ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಡ್ರೋನ್ ಪ್ರತಾಪ್, ಗಗನಾಗೆ ರಾಮಾಚಾರಿ ಸಿನಿಮಾ ಶೈಲಿಯಲ್ಲಿ ತಾಳಿ ಕಟ್ಟಿದರು. ಬಳಿಕ ಷೋನ ಟಾಸ್ಕ್‌ಗಾಗಿ ಬೀದಿ ಬದಿ ವ್ಯಾಪಾರ ಮಾಡಿದರು. ಈಗ ಫ್ಯಾಮಿಲಿ ರೌಂಡ್‌ನಲ್ಲಿ ಪ್ರತಾಪ್ ಅಜ್ಜಿ, ಗಗನಾಳನ್ನೇ ಮದುಮಗಳಾಗಿ ಆಯ್ಕೆ ಮಾಡಿದ್ದಾರೆ. ಪ್ರತಾಪ್, ಮೊದಲು ಅಪ್ಪ ಆಯ್ಕೆ ಮಾಡುವ ಹುಡುಗಿಯನ್ನೇ ಮದುವೆಯಾಗುವುದಾಗಿ ಹೇಳಿದ್ದರು.

ಡ್ರೋನ್​ ಪ್ರತಾಪ್​ ಸದ್ಯ ಭರ್ಜರಿ ಬ್ಯಾಚುಲರ್ಸ್​ ರಿಯಾಲಿಟಿ ಷೋನ ಖುಷಿಯಲ್ಲಿದ್ದಾರೆ. ಕೆಲ ವಾರಗಳ ಹಿಂದಷ್ಟೇ ಡ್ರೋನ್‌ ಪ್ರತಾಪ್‌ ಇದೇ ರಿಯಾಲಿಟಿ ಷೋನ ವೇದಿಕೆಯ ಮೇಲೆ ಮತ್ತೋರ್ವ ಸ್ಪರ್ಧಿ ಗಗನಾ ಅವರಿಗೆ ತಾಳಿ ಕಟ್ಟಿದ್ದರು. ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಹಾಗೂ ನಟಿ ರಚಿತಾ ರಾಮ್‌ ಅವರ ಸಮ್ಮುಖದಲ್ಲಿ ತಾಳಿ ಕಟ್ಟಲಾಗಿತ್ತು. ಮದುಮಗನ ಗೆಟಪ್‌ನಲ್ಲೇ ಬಂದು ಮದುವೆ ಮಾಡಿಕೊಂಡಿದ್ದರು. ಅಷ್ಟಕ್ಕೂ ಇದು ರವಿಚಂದ್ರನ್​ ಅವರ ರಾಮಾಚಾರಿ ಸಿನಿಮಾದ ಮದುವೆ ಸೀನ್‌ ರಿಕ್ರೇಟ್​ ಮಾಡಲಾಗಿತ್ತು. ಡ್ರೋನ್​ ಪ್ರತಾಪ್‌ ಅವರ ರವಿಚಂದ್ರನ್‌ ಗೆಟಪ್‌ನಲ್ಲಿ ಮದುಮಗ ಆಗಿದ್ರೆ, ಮಾಲಾಶ್ರೀ ಗೆಟಪ್‌ನಲ್ಲಿ ಗಗನಾ ವಧುವಿನಂತೆ ಬಂದಿದ್ದರು. ಸಿನಿಮಾದಲ್ಲಿ ಥೇಟ್‌ ರವಿಚಂದ್ರನ್‌ ಅವರು ಪೆದ್ದನಂತೆ ಬಂದು ಮಾಲಾಶ್ರೀ ಕೊರಳಿಗೆ ತಾಳಿ ಕಟ್ಟಿದಂತೆಯೇ, ಪ್ರತಾಪ್‌ ಕೂಡ ಗಗನಾ ಕೊರಳಿಗೆ ತಾಳಿ ಕಟ್ಟಿ ಭೇಷ್​ ಭೇಷ್​ ಎನ್ನಿಸಿಕೊಂಡಿದ್ದರು.

ಇಷ್ಟೆಲ್ಲಾ ಆದ ಮೇಲೆ ಡ್ರೋನ್​ ಪ್ರತಾಪ್​ ಬೀದಿಗೆ ಬಂದು ವ್ಯಾಪಾರ ಮಾಡಿದ್ದರು. ಇದು ಗಗನಾಗೋಸ್ಕರ ಎಂದು ಹೇಳಲಾಗಿತ್ತು. ಬೀದಿಗೆ ಬಂದು ಭರ್ಜರಿ ಬ್ಯಾಚುಲರ್ಸ್​ನ ಬ್ಯಾಗ್ ಅನ್ನು ಮಾರಾಟ ಮಾಡಿದ್ದರು. ಕೊನೆಗೆ ಅವರು, ನನಗೆ ಒಂದು ದಿನದ ಟಾಸ್ಕ್​ ಇದೆ. ಭರ್ಜರಿ ಬ್ಯಾಚಲರ್ಸ್ ಪಾರ್ಟಿ ಷೋಗೋಸ್ಕರ ಒಂದು ದಿನದ ಮಟ್ಟಿಗೆ ಈ ಕೆಲಸ ಮಾಡುತ್ತಿದ್ದೇನೆ ಎಂದಿದ್ದರು. ಅದು ಈ ಷೋನ ಟಾಸ್ಕ್​ ಆಗಿದ್ದು, ಗಗನಾ ಡ್ರೋನ್​ ಪ್ರತಾಪ್​ನನ್ನು ನೋಡಿ ಸಕತ್​ ಖುಷಿಯಾಗಿದ್ದರು. ಒಂದು ರಿಯಾಲಿಟಿ ಷೋಗಾಗಿಯೇ ಇಷ್ಟೊಂದು ಕಷ್ಟಪಡುವವರನ್ನು ಪಡೆಯುವವಳು ತುಂಬಾ ಪುಣ್ಯ ಮಾಡಿರ್ಬೇಕು ಎಂದೆಲ್ಲಾ ಗಗನಾ ಹೇಳಿದ್ದರು.

ರೋಬೋ ಮಾಡಲು ಹೊರಟ ಡ್ರೋನ್​ ಪ್ರತಾಪ್​! ವಿಜ್ಞಾನಿಗಳ ಸಾಲಿನಲ್ಲಿ ಮಿಂಚಿಂಗ್​

ಇದರ ನಡುವೆಯೇ, ಈಗ ಇನ್ನೊಂದು ಸರ್​ಪ್ರೈಸ್​ ಅನ್ನು ಪ್ರೊಮೋದಲ್ಲಿ ತೋರಿಸಲಾಗಿದೆ. ಈ ವಾರ ಫ್ಯಾಮಿಲಿ ರೌಂಡ್​ ಇದ್ದು, ಇದರಲ್ಲಿ ಸ್ಪರ್ಧಿಗಳ ಅಪ್ಪ-ಅಮ್ಮನನ್ನು ಕರೆಸಲಾಗಿದೆ. ಅದರಂತೆಯೇ ಡ್ರೋನ್​ ಅಪ್ಪ-ಅಮ್ಮನೂ ಬಂದಿದ್ದಾರೆ. ಇದರಲ್ಲಿ ಬಂದಿರುವ ಅಜ್ಜಿಗೆ ಗಗನಾ ಒಂದು ಪ್ರಶ್ನೆ ಕೇಳಿದ್ದಾರೆ. ಡ್ರೋನ್​ ಪ್ರತಾಪ್​ ಲವ್ ಮ್ಯಾರೇಜ್ ಆಗ್ಬೇಕಾ? ಅರೇಂಜ್ಡ್ ಆಗ್ಬೇಕಾ ಎನ್ನುವ ಪ್ರಶ್ನೆ ಅದು. ಅದಕ್ಕೆ ಅಜ್ಜಿ, ಅಲ್ಲಿಯೇ ಮದ್ವೆ ಫಿಕ್ಸ್ ಮಾಡಿಬಿಟ್ಟಿದ್ದಾರೆ. ಹುಡುಗಿ ನಿನೇ ಆಗಿರಬೇಕು ಎಂದಿದ್ದಾರೆ! ಇದನ್ನು ಕೇಳಿ ಗಗನಾ ನಾಚಿಕೊಂಡರೆ, ಡ್ರೋನ್​ ಒಳಗೊಳೊಗೇ ಖುಷಿ ಪಡುವುದನ್ನು ನೋಡಬಹುದಾಗಿದೆ. 

ಈ ಹಿಂದೆ, ಡ್ರೋನ್ ಪ್ರತಾಪ್​ ತನ್ನ ಹುಡುಗಿ ಹೇಗೆ ಇರಬೇಕು ಎನ್ನುವ ಬಗ್ಗೆ ರಿಯಾಲಿಟಿ ಷೋ ಒಂದರಲ್ಲಿ ಮಾತನಾಡಿದ್ದರು. ಬಣ್ಣ ಯಾವುದಿದ್ರೂ ಪರ್ವಾಗಿಲ್ಲ ಸರ್​, ಆವಾವಾಗ ಜಡೆ ಹೆಣೆದುಕೊಳ್ತಿರ್ಬೇಕು... ನೋಡಿದ ತಕ್ಷಣ ಒಳ್ಳೆಯ ಹುಡುಗಿ ಅನ್ನಿಸಬೇಕು... ಅಪ್ಪ ನೋಡಿದ ಹುಡ್ಗಿಯನ್ನೇ ಮದ್ವೆಯಾಗೋದು. ಉಳಿದವರೆಲ್ಲರೂ ನನಗೆ ದೀದೀಗಳೇ ಎನ್ನುತ್ತಲೇ ಮದ್ವೆಯಾಗುವ ಹುಡುಗಿಯ ಬಗ್ಗೆ ಮಾತನಾಡಿದ್ದರು ಡ್ರೋನ್​ ಪ್ರತಾಪ್​. ಅಪ್ಪ ತುಂಬಾ ಕಷ್ಟಪಟ್ಟಿದ್ದಾರೆ. ಅದಕ್ಕಾಗಿ ಅವರ ಇಚ್ಛೆ ಮೀರಿ ನಾನು ಹೋಗಲ್ಲ. ಅವರು ಯಾವ ಹುಡುಗಿಯನ್ನು ಮದ್ವೆಯಾಗು ಅಂತಾರೋ ಅವರನ್ನೇ ಮದ್ವೆಯಾಗೋದು ಅನ್ನುತ್ತಲೇ ವೇದಿಕೆಯ ಮೇಲಿದ್ದ ಹುಡುಗಿಯರನ್ನೆಲ್ಲಾ ದೀದೀ ಎಂದೇ ಕರೆದಿದ್ದರು ಡ್ರೋನ್​ ಪ್ರತಾಪ್​. ಪ್ರತಾಪ್​ರನ್ನು ಮದ್ವೆಯಾಗುವುದಾಗಿ ತಾವು ರೆಡಿ ಎಂದು ಹಲವಾರು ಯುವತಿಯರು ಕೈಎತ್ತಿದರೂ ಅವರನ್ನೆಲ್ಲಾ ದೀದಿ ಎಂದೇ ಕರೆದಿದ್ದರು ಡ್ರೋನ್​.

ಬೀದಿಗೆ ಬಂದ ಡ್ರೋನ್​ ಪ್ರತಾಪ್​- ಎಲ್ಲವೂ ತಾಳಿ ಕಟ್ಟಿರೋ ಗಗನಾಗೋಸ್ಕರ! ಫ್ಯಾನ್ಸ್​ ಶಾಕ್​- ಅಷ್ಟಕ್ಕೂ ಆಗಿದ್ದೇನು?

View post on Instagram