ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಮೇ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮೆಹಂದಿ ಶಾಸ್ತ್ರದ ವಿಡಿಯೋ ಹಂಚಿಕೊಂಡಿರುವ ಅವರು, ಹನ್ನೆರಡು ವರ್ಷಗಳ ಪ್ರೀತಿಯ ಬಳಿಕ ಮದುವೆಯಾಗುತ್ತಿದ್ದಾರೆ. ಸರಳವಾಗಿ ದೇವಸ್ಥಾನದಲ್ಲಿ ವಿವಾಹ ನೆರವೇರಲಿದೆ. ಅಭಿಮಾನಿಗಳು ಚೈತ್ರಾ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11) ರ ಸ್ಪರ್ಧಿ ಚೈತ್ರಾ ಕುಂದಾಪುರ (Chaitra Kundapur) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಮೆಹಂದಿ ಕಾರ್ಯಕ್ರಮ ಜೋರಾಗಿ ನಡೆದಿದೆ. ಇದೇ ಮೇ 9ರಂದು ಚೈತ್ರಾ ಕುಂದಾಪುರ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ. ಶುಕ್ರವಾರ, ದೇವಸ್ಥಾನದಲ್ಲಿ ಸರಳವಾಗಿ ಮದುವೆ ನಡೆಯಲಿದೆ. ತಾವು ಪ್ರೀತಿಸಿದ ಹುಡುಗನ ಕೈ ಹಿಡಿಯಲಿದ್ದಾರೆ ಚೈತ್ರಾ.
ತಮ್ಮ ಇನ್ಸ್ಟಾ ಖಾತೆಯಲ್ಲಿ ಚೈತ್ರಾ ಕುಂದಪುರ ಮೆಹಂದಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಮದುವೆಯ ಮೆಹಂದಿ ಅಂತ ಅವರು ಶೀರ್ಷಿಕೆ ಹಾಕಿದ್ದಾರೆ. ತ್ರೇತಾಯುಗದಲ್ಲಿ ಶ್ರೀರಾಮ, ಲಕ್ಷ ಣ, ಭರತ ಮತ್ತು ಶತ್ರುಘ್ನರ ವಿವಾಹದ ಸಮಯದಲ್ಲಿ ಅವರನ್ನು ಸಿಂಗರಿಸಲು ಅವರ ಕೈ, ಕಾಲು, ಹಾಗೆಯೇ ಮುಖದ ಮೇಲೆ ಪಾಷಾಣಬಣ್ಣ (ವಿವಿಧ ಬಣ್ಣದ ಕಲ್ಲುಗಳಿಂದ ತಯಾರಿಸಿದ ಬಣ್ಣ) ಮತ್ತು ಪುಷ್ಪಬಣ್ಣ (ವಿವಿಧ ಬಣ್ಣದ ಹೂವುಗಳಿಂದ ತಯಾರಿಸಿದ ಬಣ್ಣ) ಗಳ ಸಹಾಯದಿಂದ ಎಲೆ-ಹೂವು ಮುಂತಾದ ಆಕಾರಗಳನ್ನು ಬಿಡಿಸಲಾಗಿತ್ತು. ಈ ಬಣ್ಣಗಳಲ್ಲಿ ವಿವಿಧ ದಿವ್ಯ ಔಷಧೀಯ ವನಸ್ಪತಿಗಳ ರಸಗಳನ್ನು ಬೆರೆಸಲಾಗಿತ್ತು. ಈ ಸುಗಂಧಿ ಮಿಶ್ರಣಕ್ಕೆ ‘ಪತ್ರಾವಲೀ’ ಎಂದು ಹೇಳುತ್ತಿದ್ದರು.ದ್ವಾಪರಯುಗದಲ್ಲಿಯೂ ಸಿಂಗಾರಕ್ಕಾಗಿ ‘ಪತ್ರಾವಲೀ’ಯನ್ನು ಉಪಯೋಗಿಸಲಾಗುತ್ತಿತ್ತು. ‘ತೋಕ’ ಎಂಬ ಹೆಸರಿನ ಶ್ರೀಕೃಷ್ಣನ ಮಿತ್ರನು ‘ಪತ್ರಾವಲೀ’ಯಿಂದ ಶ್ರೀಕೃಷ್ಣ ನನ್ನು ಸಿಂಗರಿಸುತ್ತಿದ್ದನು’ ಎಂದು ‘ಗರ್ಗಸಂಹಿತೆ’, ‘ಶ್ರೀಮದ್ಭಾಗವತ’, ‘ಶ್ರೀಕೃಷ್ಣಕರ್ಣಾಮೃತ’ ಮುಂತಾದ ಶ್ರೀಕೃಷ್ಣನ ಬಗೆಗಿನ ಪ್ರಮುಖ ಗ್ರಂಥಗಳಲ್ಲಿ ಉಲ್ಲೇಖಿಸಿರುವುದು ಕಂಡುಬರುತ್ತದೆ. ಆ ಸಮಯದಲ್ಲಿ ಶ್ರೀಕೃಷ್ಣನ ಗೋವುಗಳನ್ನೂ ‘ಪತ್ರಾವಲಿ’ಯಿಂದ ಸಿಂಗರಿಸಲಾಗುತ್ತಿತ್ತು.ಮದರಂಗಿ ಕೇವಲ ಬಣ್ಣವಲ್ಲ ಅದು ಸಂಸ್ಕೃತಿಯ ಕೈಗನ್ನಡಿ ಎಂದು ದೊಡ್ಡ ಶೀರ್ಷಿಕೆಯನ್ನು ಹಾಕಿರುವ ಚೈತ್ರಾ, ಮೆಹಂದಿ ಮಹತ್ವವನ್ನು ಹೇಳಿದ್ದಾರೆ.
ಚೈತ್ರಾ ಕೆಲ ಸಮಯದ ಹಿಂದಷ್ಟೆ ಈ ವಿಡಿಯೋ ಹಂಚಿಕೊಂಡಿದ್ದಾರೆ. ಅವರ ಕೈ ಮೇಲೆ ಸುಂದರ ಮೆಹಂದಿ ಚಿತ್ರಾರವನ್ನು ನೀವು ಕಾನ್ಬಹುದು. ಚೈತ್ರಾ ಮನೆಯಲ್ಲಿ ಈ ಮೆಹಂದಿ ಶಾಸ್ತ್ರ ನಡೆದಂತಿದೆ. ಸುಂದರವಾಗಿ ರೆಡಿಯಾಗಿರುವ ಚೈತ್ರಾ, ಮೆಹಂದಿ ತೋರಿಸ್ತಾ, ಫೋಟೋ, ವಿಡಿಯೋಕ್ಕೆ ಫೋಸ್ ನೀಡಿದ್ದಾರೆ. ಚೈತ್ರಾ ವಿಡಿಯೋ ನೋಡಿದ ಜನರು, ಮದುವೆ ಯಾವಾಗ ಅಂತ ಕೇಳ್ತಿದ್ದಾರೆ. ಇದಕ್ಕೂ ಮುನ್ನ ಬ್ರೈಡ್ ಟು ಬಿ ಹೆಸರಿನಲ್ಲಿ ಚೈತ್ರಾ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವಧುವಿನಂತೆ ಸಿಂಗಾರಗೊಂಡಿರುವ ಚೈತ್ರಾ ತಲೆ ಮೇಲೆ ಅಕ್ಷತೆ ಕಾಳುಗಳು ಬೀಳ್ತಿವೆ.
ಚೈತ್ರಾ ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಪಾಲ್ಗೊಂಡಿದ್ದರು. ಚೈತ್ರಾ ಮಂಗಳಪತ್ರ ಹಿಡಿದು ಬಂದಿದ್ದ ವಿಡಿಯೋ ವೈರಲ್ ಆಗಿತ್ತು. ಹಿಂದಿನ ವಾರ ಮಜಾ ಟಾಕೀಸ್ ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಸೃಜನ್ ಲೋಕೇಶ್, ಚೈತ್ರಾ ಮದುವೆ ಆಗ್ತಿರೋದನ್ನು ದೃಢಪಡಿಸಿದ್ದರು. ಚೈತ್ರಾಗೆ ಶುಭ ಕೋರಿದ್ದ ಸೃಜನ್ ಲೋಕೇಶ್ ಹುಡುಗನ ಬಗ್ಗೆ ಒಂದಿಷ್ಟು ಮಾಹಿತಿ ಪಡೆದಿದ್ದರು. ಚೈತ್ರಾ ಹುಡುಗ ಸಾಫ್ಟ್ ಅನ್ನೋ ಗುಟ್ಟನ್ನು ಅನುಷಾ ಹೊರ ಹಾಕಿದ್ದರು. ಚೈತ್ರಾ ಲವ್ ಕಂ ಅರೇಂಜ್ಡ್ ಮ್ಯಾರೇಜ್ ಮಾಡಿಕೊಳ್ತಿದ್ದಾರೆ ಅನ್ನೋದು ಬಿಟ್ರೆ ಹೆಚ್ಚಿನ ವಿಷ್ಯ ಈವರೆಗೂ ಹೊರಗೆ ಬಿದ್ದಿಲ್ಲ. ಚೈತ್ರಾ ಯಾರ ಕೈ ಹಿಡಿಯುತ್ತಿದ್ದಾರೆ ಅನ್ನೋದು ರಿವೀಲ್ ಆಗಿಲ್ಲ. ಹನ್ನೆರಡು ವರ್ಷಗಳಿಂದ ಪ್ರೀತಿಯಲ್ಲಿದ್ದ ಚೈತ್ರಾ ಈಗ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ. ಹುಡುಗ ಯಾರೇ ಆಗ್ಲಿ, ಚೈತ್ರಾ ಮುಂದಿನ ಜೀವನ ಸುಖವಾಗಿರಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.


