ಪತಿಯ ಮುಖ ಗೋಲು ಆಗಿರಬೇಕು. ಚಿಕ್ಕ ಕಣ್ಣು, ಚಿಕ್ಕ ಕಿವಿ ಇರಬೇಕು, ಹುಬ್ಬು ದಪ್ಪ ಇರಬೇಕು ಎಂದಿದ್ದರು. ಸಾಧುಗಳ ರೀತಿ ಗಡ್ಡ ಇರಬೇಕು ಎಂದಿದ್ದರು. ಆಗಲೇ ಕೆಲವರಿಗೆ ಇದು ಶ್ರೀಕಾಂತ್​ ಅವರದ್ದೇ ವರ್ಣನೆ ಎಂದು ತಿಳಿದಿದ್ದರೂ ಕೇಳುವ ಧೈರ್ಯ ಮಾಡಿರಲಿಲ್ಲ.

ಇಂತಿಪ್ಪ ಚೈತ್ರಾ ಕುಂದಾಪುರ ಅವರ ಪ್ರೀ ವೆಡ್ಡಿಂಗ್​ ಶೂಟ್​ ಇದೀಗ ಸಕತ್​ ವೈರಲ್​ ಆಗುತ್ತಿದೆ. ಇವರು ನಿಜಕ್ಕೂ ಚೈತ್ರಾ ಹೌದಾ ಎಂದು ಅಚ್ಚರಿ ಪಟ್ಟುಕೊಳ್ಳುವ ರೀತಿಯಲ್ಲಿ ಯಾವ ಸಿನಿಮಾ ತಾರೆಯರಿಗೂ ಕಡಿಮೆ ಇಲ್ಲದಂತೆ ವಿಡಿಯೋಶೂಟ್​ ಮಾಡಿಸಿದ್ದಾರೆ ಚೈತ್ರಾ. ಅಷ್ಟಕ್ಕೂ ಚೈತ್ರಾ ಅವರ ಮೇಲೆ ಹಲವರು ಗೌರವ ಉಳಿಸಿಕೊಳ್ಳಲು ಕಾರಣ, ಅವರ ಬಟ್ಟೆ. ಬಿಗ್​ಬಾಸ್​​ ಮನೆಯಲ್ಲಿ 105 ದಿನಗಳ ಪ್ರಯಾಣದಲ್ಲಿ ಇದ್ದರೂ, ಅವರು ತಮ್ಮ ವೇಷಭೂಷಣಗಳಿಂದ ಸಾಕಷ್ಟು ಮಂದಿಯ ಮನಸ್ಸನ್ನು ಗೆದ್ದವರು.

ಪ್ಲೀಸ್​ ಆ ವಿಷ್ಯ ಒಂದನ್ನು ಕೇಳ್ಬೇಡಿ, ಅದ್ಕೆಲ್ಲಾ ಟೈಂ ಇಲ್ಲ... ಎಂದು ನುಣುಚಿಕೊಂಡ ಚೈತ್ರಾ ಕುಂದಾಪುರ!

ಇವರು ತಮ್ಮ ಭಾಷಣದ ಮೂಲಕವಷ್ಟೇ ಖ್ಯಾತಿ ಪಡೆದವರು ಅಲ್ಲದೇ, ಹಾಕುವ ಬಟ್ಟೆಯಿಂದಲೂ ಗೌರವ ಉಳಿಸಿಕೊಂಡವರು. ಸದಾ ಮೈತುಂಬಾ ಬಟ್ಟೆ ತೊಡುವ ಚೈತ್ರಾ ಕುಂದಾಪುರ ಬಿಗ್​ಬಾಸ್​​ನಲ್ಲಿ ಕೂಡ ಸೀರೆಯಲ್ಲಿಯೇ ಮಿಂಚಿದವರು. ಕೆಲವೊಮ್ಮೆ ಬಿಗ್​ಬಾಸ್​​ನಲ್ಲಿ ಬೇರೆ ಬಟ್ಟೆ ಹಾಕಿಕೊಳ್ಳಿ ಎಂದು ಹೇಳಿದರೂ ಅದನ್ನು ತಾವು ಕೇಳಲಿಲ್ಲ. ನನಗೆ ಮೈತುಂಬಾ ಬಟ್ಟೆ ಹಾಕುವುದೇ ಕನ್​ಫರ್ಟ್​ ಎನ್ನಿಸುತ್ತದೆ. ಅದಕ್ಕಾಗಿ ನಾನು ಯಾರೋ ಹೇಳಿದರು ಎಂದು ನನ್ನತನವನ್ನು ಬಿಟ್ಟುಕೊಡುವುದಿಲ್ಲ ಎಂದಿದ್ದರು.

 ಅದೇನೇ ಇದ್ದರೂ, ಚೈತ್ರಾ ತಮ್ಮ ಲವ್​ ಸ್ಟೋರಿ ಬಗ್ಗೆ ಮಾತ್ರ ಹೇಳದೇ ಗುಟ್ಟಾಗಿಯೇ ಇಟ್ಟುಕೊಂಡಿದ್ದಾರೆ. 12 ವರ್ಷಗಳ ಲವ್​ ಸ್ಟೋರಿ ಬಗ್ಗೆ ಮದುವೆಯ ಬಳಿಕ ಕೇಳಿದಾಗ ಚೈತ್ರಾ ಅವರು, ಅಯ್ಯೋ, ಅದಕ್ಕೆಲ್ಲಾ ಟೈಮ್​ ಇಲ್ಲ. ಅದರ ಬಗ್ಗೆ ಕೇಳಬೇಡಿ. ನಮ್ಮ ಮದುವೆಗೆ ಬಂದಿದ್ದರೆ ಥ್ಯಾಂಕ್ಸ್​ ಅಂದುಬಿಟ್ಟಿದ್ದಾರೆ. 12 ವರ್ಷ ಗುಟ್ಟಾಗಿಯೇ ನಮ್ಮ ಲವ್​ ಇತ್ತು. ಮದುವೆಯನ್ನೂ ಸಿಂಪಲ್​ ಆಗಿಯೇ ಮಾಡಿಕೊಳ್ಳೋಣ ಅಂದುಕೊಂಡಿದ್ವಿ. ಆದರೆ ಅದು ಎಲ್ಲರಿಗೂ ತಿಳಿದು ದೊಡ್ಡಮಟ್ಟದಲ್ಲಿ ಸುದ್ದಿಯಾಯಿತು ಎಂದಿದ್ದಾರೆ. ಆದರೆ ಲವ್​ ಸ್ಟೋರಿಯ ಬಗ್ಗೆ ಮಾತ್ರ ತುಟಿ ಪಿಟಿಕ್​ ಎನ್ನಲಿಲ್ಲ. ಶ್ರೀಕಾಂತ್​ ಅವರು ಕೂಡ ಈಗ ಅದಕ್ಕೆಲ್ಲಾ ಟೈಂ ಇಲ್ಲ ಬಿಡಿ ಎಂದು ಹೇಳುವ ಮೂಲಕ ನುಣುಚಿಕೊಂಡಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ದಂಪತಿ ಹಾರಿಕೆ ಉತ್ತರ ಕೊಟ್ಟು, ತಮ್ಮ ಪ್ರೀತಿ ಹುಟ್ಟಿದ್ದನ್ನು ಬಿಟ್ಟುಕೊಟ್ಟಿಲ್ಲ!

ಅರೆಬರೆ ಡ್ರೆಸ್​ ಹಾಕ್ಕೊಂಡು ಏನೇನೋ ಮಾಡ್ತಾರೆ... ಚೈತ್ರಾ ಕುಂದಾಪುರ ವಿಡಿಯೋ ವೈರಲ್​: ಶ್ಲಾಘನೆಗಳ ಮಹಾಪೂರ

View post on Instagram