ನಟ ವಿಜಯ್ ಸೂರ್ಯ 'ದೃಷ್ಟಿಬೊಟ್ಟು' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಖ್ಯಾತಿ ಗಳಿಸಿದ ಇವರು, ನಂತರ ಬೆಳ್ಳಿತೆರೆಗೆ ಹೋದರು. ಆದರೆ ನಿರೀಕ್ಷಿತ ಯಶಸ್ಸು ಸಿಗದೆ ಕಿರುತೆರೆಗೆ ಮರಳಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮದುವೆ ಮತ್ತು ಮಗನ ಹುಟ್ಟಿದ ದಿನಾಂಕದ ಬಗ್ಗೆ ಗೊಂದಲ ಉಂಟಾಗಿದ್ದು, ಆ ವಿಡಿಯೋ ವೈರಲ್ ಆಗಿದೆ.

ನಟ ವಿಜಯ್ ಸೂರ್ಯ ಅವರು ಈಗ ದೃಷ್ಟಿಬೊಟ್ಟು ಸೀರಿಯಲ್‌ನಲ್ಲಿ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಾಕಲೇಟ್‌ ಬಾಯ್‌ ಎಂದೇ ಫೇಮಸ್‌ ಆಗಿರೋ ನಟ, ಈ ಸೀರಿಯಲ್‌ನಲ್ಲಿ ರೌಡಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅಂದಹಾಗೆ ವಿಜಯ್‌ಸೂರ್ಯ ಅವರಿಗೆ ಸಕತ್‌ ಹಿಟ್‌ ಕೊಟ್ಟಿದ್ದು ‘ಅಗ್ನಿಸಾಕ್ಷಿ’ ಸೀರಿಯಲ್‌. ಆರು ವರ್ಷಗಳಿಗೂ ಅಧಿಕ ಕಾಲ ಈ ಸೀರಿಯಲ್‌ ಪ್ರಸಾರ ಆಗಿತ್ತು. ಬಳಿಕ ನಟ ದಿನ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ಆಮೇಲೆ ‘ಪ್ರೇಮಲೋಕ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಧಾರಾವಾಹಿಗಳ ಜೊತೆಗೆ ಅವರು ಸಿನಿಮಾ ಕೂಡ ಮಾಡುತ್ತಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಹಲವಾರು ನಟ-ನಟಿಯರು ಸ್ಟಾರ್‌ಗಳಾಗಿ ಮೆರೆಯುತ್ತಿದ್ದಾರೆ. ಕೆಲವರಿಗೆ ಅದೃಷ್ಟ ಒಲಿಯುವುದಿಲ್ಲ. ಹಾಗೆಯೇ ವಿಜಯ್ ಅವರು ಬೆಳ್ಳಿತೆರೆಗೆ ಕಾಲಿಟ್ಟರೂ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ.

ಅಂದಹಾಗೆ ವಿಜಯ್ ಸೂರ್ಯ ಅವರಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಹುಡುಗಿಯರಿಗೆ ಅವರ ಮೇಲಿನ ಕ್ರೇಜ್ ಏನೂ ಕಮ್ಮಿಯಾಗಿಲ್ಲ ಅನ್ನಿ. ಆದರೆ ಇದೀಗ ಇವರು ಮತ್ತೊಂದು ಮದ್ವೆನೂ ಆಗಿದ್ದಾರೆ. ಅದು ದೃಷ್ಟಿಬೊಟ್ಟು ಸೀರಿಯಲ್​ನಲ್ಲಿ! ಇದೀಗ ಅವರು ತಮ್ಮ ಮದುವೆಯ ಡೇಟ್​ ಮತ್ತು ಮಗ ಹುಟ್ಟಿದ ಡೇಟ್​ ಎರಡನ್ನೂ ಕನ್​ಫ್ಯೂಸ್​ ಮಾಡಿಕೊಂಡು ಸಂದರ್ಶನವೊಂದರಲ್ಲಿ ಏನೇನೋ ಹೇಳಿ ಎಡವಟ್ಟಿಗೆ ಸಿಲುಕಿದ್ದಾರೆ. ಮದುವೆಗೂ ಮುನ್ನ ಮಗ ಹುಟ್ಟಿದ್ದ ಎನ್ನುವ ರೀತಿಯಲ್ಲಿ ಅವರು ಮಾತನಾಡಿದ್ದಾರೆ. ಕೀರ್ತಿ ಎಂಟರ್​ಟೇನ್​ಮೆಂಟ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಎಡವಟ್ಟು ಮಾಡಿಕೊಂಡಿದ್ದಾರೆ. ಕೀರ್ತಿ ಅವರು ಕೇಳಿದ ಪ್ರಶ್ನೆಗಳಿಗೆ ಗಲಿಬಿಲಿಯಿಂದ ಉತ್ತರಿಸಿ ಏನೇನೋ ಹೇಳಿದ್ದು, ಅದು ತಮಾಷೆಯ ರೂಪದಲ್ಲಿ ಪ್ರಸಾರ ಆಗ್ತಿದೆ.

ನನ್ನ ಇತಿಹಾಸ ಗೊತ್ತಿದ್ರೂ ಮದ್ವೆಗೆ ಒಪ್ಪಿದ್ದಾಳೆ! ಮತ್ತೊಂದು ಮದ್ವೆಗೆ ರೆಡಿಯಾದ ದೃಷ್ಟಿಬೊಟ್ಟು ನಟ ವಿಜಯ್​ ಹೇಳಿದ್ದೇನು?

ಪತ್ನಿ ಕಂಡ್ರೆ ಭಯ ಇದ್ಯಾ, ಭಕ್ತಿ ಇದ್ಯಾ ಕೇಳಿದಾಗ, ವಿಜಯಸೂರ್ಯ ಅವರು ಪ್ರೀತಿ ಇದೆ, ಕಾಳಜಿ ಇದೆ ಎಂದಿದ್ದಾರೆ. ಮದುವೆಯಾಗಿ ಎಷ್ಟು ವರ್ಷ ಆಯ್ತು ಎಂದು ಕೇಳಿದಾಗ ನಾಲ್ಕು ವರ್ಷ ಎಂದಿದ್ದಾರೆ. ಅಪ್ಪ ಆಗಿ ಎಷ್ಟು ವರ್ಷ ಆಯ್ತು ಕೇಳಿದಾಗ ತಲೆ ಕೆಡಿಸಿಕೊಂಡರು ವಿಜಯ್​. ಕೊನೆಗೆ ಐದು ವರ್ಷ ಎಂದುಬಿಡೋದೆ? ಇದನ್ನೇ ಕೀರ್ತಿ ಅವರು ಪದೇ ಪದೇ ತೋರಿಸಿದ್ದಾರೆ. ಕೊನೆಗೆ ನಟ, ಮದ್ವೆಯಾಗಿ ಎಷ್ಟು ವರ್ಷ ಆಯ್ತೋ ಅಷ್ಟು ವರ್ಷ ಎಂದು ಅಲ್ಲಿಯೂ ಎಡವಟ್ಟು ಮಾಡಿದ್ದಾರೆ. ಕೊನೆಗೆ, ಮದುವೆಯಾದ ಡೇಟ್​ ಹೇಳಿ ಎಂದಾಗ ಫೆಬ್ರುವರಿ 14 ಎಂದು ಹೇಳಿದ್ದಾರೆ. ಪ್ರೇಮಿಗಳ ದಿನ ಆಗಿದ್ದರಿಂದ ಚೆನ್ನಾಗಿ ನೆನಪಿದೆ ಎಂದೂ ಹೇಳಿದ್ದಾರೆ. ಆದರೆ ಮದ್ವೆ ವರ್ಷ ಮತ್ತು ಮಗ ಹುಟ್ಟಿದ ವರ್ಷದ ಬಗ್ಗೆ ಕೊನೆಗೂ ಕನ್​ಫ್ಯೂಸ್​ನಲ್ಲಿಯೇ ಇದ್ದರು! ಇದರ ವಿಡಿಯೋ ವೈರಲ್​ ಆಗಿದೆ. 

ಇನ್ನು, ವಿಜಯ್‌ ಅವರ ಸಿನಿ ಬದುಕಿನ ಕುರಿತು ಹೇಳುವುದಾದರೆ, ಧಾರಾವಾಹಿಗಳಿಂದ ಬೆಳ್ಳಿ ತೆರೆಗೆ ಕಾಲಿಟ್ಟಿದ್ದ ನಟ ವಿಜಯ್ ಸೂರ್ಯ ಅವರು ಕ್ರೇಜಿಲೋಕದಲ್ಲಿ ನಟಿಸಿದ್ದರು. ಈ ಸಿನಿಮಾದ ಅಭಯ್ ಪಾತ್ರಕ್ಕೆ ಸೈಮಾ ಅವಾರ್ಡ್ ಕೂಡ ಸಿಕ್ಕಿತ್ತು. ಇಷ್ಟಕಾಮ್ಯ ಚಿತ್ರದ ಮೂಲಕ ನಾಯಕ ನಟನಾದರು. ಇದಾದ ನಂತರ ಕೆಲವು ಕದ್ದುಮುಚ್ಚಿ, ಗಾಳಿಪಟ-2 ಸಿನಿಮಾದಲ್ಲಿಯೂ ಕಾಣಿಸಿಕೊಂಡರು. ಆದರೆ, ವಿಜಯ್ ಸೂರ್ಯಗೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾದಲ್ಲಿ ಯಶಸ್ಸು ಸಿಗಲಿಲ್ಲ. ಆದ್ದರಿಂದ ಸೀರಿಯಲ್‌ಗೆ ಮರಳಿದ್ದಾರೆ.

ತಾಳಿ ಕಟ್ಟೋ ಟೈಂನಲ್ಲಿ ಪಂಚೆ ಬಿದ್ದೋದ್ರೆ ಏನ್‌ ಮಾಡ್ತೀರಾ ಕೇಳಿದ್ರೆ ವಿಜಯ್‌ ಸೂರ್ಯ ತರ್ಲೆ ಉತ್ತರ ಕೇಳಿ!

View post on Instagram